ದಾವಣಗೆರೆ: ವಚನಾನಂದ ಸ್ವಾಮೀಜಿಗೆ ನೈತಿಕತೆ ಇದ್ದರೆ ತಕ್ಷಣವೇ ಹರಿಹರ ಪಂಚಮಸಾಲಿ ಮಠವನ್ನು ತೊರೆಯಲಿ. ಇಲ್ಲದಿದ್ದರೆ ಮಠದಿಂದ ಹೇಗೆ ಖಾಲಿ ಮಾಡಿಸಬೇಕೆಂಬುದೂ ನಮಗೆ ಗೊತ್ತಿದೆ. ಕಾದು ನೋಡಿ ಎಂದು ಪೀಠದ ಟ್ರಸ್ಟಿ ಚಂದ್ರಶೇಖರ ಪೂಜಾರ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠಾಧ್ಯಕ್ಷರಾಗಿದ್ದ ವಚನಾನಂದ ಶ್ರೀಗಳ ಆಚಾರ, ವಿಚಾರ, ನಡೆ, ನುಡಿಗಳನ್ನು ತಿದ್ದಿಕೊಳ್ಳಲು ಹಲವಾರು ಸಲ ಹೇಳಿದ್ದರೂ ಕಿವಿಗೊಡದ ಹಿನ್ನೆಲೆಯಲ್ಲಿ ಪೀಠದಿಂದ ಉಚ್ಚಾಟಿಸಿದ್ದು, ತಕ್ಷಣವೇ ಮಠದಿಂದ ಜಾಗ ಖಾಲಿ ಮಾಡಬೇಕು ಎಂದರು.
11:21 PM (IST) Apr 15
10:55 PM (IST) Apr 15
ತವರಿನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟರ್‌ಗಳ ಸ್ಫೋಟಕ ಆಟದಿಂದ ಸುಲಭವಾಗಿ ಗುರಿ ತಲುಪಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
09:11 PM (IST) Apr 15
ಸಿಎಂ ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ಬಳಿ ತೀವ್ರ ಲಾಬಿ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
09:06 PM (IST) Apr 15
08:42 PM (IST) Apr 15
08:16 PM (IST) Apr 15
ಕರ್ನಾಟಕದ ಮೂರು ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್, ಮತ್ತು ಬಿಜೆಪಿಯ ಪ್ರಭಾವಿ ನಾಯಕರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಅ*ತ್ಯಾಚಾ*ರ, ಕೊಲೆ ಸಂಚಿನಂತಹ ಆರೋಪಗಳಿಂದಾಗಿ ಪ್ರಜ್ವಲ್ ರೇವಣ್ಣ, ವಿನಯ್ ಕುಲಕರ್ಣಿ, ಮತ್ತು ಬೈರತಿ ಬಸವರಾಜ್‌ರಂತಹ ನಾಯಕರು ವಿಧಾನಸೌಧದ ಬದಲು ಜೈಲು ಸೇರುವಂತಾಗಿದೆ.
08:11 PM (IST) Apr 15
ಸಚಿವ ಸ್ಥಾನ ಕೊಡುವಂತೆ ಕೇಳಿದರೆ ತಾನೇ ಪಕ್ಷವು ಕೊಡುವುದು. ಹಾಗಾಗಿಯೇ ನಮ್ಮ ಹಿರಿಯ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಶಾಸಕರ ದಿಲ್ಲಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.
07:44 PM (IST) Apr 15
07:19 PM (IST) Apr 15
ಕೇವಲ ಕೆಲವೇ ದಿನಗಳಲ್ಲಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 5,600 ದಾಟಿದೆ! ಈಗ ಅವರ ಮಾಸಿಕ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ. ಅಂದರೆ ಒಂದೇ ಒಂದು ವಿವಾದದಿಂದ ಅವರ ತಿಂಗಳ ಆದಾಯದಲ್ಲಿ 14 ಲಕ್ಷ ರೂಪಾಯಿ ಲಾಭವಾಗಿದೆ! ಇದನ್ನು ನೋಡಿ ನೆಟ್ಟಿಗರು ಏನಂತಿದಾರೆ ನೋಡಿ..
06:50 PM (IST) Apr 15
ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿ, ಆರ್ಡರ್ ಶೀಟ್‌ಗೆ ಕಾಯುತ್ತಿರುವ ಪೊಲೀಸ್, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
06:48 PM (IST) Apr 15
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, 2 ವರ್ಷಕ್ಕಿಂತ ಅಧಿಕ ಶಿಕ್ಷೆಯಾದರೆ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.
06:36 PM (IST) Apr 15
ನಾಯಿ, ಬೆಕ್ಕುಗಳನ್ನು ತಮ್ಮ ಮಲಗುವ ಬೆಡ್ ಮೇಲೆ ಮಲಗಿಸಿಕೊಳ್ಳುತ್ತಾರೆ. ಆದರೆ ಶೋಷಿತ ವರ್ಗದ ಜನರಿಗೆ ದೇವಸ್ಥಾನ, ಮನೆ ಪ್ರವೇಶ ಇಲ್ಲವೆಂಬುದು ನ್ಯಾಯವೇ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.
06:23 PM (IST) Apr 15
ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ರಾಜಕೀಯ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯ ತನಿಖೆಯನ್ನು ಸಿಬಿಐ ನಡೆಸಿತ್ತು, ಇದೀಗ ದಶಕದ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
06:20 PM (IST) Apr 15
ಒಳ ಮೀಸಲಾತಿ ವಿಚಾರದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿವೆ. ಯಾವುದೋ ಕಾರಣವೊಂದನ್ನು ಮುಂದಿಟ್ಟು ಸಮಾಜದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವುದು ನಡೆಯುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
06:05 PM (IST) Apr 15
ಸಮಾಜದಲ್ಲಿನ ಜಡತ್ವ ಬಲಪಡಿಸುವ ಕೆಲಸದಲ್ಲಿ ತೊಡಗಿವೆ. ಹೀಗಾಗಿ ನಾವು ಸಂವಿಧಾನದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
05:31 PM (IST) Apr 15
05:30 PM (IST) Apr 15
ಆಕೆಗೆ ಏನು ಅರಿಯದ ವಯಸ್ಸಲ್ಲಿ ಕುಟುಂಬದವರೇ ಮದ್ವೆ ನಿಶ್ಚಯ ಮಾಡಿದ್ದರು. ಆದರೆ ಹರೆಯಕ್ಕೆ ಕಾಲಿರಿಸಿದ ಆಕೆಗೆ ಬೇರೊಬ್ಬನ ಜತೆ ಪ್ರೀತಿಯಾಗಿತ್ತು. ಪ್ರೀತಿ ತಿಳಿಯುತ್ತಿದ್ದಂತೆ ಮದುವೆ ಮಾಡಿದ್ರು ಪೋಷಕರು ಆದರೆ ಪ್ರೀತಿಸಿದವನೊಂದಿಗೆ ಅಲ್ಲ. ಹೀಗಾಗಿ ತನ್ನ ಗಂಡನ ಬಿಟ್ಟು ಓಡಿ ಹೋದ ಆಕೆಯ ಕತೆ ಮುಂದೇನಾಯ್ತು…
05:05 PM (IST) Apr 15
ನಟ ಸೋನು ಸೂದ್ ತಮ್ಮ ಪತ್ನಿ ಸೋನಾಲಿ ಮತ್ತು ಮಗ ಇಶಾಂತ್ ಜೊತೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮುಂಜಾನೆಯ ತೋಮಾಲ ಸೇವೆಯಲ್ಲಿ ಕುಟುಂಬ ಸಮೇತ ಭಾಗವಹಿಸಿದ್ದರು.
05:04 PM (IST) Apr 15
04:52 PM (IST) Apr 15
ಮಹಿಳಾ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಲ್ಲಿ ರಾಜಕೀಯ ಚಿತ್ರಣವೇ ಬದಲಾಗಲಿದೆ. ಕ್ಷೇತ್ರಗಳ ಮರು ವಿಂಗಡಣೆಯಾಗಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
04:35 PM (IST) Apr 15
ಡಾಲಿ ಧನಂಜಯ ಪಾತ್ರದ ಚಿತ್ರೀಕರಣ ಮುಗಿದಿದೆ. ‘ಮ್ಯಾಂಗೋ ಪಚ್ಚ’ ಚಿತ್ರದ ಮುಂದುವರಿದ ಭಾಗ ಬರಲಿದೆ ಎನ್ನಲಾಗಿದ್ದು, ಡಾಲಿ ಧನಂಜಯ ಪಾತ್ರವೂ ಪಾರ್ಟ್ 2ಗೆ ಲೀಡ್ ಕೊಡುವಂತೆ ಚಿತ್ರೀಕರಣ ಮಾಡಲಾಗಿದೆಯಂತೆ.
04:25 PM (IST) Apr 15
04:18 PM (IST) Apr 15
ವಿಶ್ವದಾದ್ಯಂತ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರು ಸೇರುವ ಅತಿದೊಡ್ಡ ವೇದಿಕೆಯಾದ ಸಿನಿಮಾಕಾನ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿ ‘ರಾಮಾಯಣ’ ಸಿನಿಮಾ ಪ್ರಸ್ತುತ ಪಡಿಸಿದ್ದಾರೆ.
02:53 PM (IST) Apr 15
01:34 PM (IST) Apr 15
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ಕಿಂಗ್‌ಪಿನ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನು ಕರೆತಂದು ಈ ಅಕ್ರಮ ದಂಧೆ ನಡೆಸುತ್ತಿದ್ದರು.
12:31 PM (IST) Apr 15
12:07 PM (IST) Apr 15
11:40 AM (IST) Apr 15
ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗೇನು ಹೇಳಿದ್ದಾರೆ ನೋಡಿ..
11:37 AM (IST) Apr 15
11:05 AM (IST) Apr 15
11:01 AM (IST) Apr 15
10:30 AM (IST) Apr 15
PUC girls missing in Bengaluru: ಬೆಂಗಳೂರಿನ ವಿದ್ಯಾರಣ್ಯಪುರದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು 75 ದಿನಗಳಿಂದ ನಾಪತ್ತೆಯಾಗಿದ್ದಾರೆ. ಪೊಲೀಸ್ ವಿಶೇಷ ತಂಡವು ಮುಂಬೈ, ಕೇರಳ ಸೇರಿದಂತೆ 100ಕ್ಕೂ ಹೆಚ್ಚು ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದು ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.
10:14 AM (IST) Apr 15
08:46 AM (IST) Apr 15
ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಪಕ್ಷಕ್ಕೆ ಫಂಡಿಂಗ್ ಮಾಡಿದ್ದಾರೆ ಎಂಬ ಆರೋಪವನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಳ್ಳಿಹಾಕಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಕಾರಣ ಜನರು ಎಸ್‌ಡಿಪಿಐಗೆ ಮತ ಹಾಕಿದ್ದಾರೆ ಎಂದರು.
08:45 AM (IST) Apr 15
ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್, ಸ್ಟವ್ ಹಾಗೂ ಬಟ್ಟೆಗಳು ಕಾಣಿಸುವ ಮೂಲಕ ಕೆಲಕಾಲ ಆತಂಕ ಮೂಡಿಸಿದ್ದ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
08:24 AM (IST) Apr 15
ಕೋಲಾರದ ಮಾಲೂರಿನಲ್ಲಿ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಅವರು ಅಂಬೇಡ್ಕರ್ ಜಯಂತಿ ಅಂಗವಾಗಿ ಆಟೋ ಚಾಲಕರಿಗೆ ಉಚಿತ ಗ್ಯಾಸ್ ಕೂಪನ್‌ಗಳು ಮತ್ತು ಆಹಾರ ಕಿಟ್‌ಗಳನ್ನು ವಿತರಿಸಿದರು. ಗ್ಯಾಸ್ ಅಭಾವದ ಹಿನ್ನೆಲೆಯಲ್ಲಿ ಚಾಲಕರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
08:07 AM (IST) Apr 15
ಕೊಪ್ಪಳದಲ್ಲಿನ ಹಿಂದು-ಮುಸ್ಲಿಂ ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಪಟ್ಟ ಕಟ್ಟಲಾಗುತ್ತಿದ್ದು, ಇದು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಎಲ್ಲಾ ಪ್ರೇಮ ಪ್ರಕರಣಗಳು ಲವ್ ಜಿಹಾದ್ ಅಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
08:01 AM (IST) Apr 15
07:52 AM (IST) Apr 15
ಚಲಾವಣೆ ಸ್ಥಗಿತಗೊಂಡಿರುವ ₹2000 ಮುಖಬೆಲೆಯ ಖೋಟಾ ನೋಟುಗಳನ್ನು ಆರ್‌ಬಿಐನಲ್ಲಿ ಬದಲಿಸಲು ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹7.50 ಲಕ್ಷ ಮೌಲ್ಯದ 375 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
07:30 AM (IST) Apr 15
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಸರುಗಳು ಕಾಣಿಸಿಕೊಂಡು ಭಾರೀ ವಿವಾದ ಸೃಷ್ಟಿಯಾಗಿದೆ. ಬಿಜೆಪಿಯಿಂದ ಉಚ್ಛಾಟಿತರಾದ ಇವರ ನೇಮಕಾತಿಗೆ ಪಕ್ಷದೊಳಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಜಿಲ್ಲಾಧ್ಯಕ್ಷರು ಈ ನೇಮಕಾತಿಗೆ ತಡೆ ನೀಡಿದ್ದಾರೆ.