ಬೆಳಗಾವಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಲಾಭ ಪಡೆಯುತ್ತಿರುವ ಫಲಾನುಭವಿಗಳ ಪೈಕಿ 1.80 ಲಕ್ಷ ಮಂದಿ ಆದಾಯ ತೆರಿಗೆ- ಜಿಎಸ್‌ಟಿ ಪಾವತಿದಾರರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ವಿಧಾನ ಪರಿಷತ್‌ನಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿರುವ ಇಲಾಖೆ ಅಧಿಕಾರಿಗಳು, ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು.ನಂತೆ 2023ರ ಜೂ. 6ರಿಂದ ಗೃಹಲಕ್ಷ್ಮೀ ಯೋಜನೆ ಅಡಿ ಸಹಾಯಧನ ಪಾವತಿಸಲಾಗುತ್ತಿದೆ. ಅಕ್ಟೋಬರ್ ಅಂತ್ಯಕ್ಕೆ 1.28 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ ಅರ್ಹ 1.24 ಕೋಟಿ ರು. ಮಹಿಳೆಯರಿಗೆ ಆಗಸ್ಟ್ ಅಂತ್ಯದವರೆಗೆ 22 ಕಂತಿನಲ್ಲಿ ಹಣ ಪಾವತಿಸಲಾಗಿದೆ. ಒಟ್ಟಾರೆ 52,416 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
12:02 AM (IST) Dec 17
ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು, 22 ವರ್ಷದ ವಿದ್ಯಾರ್ಥಿನಿ ಎದೆ ನೋವಿನಿಂದ ಕುಸಿದು ಬಿದ್ದಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಇತ್ತ ಹಾಸ್ಟೆಲ್ ಇತರ ವಿದ್ಯಾರ್ಥನಿಯರು ಆಘಾತಕ್ಕೊಳಗಾಗಿದ್ದಾರೆ.
10:16 PM (IST) Dec 16
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಪಿಕ್‌ಅಪ್ ಮತ್ತು ಡ್ರಾಪ್-ಆಫ್ ವ್ಯವಸ್ಥೆಯ ಕುರಿತು BIAL ಸ್ಪಷ್ಟನೆ ನೀಡಿದೆ. ಪ್ರಯಾಣಿಕರ ಸುರಕ್ಷತೆಯೇ ಈ ನಿಯಮದ ಮುಖ್ಯ ಉದ್ದೇಶವಾಗಿದ್ದು, ಆರಂಭಿಕ ಸಮಸ್ಯೆಗಳನ್ನು 30 ದಿನಗಳಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದೆ.
09:59 PM (IST) Dec 16
09:00 PM (IST) Dec 16
ಮಂಗಳೂರಿನ ಯೆಯ್ಯಾಡಿ ಹರಕೆ ನೇಮ ವಿವಾದದ ಕುರಿತು ಮಾತನಾಡಿದ ತಮ್ಮಣ್ಣ ಶೆಟ್ಟಿಯವರು, ತಾವು ದೈವಾರಾಧನೆಯ ಲೋಪದೋಷಗಳ ಬಗ್ಗೆ ಮಾತ್ರ ಧ್ವನಿ ಎತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತುಳು ಭಾಷೆಯ ಬದಲು ಕನ್ನಡದಲ್ಲಿ ನುಡಿ ಹೇಳಿರುವುದು, ನಿಯಮ ಮುರಿದಿರುವುದನ್ನು ಆಕ್ಷೇಪಿಸಿದ್ದಾರೆ.
08:49 PM (IST) Dec 16
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಏರಿಕೆಯಾಗುತ್ತಾ ಸಾಗಿದ್ದ ಚಿನ್ನದ ಬೆಲೆಯಲ್ಲಿ ಆಗಿರುವ ಭಾರಿ ಇಳಿಕೆಯಿಂದ ಜನರು ಖರೀದಿ ಹಾಗೂ ಹೂಡಿಕೆಗೆ ಮುಂದಾಗಿದ್ದಾರೆ. ಮತ್ತೆ ಏರಿಕೆಯಾಗುವ ಮೊದಲು ಖರೀದಿಸಲು ಪ್ಲಾನ್ ಮಾಡುತ್ತಿದ್ದಾರೆ.
08:32 PM (IST) Dec 16
08:11 PM (IST) Dec 16
ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯು ಚಾಮರಾಜನಗರ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿದೆ. ಪ್ರಾಥಮಿಕ ಹಂತದ ಸರ್ವೆಯಲ್ಲಿ ಈ ಸುಳಿವು ದೊರೆತಿದ್ದು, ನಿಕ್ಷೇಪದ ಪ್ರಮಾಣ ಮತ್ತು ಗುಣಮಟ್ಟವನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆ ನಡೆಯಲಿದೆ.
08:08 PM (IST) Dec 16
07:27 PM (IST) Dec 16
ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ 'ನರೇಗಾ' ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ 5 ಕೋಟಿ ಮಾನವ ದಿನಗಳನ್ನು ಕಡಿತಗೊಳಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
07:21 PM (IST) Dec 16
07:16 PM (IST) Dec 16
ಬಾಲಿವುಡ್‌ಗೆ ಹೊಸ ಹುರುಪು ತಂದಿರುವ 'ಧುರಂಧರ್' ಚಿತ್ರದಲ್ಲಿ ರಣವೀರ್ ಸಿಂಗ್, ಹಮ್ಜಾ ಅಲಿ ಮಜಾರಿ ಎಂಬ ಗೂಢಚಾರನಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಮೇಕಪ್ ಕಲಾವಿದೆ ಪ್ರೀತಿಶೀಲ್ ಸಿಂಗ್ ಅವರು, ರಣವೀರ್‌ರ ಹಿಂದಿನ ಖಿಲ್ಜಿ ಪಾತ್ರಕ್ಕಿಂತ ಸಂಪೂರ್ಣ ಭಿನ್ನವಾದ ನೋಟ ಸೃಷ್ಟಿಸಿದ್ದಾರೆ.
06:07 PM (IST) Dec 16
05:27 PM (IST) Dec 16
05:18 PM (IST) Dec 16
ರಾಜ್ಯದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಲ್‌ಕೆಜಿ ಯಿಂದ ಪಿಯುಸಿ ವರೆಗಿನ ಶಾಲಾ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಚಳಿಗಾಲ ಮುಗಿಯುವವರೆಗೆ ತರಗತಿಗಳನ್ನು ಬೆಳಿಗ್ಗೆ 9.30ಕ್ಕೆ ಆರಂಭಿಸಲು ಆಯೋಗ ಸಲಹೆ ನೀಡಿದೆ.
05:12 PM (IST) Dec 16
ನಕಲಿ ಆಧಾರ್ ಕಾರ್ಡ್ ತಯಾರಿಕೆಯ ಸುಳ್ಳು ಆರೋಪ ಮಾಡಿ ಕನಕಪುರದ ಜೆರಾಕ್ಸ್ ಅಂಗಡಿ ಮಾಲೀಕ ರಾಜೇಶ್ ಅವರಿಂದ ₹1.6 ಲಕ್ಷ ವಸೂಲಿ ಮಾಡಿದ್ದ ಕಗ್ಗಲೀಪುರ ಪಿಎಸ್‌ಐ ಹರೀಶ್ ಅವರನ್ನು ರಾಮನಗರ ಎಸ್.ಪಿ. ಶ್ರೀನಿವಾಸ್ ಗೌಡ ಅಮಾನತುಗೊಳಿಸಿದ್ದಾರೆ. ಗೃಹ ಸಚಿವರಿಗೆ ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ.
04:06 PM (IST) Dec 16
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ, ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 24 ಗಂಟೆಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೋರಿದ್ದು, ಡಿ.18 ರಂದು ಅಂತಿಮ ತನಿಖಾ ವರದಿ ಸಲ್ಲಿಕೆಯಾಗಲಿದೆ.
03:55 PM (IST) Dec 16
03:38 PM (IST) Dec 16
ಕೊಪ್ಪಳ ತಾಲೂಕಿನ ಬಿಸರಹಳ್ಳಿ ಮತ್ತು ಹೊಸಲಿಂಗಾಪುರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಮತ್ತು ನುಶಿಗಳು ಪತ್ತೆಯಾಗಿವೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
02:53 PM (IST) Dec 16
ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿಯ ರಕ್ಷಣೆಯಿಂದ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಜಾಲವೊಂದು ಬಯಲಾಗಿದೆ. ದೆಹಲಿ ಹಾಗೂ ಬೆಂಗಳೂರಿನ ಸ್ಪಾದಲ್ಲಿ ಬಾಲಕಿಯನ್ನು ಕೂಡಿಹಾಕಿ ದಂಧೆ ನಡೆಸಿದ್ದಾರೆ.
02:44 PM (IST) Dec 16
02:23 PM (IST) Dec 16
01:38 PM (IST) Dec 16
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮನೆ ಭೋಗ್ಯದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಮನೆ ಖಾಲಿ ಮಾಡುವಂತೆ ಕೇಳಿದ್ದಕ್ಕೆ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟಿದ್ದು, ಇದು ಗಲಾಟೆಗೆ ಕಾರಣವಾಗಿದೆ. ಈ ವೇಳೆ ಯುವಕನೊಬ್ಬ ಮಹಿಳೆಯ ಜಡೆ ಹಿಡಿದು ಎಳೆದು ಹಲ್ಲೆ ನಡೆಸಿದ್ದಾನೆ ಎಂದು ಆರೋಪ.
01:30 PM (IST) Dec 16
ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ತಮ್ಮ ಭಾರತ ಪ್ರವಾಸದ ವೇಳೆ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಅವರ ಸ್ಪ್ಯಾನಿಶ್ ಭಾಷಣವನ್ನು ಭಾಷಾಂತರಿಸುವಾಗ, ಭಾಷಾಂತರಕಾರರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು 'ಪ್ರಧಾನ ಮಂತ್ರಿ' ಎಂದು ತಪ್ಪಾಗಿ ಉಲ್ಲೇಖಿಸಿದ್ದು ವೈರಲ್ ಆಗಿದೆ.
01:19 PM (IST) Dec 16
01:15 PM (IST) Dec 16
ಕೌಟುಂಬಿಕ ಕಲಹದಿಂದ ಬೇರ್ಪಟ್ಟಿದ್ದನಿರ್ಮಾಪಕ ಹರ್ಷವರ್ಧನ್, ತನ್ನ ಮಗಳಿಗಾಗಿ ಕಿರುತೆರೆ ನಟಿ ಪತ್ನಿ ಚೈತ್ರಾಳನ್ನು ಅಪಹರಿಸಿದ್ದಾರೆ. ಸೀರಿಯಲ್ ಶೂಟಿಂಗ್ ನೆಪದಲ್ಲಿ ಮೈಸೂರಿಗೆ ಕರೆಸಿ, ಪತ್ನಿಯನ್ನು ಬಿಡುಗಡೆ ಮಾಡಲು ಮಗಳನ್ನು ತನಗೆ ನೀಡುವಂತೆ ಬೇಡಿಕೆಯಿಟ್ಟ ಘಟನೆ ನಡೆದಿದೆ.
01:08 PM (IST) Dec 16
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಸದ್ಯ ಜೈಲಿನಲ್ಲಿದ್ದಾರೆ. ಇವರು ಅರೆಸ್ಟ್ ಆದಾಗ ಮಗನನ್ನು ಹ್ಯಾಂಡಲ್ ಮಾಡೋದು ತುಂಬ ಕಷ್ಟ ಆಗಿತ್ತು ಎಂದು ವಿಜಯಲಕ್ಷ್ಮೀ ಅವರು ನಟಿ ರಚನಾ ರೈ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
01:02 PM (IST) Dec 16
ಬೆಂಗಳೂರಿನ ಮಾರತ್ ಹಳ್ಳಿ ಹೋಟೆಲ್‌ನಿಂದ ಯುವತಿ ಜಿಗಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರ ಆಗಮನದ ನಂತರ ಈ ಘಟನೆ ನಡೆದಿದ್ದು, ಅವರ ಪಾತ್ರದ ಬಗ್ಗೆಯೇ ಗಂಭೀರ ಅನುಮಾನಗಳು ಮೂಡಿವೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಕಮಿಷನರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
12:47 PM (IST) Dec 16
HD Kumaraswamy birthday in Mandya: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕರ್ತರೊಬ್ಬರು ಅವರಿಗೆ ವಿಶೇಷ 'ಶಿವ ತಾಯತ'ವನ್ನು ಉಡುಗೊರೆಯಾಗಿ ನೀಡಿದರು.
12:36 PM (IST) Dec 16
45 Movie Trailer: ನಟ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ, ಎಂ. ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ‘45’ ಸಿನಿಮಾ ಸದ್ದು ಮಾಡುತ್ತಿದೆ. ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ.
12:09 PM (IST) Dec 16
ವಿಧಾನಸಭೆಯಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಸ್ವಪಕ್ಷೀಯ ಶಾಸಕ ಕುಣಿಗಲ್ ರಂಗನಾಥ್ ಅವರೇ ಸರ್ಕಾರದ ವಿರುದ್ಧ ಅಸಮಾಧಾನ.. ಈ ಚರ್ಚೆಯು ಮುಖ್ಯಮಂತ್ರಿ ಸ್ಥಾನದ ಜಟಾಪಟಿಯಾಗಿ ಮಾರ್ಪಟ್ಟಾಗ, 'ಐದು ವರ್ಷ ನಾನೇ ಸಿಎಂ' ಎಂದು ಸಿದ್ದರಾಮಯ್ಯ ವಿಪಕ್ಷಗಳಿಗೆ ಸ್ವಪಕ್ಷೀಯರಿಗೆ ಸ್ಪಷ್ಟ ಸಂದೇಶ ರವಾನಿಸಿದರು.
11:58 AM (IST) Dec 16
BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಧ್ರುವಂತ್, ರಕ್ಷಿತಾ ಶೆಟ್ಟಿ ಮಧ್ಯೆ ಮೊದಲಿನಿಂದಲೂ ಜಗಳ ಆಗುತ್ತಲೇ ಇದೆ. ಈಗ ಸೀಕ್ರೆಟ್ ರೂಮ್‌ನಲ್ಲಿ ಇವರು ಕಿತ್ತಾಡುತ್ತಲೇ ಇದ್ದಾರೆ. ಇವರು ಸೀಕ್ರೆಟ್ ರೂಮ್‌ಗೆ ಹೋಗಿದ್ದು ಯಾಕೆ? ಇನ್ನು ಬಿಗ್ ಬಾಸ್‌ಗೆ ಧರ್ಮ ಸಂಕಟ ಆಗಿದ್ದು ಯಾಕೆ?
11:36 AM (IST) Dec 16
10:31 AM (IST) Dec 16
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ 45 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇಷ್ಟುದಿನಗಳ ಸಂಗೀತ ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಜನ್ಯ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಈ ಸಿನಿಮಾ ಟ್ರೇಲರ್ ನೋಡಿ ಅನೇಕರು ಖುಷಿಪಟ್ಟಿದ್ದು, ಶಿವರಾಜ್‌ಕುಮಾರ್ ಲುಕ್‌ಗೆ ಕಳೆದು ಹೋಗಿದ್ದಾರೆ.
10:26 AM (IST) Dec 16
ಈ ಬಾರಿಯ IPL ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಬಿಸಿಸಿಐ ಜೊತೆ ಮಾತುಕತೆ ನಡೆಸುತ್ತಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಪ್ರಕಾರ, ರಾಜ್ಯ ಸರ್ಕಾರದಿಂದಲೂ ಇದಕ್ಕೆ ಹಸಿರು ನಿಶಾನೆ ದೊರೆತಿದ್ದು, ಶೀಘ್ರ ದಿನಾಂಕ ನಿಗದಿಯಾಗುವ ನಿರೀಕ್ಷೆ
09:54 AM (IST) Dec 16
Darshan Thoogudeepa Wife Vijayalakshmi: ನಟ ದರ್ಶನ್ ತೂಗುದೀಪ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಒಂದು ಕಡೆ ಅಭಿಮಾನಿಗಳು, ಇನ್ನೊಂದು ಕಡೆ ನೆಗೆಟಿವ್ ಪ್ರತಿಕ್ರಿಯೆ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಮಾತನಾಡಿದ್ದಾರೆ.
09:46 AM (IST) Dec 16
ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆ ವಿಧಾನ ಪರಿಷತ್‌ನಲ್ಲಿ ಸಂತಾಪ ಸೂಚನೆ ನಂತರ ಕಲಾಪ ನಡೆಸುವ ಸಂಪ್ರದಾಯ ಮುರಿದು, ಇಡೀ ದಿನದ ಕಲಾಪ ಮುಂದೂಡಲಾಯಿತು. ಸದಸ್ಯರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬೇಕಿದ್ದ ಕಾರಣ, ವಿವಿಧ ಪಕ್ಷಗಳ ಸದಸ್ಯರ ಸಲಹೆ ಮೇರೆಗೆ ಸಭಾಪತಿಯಿಂದ ಐತಿಹಾಸಿಕ ನಿರ್ಧಾರ
09:28 AM (IST) Dec 16
ಕೆನಡಾದಲ್ಲಿ ಉದ್ಯೋಗದಲ್ಲಿರುವ ಮಾಗಡಿ ತಾಲ್ಲೂಕಿನ ಸುಹಾಸ್.ಎಸ್ ಮತ್ತು ಉಡುಪಿಯ ನಿವಾಸಿ ಮೇಘಾ ಅವರು ಬ್ರಾಹ್ಮಣ ಸಂಪ್ರದಾಯದಂತೆ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರನಿಗೆ ರಜೆ ಸಿಗದ ಕಾರಣ, ಉಡುಪಿಯ ಸರಸ್ವತಿ ಸಭಾಭವನದಲ್ಲಿ ವಧು ಮತ್ತು ಕುಟುಂಬದವರು ಹಾಜರಿದ್ದರು,
09:20 AM (IST) Dec 16
Vijayalakshmi Darshan: ನಟ ದರ್ಶನ್ ಅವರೀಗ ಚಿತ್ರದುರ್ಗ ರೇಣುಕಾಸ್ವಾಮಿ ಕೊ*ಲೆ ಕೇಸ್ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಿದ್ದು, ಪತ್ನಿ ವಿಜಯಲಕ್ಷ್ಮೀ ಅವರು ಸಿನಿಮಾ ಕುರಿತಂತೆ ಸಂದರ್ಶನ ನೀಡಿದ್ದಾರೆ.
08:32 AM (IST) Dec 16
ನಿಗದಿತ ಪ್ರಮಾಣಕ್ಕಿಂತ ಕಡಿಮೆ ಬಿಯರ್ ಉತ್ಪಾದನೆ ಮಾಡಿದ್ದಕ್ಕಾಗಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ಗೆ ಅಬಕಾರಿ ಇಲಾಖೆ ವಿಧಿಸಿದ್ದ 29 ಕೋಟಿ ರೂ. ದಂಡದ ನೋಟಿಸ್ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಅಧೀನ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರವಿಲ್ಲ ನಿಯಮ ಪ್ರಕಾರ ಮೊದಲು ಕಾರಣ ತಿಳಿಸಬೇಕು ಎಂದಿದೆ.
08:14 AM (IST) Dec 16
Actor Kiccha Sudeep: ಡಿಸೆಂಬರ್ 25 ರಂದು ‘ಮಾರ್ಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಕಿಚ್ಚ ಸುದೀಪ್ ಚೆನ್ನೈನಲ್ಲಿ ನಡೆದ ‘ಮಾರ್ಕ್’ ಇವೆಂಟ್‌ನಲ್ಲಿ ಭಾಗವಹಿಸಿದ್ದರು. ಆ ವೇಳೆ ಪತ್ರಕರ್ತರೋ ಅಥವಾ ಯುಟ್ಯೂಬರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.