ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿನ ಸಂಪುಟ ಪುನಾರಚನೆ, ಸಿಎಂ ಬದಲಾವಣೆ ಚರ್ಚೆ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಶುಕ್ರವಾರ ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸಿದರು. ಸಹೋದರ ಡಿ.ಕೆ.ಸುರೇಶ್ ಜೊತೆ ಶುಕ್ರವಾರ ಸಂಜೆ ದೆಹಲಿಯ ರಾಜಾಜಿಮಾರ್ಗದಲ್ಲಿರುವ ಖರ್ಗೆಯವರ ನಿವಾಸಕ್ಕೆ ತೆರಳಿದ ಡಿಕೆಶಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ನಿವಾಸದಲ್ಲಿ ಕಳೆದರು. ಭೇಟಿ ವೇಳೆ, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು ಎನ್ನಲಾಗಿದೆ. ಆದರೆ, ಮಾತುಕತೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಡಿಕೆಶಿ ನಿರಾಕರಿಸಿದರು.

09:27 PM (IST) Apr 25
Sirsi Haveri Road: ಶಿರಸಿ-ಹಾವೇರಿ ರಸ್ತೆಯನ್ನು ಮೇ 30 ರೊಳಗಡೆ ಮುಗಿಸಿಕೊಡೋದಾಗಿ ಹೇಳಿದ್ದಾರೆ, ಆದರೆ ಈಗ ಒಂದು ಮಳೆಗೆ ರಸ್ತೆ ಮಾತ್ರ ಕೆಸರುಗದ್ದೆಯಾಗಿದೆ. ಈ ಬಾರಿ ರಸ್ತೆ ಕಂಪ್ಲೀಟ್ ಆಗಿಲ್ಲ ಅಂದ್ರೆ ಮಾತ್ರ ಜನರು ಸುಮ್ಮನೆ ಇರೋದಿಲ್ಲ. ಆದರೆ ಈಗ ಬಂದ ಒಂದು ಮಳೆಗೆ ರಸ್ತೆ ಮಾತ್ರ ಗದ್ದೆಯಾಗಿದೆ.
09:17 PM (IST) Apr 25
ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದಶಕಗಳ ಬೇಡಿಕೆ ಒಳಮೀಸಲಾತಿ ಘೋಷಿಸಿರುವುದು ಐತಿಹಾಸಿಕ ನಿರ್ಧಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹೈಕಮಾಂಡ್ ಶೀಘ್ರದಲ್ಲೇ..
09:11 PM (IST) Apr 25
ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿಎಂ ಒಡಂಬಡಿಕೆ ಕುರಿತು ಮಾತನಾಡಿದ ರಂಗನಾಥ್ ಇದೀಗ ಡಿಕೆಶಿ ಅಭಿಮಾನಿಗಳಲ್ಲಿ ಮತ್ತೆ ಹೊಸ ಕನಸು ಚಿಗುರಿಸಿದ್ದಾರೆ.
07:52 PM (IST) Apr 25
ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿಡಲು ದೇಸಿ ಲಸ್ಸಿ ಒಂದು ಅತ್ಯುತ್ತಮ ಆಯ್ಕೆ. ಸಿಹಿ, ಉಪ್ಪು, ಮಾವಿನಹಣ್ಣು, ಪುದೀನಾ ಮತ್ತು ಗುಲಾಬಿ ಲಸ್ಸಿಯಂತಹ ಪಾನೀಯಗಳು ಕೇವಲ 5 ನಿಮಿಷಗಳಲ್ಲಿ ಸಿದ್ಧವಾಗಿ, ತಕ್ಷಣವೇ ದೇಹಕ್ಕೆ ತಂಪು ಮತ್ತು ಶಕ್ತಿ ನೀಡುತ್ತವೆ.
07:30 PM (IST) Apr 25
ಡಾ.ರಾಜ್ ಕುಮಾರ್ ಸಮಾಧಿಗೆ 2.5 ಏಕರೆ ಜಾಗ ಯಾಕೆ ಎಂದು ಪ್ರಶ್ನಿಸಿ ಭಾರಿ ವಿರೋಧ ಎದುರಿಸುತ್ತಿರುವ ನಟ ಚೇತನ್ ಸಂಕಷ್ಟ ಹೆಚ್ಚಾಗಿದೆ. ಡಾ.ರಾಜ್ ಸಮಾಧಿ ಕುರಿತು ನಾಲಗೆ ಹರಿಬಿಟ್ಟ ಚೇತನ್ ಮನೆಗೆ ಮುತ್ತಿಗೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ
07:00 PM (IST) Apr 25
ಯುವಕರು ಬದಲಾವಣೆಯನ್ನು ತರಬಹುದು. ನೀವು ಜನರ ಹೃದಯ ಮತ್ತು ಮನಸ್ಸುಗಳನ್ನು ಒಂದುಗೂಡಿಸಬಹುದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ವಿಶಿಷ್ಟ ಶಕ್ತಿ ಇದೆ ಎಂದರು ರವಿಶಂಕರ್ ಗುರೂಜಿ.
06:11 PM (IST) Apr 25
'ಮಾಂಗಲ್ಯಂ ತಂತುನಾನೇನ' ಖ್ಯಾತಿಯ ನಟ ಆರ್.ಕೆ.ಚಂದನ್, 'ಶ್ರೀ ಗೌರಿ' ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಕಾಲೇಜು ದಿನಗಳ ತರ್ಲೆಗಳನ್ನು ಹಂಚಿಕೊಂಡಿದ್ದು, ಶಿಕ್ಷಕರಿಗೆ ತೊಂದರೆ ಕೊಡುತ್ತಿದ್ದ ಬಗ್ಗೆ ಮಾತನಾಡಿದ್ದಾರೆ.
06:08 PM (IST) Apr 25
ಈಗಿನ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ನಾನೇ ಸಿಎಂ ಎಂದುಕೊಂಡೇ ಮೂರು ವರ್ಷಗಳು ಕಾಲಹರಣ ಮಾಡಿದರು ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
05:59 PM (IST) Apr 25
05:48 PM (IST) Apr 25
ಸರ್ಕಾರ ಗ್ಯಾರಂಟಿ ಕೊಡುತ್ತದೆ ಆದರೆ, ರೈತರಿಗೆ ಬೆಳೆ ಗ್ಯಾರಂಟಿ ಇಲ್ಲವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
05:35 PM (IST) Apr 25
05:21 PM (IST) Apr 25
ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ, ಹೈಸ್ಕೂಲ್‌ನಲ್ಲಿದ್ದಾಗ 'ಸಾರಥಿ' ಪ್ರಚಾರಕ್ಕಾಗಿ ಬಂದಿದ್ದ ದರ್ಶನ್‌ರನ್ನು ನೋಡಲು ಸ್ಕೂಲ್ ಬಂಕ್ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ದರ್ಶನ್ ಬದಲು ಧರ್ಮ ಕೀರ್ತಿರಾಜ್‌ರನ್ನು ಭೇಟಿಯಾಗಿದ್ದು, ಅವರೊಂದಿಗೇ ನಾಯಕಿಯಾಗಿದ್ದು ಕಾಕತಾಳೀಯ ಎಂದಿದ್ದಾರೆ.
05:19 PM (IST) Apr 25
Cucumber Tips: ಸೌತೆಕಾಯಿ ಕಹಿಯಾಗಿದೆ ಅಂತ ಬೇಸರ ಮಾಡ್ಕೋಬೇಡಿ. ಅದನ್ನು ಎಸೆಯುವ ಬದಲು, ಕೆಲವು ಸುಲಭ ಉಪಾಯಗಳನ್ನು ಬಳಸಿ ಅದರ ಕಹಿಯನ್ನು ತೆಗೆದುಹಾಕಿ ಮತ್ತೆ ಸಿಹಿಯಾಗಿಸಬಹುದು. ಆ ಟ್ರಿಕ್ಸ್ ಇಲ್ಲಿವೆ.
05:07 PM (IST) Apr 25
Actress Nidhi Agarwal: ಸೌಂದರ್ಯ, ನಟನೆ ಎಲ್ಲವೂ ಇದ್ದರೂ ಅದೃಷ್ಟ ಕೈ ಹಿಡಿಯದ ನಟಿ ನಿಧಿ ಅಗರ್ವಾಲ್. ಸ್ಟಾರ್ ನಟರ ಜೊತೆ ನಟಿಸಿದರೂ ಅವರಿಗೆ ಸರಿಯಾದ ಯಶಸ್ಸು ಸಿಕ್ಕಿಲ್ಲ. ಇತ್ತೀಚೆಗೆ ತಮ್ಮ ತಿಂಗಳ ಖರ್ಚಿನ ವಿವರಗಳನ್ನು ನಿಧಿ ಬಹಿರಂಗಪಡಿಸಿದ್ದಾರೆ.
04:57 PM (IST) Apr 25
04:46 PM (IST) Apr 25
International trips: ಬೇಸಿಗೆಯಲ್ಲಿ ವಿದೇಶ ಪ್ರವಾಸಕ್ಕೆ ಬಜೆಟ್ ಚಿಂತೆಯೇ? ಚಿಂತೆ ಬಿಡಿ. ಭಾರತದಿಂದ ಕೇವಲ ₹60,000 ಒಳಗಿನ ಖರ್ಚಿನಲ್ಲಿ ನೀವು ಸುತ್ತಾಡಬಹುದಾದ 10 ಅದ್ಭುತ ದೇಶಗಳ ಮಾಹಿತಿ ಇಲ್ಲಿದೆ. ನೇಪಾಳ, ಶ್ರೀಲಂಕಾದಿಂದ ಹಿಡಿದು ಥೈಲ್ಯಾಂಡ್, ವಿಯೆಟ್ನಾಂವರೆಗೆ ಈ ದೇಶಗಳು ಕಡಿಮೆ ಖರ್ಚು ಸಾಕು.
04:37 PM (IST) Apr 25
ಕಂಡಕ್ಟರ್ ಬೇಡ ಅಂದರೂ ಕೇಳದೇ ಬಸ್ ಇಳಿದು ಟೀ ಅಂಗಡಿಗೆ ಹೋಗುವ ಪ್ರಯಾಣಿಕನೊಬ್ಬನಿಂದ ಆ ಊರಿನ ಕಥೆ ಶುರು. ಆ ವಿಲಕ್ಷಣ ಗ್ರಾಮದ ಹೆಸರು ‘ಇದ್ನೋಡ್’. ಅಲ್ಲಿ ಗಡಿಯಾರವೇ ಚಲಿಸೋದಿಲ್ಲ.
04:35 PM (IST) Apr 25
ನಟಿ ಗೀತೂ ಮೋಹ ನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಇದೊಂದು ಮಹಿಳಾ ದೃಷ್ಟಿಕೋನದ ಗ್ಯಾಂಗ್‌ಸ್ಟರ್ ಸಿನಿಮಾ ಎಂದಿರುವ ಅವರು, ಗೀತು ಒಬ್ಬ ಅದ್ಭುತ ಬರಹಗಾರ್ತಿ ಎಂದು ಹೊಗಳಿದ್ದಾರೆ. ಪೋಸ್ಟ್-ಕೊಲೋನಿಯಲ್ ಗೋವಾದ ಡ್ರಗ್ ಮಾಫಿಯಾ ಕಥೆಯುಳ್ಳ ಈ ಚಿತ್ರದಲ್ಲಿ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಯಶ್ ದ್ವಿಪಾತ್ರದಲ್ಲಿದ್ದಾರೆ.
04:21 PM (IST) Apr 25
ತೀರಾ ಚಿಕ್ಕ ವಯಸ್ಸಿಗೇ ಮಲ್ಲು ರಿಯಲ್ ಎಸ್ಟೇಟ್ ಮಾಡುವುದು, ಕಮಿಷನ್ ರೂಪದಲ್ಲಿ ಸಿಗುವ 5 ಲಕ್ಷ ಹಣದಲ್ಲಿ ಮುಂದೆ ಏನು ಮಾಡುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ. ಮಲ್ಲು ಪಾತ್ರದಲ್ಲಿ ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ!
04:11 PM (IST) Apr 25
Government Officials White Towel In Chair: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳ ಮೇಲೆ ಬಿಳಿ ಟವೆಲ್ ಯಾಕಿರುತ್ತದೆ ಗೊತ್ತಾ? ಬ್ರಿಟಿಷರ ಕಾಲದ ಈ ಸಂಪ್ರದಾಯದ ಹಿಂದಿರುವ ಸ್ವಾರಸ್ಯಕರ ಇತಿಹಾಸ ಮತ್ತು ನಿಜವಾದ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
04:11 PM (IST) Apr 25
04:10 PM (IST) Apr 25
03:58 PM (IST) Apr 25
ಸ್ಟಾರ್ ಆಂಕರ್ ಉದಯಭಾನು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲು ಕಾರಣವೇನು? ಅವರ ಕರಿಯರ್‌ಗೆ ಬ್ರೇಕ್ ಹಾಕಿದವರು ಯಾರು? ಈ ಬಗ್ಗೆ ಉದಯಭಾನು ಅವರೇ ಬಹಿರಂಗಪಡಿಸಿದ ಆ ಸ್ಫೋಟಕ ಸತ್ಯಗಳೇನು?
03:27 PM (IST) Apr 25
03:05 PM (IST) Apr 25
ಸಚಿವ ಡಿ ಸುಧಾಕರ್ ಆರೋಗ್ಯ ಗಂಭೀರ, ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಸೇರಿ ಪ್ರಮುಖರು ಆಸ್ಪತ್ರೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಡಿ ಸುಧಾಕರ್ ಆರೋಗ್ಯ ಹೇಗಿದೆ.
02:51 PM (IST) Apr 25
ಧಾರವಾಡ ಕಾರಾಗೃಹದಲ್ಲಿ ಪೋಕ್ಸೋ ಆರೋಪಿ, ಪ್ರೀತಿ ನಿರಾಕರಣೆಯಿಂದ ಶಿವಮೊಗ್ಗದಲ್ಲಿ ಯುವಕ, ಮತ್ತು ಆನ್‌ಲೈನ್ ಗೇಮ್ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಬಾಲಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಮೂರು ಪ್ರತ್ಯೇಕ ಘಟನೆಗಳು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
02:46 PM (IST) Apr 25
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಬದುಕಿಗೆ ಹೊಸ ವ್ಯಕ್ತಿ ಆಗಮನವಾಗಿದೆ. ಭಾಗ್ಯ ಈಗ ಆದೀಶ್ವರ್ ಕಾಮತ್‌ರನ್ನು ಮದುವೆಯಾಗಿದ್ದಾಳೆ. ಇದನ್ನು ತನ್ವಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ತನ್ವಿಗೆ ಬುದ್ಧಿ ಇಲ್ಲ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.
02:08 PM (IST) Apr 25
Akshay Kumar Daughter: 2025 ಅಕ್ಟೋಬರ್ ತಿಂಗಳಿನಲ್ಲಿ Cyber Awareness Month 2025 ಎನ್ನುವ ಪೊಲೀಸ್ ಹೆಡ್‌ಕ್ವಾಟ್ರಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಗಳ ಅಶ್ಲೀಲ ಫೋಟೋಗೆ ಬೇಡಿಕೆ ಇಟ್ಟ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಈಗ ಆ ವ್ಯಕ್ತಿಯ ಬಂಧನವಾಗಿದೆ.
01:42 PM (IST) Apr 25
ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್, 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಇತ್ತೀಚೆಗೆ ಅವರು ಬಾಣಸಿಗನ ಫೋಟೋ ಹಂಚಿಕೊಂಡಿದ್ದು, ನಟನೆ ಬಿಟ್ಟರಾ ಎಂಬ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ತಮ್ಮ ಸೀರಿಯಲ್ ಪ್ರಚಾರಕ್ಕಾಗಿ ಬಿಗ್‌ಬಾಸ್‌ಗೆ ಮರು-ಪ್ರವೇಶಿಸಿ ದಾಖಲೆ ಬರೆದ ಬಗ್ಗೆಯೂ ವಿವರಿಸಲಾಗಿದೆ.
01:28 PM (IST) Apr 25
12:54 PM (IST) Apr 25
Romantic crime thrillers on ott india: OTTಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ನೋಡಬಹುದಾದ ಅತ್ಯುತ್ತಮ ರೊಮ್ಯಾಂಟಿಕ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಲಿಸ್ಟ್‌ನಲ್ಲಿ ಕೆಲವು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್‌ಗಳೂ ಇವೆ.
12:36 PM (IST) Apr 25
Jeans Pant Reuse: ಹಳೆಯ ಜೀನ್ಸ್ ವೇಸ್ಟ್ ಆಯ್ತು ಎಂದುಕೊಳ್ಳಬೇಡಿ. ಇದನ್ನು ಸದ್ಬಳಕೆ ಮಾಡಿಕೊಳ್ಳಲೂಬಹುದು. ಯಾವುದೂ ಕಸ ಅಲ್ಲ, ಕಸದಿಂದಲೂ ರಸ ತೆಗೆಯಲೂಬಹುದು. ಹಾಗಾದರೆ ಜೀನ್ಸ್‌ನ್ನು ಹೇಗೆ ಮರು ಬಳಕೆ ಮಾಡಿಕೊಳ್ಳಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
12:31 PM (IST) Apr 25
ಬೆಂಗಳೂರು: ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಸತತ ಸೋಲು ಕಾಣುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಟೀಕೆಗಳು ಹೆಚ್ಚಾಗಿವೆ. ಪಾಂಡ್ಯರನ್ನು ನಾಯಕತ್ವದಿಂದ ತೆಗೆದುಹಾಕುವ ಚರ್ಚೆ ನಡೆಯುತ್ತಿದೆ. ಹಾಗಾದ್ರೆ, ಮುಂಬೈ ತಂಡದ ಹೊಸ ನಾಯಕನ ರೇಸ್‌ನಲ್ಲಿರುವ ಆ 4 ಆಟಗಾರರು ಯಾರು ಗೊತ್ತಾ?
12:08 PM (IST) Apr 25
Netflix Release: ನೆಟ್‌ಫ್ಲಿಕ್ಸ್‌ನ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯಲ್ಲಿ ಈ ಬಾರಿ ಯಾವ ಸಿನಿಮಾ ಮೊದಲ ಸ್ಥಾನದಲ್ಲಿದೆ ಎಂದು ತಿಳಿದರೆ ಯಾರಿಗಾದರೂ ಅಚ್ಚರಿಯಾಗಬಹುದು. ಅಷ್ಟೇ ಅಲ್ಲ, ಹಲವು ದೊಡ್ಡ ಸಿನಿಮಾಗಳು ಟಾಪ್ 5 ಪಟ್ಟಿಯಿಂದಲೂ ಹೊರಗುಳಿದಿವೆ.
11:46 AM (IST) Apr 25
11:17 AM (IST) Apr 25
11:03 AM (IST) Apr 25
ಕೆಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿದ ಘಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯವೆಂದು ಖಂಡಿಸಿರುವ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
10:59 AM (IST) Apr 25
OTT Release: ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಕೆಲವು ಸಿನೆಮಾ ಮತ್ತು ವೆಬ್ ಸಿರೀಸ್‌ಗಳ ಪಟ್ಟಿ ಇಲ್ಲಿದೆ. ಗುಣಶೇಖರ್ ನಿರ್ದೇಶನದ 'ಯುಫೋರಿಯಾ'ದಿಂದ ಹಿಡಿದು ಮಲಯಾಳಂ ಥ್ರಿಲ್ಲರ್ 'ಸಂಭವಂ ಅಧ್ಯಾಯಂ ಒನ್ನು' ವರೆಗೆ 7 ಸಿನೆಮಾ-ಸಿರೀಸ್‌ಗಳು ಇಲ್ಲಿವೆ.
10:46 AM (IST) Apr 25
10:42 AM (IST) Apr 25
ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಕರೊಬ್ಬರು ಗಲೀಜು ಮಾಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ. ಪ್ರಯಾಣಿಕನನ್ನು ವಾಪಸ್ ಕರೆದು, ಅವರಿಂದಲೇ ಆಟೋವನ್ನು ಕ್ಲೀನ್ ಮಾಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.