Published : Jun 15, 2025, 07:05 AM ISTUpdated : Jun 15, 2025, 11:41 PM IST

Karnataka News Live: ಸೋನಿಯಾ ಗಾಂಧಿ ಆಸ್ಪತ್ರೆ ದಾಖಲು, ಈ ತಿಂಗಳಲ್ಲಿ 2ನೇ ಬಾರಿ ಆರೋಗ್ಯ ಏರುಪೇರು

ಸಾರಾಂಶ

ಬೆಂಗಳೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ, ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದನ್ನು ಮುಂದುರೆಸುತ್ತೇವೆ. ಹಿಂದೆ ಕಲಬುರಗಿಗೆ ಬಂದಾಗ ಪ್ರತಿ ವರ್ಷ 5 ಸಾವಿರ ಕೋಟಿ ರು. ಕೊಡುವೆ ಅಂತ ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಮುಂದಿನ ವರ್ಷವೂ 5 ಸಾವಿರ ಕೋಟಿ ರು. ಖರ್ಚು ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Sonia Gandhi Undergoes Tests At Shimla Hospital

11:40 PM (IST) Jun 15

ಸೋನಿಯಾ ಗಾಂಧಿ ಆಸ್ಪತ್ರೆ ದಾಖಲು, ಈ ತಿಂಗಳಲ್ಲಿ 2ನೇ ಬಾರಿ ಆರೋಗ್ಯ ಏರುಪೇರು

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದೆ. ಇದೀಗ ದಿಢೀರ್ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

11:09 PM (IST) Jun 15

ನಾಸಾದಿಂದ ಮಂಗಳ ಗ್ರಹದ ಕ್ಲೀಯರ್ ಫೋಟೋ ಬಿಡುಗಡೆ,140 ಮಿಲಿಯನ್ ಮೈಲು ದೂರದ ಅದ್ಭುತ

ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಅತ್ಯಂತ ಕ್ಲಿಯರ್ ಇಮೇಜ್ ಸೆರೆ ಹಿಡಿದು ರವಾನಿಸಿದೆ. ಇದುವರೆಗೆ ತೆಗೆದಿರುವ ಚಿತ್ರಗಳ ಪೈಕಿ ಇದು ಅತ್ಯಂತ ಸ್ಪಷ್ಟತೆಯ ಚಿತ್ರವಾಗಿದೆ.ಬರೋಬ್ಬರಿ 140 ಮಿಲಿಯನ್ ಮೈಲು ದೂರದಲ್ಲಿರುವ ಮಂಗಳ ಗ್ರಹದ ಮೇಲಿನ ಫೋಟೋ ಅಚ್ಚರಿಗೆ ಕಾರಣವಾಗಿದೆ.

Read Full Story

10:11 PM (IST) Jun 15

ಭಾರಿ ಮಳೆಯಿಂದ ನಾಳೆ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ

ಭಾರಿ ಮಳೆ ಕಾರಣದಿಂದ ಕರ್ನಾಟಕದ ನಾಲ್ಕು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ರಜೆ ನಾಲ್ಕೈದು ತಾಲೂಕುಗಳಿಗೆ ಸೀಮೀತವಾಗಿದೆ. ಯಾವ ಜಿಲ್ಲೆಗಳಲ್ಲಿ ರಜೆ ನೀಡಲಾಗಿದೆ?

 

Read Full Story

09:42 PM (IST) Jun 15

ಫಿಫಾ ವಿಶ್ವಕಪ್‌ಗೆ ಅರ್ಹತೆ, ಉಜ್ಬೇಕಿಸ್ತಾನ್ ತಂಡಕ್ಕೆ ಹೊಚ್ಚ ಹೊಸ 40 ಕಾರು ಗಿಫ್ಟ್

ಉಜ್ಬೇಕಿಸ್ತಾನ್ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಈ ಸಂಭ್ರಾಚರಣೆ ಜೋರಾಗಿದೆ. ಇದರ ನಡುವೆ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ತಂಡದ ಪ್ರತಿಯೊಬ್ಬ ಆಟಗಾರರಿಗೆ ಇದೀಗ ಕಾರು ಉಡುಗೊರೆಯಾಗಿ ನೀಡಲಾಗಿದೆ.

 

Read Full Story

09:23 PM (IST) Jun 15

30 ವರ್ಷಗಳಿಂದ ಕಡೆಗಣಿಸಲ್ಪಟ್ಟಿದ್ದ ಚನ್ನಸಂದ್ರ ಕೆರೆಗೆ ಪುನರ್ಜನ್ಮ, ಈಗ ತ್ಯಾಜ್ಯ ಮುಕ್ತ

ಮೂರು ದಶಕಗಳ ಕಾಲ ಕಸದ ತಾಣವಾಗಿದ್ದ ಬೆಂಗಳೂರಿನ ಚನ್ನಸಂದ್ರ ಕೆರೆ, ಸಮುದಾಯ ಮತ್ತು ಸಿಎಸ್‌ಆರ್ ನೆರವಿನಿಂದ ಪುನರುಜ್ಜೀವನಗೊಂಡಿದೆ. ವನಮಹೋತ್ಸವದ ಸಂದರ್ಭದಲ್ಲಿ ಸ್ಥಳೀಯರ ನೇತೃತ್ವದಲ್ಲಿ ಆರಂಭವಾದ ಈ ಯೋಜನೆ, ಕೆರೆಯನ್ನು ಹೊಸ ರೂಪದಲ್ಲಿ ಮರುಸ್ಥಾಪಿಸಿದೆ.
Read Full Story

09:00 PM (IST) Jun 15

ಕೊನೆಗೂ ಮುಕ್ತಿ, ಹೆಬ್ಬಾಳ ಮೇಲ್ಸೇತುವೆ ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ?

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿನ ದಟ್ಟಣೆಗೆ ಪರಿಹಾರವಾಗಿ ಹೊಸ ಮೇಲ್ಸೇತುವೆಯ ಮೊದಲ ಹಂತ ಆಗಸ್ಟ್‌ನಲ್ಲಿ ತೆರೆಯಲಿದೆ. ನಾಗವಾರದಿಂದ ಮೇಕ್ರಿ ವೃತ್ತದ ಕಡೆಗೆ ಸಾಗುವ ಈ ಮೇಲ್ಸೇತುವೆ, ಕೆಆರ್‌ಪುರ ಲೂಪ್‌ಗೆ ಸಂಪರ್ಕ ಕಲ್ಪಿಸಲಿದೆ.
Read Full Story

08:35 PM (IST) Jun 15

ಲಾಲ್‌ಬಾಗ್‌ನಲ್ಲಿ ಫೋಟೋಶೂಟ್‌, ಚಿತ್ರೀಕರಣ, ರೀಲ್ಸ್ ಶೀಘ್ರದಲ್ಲೇ ನಿಷೇಧ!

ಲಾಲ್‌ಬಾಗ್‌ನಲ್ಲಿ ಮದುವೆ, ಫೋಟೋಶೂಟ್‌ಗಳು ಮತ್ತು ವಾಣಿಜ್ಯ ಚಿತ್ರೀಕರಣಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆ ಪರಿಗಣಿಸುತ್ತಿದೆ. ಜೀವವೈವಿಧ್ಯತೆ ಸಂರಕ್ಷಣೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Full Story

08:04 PM (IST) Jun 15

ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಅರೆಸ್ಟ್

ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಕ್ರೂ ಅರೆಸ್ಟ್ ಆಗಿದ್ದಾರೆ. ಏಕಾಏಕಿ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ?

Read Full Story

07:51 PM (IST) Jun 15

ಟ್ರಂಪ್ ವಾಪಸಾತಿಯ ಉದ್ವಿಗ್ನತೆಯ ನಡುವೆ G7 ಶೃಂಗಸಭೆ

ವಿಶ್ವ ನಾಯಕರು ಕೆನಡಾದಲ್ಲಿ ಸೇರುತ್ತಿರುವಾಗ, ರಾಜತಾಂತ್ರಿಕ ಅಸ್ಥಿರತೆ ಮತ್ತೆ ಕಾಣಿಸಿಕೊಳ್ಳುತ್ತಿದೆ, ವಿಶೇಷವಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಮರುಪ್ರವೇಶದೊಂದಿಗೆ. ಮುಂದೆ ಏನಾಗುತ್ತದೆ ಎಂಬುದು ಜಾಗತಿಕ ಕಾರ್ಯಸೂಚಿಯನ್ನು ಮರುರೂಪಿಸುತ್ತದೆ.

Read Full Story

07:44 PM (IST) Jun 15

4 ನಟಿಯರು ತಿರಸ್ಕರಿಸಿದ್ದ 'ಲಗಾನ್' ಚಿತ್ರಕ್ಕೀಗ 24ನೇ ವರ್ಷ!

ಆಮಿರ್ ಖಾನ್ ಅವರ 'ಲಗಾನ್' 24 ವರ್ಷಗಳನ್ನು ಪೂರೈಸಿದೆ. ಅನೇಕ ನಾಯಕಿಯರು ಈ ಚಿತ್ರವನ್ನು ತಿರಸ್ಕರಿಸಿದ್ದರು, ಅವರು ಯಾರು ಮತ್ತು ಚಿತ್ರಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಕಥೆಗಳು ನಮಗೆ ತಿಳಿದಿವೆಯೇ? ನಾವು ನಿಮಗೆ ತಿಳಿಸುತ್ತೇವೆ.

Read Full Story

07:26 PM (IST) Jun 15

ದುಬಾರಿ ಬೆಲೆಯ ಹೊಸ ಹೈಬ್ರಿಡ್ ಕಾರು ಖರೀದಿಸಿದ ಅನುಶ್ರಿ, ಈ ಕಾರಿನಲ್ಲಿದೆ ಹಲವು ವಿಶೇಷತೆ

ಆ್ಯಂಕರ್ ಅನುಶ್ರಿ ಹೊಸ ಕಾರು ಖರೀದಿಸಿದ್ದಾರೆ. ಈ ಬಾರಿ ಅನುಶ್ರೀ ಹೊಚ್ಚ ಹೊಸ ಹೈಬ್ರಿಡ್ ಕಾರು ಖರೀದಿಸಿದ್ದಾರೆ. ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಈ ಕಾರಿನ ಬೆಲೆ ಎಷ್ಟು?

Read Full Story

07:20 PM (IST) Jun 15

ನಕಲಿ​ SMSನಿಂದ ಬೇಸತ್ತಿದ್ದೀರಾ? ಇನ್ನು ಪತ್ತೆ ಬಲು ಸುಲಭ- ಮೋಸ ಹೋಗೋ ಚಾನ್ಸೇ ಇಲ್ಲ....

ಎಸ್​ಎಂಎಸ್​ ಬಂದಾಗ ಅದು ನಕಲಿಯೋ, ಅಸಲಿಯೋ ಎಂದು ತಿಳಿಯದೇ ಬಂದಿರುವ ಲಿಂಕ್​ ಓಪನ್​ ಮಾಡಿ ಹಣ ಕಳೆದುಕೊಂಡವರು, ಮೋಸ ಹೋದವರು ಅನೇಕ ಮಂದಿ. ಆದರೆ ಇನ್ಮುಂದೆ ಮೋಸ ಹೋಗೋ ಚಾನ್ಸೇ ಇಲ್ಲ. ಅದು ಹೇಗೆ ನೋಡಿ.

 

Read Full Story

07:03 PM (IST) Jun 15

ಮನೆಯವರೆಲ್ಲ ಅಜ್ಜಿ ತಿಥಿ ಕಾರ್ಯದಲ್ಲಿದ್ದಾಗ ಚಿನ್ನ ಕಳ್ಳತನ, ಬಂಗಾರವಿಲ್ಲದೆ ಮಗಳ ಮದುವೆ ಮುಂದೂಡಿಕೆ!

ಆನೇಕಲ್ ತಾಲೂಕಿನಲ್ಲಿ ಮನೆಯೊಂದರಲ್ಲಿ 240 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಮಗಳ ಮದುವೆಗೆಂದು ಸಂಗ್ರಹಿಸಿದ್ದ ಚಿನ್ನ ಕಳೆದುಕೊಂಡ ಕುಟುಂಬದವರು ಕಂಗಾಲಾಗಿದ್ದಾರೆ. ಚಿನ್ನದ ಕೊರತೆಯಿಂದ ಮದುವೆಯನ್ನು ಮುಂದೂಡಲಾಗಿದೆ.
Read Full Story

06:30 PM (IST) Jun 15

ಇರಾನ್-ಇಸ್ರೇಲ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ, ಭಾರತಕ್ಕೆ ಹಣದುಬ್ಬರದ ಭೀತಿ!

ಇರಾನ್-ಇಸ್ರೇಲ್ ಸಂಘರ್ಷವು ತೈಲ ಬೆಲೆ ಏರಿಕೆ ಮತ್ತು ವ್ಯಾಪಾರ ಅಡಚಣೆಗಳ ಭೀತಿ ಹುಟ್ಟಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವ ಆತಂಕದಿಂದ ಭಾರತದ ಮೇಲೆ ಹಣದುಬ್ಬರದ ಒತ್ತಡ ಹೆಚ್ಚಾಗಬಹುದು. ಶನಿವಾರ  ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 6 ಡಾಲರ್‌ಗಿಂತಲೂ ಹೆಚ್ಚಾಗಿದೆ.

Read Full Story

06:05 PM (IST) Jun 15

ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಲಾಭ ಸಿಗಲಿ - ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಹೊಸ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಮಧು ಬಂಗಾರಪ್ಪ, ರಾಜ್ಯದ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆಯ ಲಾಭ ಸಿಗಬೇಕೆಂದು ಹೇಳಿದರು. ಬೊಮ್ಮನಕಟ್ಟೆಗೆ ಸರ್ಕಾರಿ ನಗರ ಸಾರಿಗೆ ಸಂಚಾರದ ಬೇಡಿಕೆ ಈಡೇರಿದೆ.
Read Full Story

06:03 PM (IST) Jun 15

ಬೆಂಗಳೂರಲ್ಲಿ ಮರದ ಕೊಂಬೆ ಬಿದ್ದು ಬೈಕ್ ಸವಾರ ಗಂಭೀರ, ಸಾವು ಬದುಕಿನ ನಡುವೆ ಹೋರಾಟ

ಗಾಳಿ ಮಳೆಯಿಂದ ಮರದ ಕೊಂಬೆ ಬೈಕ್ ಸವಾರನ ಮೇಲೆ ಮುರಿದು ಬಿದ್ದ ಪರಿಣಾಮ ಅಕ್ಷಯ್ ಆರೋಗ್ಯ ಗಂಭೀರವಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬೈಕ್ ಸವಾರನ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

Read Full Story

05:28 PM (IST) Jun 15

ಪೊಲೀಸ್ ಕಾನ್‌ಸ್ಟೆಬಲ್‌ ವಯೋಮಿತಿ ಹೆಚ್ಚಳ? ಗೃಹ ಸಚಿವರಿಂದ ಬಿಗ್ ಅಪ್ಡೇಟ್!

ಗೃಹ ಸಚಿವ ಡಾ. ಪರಮೇಶ್ವರ್ ಅವರು ಪೊಲೀಸ್ ಕಾನ್‌ಸ್ಟೆಬಲ್ ಅಭ್ಯರ್ಥಿಗಳ ವಯೋಮಿತಿಯನ್ನು 33 ವರ್ಷಕ್ಕೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಠಾಣೆಗಳಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಹಾಗೂ ಪ್ರಾರ್ಥನಾ ಮಂದಿರಗಳ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಲು ಸಲಹೆ ನೀಡಿದ್ದಾರೆ.
Read Full Story

05:25 PM (IST) Jun 15

ದೆಹಲಿ ವಿಮಾನ ನಿಲ್ದಾಣದ ರನ್‌ವೇ 3 ತಿಂಗಳು ಬಂದ್, 200 ವಿಮಾನ ಹಾರಾಟ ರದ್ದು

ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ರನ್‌ವೇ ಬರೋಬ್ಬರಿ 3 ತಿಂಗಳು ಬಂದ್ ಆಗುತ್ತಿದೆ. ಇದರಿಂದ ಪ್ರತಿ ದಿನ 200 ವಿಮಾನ ಹಾರಾಟ ರದ್ದಾಗಲಿದೆ. ಇದೀಗ ದೆಹಲಿ ವಿಮಾನ ನಿಲ್ದಾಣದ ರನ್‌ವೇ ಬಂದ್ ಮಾಡಲು ಕಾರಣವೇನು?  

Read Full Story

05:22 PM (IST) Jun 15

ಪುಣೆಯಲ್ಲಿ ಭೀಕರ ಸೇತುವೆ ದುರಂತ - 6 ಪ್ರವಾಸಿಗರ ಸಾವು, ನದಿಯಲ್ಲಿ ಕೊಚ್ಚಿ ಹೋದವರಿಗಾಗಿ ಶೋಧ

ಪುಣೆಯ ಇಂದ್ರಯಾಣಿ ನದಿ ಸೇತುವೆ ಕುಸಿತದಿಂದ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಪಡೆಗಳು ಸ್ಥಳದಲ್ಲಿದ್ದು, ಹಲವರನ್ನು ರಕ್ಷಿಸಲಾಗಿದೆ. ಭಾರಿ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದ ಕಾರಣ ಈ ದುರಂತ ಸಂಭವಿಸಿದೆ.
Read Full Story

05:15 PM (IST) Jun 15

JDS ಪಕ್ಷ ಸಂಘಟನೆಗೆ ನಿಖಿಲ್‌ 58 ದಿನಗಳ ರಾಜ್ಯ ಪ್ರವಾಸ - ಯಾವ್ಯಾವ ಕ್ಷೇತ್ರಗಳಿಗೆ ಭೇಟಿ?

ಜೆಡಿಎಸ್ ಪಕ್ಷದ ಸಂಘಟನೆಗಾಗಿ ನಿಖಿಲ್ ಕುಮಾರಸ್ವಾಮಿ 58 ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. 90 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಈ ಪ್ರವಾಸದ ನಂತರ ನಿಖಿಲ್‌ಗೆ ರಾಜ್ಯಾಧ್ಯಕ್ಷ ಪಟ್ಟಾಭಿಷೇಕ ನೆರವೇರಿಸುವ ಸಾಧ್ಯತೆಯಿದೆ.
Read Full Story

04:56 PM (IST) Jun 15

ಕಂಡೆಮ್ ಬದಲು ಕಾಂಡೋಮ್ ಪದ ಬಳಸಿದ್ರಾ ಪಾಕ್ ಪ್ರಧಾನಿ? ಟ್ರೋಲ್ ಆದ ಶೆಹಬಾಜ್ ಷರೀಫ್]

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಪಾಕಿಸ್ತಾನ ಖಂಡಿಸಿದೆ. ಇದೇ ವೇಳೆ ಇರಾನ್ ಜೊತೆಗಿದೆ ಎಂದಿದೆ. ಆದರೆ ಪಾಕ್ ಪ್ರಧಾನಿ ದಾಳಿ ಖಂಡಿಸುವ ವೇಳೆ ಅಚಾತುರ್ಯದಲ್ಲಿ ಕಾಂಡೋಮ್ ಪದ ಬಳಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಇದೀಗ ಶೆಹಬಾಜ್ ಷರೀಫ್ ಫುಲ್ ಟ್ರೋಲ್ ಆಗಿದ್ದಾರೆ.

 

Read Full Story

04:39 PM (IST) Jun 15

3.22 ಕೋಟಿ ರೂ ವಂಚನೆ; ಗಾಂಧೀಜಿ ಮರಿಮೊಮ್ಮಗಳಿಗೆ ಏಳು ವರ್ಷ ಶಿಕ್ಷೆ! ಯಾರೀಕೆ? ಏನಿದು ಕೇಸ್​?

3.22 ಕೋಟಿ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಗಾಂಧೀಜಿಯವರ ಮರಿಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ ಅವರಿಗೆ 7 ವರ್ಷಗಳ ಜೈಲುಶಿಕ್ಷೆಯಾಗಿದೆ. ಯಾರಿವರು? ಏನಿದು ಕೇಸ್​?

 

Read Full Story

04:10 PM (IST) Jun 15

ವಿಮಾನ ಪತನ ದುರಂತ, 2 ತಲೆ ಜೊತೆ ದೇಹದ ಇತರ ಭಾಗ ನೀಡುವಂತೆ ಮಡಿದ ಕುಟುಂಬಸ್ಥರ ಕಣ್ಮೀರು

ಏರ್ ಇಂಡಿಯಾ ವಿಮಾನ ದುರಂತದ ಒಂದೊಂದು ಕಣ್ಣೀರ ಕತೆಗಳು ಘನಘೋರವಾಗಿದೆ. ಇದೀಗ ಅಹಮ್ಮದಾಬಾದ್ ಆಸ್ಪತ್ರೆ ಶವಾಗಾರದ ಬ್ಯಾಗ್‌ನಲ್ಲಿ ಮಡಿದವರ 2 ತಲೆ ಇದೆ. ಇದರ ಜೊತೆ ದೇಹಹ ಇತರ ಭಾಗವನ್ನೂ ನೀಡಲು ಕುಟುಂಬಸ್ಥರು ಕಣ್ಮೀರಿಡುತ್ತಿದ್ದಾರೆ.

 

Read Full Story

03:34 PM (IST) Jun 15

ಅಯ್ಯಪ್ಪ ಮಾಲಾಧಾರಿಗಳ ಗಮನಕ್ಕೆ, ಶಬರಿಮಲೆಯಲ್ಲಿ ಭಾರೀ ಮಳೆ, ಪಂಪ ನದಿಯಲ್ಲಿ ಸ್ನಾನಕ್ಕೆ ನಿಷೇಧ

ಶಬರಿಮಲ ಮತ್ತು ಪಂಪದಲ್ಲಿ ಭಾರೀ ಮಳೆಯಿಂದಾಗಿ ಪಂಪಾ ನದಿಯಲ್ಲಿ ಸ್ನಾನ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

Read Full Story

03:17 PM (IST) Jun 15

ಮನಾಲಿಯಲ್ಲಿ ಜಿಪ್‌ಲೈನ್ ದುರಂತ - ಯುವತಿ 30 ಅಡಿ ಎತ್ತರದಿಂದ ಬಿದ್ದ ಯುವತಿ - ವೀಡಿಯೋ

ಮನಾಲಿಯಲ್ಲಿ ಜಿಪ್‌ಲೈನ್ ಸಾಹಸದ ವೇಳೆ ಕೇಬಲ್ ತುಂಡಾಗಿ ಯುವತಿ 30 ಅಡಿ ಎತ್ತರದಿಂದ ಬಿದ್ದಿದ್ದಾಳೆ. ಈ ಘಟನೆಯ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Read Full Story

03:12 PM (IST) Jun 15

ಕಾಂತಾರ ಸಿನಿಮಾ ಶೂಟಿಂಗ್ ಅವಘಡ ಪ್ರಕರಣಕ್ಕೆ ಟ್ವಿಸ್ಟ್, ಮಾಣಿ ಜಲಾಶಯದಲ್ಲಿ ನಡೆದಿದ್ದೇನು?

ಕಾಂತಾರ ಸಿನಿಮಾ ಶೂಟಿಂಗ್ ವೇಳೆ ಕಳೆದ ಒಂದು ತಿಂಗಳ ಅಂತರದಲ್ಲಿ ಮೂವರು ಕಲಾವಿದರು ಸಾವಿನ ಬೆನ್ನಲ್ಲೇ ದೋಣಿ ಮಗುಚಿ ಭಾರಿ ಅವಘಡ ಸಂಭವಿಸಿದೆ ಅನ್ನೋ ಸುದ್ದಿ ಕುರಿತು ಇದೀಗ ಹೊಂಬಾಳೆ ಸ್ಪಷ್ಟನೆ ನೀಡಿದೆ.ನಿಜಕ್ಕೂ ಮಾಣಿ ಜಲಾಶಯದಲ್ಲಿ ನಡೆದಿದ್ದೇನು?

Read Full Story

03:11 PM (IST) Jun 15

ಇಂಗ್ಲೆಂಡ್‌ಗೆ ಬಂದಿಳಿದ ಟೀಂ ಇಂಡಿಯಾ ದಿಗ್ಗಜ; ಗಂಭೀರ್ ಸ್ಥಾನಕ್ಕೆ ನೇಮಕ?

ಲಂಡನ್: ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಪಾಳಯದಲ್ಲಿ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Read Full Story

03:04 PM (IST) Jun 15

ಕೇರಳ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಲ್ಯಾಂಡ್‌ ಆದ ಬ್ರಿಟಿಷ್ ಸೇನೆಯ ಎಫ್-35 ಫೈಟರ್ ಜೆಟ್!

ಇಂಧನ ಕೊರತೆಯಿಂದಾಗಿ ಬ್ರಿಟಿಷ್ ಎಫ್-35ಬಿ ಫೈಟರ್ ಜೆಟ್ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಜೆಟ್ HMS Prince of Wales ವಿಮಾನವಾಹಕ ನೌಕೆಯಿಂದ ಕಾರ್ಯನಿರ್ವಹಿಸುತ್ತಿತ್ತು ಮತ್ತು ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮುದ್ರಾಭ್ಯಾಸಗಳನ್ನು ಪೂರ್ಣಗೊಳಿಸಿತ್ತು.
Read Full Story

02:32 PM (IST) Jun 15

ಬಾಲಿವುಡ್ ಸಿನಿಮಾಗಳ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದೇನು? 'ಸತ್ಯ ಸಂಗತಿ'ನೇ ಹೇಳಿದಾರೆ, ತಪ್ಪೇನು ಅಂತಿದಾರಲ್ಲ!

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್, ಬಾಲಿವುಡ್ ಸಿನಿಮಾವನ್ನು ಟೀಕಿಸಿ, ಅದನ್ನು ಮಾದಕ ವಸ್ತು, ಮದ್ಯ ಮತ್ತು ಅನೈತಿಕತೆಯ ತಾಣ ಎಂದು ಕರೆದಿದ್ದಾರೆ. ನಟರ ಅನೈತಿಕ ಜೀವನಶೈಲಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Read Full Story

02:22 PM (IST) Jun 15

ಬಡ್ಡಿ, ದಂಡದ ಬಗ್ಗೆ ಮಲ್ಯ ಲೆಕ್ಕ ಮಾಡಿಲ್ಲ - ವಿಜಯ್ ಮಲ್ಯ ಸಾಲ ಇನ್ನೂ ಬಾಕಿ ಇದೆ ಎಂದ ಬ್ಯಾಂಕುಗಳು

ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ಅವರು ತಾವು ಸಾಲ ಪಡೆದಿರುವುದಕ್ಕಿಂತಲೂ ಹೆಚ್ಚು ಹಣವನ್ನು ಬ್ಯಾಂಕ್‌ಗೆ ಕಟ್ಟಿರುವುದಾಗಿ ಹೇಳಿಕೊಂಡಿದ್ದರು. ಆದರೆ ಕೇಂದ್ರ ಹಣಕಾಸು ಸಚಿವಾಲಯ, ಬ್ಯಾಂಕುಗಳು ಮಲ್ಯ ಸಾಲ ಇನ್ನೂ ಬಾಕಿ ಇದೆ ಅಂತ ಹೇಳಿದ್ದಾರೆ.

Read Full Story

01:57 PM (IST) Jun 15

ಐಷಾರಾಮಿ ಬದುಕಿನ ದುಃಖ ತೋಡಿಕೊಂಡ ಗುರ್ಗಾಂವ್ ಯುವಕ, ನೆಟ್ಟಿಗರು ಶಾಕ್!

ಗುರ್ಗಾಂವ್‌ನಲ್ಲಿ ಐಷಾರಾಮಿ ಜೀವನ ನಡೆಸುವ ಯುವಕನೊಬ್ಬ ತನ್ನ ಖರ್ಚು-ವೆಚ್ಚಗಳನ್ನು ವಿವರಿಸುತ್ತಾ, ತಿಂಗಳಿಗೆ ₹7.5 ಲಕ್ಷ ಗಳಿಸಬೇಕಾದ ಅನಿವಾರ್ಯತೆಯ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Read Full Story

01:52 PM (IST) Jun 15

ಗಂಡನ ಮನೆಯವರ ಕಿರುಕುಳ - ಎರಡು ಮಕ್ಕಳ ತಾಯಿಯ ಗುಪ್ತಾಂಗಕ್ಕೆ ಕಾದ ಕಬ್ಬಿಣ ಇಟ್ಟು ಕೊಂದ ಪಾಪಿಗಳು

ಅಲಿಘರ್‌ನಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬರನ್ನು ಕಬ್ಬಿಣದ ರಾಡ್‌ನಿಂದ ಸುಟ್ಟು ಕೊಲ್ಲಲಾಗಿದೆ. ಬಂಟಿ ಕುಮಾರ್ ಎಂಬಾತ ತನ್ನ ಹೆಂಡತಿ ಸಂಗೀತಾಳನ್ನು ಕುಟುಂಬದವರೊಂದಿಗೆ ಸೇರಿ ಚಿತ್ರಹಿಂಸೆ ನೀಡಿ ಕೊಂದಿರುವ ಆರೋಪ ಕೇಳಿ ಬಂದಿದೆ.

Read Full Story

01:44 PM (IST) Jun 15

ತಿರುಪತಿ ಭಕ್ತರಿಗೆ ಶುಭ ಸುದ್ದಿ.. ಸ್ಪೆಷಲ್ ಟೂರ್ ಪ್ಯಾಕೇಜ್‌ನಿಂದ ಒಂದೇ ದಿನದಲ್ಲಿ ತಿಮ್ಮಪ್ಪನ ದರ್ಶನ!

ಕಲಿಯುಗ ದೈವ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಎಲ್ಲರೂ ಆಸೆಪಡ್ತಾರೆ. ಆದ್ರೆ ಒಂದೇ ದಿನದಲ್ಲಿ ಹೋಗಿ ಬರೋದು ಕಷ್ಟ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಒಂದು ಸ್ಪೆಷಲ್ ಟೂರ್ ಪ್ಯಾಕೇಜ್ ತಂದಿದೆ.

Read Full Story

01:35 PM (IST) Jun 15

ರಸ್ತೆ ಕಾಮಗಾರಿ ವಿಳಂಬದಿಂದ ಅಪಘಾತ - ಧಾರವಾಡ ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರ ಕಿಡಿ!

ಧಾರವಾಡ ಜಿಲ್ಲಾಧಿಕಾರಿಗಳು ಇಡಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶಿಲನೆ ಮಾಡಬೇಕು, ಜೊತೆಗೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂಬುದರ ಬಗ್ಗೆ ಪ್ರಗತಿ ಪರಿಶಿಲನೆ ಸಭೆ ಮಾಡುತ್ತಾ ಬಂದಿದ್ದಾರೆ.

Read Full Story

01:23 PM (IST) Jun 15

ಗಿನ್ನೆಸ್​ ದಾಖಲೆ ಬರೆದು ಇಹಲೋಕ ತ್ಯಜಿಸಿದ ಪುಟ್ಟ ಹಸು 'ರಾಣಿ' ಸ್ಟೋರಿ ಇದು....

ಜಗತ್ತಿನ ಅತಿ ಚಿಕ್ಕ ಹಸು ಎಂದು ಹೆಸರು ಪಡೆದು ಸಾವನ್ನಪ್ಪಿದ ರಾಣಿಯ ಬಗ್ಗೆ ಇಲ್ಲಿದೆ ವಿವರ. ಕೋವಿಡ್​ ಟೈಮ್​ನಲ್ಲಿಯೇ ಫೇಮಸ್​ ಆಗಿದ್ದ ರಾಣಿಯ ಸ್ಟೋರಿ ಇದು...

 

Read Full Story

01:22 PM (IST) Jun 15

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ 7 ಸೀಟುಗಳ ಪ್ರಸಿದ್ಧ ಕಾರುಗಳಿವು

ಅವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಭಾರತದಲ್ಲಿ 7 ಸೀಟುಗಳ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ 7 ಸೀಟುಗಳ ಪ್ರಸಿದ್ಧ ಕಾರುಗಳು ಯಾವುದು ಅಂತ ಈಗ ನೋಡೋಣ.

Read Full Story

12:53 PM (IST) Jun 15

ಇನ್​ಸ್ಟಾದಲ್ಲಿ ಇಬ್ಬರು ಫಾಲೋವರ್ಸ್​ ಕುಸಿತ - ಗಂಡನ ಮನೆ ವಿರುದ್ಧ ಪತ್ನಿ ಪೊಲೀಸ್​ ಕಂಪ್ಲೇಂಟ್​!

ರೀಲ್ಸ್​ ಮಾಡಲು ಸಮಯ ಸಿಗದೇ ಇಬ್ಬರು ಫಾಲೋವರ್ಸ್​ ಕಳೆದುಕೊಂಡ ಮಹಿಳೆಯೊಬ್ಬಳು ಪತಿಯ ವಿರುದ್ಧ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ನಡೆದಿದೆ. ಮುಂದೇನಾಯ್ತು ನೋಡಿ!

 

Read Full Story

12:02 PM (IST) Jun 15

WTC Final - ದಕ್ಷಿಣ ಆಫ್ರಿಕಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಟಾಪ್ 6 ಹೀರೋಗಳಿವರು!

ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ತಮ್ಮ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಐತಿಹಾಸಿಕ ಗೆಲುವಿನಲ್ಲಿ ಆರು ಪ್ರಮುಖ ಆಟಗಾರರು ನಿರ್ಣಾಯಕ ಪಾತ್ರ ವಹಿಸಿದ್ದಾರೆ, 27 ವರ್ಷಗಳ ಐಸಿಸಿ ಪ್ರಶಸ್ತಿಯ ಬರವನ್ನು ಕೊನೆಗೊಳಿಸಿದರು.
Read Full Story

11:56 AM (IST) Jun 15

ಸಾರ್ವಜನಿಕರ ಗಮನಕ್ಕೆ, 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್; ಆಗುಂಬೆ ಘಾಟಿ ಬಂದ್!

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗಲಿದ್ದು, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
Read Full Story

11:29 AM (IST) Jun 15

WTC 2025 - ಟೆಸ್ಟ್ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ & ಪಾಕಿಸ್ತಾನಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು?

3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಮುಕ್ತಾಯದ ಬೆನ್ನಲ್ಲೇ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡಲಿದೆ. 3ನೇ ಸ್ದಾನ ಪಡೆದ ಭಾರತ, ಕೊನೆ ಸ್ಥಾನ ಪಡೆ  ಪಾಕಿಸ್ತಾನಕ್ಕೆ ಸಿಕ್ಕ ಹಣ ಎಷ್ಟು>

 

 

 

Read Full Story

More Trending News