Published : Jul 28, 2025, 07:01 AM ISTUpdated : Jul 28, 2025, 10:43 PM IST

Karnatata Latest News Live: ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕೇಸ್, ರಮ್ಯಾ ದೂರಿನ ಅನ್ವಯ ಎಫ್ಐಆರ್ ದಾಖಲು

ಸಾರಾಂಶ

ಮೈಸೂರು : ಬೆಂಗಳೂರು, ಮಂಗಳೂರು, ಬೆಳಗಾವಿ ಬಳಿಕ ಈಗ ಮೈಸೂರಲ್ಲೂ ಡ್ರಗ್ಸ್‌ ಜಾಲದ ನಂಟು ಬಯಲಾಗಿದ್ದು, ಮೈಸೂರಿನಲ್ಲೇ ಮಾದಕ ವಸ್ತು ತಯಾರಿಕಾ ಫ್ಯಾಕ್ಟರಿ ನಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಖಚಿತ ಸುಳಿವಿನ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ಭಾನುವಾರ ಎಂಡಿಎಂಎ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, 13 ಕೆ.ಜಿ.ಎಂಡಿಎಂಎ, 50 ಕೆ.ಜಿ. ದ್ರವರೂಪದ ಡ್ರಗ್ಸ್‌ ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸರಿಸುಮಾರು 100 ಕೋಟಿ ರು. ಎಂದು ಅಂದಾಜಿಸಲಾಗಿದೆ. ವಿಶೇಷವೆಂದರೆ, ಇಲ್ಲಿನ ಡ್ರಗ್ಸ್‌ ತಯಾರಿಕಾ ಘಟಕದಿಂದ ಮಹಾರಾಷ್ಟ್ರಕ್ಕೆ ಡ್ರಗ್ಸ್‌ ಪೂರೈಸಲಾಗುತ್ತಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ದಾಳಿ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್‌ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತುಗೊಳಿಸಲಾಗಿದೆ.

 

10:43 PM (IST) Jul 28

ದರ್ಶನ್ ಫ್ಯಾನ್ಸ್ ಅಶ್ಲೀಲ ಕಾಮೆಂಟ್ ಕೇಸ್, ರಮ್ಯಾ ದೂರಿನ ಅನ್ವಯ ಎಫ್ಐಆರ್ ದಾಖಲು

ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಟ್ ಪ್ರಕರಣ ಸಂಬಂಧ ನಟಿ ರಮ್ಯಾ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

09:39 PM (IST) Jul 28

ಬಳ್ಳಾರಿಯಲ್ಲಿ ಭೀಕರ ಅಪಘಾತ, ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು

ಬಳ್ಳಾರಿಯ ದೇವಿನಗರ ಕ್ಯಾಂಪ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

09:16 PM (IST) Jul 28

ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಎರಡು ದಿನ ವಾಹನ ಸಂಚಾರ ನಿಷೇಧ

ಅತ್ಯಂತ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಎರಡು ದಿನಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿದೆ. ಯಾವ ಎರಡು ದಿನ ವಾಹನ ಸಂಚಾರ ನಿಷೇಧ? ಕಾರಣವೇನು?

 

Read Full Story

08:26 PM (IST) Jul 28

ಕೆಟ್ಟ ಕಾಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನ ಬ್ಲಾಕ್ ಮಾಡಿದ ನಟಿ ಅನುಸೂಯ; ಫಾಲೋವರ್ಸ್ ಎಷ್ಟಿದ್ದಾರೆ?

ತೆಲುಗು ನಟಿ ಅನಸೂಯ ಒಂದು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಾನು ಸೋಶಿಯಲ್ ಮೀಡಿಯಾದಲ್ಲಿ, ಕಾಮೆಂಟ್ ಮಾಡುತ್ತಿದ್ದ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನ ಕೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Read Full Story

08:10 PM (IST) Jul 28

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದ ಅನಾಮಿಕ, ಒಂದೇ ದಿನ 13 ಸ್ಥಳ ಗುರುತು ಮಾಡಿದ!

ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವ ಹೂತಿರುವ ಬಗ್ಗೆ ಆರೋಪ ಮಾಡಿರುವ ಅನಾಮಿಕ ವ್ಯಕ್ತಿ ಎಸ್ಐಟಿ ತಂಡಕ್ಕೆ 13 ಶವಗಳ ಸ್ಥಳಗಳನ್ನು ತೋರಿಸಿದ್ದಾರೆ. ಈ ಸ್ಥಳಗಳನ್ನು ಗುರುತಿಸಿ ಮಹಜರು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ನಡೆಯಲಿದೆ.

Read Full Story

08:09 PM (IST) Jul 28

ಮದುವೆಯಾಗಲು ಹೆಚ್ಐವಿ-ಏಡ್ಸ್ ಪರೀಕ್ಷೆ ಕಡ್ಡಾಯಗೊಳಿಸಲು ಮುಂದಾದ ಸರ್ಕಾರ

ಮದುವೆಯಾಗಲು ಹುಡುಗ-ಹುಡುಗಿ ಒಪ್ಪಿಗೆ ಮಾತ್ರವಲ್ಲ, ಇದೀಗ ಹೆಚ್ಐವಿ-ಏಡ್ಸ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಮದುವೆಗೂ ಮೊದಲು ಪರೀಕ್ಷೆ ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

 

Read Full Story

07:20 PM (IST) Jul 28

ಫಿಡೆ ಮಹಿಳಾ ವಿಶ್ವಕಪ್ ಗೆದ್ದ ದಿವ್ಯಾ ದೇಶ್‌ಮುಖ್; ಹೊಸ ಇತಿಹಾಸ ಸೃಷ್ಟಿ!

ದಿವ್ಯಾ ದೇಶ್‌ಮುಖ್ ಫಿಡೆ ಮಹಿಳಾ ವಿಶ್ವಕಪ್ 2025 ಗೆದ್ದಿದ್ದಾರೆ. ಫೈನಲ್‌ನಲ್ಲಿ ಕೊನೇರು ಹಂಪಿಯವರನ್ನ ಸೋಲಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.

Read Full Story

07:14 PM (IST) Jul 28

ಈ ತಳಿ ಹಸುವಿನ ಹಾಲು ಮಾತ್ರ ಬಳಸುತ್ತೆ ನೀತಾ-ಮುಕೇಶ್ ಅಂಬಾನಿ ಕುಟುಂಬ, ಬೆಲೆ ಬಲು ದುಬಾರಿ

ನೀತಾ ಅಂಬಾನಿ, ಮುಕೇಶ್ ಅಂಬಾನಿ ಕುಟುಂಬ ಪ್ರತಿ ದಿನ ಒಂದೇ ತಳಿ ಹಸುವಿನ ಹಾಲು ಬಳಕೆ ಮಾಡುತ್ತಿದೆ. ಈ ಹಸುಗಳನ್ನು ವಿಶೇಷ ಆರೈಕೆ ಹಾಗೂ ಮೇವು ನೀಡಲಾಗುತ್ತದೆ. ಅಂಬಾನಿ ಕುಟುಂಬಕ್ಕೆ ಹಾಲು ಸರಬರಾಜಾಗುತ್ತಿರುವುದು ಎಲ್ಲಿಂದ?

Read Full Story

07:14 PM (IST) Jul 28

ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಿದ್ದ ಬೇಕರಿ ರಘು, ಈಗ ನಟ ಪ್ರಥಮ್‌ಗೆ ಕೊಲೆ ಬೆದರಿಕೆ!

ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯವನ್ನು ನೀಡಿ ಅಭಿಮಾನಿ ಆಗಿದ್ದ ಬೇಕರಿ ರಘು, ಇದೀಗ ನಟ ಪ್ರಥಮ್‌ಗೆ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಪ್ರಥಮ್‌ಗೆ ಬೆದರಿಕೆ ಹಾಕಲಾಗಿದೆ. ಈ ಘಟನೆ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯದಲ್ಲಿ ನಡೆದಿದೆ.

Read Full Story

06:19 PM (IST) Jul 28

ಪೆಹಲ್ಗಾಂ ದಾಳಿ ಉಗ್ರರ ಸದಬಡಿದ ಸೇನಾ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಹೆಸರಿಟ್ಟಿದ್ದೇಕೆ?

ಪೆಹಲ್ಗಾಂನಲ್ಲಿ ಹಿಂದೂಗಳ ಟಾರ್ಗೆಟ್ ಮಾಡಿ ನಡೆಸಿದ ಉಗ್ರದಾಳಿಯ ಮಾಸ್ಟರ್ ಮೈಂಡ್ ಸೇರಿ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಆಪರೇಶನ್ ಮಹಾದೇವ್ ಹೆಸರಿನಲ್ಲಿ ಸೇನೆ ಕಾರ್ಯಾಚರಣೆ ನಡೆಸಿ ಉಗ್ರರ ಹತ್ಯೆ ಮಾಡಿದೆ. ಈ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಹೆಸರಿಟ್ಟಿದ್ದೇಕೆ?

Read Full Story

06:15 PM (IST) Jul 28

RCB ವಿಜಯೋತ್ಸವ ಕಾಲ್ತುಳಿತ ಕೇಸ್; ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಗೊಳಿಸಿದ ಸರ್ಕಾರ!

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿಗಳ ಅಮಾನತು ರದ್ದತಿಯಾಗಿದೆ. ಒಬ್ಬ ಅಧಿಕಾರಿಯನ್ನು ಹೊರತುಪಡಿಸಿ ಉಳಿದ ನಾಲ್ವರು ಅಧಿಕಾರಿಗಳಿಗೆ ಸೇವೆಗೆ ಮರಳಲು ಸರ್ಕಾರ ಅನುಮತಿ ನೀಡಿದೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ಸಂಸ್ಥೆಗಳ ಮುಖ್ಯಸ್ಥರನ್ನ ಬಂಧಿಸಲಾಗಿತ್ತು.

Read Full Story

05:13 PM (IST) Jul 28

8 ತಿಂಗಳ ಮಗು ಚೇತರಿಕೆ, ಕಣ್ಣಾಲಿ ತೇವಗೊಳಿಸಿದ ವಿಮಾನ ದುರಂತದ ತಾಯಿ ಮಗುವಿನ ಹೋರಾಟ

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 8 ತಿಂಗಳ ಮಗು ಹಾಗೂ ಮಗುವಿಗೆ ಬೆಂಕಿ ತಗುಲದಂತೆ ರಕ್ಷಣೆ ಒದಗಿಸಿದ ತಾಯಿ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದುರಂತ ನಡೆದ ಕ್ಷಣದಿಂದ ಚಿಕಿತ್ಸೆ ವರೆಗೆ ತಾಯಿಯ ತ್ಯಾಗ ಎಂತವರನ್ನು ಕಣ್ಣೀರಾಗಿಸುತ್ತದೆ.

Read Full Story

04:49 PM (IST) Jul 28

ದಂಡಂ ದಶಗುಣಂ ನಟಿ ರಮ್ಯಾ ಬೆನ್ನಿಗೆ ನಿಂತ FIRE; ನೇರವಾಗಿ ಸರ್ಕಾರಕ್ಕೆ ಹೋಯ್ತು ಪತ್ರ

Actress Ramya And Darshan Fans: ನಟಿ ರಮ್ಯಾ ಅವರ ಸಾಮಾಜಿಕ ಜಾಲತಾಣ ಪೋಸ್ಟ್‌ಗೆ ಅಸಭ್ಯ ಕಾಮೆಂಟ್‌ಗಳನ್ನು ಖಂಡಿಸಿ FIRE ಸಂಸ್ಥೆ ಗೃಹ ಸಚಿವರಿಗೆ ಪತ್ರ ಬರೆದಿದೆ. ದರ್ಶನ್ ಅಭಿಮಾನಿಗಳೆಂದು ಹೇಳಲಾದವರಿಂದ ಈ ಟ್ರೋಲಿಂಗ್ ನಡೆದಿದ್ದು, ಪ್ರಥಮ್ ಸೇರಿದಂತೆ ಹಲವರು ರಮ್ಯಾ ಪರ ನಿಂತಿದ್ದಾರೆ.

Read Full Story

04:47 PM (IST) Jul 28

ಮೈಸೂರಿನಲ್ಲಿ ಡ್ರಗ್‌ ಮಾಫಿಯಾ ಬೆಳೆದಿದ್ದೇ ಸಿಎಂ ಸಿದ್ದರಾಮಯ್ಯ ಕೊಡುಗೆ - ಪ್ರತಿಪಕ್ಷ ನಾಯಕ ಆರ್‌.ಅಶೋಕ

ಮೈಸೂರಿನಲ್ಲಿ ಡ್ರಗ್ ಮಾಫಿಯಾ ತಲೆ ಎತ್ತಿರುವುದು ಸಿದ್ದರಾಮಯ್ಯನವರ ಕೊಡುಗೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ. ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸರ್ಕಾರ ಡ್ರಗ್ ಮಾಫಿಯಾವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಸಿಎಂ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದರು.
Read Full Story

04:22 PM (IST) Jul 28

ಗಂಡನನ್ನೇ ಕೊಲೆ ಮಾಡಿದ ಮತ್ತೊಬ್ಬ ಹೆಂಡತಿ; ಚನ್ನಗಿರಿ ಅಡಿಕೆ ವ್ಯಾಪಾರಿ ಕೊಲೆ ರಹಸ್ಯ ರಿವೀಲ್!

ಪ್ರಿಯಕರನಿಂದ ಗರ್ಭಿಣಿಯಾಗಿದ್ದ ಪತ್ನಿಯ ಹೊಟ್ಟೆಗೆ ಗಂಡನೇ ಒದ್ದಿದ್ದರಿಂದ ಮಗು ಗರ್ಭಪಾತವಾಗಿತ್ತು. ಇದರಿಂದ ಸೇಡಿಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಗಂಡನನ್ನು ಕೊಲೆ ಮಾಡಿದ್ದಾರೆ. ಗಂಡನ ಕೊಲೆ ಬಳಿಕ ಕೇರಳಕ್ಕೆ ಹೋಗಿ ನೆಲೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

Read Full Story

04:18 PM (IST) Jul 28

ಕಾರ್ಗಿಲ್ ವಿಜಯ್ ದಿವಸ್ ಬೆನ್ನಲ್ಲೇ ಸೋಲ್ಜರ್ ಆವೃತ್ತಿ TVS ಎನ್‌ಟಾರ್ಕ್ 125 ಬಿಡುಗಡೆ

ಕಾರ್ಗಿಲ್ ಯುದ್ಧ ಗೆದ್ದದ ಅಮೂಲ್ಯ ನೆನಪನ್ನು ಭಾರತಯ ಕಾರ್ಗಿಲ್ ವಿಜಯ್ ದಿವಸ್ ಮೂಲಕ ಆಚರಿಸಿದೆ ಇದರ ಬೆನ್ನಲ್ಲೇ ಟಿವಿಎಸ್ ಮೋಟಾರ್ ಇದೀಗ ಟಿವಿಎಸ್ ಎನ್‌ಟಾರ್ಕ್ 125 ಸೋಲ್ಜರ್ ಆವೃತ್ತಿ ಬಿಡುಗಡೆ ಮಾಡಿದೆ. ಏನಿದರ ವಿಶೇಷತೆ?

Read Full Story

04:07 PM (IST) Jul 28

ಟಿಸಿಎಸ್ ಉದ್ಯೋಗ ಕಡಿತದಿಂದ ಷೇರು ಕುಸಿತ ಮಾತ್ರವಲ್ಲ ಬೆಂಗಳೂರಿಗೆ ಶುರುವಾಯ್ತು ನಡುಕ

ಅತೀ ದೊಡ್ಡ ಟೆಕ್ ಕಂಪನಿ ಟಿಸಿಎಸ್ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಟಿಸಿಎಸ್ ಷೇರು ಮೌಲ್ಯ ಕುಸಿತಗೊಂಡಿದೆ. ಇಷ್ಟೇ ಅಲ್ಲ ಇದೀಗ ಈ ಉದ್ಯೋಗ ಕಡಿತ ಬೆಂಗಳೂರಿಗೆ ನಡುಕ ಹುಟ್ಟಿಸಿದೆ. ಕಾರಣವೇನು?

Read Full Story

03:09 PM (IST) Jul 28

ಭಾರತದಲ್ಲಿ ಮಾತ್ರ, ಕುತ್ತಾ ಬಾಬು ಮಗ ಡಾಗ್ ಬಾಬು ಹೆಸ್ರಲ್ಲಿ ನಾಯಿಗೂ ನಿವಾಸ ಪ್ರಮಾಣ ಪತ್ರ

ಈ ರೀತಿ ಭಾರತದಲ್ಲಿ ಮಾತ್ರ ಸಾಧ್ಯ. ಸತ್ತವರ ಹೆಸರಲ್ಲಿ, ಇಲ್ಲದೇ ಇರುವವರ ಹೆಸರಲ್ಲಿ ಪ್ರಮಾಣಪತ್ರ, ಸೌಲಭ್ಯ ಪಡೆಯುವುದು ನೋಡಿದ್ದೇವೆ. ಆದರೆ ಕುತ್ತಾ ಬಾಬು-ಕುತಿಯಾ ದೇವಿ ಮಗ ಡಾಗ್ ಬಾಬು ಹೆಸರಲ್ಲಿ ಸರ್ಕಾರ ನಾಯಿಗೂ ನಿವಾಸ ಪ್ರಮಾಣ ಪತ್ರ ನೀಡಿರುವುದು ಬೆಳಕಿಗೆ ಬಂದಿದೆ.

 

Read Full Story

02:46 PM (IST) Jul 28

ಧರ್ಮಸ್ಥಳದಲ್ಲಿ ಶವ ಹೂಳಿರುವ ಜಾಗ ತೋರಿಸಿದ ಅನಾಮಿಕ; ನೇತ್ರಾವದಿ ನದಿ ಸ್ನಾನಘಟ್ಟ ಕಾಡಿನ ಬಳಿ ಶೋಧ!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆಯಲ್ಲಿ ಹೊಸ ತಿರುವು. ಅನಾಮಿಕ ವ್ಯಕ್ತಿಯೊಬ್ಬರು ಶವಗಳನ್ನು ಹೂತಿರುವ ಸ್ಥಳವನ್ನು ಗುರುತಿಸಿದ್ದಾರೆ. ಎಸ್‌ಐಟಿ ತಂಡ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದೆ.
Read Full Story

01:52 PM (IST) Jul 28

ಸೌಂದರ್ಯ ಸಿನಿಮಾದಿಂದ ನಷ್ಟ ಅನುಭವಿಸಿದ ಈ ನಿರ್ಮಾಪಕ ಇಂದು 2000 ಆಸ್ತಿ ಒಡೆಯ!

ನಟಿ ಸೌಂದರ್ಯ ಚಿತ್ರದಿಂದ ಒಬ್ಬ ನಿರ್ಮಾಪಕರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಈಗ ಟಾಲಿವುಡ್‌ನಲ್ಲಿ ಅವರು ದೊಡ್ಡ ನಿರ್ಮಾಪಕರಾಗಿದ್ದಾರೆ.

 

Read Full Story

01:28 PM (IST) Jul 28

ಬೆಂಗಳೂರು ಡೇಟಿಂಗ್ ಆ್ಯಪ್‌ನಲ್ಲಿ ಹನಿಟ್ರ್ಯಾಪ್ - ಟೆಕ್ಕಿಯಿಂದ 2 ಲಕ್ಷ ರೂ. ದರೋಡೆ ಮಾಡಿದ ಸಂಗೀತಾ ಗ್ಯಾಂಗ್!

ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. ಪೊಲೀಸರಿಂದ 6 ಮಂದಿ ಆರೋಪಿಗಳ ಬಂಧನ. ಬೇಕಿಂಗ್ ಸೋಡಾವನ್ನು ಡ್ರಗ್ಸ್ ಎಂದು ಬಿಂಬಿಸಿ ಹಣ ದೋಚಿದ್ದಾರೆ.

Read Full Story

01:24 PM (IST) Jul 28

ರಸಗೊಬ್ಬರದ ಅಭಾವಕ್ಕೆ ಕೃಷಿ ಇಲಾಖೆಯೇ ಕಾರಣ - ಮಾಜಿ ಸಚಿವ ಬಿ.ಸಿ.ಪಾಟೀಲ್

ಕೇಂದ್ರ ಸರ್ಕಾರ ಹೆಚ್ಚುವರಿ ಗೊಬ್ಬರ ಪೂರೈಸಿದ್ದರೂ ಬೇರೆಡೆ ಮಾರಾಟ ಮಾಡಿಕೊಂಡಿರುವ ಶಂಕೆ ಇದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

Read Full Story

12:51 PM (IST) Jul 28

ಮಲ್ಲಿಕಾರ್ಜುನ ಖರ್ಗೆ ಪಿಎಂ ಹುದ್ದೆ ಕಡೆ ಗಮನಹರಿಸಲಿ, ಸಿಎಂ ಆಗುವಾಸೆ ಕೈ ಬಿಡಲಿ - ಸದಾನಂದಗೌಡ

ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಯಶಸ್ಸು ಕಂಡಿದ್ದಾರೆ. ಈಗ ಅವರು ಪ್ರಧಾನಮಂತ್ರಿ ಹುದ್ದೆಯತ್ತ ಗಮನ ಹರಿಸಬೇಕು. ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
Read Full Story

12:27 PM (IST) Jul 28

ರಣ್‌ವೀರ್ ಸಿಂಗ್ ಸಿನಿಮಾಗೆ ಶ್ರೀಲೀಲಾ ಹೀರೋಯಿನ್ - ಬಾಲಿವುಡ್‌ನಲ್ಲಿ ಕಿಸ್ ನಟಿಗೆ ಬಿಗ್ ಬ್ರೇಕ್ ಸಿಗುತ್ತಾ?

ಬಾಲಿವುಡ್‌ ಸಿನಿಮಾವೊಂದರಲ್ಲಿ ರಣ್‌ವೀರ್‌ ಸಿಂಗ್‌ ಜೊತೆಗೆ ನಟಿ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರೆ. ಪ್ರಖ್ಯಾತ ನಟ ಬಾಬ್ಬಿ ಡಿಯೋಲ್‌ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ.

Read Full Story

11:55 AM (IST) Jul 28

ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ - ವಚನಾನಂದ ಶ್ರೀ

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪಂಚ ಪೀಠದ ಶ್ರೀಗಳ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಪಂಚಮಸಾಲಿ ಸಮಾಜ ಒಪ್ಪಿಗೆ ಇಲ್ಲ ಎಂದು ವಚನಾನಂದಶ್ರೀ ತಿಳಿಸಿದರು.

Read Full Story

11:51 AM (IST) Jul 28

ಪದ್ಮಾವತಿಗೆ ಟಾಂಗ್ ಕೊಟ್ಟು, ಕೆಂಚನ ಫ್ಯಾನ್ಸ್‌ಗೆ ದಯೆ ತೋರಿಸಿ ಎಂದ ಸುಂಟರಗಾಳಿ ರಕ್ಷಿತಾ!

ರಮ್ಯಾ ದರ್ಶನ್‌ ವಿರುದ್ಧ ಸುಪ್ರೀಂ ತೀರ್ಪು ಬೆಂಬಲಿಸಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೋರಿದರು. ಆದರೆ, ದರ್ಶನ್ ಸ್ನೇಹಿತೆ ರಕ್ಷಿತಾ ಪ್ರೇಮ್, ರಮ್ಯಾ ಹೆಸರೆತ್ತದೆ, ಮಾನವೀಯತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Read Full Story

11:23 AM (IST) Jul 28

ಆರೋಗ್ಯಕ್ಕಾಗಿ ಒಂದಾದ 6 ಗೆಳೆಯರಿಂದ ಶುರುವಾಯ್ತು ಉದ್ಯಮ - ಇಲ್ಲಿದೆ 'ಸಿಲ್ಕ್ ಸಿಟಿ' ಯಶೋಗಾಥೆ!

ಸಿಲ್ಕ್ ಸಿಟಿ ತೈಲ ಉತ್ಪನ್ನಗಳು ವಾರ್ಷಿಕ 2 ಕೋಟಿ ರೂ. ವಹಿವಾಟು ತಲುಪಿದೆ. ಆರು ಗೆಳೆಯರು ಕೆಲಸಗಳನ್ನು ಹಂಚಿಕೊಂಡಿದ್ದಾರೆ. ಒಬ್ಬರು ಉತ್ಪಾದನಾ ಘಟಕದ ಉಸ್ತುವಾರಿ ನೋಡಿಕೊಂಡರೆ, ಮತ್ತೊಬ್ಬರು ಎಣ್ಣೆ ಕಾಳು ಖರೀದಿ ನೋಡಿಕೊಳ್ತಾರೆ.

Read Full Story

10:51 AM (IST) Jul 28

ಯೂರಿಯಾ - ರೈತ ಬಾಂಧವರಲ್ಲಿ ಅತಂಕ ಬೇಡ - ಸಚಿವ ಚಲುವರಾಯಸ್ವಾಮಿ ಲೇಖನ

ಕರ್ನಾಟಕದ ಕೃಷಿ ಕ್ಷೇತ್ರವು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರ ಕಷ್ಟಕರ ಶ್ರಮದಿಂದಾಗಿ ನಮ್ಮ ರಾಜ್ಯವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ.

Read Full Story

10:40 AM (IST) Jul 28

ರಮ್ಯಾ ವರ್ಸಸ್ ದರ್ಶನ್ ಫ್ಯಾನ್ಸ್ ರಣರಂಗಕ್ಕೆ ವಿಜಯಲಕ್ಷ್ಮೀ ಎಂಟ್ರಿ - ಏನಿದು ರೋಚಕ ಟ್ವಿಸ್ಟ್?

Darshan And Gang Case: ರೇಣುಕಾಸ್ವಾಮಿ ಪ್ರಕರಣದಲ್ಲಿ ರಮ್ಯಾ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಸಾಮಾಜಿಕ ಜಾಲತಾಣದ ವಾಗ್ಯುದ್ಧಕ್ಕೆ ವಿಜಯಲಕ್ಷ್ಮೀ ಅವರ ಪ್ರವೇಶವು ಹೊಸ ತಿರುವು ನೀಡಿದೆ. 

Read Full Story

10:37 AM (IST) Jul 28

ಮಳೆ ಅಬ್ಬರ, ಉಕ್ಕಿ ಹರಿಯುತ್ತಿರುವ ನದಿಗಳು - ಕುಕ್ಕೆ ಸುಬ್ರಹ್ಮಣ್ಯ ನಂಜನಗೂಡಲ್ಲಿ ಸ್ನಾನಘಟ್ಟ ಮುಳುಗಡೆ

ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ತುಂಗಭದ್ರಾ, ಕಾವೇರಿ, ಶರಾವತಿ, ಭೀಮಾ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.

Read Full Story

10:11 AM (IST) Jul 28

ರಿಪೋರ್ಟರ್ಸ್ ಡೈರಿ - ಸುಮ್ನಿರಮ್ಮ, ಆಂಜನೇಯನ ಹೆಸ್ರು ಹಾಳ್‌ಮ್ಯಾಡಬೇಡ

ಏಯ್....ಸುಮ್ನಿರಮ್ಮ..., ಏನೇನೋ ಹೇಳಬೇಡ. ಆಂಜನೇಯನ ಹೆಸ್ರು ಹಾಳ್‌ಮ್ಯಾಡಬೇಡ! ಎಂದು ಮಹಿಳೆ ಮಾತನ್ನು ಅರ್ಧದಲ್ಲೇ ತುಂಡರಿಸಿದ್ರು! ಆ ಮಾತೇನೋ ಅಲ್ಲಿಗೆ ನಿಲ್ತು.

Read Full Story

09:58 AM (IST) Jul 28

ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಾಟಿ ಯಾರೂ ಇಲ್ಲ - ಆರ್.ಅಶೋಕ್

ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರಿಸಾಟಿಯಾಗುವವರು ಯಾರೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

Read Full Story

09:55 AM (IST) Jul 28

ಅಕ್ಟೋಬರ್‌ ವೇಳೆಗೆ ಕಾಂಗ್ರೆಸ್‌ ಸರ್ಕಾರ ಪತನ - ಅಶೋಕ್ ಭವಿಷ್ಯ

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೋಮಾ ಸ್ಥಿತಿಯಲ್ಲಿದ್ದು, ತಾನಾಗಿಯೇ ಜೀವ ಕಳೆದುಕೊಳ್ಳುವ ಸರ್ಕಾರವನ್ನು ಆಪರೇಷನ್ ಕಮಲ ಮಾಡಿ ಸಾಯಿಸುವ ಅಗತ್ಯವಿಲ್ಲ. ಅಕ್ಟೋಬರ್ ವೇಳೆಗೆ ಈ ಸರ್ಕಾರ ಸಾಯುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ

Read Full Story

09:29 AM (IST) Jul 28

ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು - ಸಚಿವ ದಿನೇಶ್‌ ಗುಂಡೂರಾವ್‌

ದೇವಾಲಯಗಳಲ್ಲಿ ರಾಜಕೀಯ ದುರುದ್ದೇಶ ಈಡೇರಿಸಲು ಧಾರ್ಮಿಕತೆ ಬಳಕೆ ಮಾಡುವ ಕೆಲಸ ಆಗಬಾರದು ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಲಹೆ ನೀಡಿದ್ದಾರೆ.

Read Full Story

09:23 AM (IST) Jul 28

ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಣ ಯಾವತ್ತೂ ಬರಬಾರದು - ಮಲ್ಲಿಕಾರ್ಜುನ ಖರ್ಗೆ

ಬಿಎಲ್‌ಡಿಇ ಸಂಸ್ಥೆಯ ಕೆಡಿಸುವ ಪ್ರಯತ್ನ ನಡೆದಾಗ ದಿ.ಬಿ.ಎಂ.ಪಾಟೀಲರು ಶಕ್ತಿಮೀರಿ ಗಟ್ಟಿಯಾಗಿ ನಿಂತರು. ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಣ ಯಾವತ್ತೂ ಬರಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Read Full Story

08:43 AM (IST) Jul 28

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ - ಮಧು ಬಂಗಾರಪ್ಪ

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ಮುಂದಿನ ದಿನಗಳಲ್ಲಿ ತಕ್ಕ ಬುದ್ಧಿ ಕಲಿಸಲಿದ್ದಾಳೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು

Read Full Story

08:31 AM (IST) Jul 28

ಕೌಟುಂಬಿಕ ಜಗಳ ಬಿಡಿಸಲು ಹೋದ ಪೊಲೀಸ್‌ ಸಿಬ್ಬಂದಿಗೆ ಡ್ರ್ಯಾಗರ್‌ನಿಂದ ಹಲ್ಲೆ - ನಾಲ್ವರ ಸೆರೆ

ಕೌಟುಂಬಿಕ ವಿಚಾರಕ್ಕೆ ಸಂಬಂಧಿಕರು ಗಲಾಟೆ ಮಾಡಿಕೊಳ್ಳುವಾಗ ಬಿಡಿಸಲು ಮುಂದಾದ ಗಸ್ತು ಪೊಲೀಸ್‌ ಸಿಬ್ಬಂದಿಗೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಸಂಬಂಧ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read Full Story

08:28 AM (IST) Jul 28

ಪ್ಲಾಸ್ಟಿಕ್ ರಸ್ತೆ, ಬಯೋ ಗ್ಯಾಸು ಯೋಜನೆ - ಮಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಪ್ರಧಾನಿ ಮೋದಿ ಭೇಷ್‌

ಪ್ರಧಾನಿ ಮೋದಿ ಭಾನುವಾರ ತಮ್ಮ ‘ಮನ್‌ಕೀ ಬಾತ್‌’ ಭಾಷಣದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಧುನಿಕ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಸ್ತಾಪಿಸಿ ಶ್ಲಾಘನೆ ವ್ಯಕ್ತಪಡಿಸಿದ್ದು, ಇದೊಂದು ಮಾದರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.

Read Full Story

08:23 AM (IST) Jul 28

ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆ ಸಾವು ಪ್ರಕರಣಕ್ಕೆ ಹೊಸ ತಿರುವು

ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆಯ ಆತ್ಮಹ* ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆ ಮಹಿಳೆ ನೇಣಿ* ಬಲಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.

Read Full Story

08:16 AM (IST) Jul 28

ಸಿದ್ದರಾಮಯ್ಯ ಮೇಲು ಎಂದು ಯತೀಂದ್ರ ಎಲ್ಲೂ ಹೇಳಿಲ್ವಲ - ಸಚಿವ ಮಹದೇವಪ್ಪ

ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜರು ಜನಪರ, ಸಾಮಾಜಿಕ ನ್ಯಾಯದ ಪರವಾಗಿ ಇದ್ದವರಾಗಿದ್ದರು. ಮಹತ್ವದ ನಿಲುವುಗಳಿಂದ ಸಮಸಮಾಜದ ಸಲುವಾಗಿ ಕೆಲಸ ಮಾಡಿದವರು. ಅವರವರಿಗೆ ಅವರೇ ಸಾಟಿ ಎಂದು ಮಹದೇವಪ್ಪ ಹೇಳಿದರು.

Read Full Story

More Trending News