ನಗರ ಪ್ರದೇಶಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ 50 ಸಾವಿರ ರು.ಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಒಂದು ವೇಳೆ ಸರ್ಕಾರಿ ಶಾಲೆ ದತ್ತು ಪಡೆಯದಿದ್ದರೆ ಆ ಖಾಸಗಿ ಶಾಲೆಗಳು ಪಡೆಯುವ ಶುಲ್ಕಕ್ಕೆ ಮಿತಿ (ಕ್ಯಾಪ್) ಹಾಕಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನನ್ನ ಮಗಳಿಂದಲೂ 3 ಶಾಲೆಗಳು ದತ್ತು
ನಗರದ ಪ್ರದೇಶದ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಿಂತ ಉತ್ತಮ ಬೋಧಕ ವರ್ಗ ನಿಯೋಜಿಸಿದರೆ ಸಾಕು. ನಾವೂ ಶಿಕ್ಷಣ ಸಂಸ್ಥೆ ಹೊಂದಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ದತ್ತು ಪಡೆಯುವಂತೆ ನನ್ನ ಮಗಳಿಗೆ ಸೂಚಿಸಿದ್ದೆ. ಅದರಂತೆ ಆಕೆ ಮೂರು ಶಾಲೆ ದತ್ತು ಪಡೆದಿದ್ದಾಳೆ.
ಗ್ರಾಮೀಣ ಮೀಸಲಲ್ಲಿ ಅರ್ಧದಷ್ಟು ಸರ್ಕಾರಿ ಶಾಲೆಯವರಿಗೆ ನಿಗದಿ
ಸರ್ಕಾರಿ ನೇಮಕಾತಿ ವೇಳೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದರಲ್ಲಿ ಶೇ. 7.5ರಷ್ಟನ್ನು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ನೀಡಲಾಗುವುದು. ಈ ಸಂಬಂಧ ಕಾಯ್ದೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ಕುರಿತು ಮುಂದಿನ 100 ದಿನಗಳೊಳಗಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
06:55 PM (IST) Jul 24
06:20 PM (IST) Jul 24
06:06 PM (IST) Jul 24
ಮೂಲದಲ್ಲೇ ಕಸ ವಿಂಗಡಿಸಿ ಮಾದರಿಯಾಗಿರುವ ಬೆಟ್ಟಹಲಸೂರು ಗ್ರಾಮದಲ್ಲಿ, BSWML ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಒಣತ್ಯಾಜ್ಯ ಮರುಸಂಸ್ಕರಣಾ ಘಟಕಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
05:26 PM (IST) Jul 24
ಕೇಂದ್ರ ಸರ್ಕಾರವು ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಸಂಪರ್ಕವನ್ನು ವೃದ್ಧಿಸಲು ₹1,264 ಕೋಟಿ ವೆಚ್ಚದ 'ಬಳ್ಳಾರಿ-ಗುಂತಕಲ್' 3ನೇ ಮತ್ತು 4ನೇ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ.
04:33 PM (IST) Jul 24
ಕರಾವಳಿ ಸಿನಿಮಾ ವಿವಾದದ ಕಹಿ ಘಟನೆಗಳಿಂದಾಗಿ ರಾಜ್ ಬಿ ಶೆಟ್ಟಿ ಅವರು ಒಂದು ಕಠಿಣ ನಿರ್ಧಾರದ ಬಗ್ಗೆ ಸುಳಿವು ನೀಡಿದ್ದಾರೆ. 'ಇನ್ಮುಂದೆ ಯಾವುದೇ ಸಿನಿಮಾದಲ್ಲಿ 'ಅಂತಹ ಪಾತ್ರ' ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ' ಎಂದಿದ್ದಾರೆ.
04:10 PM (IST) Jul 24
ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ 'ಉಬರ್' ಬಿಡುಗಡೆ ಮಾಡಿರುವ 'ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್' ವರದಿಯ ಪ್ರಕಾರ, ಬೆಂಗಳೂರು-ಮೈಸೂರು ಮಾರ್ಗವು ದೇಶದ ಮೂರನೇ ಅತ್ಯಂತ ಜನಪ್ರಿಯ ಇಂಟರ್‌ಸಿಟಿ ಪ್ರಯಾಣ ಮಾರ್ಗವಾಗಿ ಹೊರಹೊಮ್ಮಿದೆ.
03:05 PM (IST) Jul 24
ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್‌ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?
03:03 PM (IST) Jul 24
ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ, ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಡಾ. ವೀಣಾ ಹಾನಾಪುರ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ. ಇದು ಆತ್ಮ೧ಹತ್ಯೆಯಲ್ಲ, ಕೊಲೆ ಎಂದು ಪೋಷಕರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.
02:28 PM (IST) Jul 24
ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಸ್.ಸಿ (B.Sc) ಮುಗಿಸಿ ಬದುಕಿನ ದೊಡ್ಡ ಕನಸು ಕಾಣುತ್ತಿದ್ದ 21 ವರ್ಷದ ಪ್ರೇರಣಾ ಎಂಬ ಯುವತಿ ಬದುಕನ್ನು ಅರ್ಧಕ್ಕೇ ಅಂತ್ಯಗೊಳಿಸಿದ ದುರ್ದೈವಿ.
02:22 PM (IST) Jul 24
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಆರೋಗ್ಯ ಇಲಾಖೆಯು ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದೆ. ಇನ್ನು ಮುಂದೆ, ನಿಗದಿತ ಸ್ಥಳಗಳಲ್ಲಿ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಆಹಾರ ನೀಡಲು ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ.
01:06 PM (IST) Jul 24
01:05 PM (IST) Jul 24
01:00 PM (IST) Jul 24
12:38 PM (IST) Jul 24
ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ.
11:08 AM (IST) Jul 24
ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ.
10:31 AM (IST) Jul 24
09:47 AM (IST) Jul 24
08:35 AM (IST) Jul 24
ಮನೆ ಖರ್ಚಿಗೆಂದು ಐದು ಸಾವಿರ ರುಪಾಯಿ ಕೇಳಿದ 65 ವರ್ಷದ ಪತ್ನಿಗೆ ಹಲ್ಲೆ ನಡೆಸಿದ 73 ವರ್ಷದ ಪತಿಯ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ಪತ್ನಿಗೆ ಮಾಸಿಕ 10 ಸಾವಿರ ರುಪಾಯಿ ನೀಡುವಂತೆ ನ್ಯಾಯಾಲಯ ಪತಿಗೆ ಕಟ್ಟುನಿಟ್ಟಿನ ನಿರ್ದೇಶನ.
08:01 AM (IST) Jul 24
ಬೆಂಗಳೂರಿನ ಮಂಜುನಾಥನಗರದಲ್ಲಿ, ಅನಾರೋಗ್ಯ ಹಾಗೂ ತಮ್ಮ ಇಬ್ಬರು ಹೆಣ್ಣುಮಕ್ಕಳಿಂದ ಹಣ ಪಡೆದು ಜೀವನ ನಡೆಸುತ್ತಿದ್ದಕ್ಕೆ ಬೇಸತ್ತು ವೃದ್ಧ ದಂಪತಿಗಳು ತಂಪು ಪಾನೀಯದಲ್ಲಿ ವಿಷ ಸೇವಿಸಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಈ ಮನಕಲಕುವ ಘಟನೆಯು ಕೆಲಸದಾಕೆ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.
07:52 AM (IST) Jul 24