Published : Aug 23, 2026, 06:52 AM ISTUpdated : Aug 23, 2026, 10:52 PM IST

Karnataka News Live: Karnataka Politics - ಡೆಲ್ಲಿಯಲ್ಲಿ ರಾಹುಲ್ 'ಫೈಟ್'; ಬೆಂಗಳೂರಲ್ಲಿ ಡಿಕೆಶಿ 'ಊಟ್-ಬೈಟ್'! ಅದಾನಿ ಭೇಟಿಗೆ ಬಿಜೆಪಿ ಛಾಟಿ!

ಸಾರಾಂಶ

ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದನ್ನು ನೋಡಿದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಹೊಟ್ಟೆಯೊಳಗೆ ಬೆಂಕಿ ಇಟ್ಟಂತೆ ಆಗಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹೆಲ್ತ್ ಸಿಟಿ ವಸತಿ ಬಡಾವಣೆಯ ಮರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್ ಅವರು ನಿಂತರು ತಪ್ಪು, ಕುಂತರು ತಪ್ಪು ಎನ್ನುವಂತಾಗಿದೆ.

ನಮ್ಮ ನಡವಳಿಕೆಗಳು ಹೇಗಿರಬೇಕೆಂದು ಕೇಂದ್ರ ಸಚಿವರು ಲಿಸ್ಟ್ ಕೊಟ್ಟರೆ ಅದನ್ನು ಪಾಲಿಸುತ್ತೇವೆ ಎಂದು ಟೀಕಿಸಿದರು. ನಾವು ಈ ಜಿಲ್ಲೆಯ ಮಕ್ಕಳು. ಇಲ್ಲಿ ಹುಟ್ಟಿ, ಇಲ್ಲಿ ಬೆಳೆದಿರುವ ನಾವು ಇಲ್ಲೇ ಸಾಯುವವರು. ನಮ್ಮ ಬದುಕನ್ನು ಇಲ್ಲಿಯೇ ಕಟ್ಟಿಕೊಂಡಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಡಿ. ಬೇರೆ ಕಡೆ ಹುಟ್ಟಿ ಬಂದವರು ಇಲ್ಲಿ ಸಾಯಬಹುದು. ಬೆಳಗ್ಗೆ ಎದ್ದು ಬಯ್ಯುವವರ ಢೋಂಗಿ ಮಾತುಗಳನ್ನು ನಂಬಬೇಡಿ ಎಂದು ಹೇಳಿದರು.

10:52 PM (IST) Aug 23

Karnataka Politics - ಡೆಲ್ಲಿಯಲ್ಲಿ ರಾಹುಲ್ 'ಫೈಟ್'; ಬೆಂಗಳೂರಲ್ಲಿ ಡಿಕೆಶಿ 'ಊಟ್-ಬೈಟ್'! ಅದಾನಿ ಭೇಟಿಗೆ ಬಿಜೆಪಿ ಛಾಟಿ!

ಬೆಂಗಳೂರಿನಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಗೌಪ್ಯ ಸಭೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ಟೆಂಡರ್ ಪ್ರಕ್ರಿಯೆಯ ನಿರ್ಣಾಯಕ ಹಂತದಲ್ಲಿ ಈ ಭೇಟಿ ನಡೆದಿದ್ದು, ಇದು ಕಾಂಗ್ರೆಸ್‌ನ ದ್ವಂದ್ವ ನೀತಿ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ.

Read Full Story

10:29 PM (IST) Aug 23

Koppal - ಚಿರತೆ ಆತಂಕದ ಬೆನ್ನಲ್ಲೇ ಗಂಗಾವತಿಯಲ್ಲಿ ಹುಲಿ ಪ್ರತ್ಯಕ್ಷ - ಅರಣ್ಯ ಇಲಾಖೆ ಹೈ ಅಲರ್ಟ್!

Gangavathi: ತೆಂಬಾ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಹುಲಿಯ ಚಲನವಲನ ಸೆರೆಯಾಗಿರುವುದು ಇದೀಗ ದೃಢಪಟ್ಟಿದೆ.

Read Full Story

10:24 PM (IST) Aug 23

Cricket - ಥೇಟ್‌ ಕೆಜಿಎಫ್‌ ಸ್ಟೈಲ್‌ ಅಲ್ಲಿ ಪೋಸ್ಟ್; ತಾಯಿಯನ್ನು ಕಳೆದುಕೊಂಡ 16 ದಿನಗಳ ಬಳಿಕ ಮನದ ನೋವು ಬಿಚ್ಚಿಟ್ಟ ಈ ಖ್ಯಾತ ಕ್ರಿಕೆಟಿಗ

ತಾಯಿಯ ನಿಧನದ ನೋವಿನ ನಡುವೆಯೂ ಕ್ರಿಕೆಟಿಗ ನಿತೀಶ್ ರಾಣಾ ಮೈದಾನಕ್ಕಿಳಿದು ಅರ್ಧಶತಕ ಬಾರಿಸಿದ್ದಾರೆ. ತಮ್ಮ ಈ ಸಾಧನೆಯನ್ನು ಸ್ವರ್ಗಸ್ಥ ತಾಯಿಗೆ ಅರ್ಪಿಸಿ, ಮೈದಾನದಲ್ಲೇ ಕಣ್ಣೀರಿಟ್ಟ ಅವರು, ನಂತರ 'ಕೆಜಿಎಫ್' ಶೈಲಿಯಲ್ಲಿ ತಮ್ಮ ತಾಯಿಯ ತ್ಯಾಗವನ್ನು ನೆನೆದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Read Full Story

10:22 PM (IST) Aug 23

ನಾಳೆ ದಾವಣಗೆರೆ ಬಂದ್.. ತುರ್ತು ಸೇವೆ ಬಿಟ್ಟ ಎಲ್ಲಾ ಬಂದ್ ಬಂದ್! ಕಾರಣ ಏನು..?

ಭದ್ರಾ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಾವಣಗೆರೆ ನಗರ ಬಂದ್‌ಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿದೆ. ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಖಾಸಗಿ ಬಸ್, ಆಟೋ ಮತ್ತು ವರ್ತಕರ ಸಂಘ ಬೆಂಬಲ ಸೂಚಿಸಿವೆ.

Read Full Story

10:05 PM (IST) Aug 23

ಕೊಪ್ಪಳಕ್ಕೆ ಬಿಗ್ ನ್ಯೂಸ್! 2 ವರ್ಷದಲ್ಲಿ ಆರೋಗ್ಯ ಸೇವೆ ವಿಸ್ತರಣೆ - ಸದ್ಗುರು ಮಧುಸೂದನ ಸಾಯಿ ಘೋಷಣೆ

Madhusudana Sai: ಜಿಲ್ಲೆಯ ಹಲವು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅವರು ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿರುತ್ತಾರೆ.

Read Full Story

09:31 PM (IST) Aug 23

Kunal - ಒಂದೆಡೆ ಮದುವೆಯ ಹಠ, ಮತ್ತೊಂದೆಡೆ ಕುಟುಂಬದಿಂದ ಅಂತರ; ಐಫೋನ್‌ ವಿವಾದದ ಹಿಂದೆ ಅಡಗಿದ್ದ ಸತ್ಯ ಬಿಚ್ಚಿಟ್ಟ ಕುನಾಲ್‌ ಚಿಕ್ಕಮ್ಮ!

ಜಲ್ನಾದ ಖಾವದ್ಯ ಬೆಟ್ಟದಲ್ಲಿ ನಡೆದ ದುರಂತದಲ್ಲಿ ಕುನಾಲ್, ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ಸಾವನ್ನಪ್ಪಿದ್ದಾರೆ. ಈ ಘಟನೆ ಕೇವಲ ಅಪಘಾತವಲ್ಲ, ಬದಲಾಗಿ ವರ್ಷಗಳಿಂದ ಕುಟುಂಬದಲ್ಲಿ ಬೇರೂರಿದ್ದ ಕೌಟುಂಬಿಕ ಕಲಹ ಮತ್ತು ಮುರಿದ ಸಂಬಂಧಗಳ ದುರಂತಮಯ ಅಂತ್ಯವಾಗಿತ್ತು. ಸಂಬಂಧಿಕರು ಈಗ ಈ ದುರಂತದ ಹಿಂದಿನ ಕಟು ಸತ್ಯವನ್ನು ಬಹಿರಂಗಪಡಿಸಿದ್ದಾರೆ.
Read Full Story

09:06 PM (IST) Aug 23

ರಾಜ್‌ಕುಮಾರ್ ಮೊಮ್ಮಗಳು ಎಂಬ ಟ್ಯಾಗ್... ‘ನನಗೆ ಅನುಕೂಲವಾಗಿಲ್ಲ’ ಎಂದ ಧನ್ಯಾ ರಾಮ್‌ಕುಮಾರ್!

ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗಳು, ನಟಿ ಧನ್ಯಾ ರಾಮ್‌ಕುಮಾರ್ ಇದೀಗ ಕನ್ನಡ ಸಿನಿಮಾವನ್ನು ಮೀರಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದಾರೆ.

Read Full Story

07:56 PM (IST) Aug 23

ಐಫೋನ್ ಹುಚ್ಚೋ ಅಥವಾ ಮಾನಸಿಕ ಕಾಯಿಲೆಯೋ? ಕುನಾಲ್‌ನ ಹಳೆಯ ರಹಸ್ಯ ಬಯಲು! ಕಳೆದ ಬಾರಿ ಜೀವ ಉಳಿದಿತ್ತು! ಈ ಬಾರಿ ಕುಟುಂಬವೇ ಬಲಿಯಾಯ್ತು!

ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್ ಇಎಂಐ ವಿಚಾರವಾಗಿ ನಡೆದ ಜಗಳವು ಭೀಕರ ದುರಂತಕ್ಕೆ ಕಾರಣವಾಗಿದೆ. ಖವಾಡ್ಯಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಗನನ್ನು ಉಳಿಸಲು ಹೋಗಿ, ತಂದೆ, ತಾಯಿ ಹಾಗೂ ಮಗ ಮೂವರೂ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಇಡೀ ಕುಟುಂಬದ ನಾಶಕ್ಕೆ ಕಾರಣವಾಯಿತು.

Read Full Story

07:34 PM (IST) Aug 23

ಸಿಂಡ್ರೆಲ್ಲಾ ರಾಧಿಕಾ ಪಂಡಿತ್ 5 ಮಿಲಿಯನ್ ಕ್ಲಬ್‌ಗೆ ಎಂಟ್ರಿ - ಈಗ ಫ್ಯಾನ್ಸ್ ಕೇಳುತ್ತಿರುವುದೇನು ಗೊತ್ತಾ?

ರಾಧಿಕಾ ಪಂಡಿತ್ ಅವರ ಜನಪ್ರಿಯತೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ನಟ ಯಶ್ ಅವರ ಪತ್ನಿ ಎಂಬ ಕಾರಣಕ್ಕೂ ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.

Read Full Story

07:09 PM (IST) Aug 23

DRDO - ಚೀನಾ-ಪಾಕಿಸ್ತಾನದ ನಿದ್ದೆಗೆಡಿಸಿದ DRDOನ ಆ ಒಂದು ಹೆಜ್ಜೆ! ಎಂಟ್ರಿಯಾಯ್ತು ದೇಶದ ಅತ್ಯಂತ ಕ್ಷಿಪ್ರ ಹಾಗೂ ಮಾರಕ ಕ್ಷಿಪಣಿ!

1983ರಲ್ಲಿ ಆರಂಭವಾದ IGMDP ಯೋಜನೆಯಡಿ ಅಭಿವೃದ್ಧಿಪಡಿಸಿದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿ 'ಪೃಥ್ವಿ', ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಿತು. ಸೇನೆಯ ಮೂರೂ ಪಡೆಗಳಿಗೆ ಪ್ರತ್ಯೇಕ ಆವೃತ್ತಿಗಳಲ್ಲಿ ಲಭ್ಯವಾದ ಈ ಕ್ಷಿಪಣಿಯು, ತನ್ನ ಸುಧಾರಿತ ತಂತ್ರಜ್ಞಾನದಿಂದ ಭಾರತವನ್ನು ಕ್ಷಿಪಣಿ ಕ್ಷೇತ್ರದಲ್ಲಿ ಸೂಪರ್‌ ಪವರ್ ಆಗಲು ದಾರಿ ಮಾಡಿಕೊಟ್ಟಿತು.
Read Full Story

06:54 PM (IST) Aug 23

‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ - ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್

ಹೊಸ ಫೋಟೋಶೂಟ್‌ನಲ್ಲಿ ಅನುಶ್ರೀ ರಾಯಲ್ ಬ್ಲೂ ಬಣ್ಣದ ಕಂಗೊಳಿಸುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸರಳತೆ ಹಾಗೂ ಗ್ಲಾಮರ್ ಎರಡನ್ನೂ ಮೇಳೈಸಿರುವ ಅವರ ಈ ಲುಕ್, ಫೋಟೋಗಳಿಗೆ ಮತ್ತಷ್ಟು ಮೆರುಗು ನೀಡಿದೆ.

Read Full Story

06:15 PM (IST) Aug 23

‘Do I Look Civilized To You?’ ಯಶ್ ವೈರಲ್ ಡೈಲಾಗ್‌ಗೆ ರುಕ್ಮಿಣಿ ಕೊಟ್ಟ ಉತ್ತರ ಕೇಳಿದ್ರೆ ನಗ್ತೀರಾ!

Yash Toxic Dialogue: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ.

Read Full Story

05:41 PM (IST) Aug 23

ಕನ್ನಡ ZEE5ನಿಂದ ಮನರಂಜನೆ ಹೊಸ ಪರ್ವ; ಸಿನಿಮಾ-ಒರಿಜಿನಲ್ಸ್-ಲೈವ್ ಸ್ಪೋರ್ಟ್ಸ್.. ಬೃಹತ್ ಕಂಟೆಂಟ್ ಲಾಂಚ್!

"ಕಳೆದ ವರ್ಷ ಪ್ರೇಕ್ಷಕರಿಂದ ವ್ಯಕ್ತವಾದ ಅಭೂತಪೂರ್ವ ಬೆಂಬಲ ನಮಗೆ ಹೊಸ ಉತ್ಸಾಹ ತುಂಬಿದೆ. 'ಕಾರ್ಪೊರೇಟ್ ಲವ್ ಸ್ಟೋರಿ'ಯಂತಹ ಲಾಂಗ್-ಫಾರ್ಮ್ಯಾಟ್ ಸರಣಿ ಹಾಗೂ 'ಕರಾವಳಿ'ಯಂತಹ ಮಹತ್ವದ ಸಿನಿಮಾಗಳ ಮೂಲಕ ಕನ್ನಡದಲ್ಲೇ ಅತ್ಯಂತ ವೈವಿಧ್ಯಮಯ ಮನರಂಜನೆ ನೀಡುವ ಮುಂಚೂಣಿ ಒಟಿಟಿ ತಾಣವಾಗಿ Zee5 ಬೆಳೆಯುತ್ತಿದೆ"

Read Full Story

05:40 PM (IST) Aug 23

Atal Bihari Vajpayee - ಸಕ್ಕರೆ ಬೆಲೆ ₹20ಕ್ಕೆ ಹೆಚ್ಚಳವಾದಾಗ ಸಂಸತ್ತಿನಲ್ಲಿ ಗುಡುಗಿದ್ದ ವಾಜಪೇಯಿ! ಅಂದು ಅವರು ಹೇಳಿದ್ದ ಮಾತು ಈಗ ವೈರಲ್!

ದೇಶದಲ್ಲಿ ಸಕ್ಕರೆ ಬೆಲೆ ಕೆಜಿಗೆ ₹60 ದಾಟಿ ಏರಿಕೆಯಾಗುತ್ತಿದ್ದು, ಗ್ರಾಹಕರ ಬಜೆಟ್ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ಇದೇ ರೀತಿ ಬೆಲೆ ಏರಿಕೆ ಖಂಡಿಸಿದ್ದ ವಾಜಪೇಯಿಯವರ ಹಳೆಯ ಭಾಷಣ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

Read Full Story

05:40 PM (IST) Aug 23

'ಹೆಣ್ಣುಮಕ್ಕಳು ಸಿನಿಮಾ ನೋಡಿ ಭರ್ಜರಿ ಎಂಜಾಯ್ ಮಾಡ್ತಾರೆ' - ಟಾಕ್ಸಿಕ್ ವಿವಾದಕ್ಕೆ ಯಶ್ ಖಡಕ್ ಉತ್ತರ

Toxic Women Controversy: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಚರ್ಚೆ ಹುಟ್ಟುಹಾಕಿದೆ.

Read Full Story

05:21 PM (IST) Aug 23

ಕೆಪಿಎಸ್‌ಸಿ ಹಗರಣ - ಇಡಿ ಅಧಿಕಾರಿಗಳು ಬರ್ತಿದ್ದಂತೆ ಮನೆಗೆ ಬೀಗ ಹಾಕಿ IAS ಜ್ಞಾನೇಂದ್ರ ಕುಮಾರ್ ಪರಾರಿ!

ಕೆಪಿಎಸ್‌ಸಿ ಪಶು ವೈದ್ಯಕೀಯ ಪರೀಕ್ಷೆ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ನಿವಾಸದ ಮೇಲೆ ಇಡಿ ದಾಳಿ ನಡೆಸಿದೆ. ಅಧಿಕಾರಿಗಳು ಬರುವಷ್ಟರಲ್ಲಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದನು. ಆದರೆ, ದಾಳಿಗೆ ಬಂದ ಇಡಿ ಅಧಿಕಾರಿಗಳು ಪಟ್ಟು ಬಿಡದೇ ಮಾಡಿದ್ದೇನು ನೋಡಿ.

Read Full Story

05:14 PM (IST) Aug 23

‘ಭಾರತ ಮತ್ತೆ ಅವರನ್ನ ಪ್ರೀತಿಸಲಿದೆ’ - ‘ಟಾಕ್ಸಿಕ್’ನಲ್ಲಿ ಕಿಯಾರಾ ಅಭಿನಯಕ್ಕೆ ಯಶ್ ಫಿದಾ

ಆಗಸ್ಟ್ 26ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಇದೇ ವೇಳೆ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಯಶ್, ತಮ್ಮ ಸಹನಟಿ ಕಿಯಾರಾ ಅಡ್ವಾಣಿ ಬಗ್ಗೆ ಆಡಿರುವ ಮಾತುಗಳು ಇದೀಗ ಸಖತ್ ಗಮನ ಸೆಳೆಯುತ್ತಿವೆ.

Read Full Story

05:01 PM (IST) Aug 23

Entertainment - ₹2,000 ಸಂಬಳದಿಂದ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೆ! ಟಾಕ್ಸಿಕ್ ಚಿತ್ರದಲ್ಲೂ ಕಮಾಲ್ ಮಾಡಲಿದ್ದಾರೆ ಈ ಬಾಕ್ಸ್ ಆಫೀಸ್ ಕ್ವೀನ್!

ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲಿಂಗ್‌ನಲ್ಲಿ ಕೇವಲ ₹2000 ಸಂಪಾದಿಸುತ್ತಿದ್ದ ನಟಿ, ಒಂದು ಮ್ಯಾಗಜೀನ್ ಫೋಟೋಶೂಟ್‌ನಿಂದಾಗಿ 'ಮನಸ್ಸಿನಕ್ಕರೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಲೇಡಿ ಸೂಪರ್‌ಸ್ಟಾರ್' ಆಗಿ ಬೆಳೆದ ಅವರ ಯಶಸ್ಸಿನ ಪಯಣ, ವಿವಾದಗಳು ಮತ್ತು ಮುಂಬರುವ 'ಟಾಕ್ಸಿಕ್' ಚಿತ್ರದ ಕುರಿತಾದ ಮಾಹಿತಿಯನ್ನು ಈ ಸ್ಟೋರಿಯಲ್ಲಿದೆ.

Read Full Story

04:36 PM (IST) Aug 23

ಮಂಗಳೂರು ಏರ್‌ಪೋರ್ಟ್‌ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಆಗಿದ್ದು ಯಾರನ್ನು?

ಜೊತೆಗೆ ದರ್ಶನ್‌ ಅವರು ಜೈಲಿನಲ್ಲಿ ಕೆಲವು ವ್ಯವಸ್ಥೆಗಳನ್ನ ಕೇಳಿದ್ದರು. ಜೈಲಿನ ಕಠಿಣ ನಿಯಮಗಳ ಪ್ರಕಾರ ಅದೂ ಕೂಡ ಅವರಿಗೆ ಸಿಕ್ಕಿಲ್ಲ. ಇದರ ಮಧ್ಯೆ ಸೊಳ್ಳೆ ಕಾಟದಿಂದ ನಿದ್ದೆ ಕೂಡ ಬರುತ್ತಿಲ್ಲ. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ವರದಿಗಳಿವೆ. ಇದೀಗ ಈ ಬೆಳವಣಿಗೆ ನಡೆದಿದೆ.

Read Full Story

04:36 PM (IST) Aug 23

ಹೀರೋ ಅಲ್ಲ, ವಿಲನ್.. - ‘ಕೌಂತೇಯ’ದಲ್ಲಿ ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಅವತಾರ

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಇದುವರೆಗೆ ಹೀರೋ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಇದೇ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರದ ಮೂಲಕ..

Read Full Story

04:04 PM (IST) Aug 23

ಸಂಗೀತ ಸಮರದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಯಾರು? ಕೊನೆಗೂ ಹೊರಬಿತ್ತು ಉತ್ತರ!

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’ನ ಮಹಾ ಫಿನಾಲೆಗೆ ಅದ್ದೂರಿ ತೆರೆ ಬಿದ್ದಿದೆ. ಹಲವು ವಾರಗಳ ಕಾಲ ತಮ್ಮ ಗಾಯನದ ಮೂಲಕ ಸಂಗೀತಪ್ರಿಯರ ಮನ ಗೆದ್ದಿದ್ದ..

Read Full Story

03:50 PM (IST) Aug 23

Bengaluru - 'ಕರೆದಾಗ ಎಲ್ಲಾ ರೂಮಿಗೆ ಬರ್ಬೇಕು', ಕ್ಲಾಸ್‌ಮೆಟ್ ಕಿರುಕುಳಕ್ಕೆ ನೊಂದು ಕೆರೆ ಹಾರಿದ ಯುವತಿ

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು 22 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಬರೆದ ಡೆತ್‌ನೋಟ್‌ನಲ್ಲಿ, ಕಾಲೇಜು ಸಹಪಾಠಿ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Read Full Story

01:41 PM (IST) Aug 23

ಬೆಂಗಳೂರಿಗರಿಗೆ ಬಿಗ್ ಗುಡ್ ನ್ಯೂಸ್; ಶೀಘ್ರವೇ ಪಿಂಕ್ ಲೈನ್ ಮೆಟ್ರೋ ಮಾರ್ಗ ಜನರ ಸೇವೆಗೆ ಸಿದ್ಧ, ಎಲ್ಲಿಂದ? ಎಲ್ಲಿಗೆ?

2027ರ ಮಾರ್ಚ್ ವೇಳೆಗೆ ನಮ್ಮ ಮೆಟ್ರೋ ಪಿಂಕ್ ಲೈನ್ ಸಂಪೂರ್ಣವಾಗಿ ಸಿದ್ಧಗೊಳ್ಳಲಿದ್ದು, ಸಚಿವ ಕೃಷ್ಣ ಭೈರೇಗೌಡರು ಸುರಂಗ ಮಾರ್ಗದ ಕಾಮಗಾರಿ ಪರಿಶೀಲಿಸಿದ್ದಾರೆ. ತಾವರೆಕೆರೆಯಿಂದ ಕಾಲೇನ ಅಗ್ರಹಾರವರೆಗಿನ ಎಲಿವೇಟೆಟೆಡ್ ಮಾರ್ಗವು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಈ ಮಾರ್ಗವು ಬೆಂಗಳೂರಿನ ಹೃದಯ ಭಾಗವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
Read Full Story

01:35 PM (IST) Aug 23

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್; ಬರ್ತಡೇ ಸೆಲೆಬ್ರೇಷನ್ ಎಲ್ಲಿ ಗೊತ್ತಾ?

ನಟ ಡಾಲಿ ಧನಂಜಯ್ ಅವರು ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದು ಇಂದು ಬಹುಭಾಷಾ ನಟರಾಗಿ ಬೆಳೆದಿದ್ದಾರೆ. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಮ್ಮ ನಟನಾಜರ್ನಿಯನ್ನು ಮಾಡುತ್ತಿರುವ ನಟ ಧನಂಜಯ್ ಅವರು, ಸಿನಿಮಾ ನಿರ್ಮಾಣದ ಕೆಲಸದಲ್ಲೂ ಸಕ್ರಿಯರಾಗಿದ್ದಾರೆ.

Read Full Story

12:42 PM (IST) Aug 23

ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಎಂಬ ರೈತ, ತಮ್ಮ ಗ್ರಾಮದಲ್ಲಿಯೇ ಹೈನುಗಾರಿಕೆಯನ್ನು ಬಳಸಿ ಖೋವಾ ತಯಾರಿಸುವ ಉದ್ಯಮವನ್ನು ಆರಂಭಿಸಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಉದ್ಯಮವು ಇಂದು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.

Read Full Story

12:23 PM (IST) Aug 23

ವಂದೇ ಮಾತರಂ ವಿವಾದ - ಕೊಪ್ಪಳದಲ್ಲಿ ಬಿಜೆಪಿ ಆರ್‌ಎಸ್‌ಎಸ್ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ!

ವಂದೇ ಮಾತರಂ ಹಾಡದವರನ್ನು ದೇಶ ಬಿಟ್ಟು ಹೋಗಿ ಎನ್ನುವ ಬಿಜೆಪಿಗೆ, ನೋಂದಣಿ ಮಾಡಿಸದ ಆರ್‌ಎಸ್‌ಎಸ್‌ ಪಾಕಿಸ್ತಾನಕ್ಕೆ ಹೋಗಬೇಕೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿಗೆ ತಿರುಗೇಟು, ಹೇಳಿದ್ದೇನು?

Read Full Story

11:16 AM (IST) Aug 23

ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್

Yasukuni Enoki: ಇಂದು ಜಪಾನ್‌ನಲ್ಲಿ ಪೂಜಿಸಲ್ಪಡುವ ಶೇ.80ಕ್ಕೂ ಹೆಚ್ಚು ದೇವತೆಗಳ ಮೂಲ ಭಾರತದ್ದು. ಬೌದ್ಧ ಧರ್ಮದ ಪ್ರಸಾರದ ಮೂಲಕ ಭಾರತೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್ ಆಗಿದೆ. ಪೂರ್ಣ ಓದಿ.

Read Full Story

11:03 AM (IST) Aug 23

ರಾಜ್ಯದಲ್ಲಿ ಮಳೆ ತೀವ್ರ ಕೊರತೆ ಹಿನ್ನೆಲೆ, ಮಳೆಗಾಗಿ ದೇವರ ಮೊರೆ ಹೋದ ರಾಜ್ಯ ಸರ್ಕಾರ

ರಾಜ್ಯದಲ್ಲಿನ ಮಳೆಯ ತೀವ್ರ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಒತ್ತಡದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಳೆಗಾಗಿ ಕೊಡಗಿನ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು.
Read Full Story

10:30 AM (IST) Aug 23

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮತ್ತೆ ಜೋರು ಮಳೆ ಸುರಿಯುವ ನಿರೀಕ್ಷೆ!

Karnataka Weather Update: ಬಂಗಾಳ ಕೊಲ್ಲಿಯಲ್ಲಿ ಸಮುದ್ರ ನೀರು ಬೀಸಿಯಾಗುತ್ತಿದೆ. ಇದರಿಂದ ಪದೇ ಪದೇ ವಾಯುಭಾರ ಕುಸಿತ ಕಂಡು ಬರುತ್ತಿದೆ. ಸದ್ಯ ಮತ್ತೊಂದು ವಾಯುಭಾರ ಕುಸಿತ ನಿರ್ಮಾಣವಾಗಿದೆ. ಆದರೆ ಇದಕ್ಕೆ ಒಂದು ಸಮಸ್ಯೆ ಇದೆ. ಈ ನಡುವೆ ಕರ್ನಾಟಕದ ಹವಾಮಾನ ವರದಿ ಹೇಗಿದೆ ತಿಳಿದುಕೊಳ್ಳಿ.

Read Full Story

09:31 AM (IST) Aug 23

ಕೊಲೊಂಬೊ ಟೆಸ್ಟ್ - ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು, WTC ಫೈನಲ್ ಆಸೆಯೂ ಜೀವಂತ

3 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ಗೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರುವ ಗಿಲ್ ಪಡೆ, ಕೊಲೊಂಬೊದಲ್ಲಿಯೂ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ವಿಶ್ವಾಸದಲ್ಲಿದೆ.
Read Full Story

08:43 AM (IST) Aug 23

ಮಂಡ್ಯದಲ್ಲಿ ಬೆಲ್ಲ ಕ್ವಿಂಟಾಲ್‌ಗೆ ₹6740ಗೆ ಹರಾಜು - ಐತಿಹಾಸಿಕ ದಾಖಲೆ, ದರ ಏರಿಕೆಗೆ ಕಾರಣ ಏನು?

ಮಂಡ್ಯದಲ್ಲಿ ಬೆಲ್ಲದ ಬೆಲೆ ಕ್ವಿಂಟಾಲ್‌ಗೆ ₹6740 ತಲುಪಿ ಐತಿಹಾಸಿಕ ದಾಖಲೆ ಬರೆದಿದೆ. ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಮತ್ತು ಸಕ್ಕರೆ ಬೆಲೆ ಏರಿಕೆಯಂತಹ ಕಾರಣಗಳಿಂದ ಉತ್ಪಾದನೆ ಕುಸಿದಿದ್ದು, ಇದು ಬೆಲ್ಲದ ದರದಲ್ಲಿ ಏರಿಕೆಗೆ ಕಾರಣವಾಗಿದೆ.

Read Full Story

08:29 AM (IST) Aug 23

'ಬೆಂಗಳೂರಿಗೆ 'ಗಾರ್ಡನ್ ಸಿಟಿ' ಹೆಸರು ಸುಮ್ನೆ ಬಂದಿಲ್ಲ..' ಪಾರ್ಕ್‌ನ 5% ಜಾಗ ಇತರೆ ಉದ್ದೇಶಗಳಿಗೆ ಬಳಕೆಗೆ ಸಂಸದ ಗರಂ

ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸುವ ಸರ್ಕಾರದ ತೀರ್ಮಾನವನ್ನು ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದಾರೆ. ಈ ಕಳವಳಕಾರಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Read Full Story

08:05 AM (IST) Aug 23

Greater Coucal - ಹಿಚ್ಕಡದಲ್ಲಿ ಅಪರೂಪದ ಅತಿಥಿ; ಹಸಿರು ಪರಿಸರಕ್ಕೆ ಮನಸೋತ ಕೃಷ್ಣ ಪಕ್ಷಿ

ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದ ತೋಟವೊಂದರಲ್ಲಿ, ಅಪರೂಪದ ಕೃಷ್ಣ ಪಕ್ಷಿ (ಕೆಂಬುತಾ) ಆರು ಮೊಟ್ಟೆಗಳನ್ನಿಟ್ಟಿದೆ. ಈ ನೈಸರ್ಗಿಕ ವಿದ್ಯಮಾನವು ಆ ಪ್ರದೇಶದ ಸಮೃದ್ಧ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದ್ದು, ತೋಟದ ಮಾಲೀಕರು ಪಕ್ಷಿಯ ಗೂಡನ್ನು ರಕ್ಷಿಸುತ್ತಿರುವುದು ಮನುಷ್ಯ-ಪ್ರಕೃತಿ ಬಾಂಧವ್ಯವನ್ನು ಸಾರುತ್ತದೆ.
Read Full Story

07:48 AM (IST) Aug 23

ಖ್ಯಾತಿ, ಚಪ್ಪಾಳೆಗೆ ಕಲಾವಿದ ಬದುಕಬಾರದು ಟಿ.ಎನ್.ಸೀತಾರಾಮ ಮಾತು

ಬುಕ್‌ ಬ್ರಹ್ಮ ಲಿಟರೇಚರ್‌ ಫೆಸ್ಟಿವಲ್‌ನಲ್ಲಿ ಮಾತನಾಡಿದ ನಿರ್ದೇಶಕ ಟಿ.ಎನ್.ಸೀತಾರಾಮ, ಕಲಾವಿದರು ಕೇವಲ ಚಪ್ಪಾಳೆ, ಖ್ಯಾತಿ ಮತ್ತು ಹಣಕ್ಕಾಗಿ ಕಲೆಯನ್ನು ಸೃಷ್ಟಿಸಬಾರದು ಎಂದು ಅಭಿಪ್ರಾಯಪಟ್ಟರು. ಕಲಾವಿದನ ಆಂತರಿಕ ಸಂಘರ್ಷ ಮತ್ತು ಕಲೆಯೊಂದಿಗಿನ ಪ್ರಾಮಾಣಿಕತೆಯೇ ಮುಖ್ಯವೇ ಹೊರತು, ಕ್ಷಣಿಕ ಮೆಚ್ಚುಗೆಯಲ್ಲ.

Read Full Story

07:30 AM (IST) Aug 23

Bengaluru fake medicine racket - ನಕಲಿ ಔಷಧ ದಂಧೆ ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನಲ್ಲಿ ವಶಕ್ಕೆ

ಕರ್ನಾಟಕದ ನಕಲಿ ಔಷಧ ಮಾರಾಟ ಜಾಲಕ್ಕೆ ವಿದೇಶಿ ನಂಟು ಪತ್ತೆಯಾಗಿದೆ. ದಂಧೆಯ ಪ್ರಮುಖ ಆರೋಪಿ ಪ್ರಶಾಂತ್, ಅಜರ್‌ಬೈಜಾನ್‌ನಿಂದ ಕಡಿಮೆ ಬೆಲೆಯ ಔಷಧ ಸಾಗಿಸಲು ಯತ್ನಿಸುವಾಗ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಈಗ ಇಂಟರ್‌ಪೋಲ್‌ ನೆರವು ಕೋರಿದೆ.
Read Full Story

07:13 AM (IST) Aug 23

Anekal - ತಮಿಳುನಾಡಿನ ಕಡತದಲ್ಲಿದ್ದ ಆನೇಕಲ್‌ ತಾಲೂಕಿನ 8 ಗ್ರಾಮ ಕರ್ನಾಟಕಕ್ಕೆ ಸೇರ್ಪಡೆ

ಆನೇಕಲ್‌ ತಾಲೂಕಿನ ಮರಸೂರು ಪಂಚಾಯ್ತಿಗೆ ಸೇರಿದ ಎಂಟು ಗ್ರಾಮಗಳ ಕಂದಾಯ ದಾಖಲೆಗಳು 1956ರಿಂದ ತಮಿಳುನಾಡಿನ ಹೊಸೂರು ಕಡತಗಳಲ್ಲಿದ್ದವು. ಒಂದು ವರ್ಷದ ಸತತ ಪ್ರಯತ್ನದ ನಂತರ, ಈ ದಾಖಲೆಗಳನ್ನು ಅಧಿಕೃತವಾಗಿ ಕರ್ನಾಟಕದ ದಾಖಲೆಗಳಿಗೆ ಸೇರ್ಪಡೆ ಮಾಡಲಾಗಿದ್ದು, ಇದರಿಂದ ಸುಮಾರು 3000 ರೈತರಿಗೆ ಅನುಕೂಲವಾಗಿದೆ.

Read Full Story

More Trending News