ಬೆಂಗಳೂರು: ಮಂಡ್ಯ, ಶಿವಮೊಗ್ಗ, ಬೆಂಗಳೂರು, ದಾವಣಗೆರೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲಾಗುತ್ತಿರುವ ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಪಡಿತರ ವಿತರಣಾ ಕೇಂದ್ರಗಳ ಮುಂದೆ ಸ್ಟಾಕ್ ಇಲ್ಲ ಎಂಬ ಫಲಕ ಕಂಡು ಬಂದಿವೆ. ಆರ್‌ಎಸ್‌ಎಸ್‌ನಿಂದಲೇ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆರ್‌ಎಸ್‌ಎಸ್‌ನವರ ದ್ವೇಷ ರಾಜಕಾರಣ, ಹಿಂಸಾ ರಾಜಕಾರಣವೇ ಗಲಭೆ ಹಾಗೂ ಅಪರಾಧಗಳಿಗೆ ಕಾರಣ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಂಭೀರ ಆರೋಪವು ಸೋಮವಾರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲು ನೀಡುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಅಸಾಂವಿಧಾನಿಕ ಎಂದು ಆರೋಪಿಸಿರುವ ಬಿಜೆಪಿ, ಇದರ ವಿರುದ್ಧ ಎಲ್ಲಾ ಹಂತದಲ್ಲೂ ಹೋರಾಟ ನಡೆಸಲಾಗುವುದು ಮತ್ತು ನ್ಯಾಯಾಲಯದ ಮೆಟ್ಟಿಲನ್ನೂ ಏರುವುದಾಗಿ ಘೋಷಿಸಿದೆ.

10:53 PM (IST) Mar 18
ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಕಳೆದು ಇದೀಗ ಭೂಮಿಗೆ ಮರಳುತ್ತಿದ್ದಾರೆ. ಆದರೆ ಸುದೀರ್ಘ ದಿನ ಬಾಹ್ಯಾಕಾಶದಲ್ಲಿ ಕಳೆದಿದ್ದು ಸುನೀತಾ ವಿಲಿಯಮ್ಸ್ ಅಲ್ಲ, ಹಾಗಾದರೆ ಮತ್ಯಾರು?
ಪೂರ್ತಿ ಓದಿ09:38 PM (IST) Mar 18
2025ರ ಮೊದಲ ಸೂರ್ಯಗ್ರಹಣಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಇತ್ತೀಚೆಗೆ ಚಂದ್ರಗ್ರಹಣ ಘಟಿಸಿತ್ತು. ವಿಶೇಷ ಅಂದರೆ ಒಂದೇ ತಿಂಗಳಲ್ಲಿ ಚಂದ್ರಗ್ರಹಣ ಸಂಭವಿಸಿ ಇದೀಗ ಸೂರ್ಯಗ್ರಹಣ ಘಟಿಸುತ್ತಿದೆ. ಸೂರ್ಯಗ್ರಹಣ ಸಮಯ, ಸೂತಕ ಸಮಯವೇನು?
09:28 PM (IST) Mar 18
ʼಬಿಗ್ ಬಾಸ್ʼ ಮನೆಯಲ್ಲಿ ಒಪನ್ ಆಗಿ ಪ್ರೇಮ ನಿವೇದನೆ ಮಾಡ್ಕೊಂಡು, ಈಗ ಇಬ್ಬರು ಹೆಣ್ಣು ಮಕ್ಕಳ ಪಾಲಕರಾಗಿ ಖುಷಿಯಿಂದ ಬದುಕ್ತಿರೋ ಜೋಡಿ ಬಗ್ಗೆ ಸುಂದರವಾದ ಕಥೆ ಇಲ್ಲಿದೆ!
ಪೂರ್ತಿ ಓದಿ08:43 PM (IST) Mar 18
ಹೆಣ್ಣಿನ ಈ ಭಾಗ ಎಂದರೆ ನನಗೆ ಇಷ್ಟ. ಇದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ ಪೋಲಿ ಮಾತು. ಯುವತಿಗೆ ಈ ಮಾತು ಹೇಳಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಯುವತಿಗೆ ಹೇಳಿದ್ದೇನು? ವಿಡಿಯೋದಲ್ಲಿ ಏನಿದೆ/
07:55 PM (IST) Mar 18
ಐಪಿಎಲ್ ಆರಂಭಕ್ಕೆ ಕೆಲ ದಿನ ಮಾತ್ರ ಬಾಕಿ ಇದೆ. ಆದರೆ ಇದಕ್ಕೂ ಮುನ್ನ ಎಂಎಸ್ ಧೋನಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರೆ. ಆ್ಯನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಲುಕ್‌ನಲ್ಲಿ ಧೋನಿ ಕಾಣಿಸಿಕೊಂಡಿದ್ದಾರೆ. ಅದೆ ಗೆಟಪ್, ಅದೇ ಸ್ಟೈಲ್, ಅದೇ ಲುಕ್, ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಪೂರ್ತಿ ಓದಿ07:41 PM (IST) Mar 18
ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಿ ಬಂದಿದ್ದ ಶಿವ ರಾಜ್‌ಕುಮಾರ್ ಅವರ ಆರೋಗ್ಯವನ್ನು ನಟ ಯಶ್ ಮತ್ತು ರಾಧಿಕಾ ಪಂಡಿತ್ ವಿಚಾರಿಸಿದ್ದಾರೆ. ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರಿಂದ ತಡವಾಗಿ ಬಂದಿದ್ದಾಗಿ ಯಶ್ ಹೇಳಿದ್ದಾರೆ.
ಪೂರ್ತಿ ಓದಿ07:35 PM (IST) Mar 18
ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದು, ಈಗ ಭೂಮಿಗೆ ಮರಳುತ್ತಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದರು.
ಪೂರ್ತಿ ಓದಿ07:28 PM (IST) Mar 18
ವ್ಯಾಟ್ಸಾಪ್ ಬಳಸುತ್ತಿರುವ ಪ್ರತಿಯೊಬ್ಬರು ಗಮನಿಸಬೇಕು, ಇದೀಗ ವ್ಯಾಟ್ಸಾಪ್ ಭಾರತದ ದೂರ ಸಂಪರ್ಕ ಇಲಾಖೆ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಬಳಕೆದಾರರಿಗೆ ಏನು ಪ್ರಯೋಜನಾ ಅಂತೀರಾ?
07:06 PM (IST) Mar 18
ಕಳೆದ ಹತ್ತು ಹಣಕಾಸು ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳು ₹16.35 ಲಕ್ಷ ಕೋಟಿಗಳಷ್ಟು ಕೆಟ್ಟ ಸಾಲಗಳನ್ನು ರೈಟ್ ಆಫ್ ಮಾಡಿವೆ. 2019ರಲ್ಲಿ ಅತಿ ಹೆಚ್ಚು ಸಾಲ ರೈಟ್ ಆಫ್ ಮಾಡಲಾಗಿದ್ದು, ಸಾರ್ವಜನಿಕ ವಲಯದ ಬ್ಯಾಂಕುಗಳು ಸುಧಾರಣೆ ಕಂಡಿವೆ.
ಪೂರ್ತಿ ಓದಿ07:05 PM (IST) Mar 18
ಚಾಂಪಿಯನ್ಸ್ ಟ್ರೋಫಿ 2025 ಆಯೋಜನೆಯಿಂದ ಪಾಕಿಸ್ತಾನಕ್ಕೆ 739 ಕೋಟಿ ರೂ. ನಷ್ಟವಾಗಿದೆ. ಭಾರತ ತಂಡ ಟ್ರೋಫಿ ಗೆದ್ದಿದ್ದರಿಂದ ಫೈನಲ್ ಪಂದ್ಯ ದುಬೈನಲ್ಲಿ ನಡೆದಿದ್ದೇ ಇದಕ್ಕೆ ಕಾರಣ. ನಷ್ಟವನ್ನು ಸರಿದೂಗಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ಸಂಬಳ ಕಡಿತಕ್ಕೆ ಮುಂದಾಗಿದೆ.
ಪೂರ್ತಿ ಓದಿ06:27 PM (IST) Mar 18
ಬೆಂಗಳೂರು ಜಲಮಂಡಳಿಯಿಂದ ನೀರಿನ ಟ್ಯಾಂಕರ್ ಮಾಫಿಯಾ ತಡೆಗೆ ಆ್ಯಪ್ ಬಿಡುಗಡೆ. ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಕಾವೇರಿ ನೀರು ಬುಕ್ ಮಾಡಿ, ಟ್ಯಾಂಕರ್ ಮೂಲಕ ನೀರು ಪಡೆಯಿರಿ..
ಪೂರ್ತಿ ಓದಿ05:42 PM (IST) Mar 18
ಲಾರ್ಸೆನ್ & ಟೂಬ್ರೊ 2027 ರ ವೇಳೆಗೆ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು 150 ಮೆಗಾವ್ಯಾಟ್‌ಗೆ ಹೆಚ್ಚಿಸಲು 3,600 ಕೋಟಿ ರೂ. ಹೂಡಿಕೆ ಮಾಡಲಿದೆ. ಬೆಂಗಳೂರು, ಪನ್ವೇಲ್ ಮತ್ತು ಮಹಾಪೆಯಲ್ಲಿ ಮೂರು ಹೊಸ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.
ಪೂರ್ತಿ ಓದಿ05:41 PM (IST) Mar 18
ಮಹೀಂದ್ರ XUV 700 ಕಾರು ಅತ್ಯಂತ ಜನಪ್ರಿಯಗೊಂಡಿದೆ. ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಇದೀಗ ಮಹೀಂದ್ರ XUV 700 ಬ್ಲಾಕ್ ಎಡಿಶನ್‌ನಲ್ಲಿ ಬಿಡುಗಡೆಯಾಗಿದೆ. ಇದು ಎಬೋನಿ ಎಡಿಶನ್ ಕಾರು. ಈ ಕಾರಿನ ಆಕರ್ಷಕ ನೋಟ, ಫೀಚರ್, ಪರ್ಫಾಮೆನ್ಸ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಪೂರ್ತಿ ಓದಿ05:28 PM (IST) Mar 18
ವಿಶ್ವ ವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವವು ಏಪ್ರಿಲ್ 4 ರಿಂದ 14 ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ರಸ್ತೆ ದುರಸ್ತಿ, ಪೊಲೀಸ್ ಬಂದೋಬಸ್ತ್, ಸಿಸಿ ಕ್ಯಾಮೆರಾ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪೂರ್ತಿ ಓದಿ05:16 PM (IST) Mar 18
ರಷ್ಯಾದ ಸರ್ಕಸ್‌ನಲ್ಲಿ 25 ವರ್ಷ ಒಟ್ಟಿಗೆ ಕಳೆದ ಆನೆಯೊಂದು ತನ್ನ ಸ್ನೇಹಿತನ ಸಾವಿಗೆ ರೋದಿಸುತ್ತಿರುವ ಭಾವುಕ ವಿಡಿಯೋ ವೈರಲ್ ಆಗಿದೆ. ಜೆರ್ರಿ ಎಂಬ ಆನೆಯ ಅಗಲಿಕೆಯನ್ನು ಮಗ್ಡಾ ಎಂಬ ಆನೆ ಸಹಿಸಲಾಗದೆ ಕಣ್ಣೀರಿಡುತ್ತಿದೆ.
ಪೂರ್ತಿ ಓದಿ05:08 PM (IST) Mar 18
ಈ ವರ್ಷ ಗುರು ರಾಶಿ ಬದಲಾವಣೆಯು ರಾಶಿಚಕ್ರ ಚಿಹ್ನೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ
04:41 PM (IST) Mar 18
ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸಚಿವರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೈಕಮಾಂಡ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಪೂರ್ತಿ ಓದಿ04:30 PM (IST) Mar 18
ಎಲೆಕ್ಟ್ರಿಕ್ ಕಾರಿನಲ್ಲಿ ಜನಪ್ರಿಯ ಬಿವೈಡಿ ಬ್ರ್ಯಾಂಡ್ ಕ್ರಾಂತಿ ಮಾಡಿದೆ. ಕೇವಲ 5 ನಿಮಿಷ ಚಾರ್ಜ್ ಮಾಡಿದರೆ ಸಾಕು, ಫುಲ್ ಚಾರ್ಜ್ ಆಗಲಿದೆ. ಇಷ್ಟೇ ಅಲ್ಲ 470 ಕಿ.ಮೀ ಮೈಲೇಜ್ ನೀಡಲಿದೆ. ಇದು ಸಾರಿಗೆ ವ್ಯವಸ್ಥೆಯಲ್ಲೇ ಹೊಸ ಮೈಲಿಗಲ್ಲಾಗಿದೆ.
03:38 PM (IST) Mar 18
ಮಾರ್ಚ್ 19 ರಿಂದ, 5 ರಾಶಿಚಕ್ರ ಚಿಹ್ನೆಗಳಿಗೆ ಸಮಯವು ತುಂಬಾ ಶುಭವಾಗಿರುತ್ತದೆ. ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇರಬಹುದು.
03:37 PM (IST) Mar 18
ಆನ್‌ಲೈನ್ ಮೂಲಕ ಮಹಿಳೆ ಫುಡ್ ಆರ್ಡರ್ ಮಾಡಿದ್ದಾರೆ. ತಿನಿಸು ಜೊತೆಗೆ ಕೈಬರಹದ ಸಣ್ಣ ನೋಟ್ ಕೂಡ ಇದರ ಜೊತೆಗಿತ್ತು. ಈ ಚೀಟಿಯಲ್ಲಿ ಬರೆದಿರು ಸಾಲುಗಳನ್ನು ಓದಿದ ಮಹಿಳೆ ಭಾವುಕಳಾಗಿದ್ದಾಳೆ. ಆದರೆ ಈ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಗರಂ ಆಗಿದ್ದಾರೆ.
ಪೂರ್ತಿ ಓದಿ03:34 PM (IST) Mar 18
ಭಾರತದಲ್ಲಿ ಆನ್‌ಲೈನ್‌ನಲ್ಲಿ ಪೊಲೀಸ್ ದೂರು (FIR) ದಾಖಲಿಸಲು ಡಿಜಿಟಲ್ ಪೊಲೀಸ್ ಪೋರ್ಟಲ್ ಅಥವಾ ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಶನ್/ವೆಬ್‌ಸೈಟ್ ಬಳಸಬಹುದು. FIR ದಾಖಲಾದ ನಂತರ ಪೊಲೀಸರು ಪ್ರಕರಣವನ್ನು ತನಿಖೆ ಮಾಡಲು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿರುತ್ತಾರೆ.
ಪೂರ್ತಿ ಓದಿ03:09 PM (IST) Mar 18
ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಇತರರು ಮಾರ್ಚ್ 19 ರಂದು ಭೂಮಿಗೆ ಮರಳಲಿದ್ದಾರೆ. 9 ತಿಂಗಳ ನಂತರ ಭೂಮಿಗೆ ಬರುತ್ತಿರುವ ಇವರು, ಇಲ್ಲಿನ ಗುರುತ್ವಾಕರ್ಷಣ ಶಕ್ತಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಅನ್ನೋದರ ಬಗ್ಗೆಯೇ ಚಿಂತೆ ಮಾಡಲಾಗುತ್ತಿದೆ. ಮೈಕ್ರೋಗ್ರ್ಯಾವಿಟಿಯ ಪರಿಣಾಮದಿಂದ ಗಗನಯಾತ್ರಿಗಳಿಗೆ ನಡೆಯಲು ಸಾಧ್ಯವಾಗುವುದಿಲ್ಲ.
ಪೂರ್ತಿ ಓದಿ03:08 PM (IST) Mar 18
ಪಬ್ಜಿ ಪ್ರೇಮಿಗಳಾದ ಸೀಮಾ ಹೈದರ್ ಮತ್ತು ಸಚಿನ್ ಮೀನಾ ದಂಪತಿಗಳಿಗೆ ಹೆಣ್ಣು ಮಗುವಾಗಿದೆ. ಸಚಿನ್ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಈಗ ಐದನೇ ಮಗುವಿಗೆ ತಾಯಿಯಾಗಿದ್ದಾರೆ.
ಪೂರ್ತಿ ಓದಿ02:58 PM (IST) Mar 18
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅತ್ಯುನ್ನತ ಗುಣಮಟ್ಟ, ಅತ್ಯಂತ ಆಕರ್ಷಕ ಹಾಗೂ ಅತೀ ಹೆಚ್ಚಿನ ಸಂಗ್ರಹಗಳೊಂದಿಗೆ ಗ್ರಾಹಕರಿಗೆ ಚಿನ್ನಾಭರಣ ನೀಡುತ್ತಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದೀಗ ಚಿತ್ರದುರ್ಗದಲ್ಲಿ ಆರಂಭಗೊಂಡಿದೆ.
ಪೂರ್ತಿ ಓದಿ02:46 PM (IST) Mar 18
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೀಕ್ಷಕರಿಗೆ ಫುಲ್ ಗುಡ್‌ನ್ಯೂಸ್ ಸಿಕ್ಕಿದೆ.
ಪೂರ್ತಿ ಓದಿ02:17 PM (IST) Mar 18
ಭಾರತೀಯ ಜೀವ ವಿಮಾ ಕಂಪನಿ (ಎಲ್‌ಐಸಿ) ಶೀಘ್ರದಲ್ಲಿಯೇ ಆರೋಗ್ಯ ವಿಮೆ ಕ್ಷೇತ್ರಕ್ಕೆ ಕಾಲಿಡಲಿದೆ. ಇದಕ್ಕಾಗಿ ಕಂಪನಿಯೊಂದರ ಷೇರುಗಳ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮಾರ್ಚ್ 31 ರ ಮೊದಲು ಒಪ್ಪಂದ ಅಂತಿಮವಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ02:13 PM (IST) Mar 18
ಮಹಿಳೆಯೊಬ್ಬಳು ಬೆಳಿಗ್ಗೆ ಎದ್ದಾಗ ಹಾಸಿಗೆಯಲ್ಲಿ ಹೆಬ್ಬಾವು ನೋಡಿ ಬೆಚ್ಚಿಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಜನರು ಆಶ್ಚರ್ಯ ಮತ್ತು ಭಯದಿಂದ ಪ್ರತಿಕ್ರಿಯಿಸಿದ್ದಾರೆ.
ಪೂರ್ತಿ ಓದಿ01:42 PM (IST) Mar 18
ಅಣ್ಣಯ್ಯ ಧಾರಾವಾಹಿಯಲ್ಲಿ, ಶಿವು ತಂಗಿಯ ಮದುವೆಗೆ ಮಾಡಿದ ಸಾಲಕ್ಕೆ ಮನೆ ಹರಾಜಾಗುವ ಪರಿಸ್ಥಿತಿ ಬಂದಾಗ ಪಾರು ಆತನ ಮನೆಯನ್ನು ಉಳಿಸುತ್ತಾಳೆ. ಶಾರದಮ್ಮ ಕದ್ದ ಹಣವನ್ನು ಪಾರುಗೆ ತಲುಪಿಸಿ ಸಹಾಯ ಮಾಡುತ್ತಾಳೆ. ಧಾರಾವಾಹಿ ವೀಕ್ಷಕರು ಈ ವಾರದ ಕಿಚ್ಚನ ಚಪ್ಪಾಳೆ ಶಾರದಮ್ಮಗೆ ಎಂದು ಹೇಳಿದ್ದಾರೆ.
ಪೂರ್ತಿ ಓದಿ01:12 PM (IST) Mar 18
ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಕಾಯಂ ಬೋಧಕರಿಲ್ಲದೆ, ಅನುದಾನದ ಕೊರತೆಯಿಂದ ಮುಚ್ಚುವ ಆಲೋಚನೆ ಇದೆ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಭವಿಷ್ಯ ಅತಂತ್ರವಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ12:56 PM (IST) Mar 18
ತಂತ್ರಜ್ಞಾನ ವೇಗ ಪಡೆಯುತ್ತಿದ್ದಂತೆಯೇ, ಐಟಿ ಉದ್ಯೋಗದ ಕನಸು ಕಂಡು ಬೆಂಗಳೂರಿಗೆ ಬಂದ ಯುವಕರು ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಗಿದೆ. ಯಾವ ಕಂಪೆನಿಯಲ್ಲಿ ಎಷ್ಟು ಉದ್ಯೋಗ ಕಡಿತವಾಗಿದೆ? ಇಲ್ಲಿದೆ ಡಿಟೇಲ್ಸ್
12:50 PM (IST) Mar 18
ನಿಗೂಢ ಗ್ರಹಗಳೆಂದು ಪರಿಗಣಿಸಲಾದ ರಾಹು ಮತ್ತು ಕೇತುಗಳು ಸಹ 2025 ರಲ್ಲಿ ಸಂಚಾರ ಮಾಡಲಿವೆ. ಈ ಸಂಚಾರದಿಂದ ಯಾವ ರಾಶಿಚಕ್ರದವರಿಗೆ ಲಾಭವಾಗುತ್ತದೆ ಎಂಬುದನ್ನು ನೋಡಿ.
12:43 PM (IST) Mar 18
ಬೆಂಗಳೂರಿನ ಐಟಿ ವಲಯವು ಉದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದ್ದು, AI ತಂತ್ರಜ್ಞಾನದ ಬಳಕೆಯಿಂದ ಸಾಮೂಹಿಕ ವಜಾಗಳಾಗುವ ಸಾಧ್ಯತೆ ಇದೆ. ಇದು ವಸತಿ ಮಾರುಕಟ್ಟೆ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಗಳ ಮೇಲೆ ಪರಿಣಾಮ ಬೀರಲಿದೆ.
ಪೂರ್ತಿ ಓದಿ12:32 PM (IST) Mar 18
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಭೇಟಿ ಮಾಡಲು ಹೋದ ಹುಡುಗನನ್ನು ಹಿಡಿದು ಗ್ರಾಮಸ್ಥರು, ಆತನ ತಂದೆ-ತಾಯಿಯನ್ನು ಕರೆಸಿದ್ದಾರೆ. ನಂತರ, ಗ್ರಾಮಸ್ಥರೇ ಹೊಸ ಬಟ್ಟೆ ಹಾಗೂ ಚಿನ್ನದ ತಾಳಿಯನ್ನು ಮಾಡಿಸಿ ಇಬ್ಬರಿಗೂ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ.
ಪೂರ್ತಿ ಓದಿ12:28 PM (IST) Mar 18
ಕಲರ್ಸ್ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಸುಜಾತಾ ಅವರ ಲುಕ್ ಟ್ರೋಲ್ ಆಗುತ್ತಿದೆ. ನೆಟ್ಟಿಗರು ಸುಜಾತಾ ಅವರ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಪೂರ್ತಿ ಓದಿ12:26 PM (IST) Mar 18
ಕೋಲ್ಕತ್ತಾದಲ್ಲಿ ಹ್ಯೂಮನ್ ಕೊರೊನಾ ವೈರಸ್ HKU1 ಪತ್ತೆಯಾಗಿದ್ದು, ಇದು ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ. ಜ್ವರ, ಕೆಮ್ಮು, ಶೀತದಂತಹ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆಯಿಂದಿರಿ ಹಾಗೂ ವೈದ್ಯರನ್ನು ಸಂಪರ್ಕಿಸಿ.
ಪೂರ್ತಿ ಓದಿ12:09 PM (IST) Mar 18
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಕಾರ, ಸಿದ್ದರಾಮಯ್ಯನವರ ಬಜೆಟ್ ರಾಜ್ಯದ ಪ್ರತಿಯೊಬ್ಬ ನಾಗರಿಕರ ಮೇಲೆ ಸಾಲದ ಹೊರೆ ಹೆಚ್ಚಿಸುತ್ತದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಕಡಿಮೆ ಅನುದಾನ ಮೀಸಲಿಡಲಾಗಿದ್ದು, ಸಾಲ ಮರುಪಾವತಿಗೆ ಪ್ರತ್ಯೇಕ ಬಜೆಟ್ ಬೇಕಾಗುವ ಪರಿಸ್ಥಿತಿ ಬರಬಹುದು.
ಪೂರ್ತಿ ಓದಿ12:06 PM (IST) Mar 18
ಮುಘಲ್ ಚಕ್ರವರ್ತಿಯ ಪ್ರೀತಿಯ ಪತ್ನಿ ಮುಮ್ತಾಜ್ ತನ್ನ 14ನೇ ಪ್ರಸವದಲ್ಲಿ ಮೃತಪಟ್ಟಾಗ, ಮಗಳನ್ನೇ ಮದುವೆಯಾದ ಷಹಜಹಾನ್ ಕಟ್ಟಿರುವುದಾಗಿ ಹೇಳಲಾಗ್ತಿರೋ ತಾಜ್ಮಹಲ್ ನಿರ್ಮಾಣ ಆಗಿದ್ದು ಹೇಗೆ? ಎಐ ವಿಡಿಯೋ ವೈರಲ್
11:57 AM (IST) Mar 18
ಬೆಂಗಳೂರಿನ ಪಾರ್ಕ್‌ನಲ್ಲಿ ಜಾಗಿಂಗ್ ನಿಷೇಧ ಮತ್ತು ಗಡಿಯಾರದ ದಿಕ್ಕಿನಲ್ಲಿ ನಡೆಯುವ ವಿಚಿತ್ರ ನಿಯಮ. ಸಾಮಾಜಿಕ ಮಾಧ್ಯಮದಲ್ಲಿ ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ, ಏನಿದು ವಿಷಯ ತಿಳಿಯಿರಿ.
ಪೂರ್ತಿ ಓದಿ11:28 AM (IST) Mar 18
ಸೀರೆ ಉಡುವುದು ಕಷ್ಟ ಎನ್ನುವವರಿಗೆ ಇಲ್ಲೊಬ್ಬ ಪುಟ್ಟ ಬಾಲಕಿ ಸೀರೆ ಸೆಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಚುರುಕುತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ11:23 AM (IST) Mar 18
ಹೊಸಪೇಟೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಜನ್ಮದಿನವನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು. ಅನ್ನದಾಸೋಹ, ರಕ್ತದಾನ ಶಿಬಿರ, ಹಾಗೂ ಪುನೀತ್ ರಾಜ್‌ಕುಮಾರ್ ತಂಗುದಾಣಕ್ಕೆ ಚಾಲನೆ ನೀಡಲಾಯಿತು.
ಪೂರ್ತಿ ಓದಿ