Published : May 14, 2026, 06:45 AM ISTUpdated : May 14, 2026, 11:31 PM IST

Karnataka News Live: ಹಾವೇರಿಯಲ್ಲಿ ಗಾಳಿ ಮಳೆಗೆ ಹಾರಿ ಹೋದ ಗುಡಿಸಲು, ಸಂಕಷ್ಟಕ್ಕೆ ಸಿಲುಕಿದ ಬಾಣಂತಿ, ಮಕ್ಕಳು

ಸಾರಾಂಶ

ಬಂಗಾರಪೇಟೆ (ಕೋಲಾರ): ಮಷಿನ್‌ ಗನ್‌ಗೆ ಬಳಸುವ7.6 ಎಂಎಂನ 135 ಜೀವಂತ ಬುಲೆಟ್‌ಗಳು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಗ್ರಾಮದ ಸೇತುವೆಯೊಂದರ ಕೆಳಗೆ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 1969ರಲ್ಲಿ ತಯಾರಿಸಲಾಗಿರುವ ಬುಲೆಟ್‌ಗಳು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬುಲೆಟ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ತಮಿಳುನಾಡಿನ ಗಡಿಯಲ್ಲಿರುವ ದಾಸರಮಲ್ಲ ಗ್ರಾಮದ ಬಳಿಯ ಸೇತುವೆ ಕೆಳಗೆ ಬಳಸಿರುವ ಬುಲೆಟ್‌ (ಡಮ್ಮಿ) ಹಾಗೂ ಬಸಳದೆ ಇರುವ ಬುಲೆಟ್‌ಗಳನ್ನು ಅನಾಮಿಕರು ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಮಸಮುದ್ರ ಪೊಲೀಸರು ಬುಲೆಟ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

11:31 PM (IST) May 14

ಹಾವೇರಿಯಲ್ಲಿ ಗಾಳಿ ಮಳೆಗೆ ಹಾರಿ ಹೋದ ಗುಡಿಸಲು, ಸಂಕಷ್ಟಕ್ಕೆ ಸಿಲುಕಿದ ಬಾಣಂತಿ, ಮಕ್ಕಳು

ಹಾವೇರಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅಲೇಮಾರಿ ಸಮುದಾಯದ ಗುಡಿಸಲುಗಳು ಹಾರಿ ಹೋಗಿದೆ. ಪರಿಣಾಮ ಬಾಣಂತಿ, ಮಕ್ಕಳು ಸೇರಿದಂತೆ ಹಲವು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕಂದಮ್ಮನ ಹಿಡಿದು ಬಾಣಂತಿ ಕಣ್ಣೀರಿಡುತ್ತಿದ್ದಾರೆ.

Read Full Story

09:09 PM (IST) May 14

ನಟ ದರ್ಶನ್‌ಗೆ 'ಮುಲಾಮು' ಟ್ರೀಟ್ಮೆಂಟ್ ಪಕ್ಕಾನಾ? ಇನ್ನೊಂದೇ ವಾರ ಬಾಕಿ, ಏನ್ ಮಾಡ್ತಾರೆ ದಾಸ?

ಸವಾಲು ಎದುರಿಸೋದು ನಟ ದರ್ಶನ್ ತೂಗುದೀಪಗೆ (Darshan Thoogudeepa) ಹಳೇ ಅಭ್ಯಾಸ. ಅದು ಸಿನಿಮಾ ರಂಗ ಆಗಿರಲಿ, ವೈಯಕ್ತಿಕ ಬದುಕೆ ಇರಲಿ, ಬಂಡೆಯಂತಾ ಸವಾಲುಗಳನ್ನ ದಾಸ ಕುಟ್ಟಿ ಪುಡಿ ಮಾಡಿದ್ದಾರೆ. ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಷ್ಟೂ ದಿನ ಇಲ್ಲದಿದ್ದ ಹೊಸ ಚಾಲೆಂಜ್ ಎದುರಾಗಿದೆ! ಏನ್ ಕತೆ ಮುಂದೆ ದಾಸಂದು..?

Read Full Story

08:08 PM (IST) May 14

ಕಿರುತೆರೆಯ 'ಮಿಸ್ಟರ್ ಪರ್ಫೆಕ್ಟ್' ದಿಲೀಪ್ ರಾಜ್‌ ಅದೆಷ್ಟು ಜನರಿಗೆ ಅನ್ನದಾತ ಆಗಿದ್ದರು ಗೊತ್ತೇ?

ಲವ್ ಮಾಕ್ಟೇಲ್ 3 ದಿಲೀಪ್ ನಟಿಸಿದ ಕೊನೆಯ ಸಿನಿಮಾ. ಪ್ರೀತಿಸಿ ಕೈ ಹಿಡಿದ ಪತ್ನಿ ಶ್ರೀ ವಿದ್ಯಾ , ಇಬ್ಬರೂ ಮುದ್ದಿನ ಮಕ್ಕಳು ಜೊತೆಗೆ ತಮ್ಮ ಕಿರುತೆರೆಯ ದೊಡ್ಡ ಕುಟುಂಬವನ್ನು ಅನಾಥವಾಗಿ ಬಿಟ್ಟು ದಿಲೀಪ್ ಕಣ್ಮರೆ ಆಗಿದ್ದಾರೆ. ರಾಮನಗರ ಬಳಿಯ ಅವರದ್ದೇ ತೋಟದ ಮನೆಯಲ್ಲಿ ದಿಲೀಪ್ ಅಂತ್ಯ ಸಂಸ್ಕಾರ ನೆರವೇರಿದೆ.

Read Full Story

07:18 PM (IST) May 14

ಬೆಂಗಳೂರಿನಿಂದ ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಿಸಿದ ಭಾರತೀಯ ರೈಲ್ವೇ

ಬೆಂಗಳೂರು -ಲೋಕಮಾನ್ಯ ತಿಲಕ ನಿಲ್ದಾಣಕ್ಕೆ ಹೊಸ ರೈಲು ಸೇವೆ ಆರಂಭಗೊಂಡಿದೆ. ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ 17 ಕೋಚ್‌ಗಳ ಹೊಸ ರೈಲು ಸೇವೆ ಇದಾಗಿದೆ. ರೈಲಿನ ವೇಳಾಪಟ್ಟಿ ಇಲ್ಲಿದೆ

Read Full Story

07:08 PM (IST) May 14

ಕೆರೆ ನಿರ್ಮಾಣದ ಬಂಡೆಗಲ್ಲು ಶಾಸನ ಪತ್ತೆ, ತೆಕ್ಕಲಕೋಟೆಯ ಇತಿಹಾಸಕ್ಕೆ ಹೊಸ ಬೆಳಕು, ವಿಜಯನಗರ ಕಾಲದ ಕಥೆ ಅನಾವರಣ

ತೆಕ್ಕಲಕೋಟೆಯ 'ಗೌಡ್ರ ಮೂಲೆ'ಯಲ್ಲಿ ಇತ್ತೀಚೆಗೆ ವಿಜಯನಗರ ಕಾಲದ ಬಂಡೆಗಲ್ಲು ಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ತ್ರಿಚಣ ಚನ್ನವಿರಪ ಗೌಡ ಎಂಬ ವ್ಯಕ್ತಿ ನಿರ್ಮಿಸಿದ ಕೆರೆಯ ಬಗ್ಗೆ ಮಾಹಿತಿ ನೀಡುವುದಲ್ಲದೆ, ಈ ಪ್ರದೇಶದ ಆಡಳಿತ ಮತ್ತು ಸಾಮಾಜಿಕ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
Read Full Story

06:24 PM (IST) May 14

ಬೆಂಗಳೂರಿನ ಐಐಎಸ್‌ಸಿಗೆ ಬಂತು ಸೂಪರ್ ಕಂಪ್ಯೂಟಿಂಗ್ ಲ್ಯಾಬ್, ಸಂಶೋಧನೆಗೆ ಭರ್ಜರಿ ಬೂಸ್ಟ್ ನೀಡಿದ ಶೆಫ್ಲರ್ ಇಂಡಿಯಾ

 ಐಐಎಸ್‌ಸಿ  ಮತ್ತು ಶೆಫ್ಲರ್ ಇಂಡಿಯಾ ಸಹಯೋಗದೊಂದಿಗೆ ಅತ್ಯಾಧುನಿಕ ಕಂಪ್ಯೂಟೇಶನಲ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ. ಈ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್  ಸೌಲಭ್ಯವು ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕೆಗಳಿಗೆ ಲಭ್ಯವಿದ್ದು, ಸಂಶೋಧನೆ ಮತ್ತು ನಾವೀನ್ಯತೆಗೆ ಹೊಸ ವೇಗ ನೀಡಲಿದೆ.  

Read Full Story

06:02 PM (IST) May 14

ವಿಜಯ್-ಉದಯನಿಧಿ ಸ್ಟಾಲಿನ್ ಫ್ರೆಂಡ್​ಶಿಪ್ ಕಹಾನಿ; ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿದ್ದು ಹೇಗೆ?

ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವಿಜಯ್ ಓದಿದ್ದರು. ಅದೇ ಕಾಲೇಜಿನಲ್ಲಿ ಉದಯನಿಧಿ ಸ್ಟಾಲಿನ್ ಕೂಡ ವಿದ್ಯಾಭ್ಯಾಸ ಮಾಡಿದ್ರು. ಅಷ್ಟೆ ಅಲ್ಲ 18 ವರ್ಷಗಳ ಹಿಂದೆ ರೆಡ್ ಜೈಂಟ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೊದಲ ಸಿನಿಮಾ ಕುರುವಿ. ಈ ಚಿತ್ರದಲ್ಲಿ ಹೀರೋ ದಳಪತಿ ವಿಜಯ್, ನಾಯಕಿ ತ್ರಿಷಾ..

Read Full Story

04:29 PM (IST) May 14

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ - ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಟೆಸ್ಲಾ ತನ್ನ ಮೊದಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' ಅನ್ನು ಉದ್ಘಾಟಿಸಿದೆ. ಈ ಸಂದರ್ಭದಲ್ಲಿ, 61.99 ಲಕ್ಷ ರೂ. ಆರಂಭಿಕ ಬೆಲೆಯ ಹೊಸ 'ಮಾಡೆಲ್ ವೈಎಲ್' ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ವಾಹನಗಳ ನೇರ ಅನುಭವ ಪಡೆಯುವ ಅವಕಾಶ ಕಲ್ಪಿಸಿದೆ.
Read Full Story

03:35 PM (IST) May 14

19 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ - ಕುಷ್ಟಗಿಯಲ್ಲಿ ತಂದೆ-ಮಗಳ ಭಾವನಾತ್ಮಕ ಮಿಲನ!

ದೀರ್ಘ 19 ವರ್ಷಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾದ ಘಟನೆ ಎಲ್ಲರ ಮನಸ್ಸನ್ನೂ ಭಾವುಕರನ್ನಾಗಿಸಿತು. ಬಾಲ್ಯದಲ್ಲೇ ತಂದೆಯಿಂದ ದೂರವಾಗಿದ್ದ ಮಗಳು, ಅನೇಕ ವರ್ಷಗಳ ನಿರೀಕ್ಷೆಯ ನಂತರ ತಂದೆಯನ್ನು ಭೇಟಿ ಮಾಡಿದ್ದು ಒಂದು ಅಪರೂಪದ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

 

Read Full Story

02:49 PM (IST) May 14

ಚೆನ್ನೈ ಬಿಟ್ಟು ಮುಂಬೈನಲ್ಲಿ ಮನೆ ಮಾಡಿರುವ 'ಕರುಪ್ಪು' ನಟ ಸೂರ್ಯ ಒಟ್ಟೂ ಆಸ್ತಿ ಎಷ್ಟು ಗೊತ್ತಾ?

ಸೂರ್ಯ ಮತ್ತು ಜ್ಯೋತಿಕಾ ಜೋಡಿ ಭಾರತೀಯ ಚಿತ್ರರಂಗದ ಅತ್ಯಂತ ಸುಂದರ ಮತ್ತು ಪ್ರೀತಿಯ ದಂಪತಿಗಳು. ಇವರಿಬ್ಬರ ಒಟ್ಟು ಆಸ್ತಿಯನ್ನು ಲೆಕ್ಕ ಹಾಕಿದರೆ ಅದು ಬರೋಬ್ಬರಿ 537 ಕೋಟಿ ರೂಪಾಯಿಗಳಿಗೂ ಅಧಿಕವಾಗುತ್ತದೆ! ಹಾಗಿದ್ದರೆ ಸೂರ್ಯ ಆಸ್ತಿ ಎಷ್ಟು?

Read Full Story

01:16 PM (IST) May 14

Dileep Raj Death - ದಿಲೀಪ್‌ನನ್ನು ಮತ್ತೆ ನೋಡೋವರೆಗೆ ನನ್ನ ಆತ್ಮಕ್ಕೆ ಶಾಂತಿ ಇಲ್ಲ - ಪತ್ನಿ ಶ್ರೀವಿದ್ಯಾ ಫಸ್ಟ್‌ ಪೋಸ್ಟ್

Actor Dileep Raj Death: ನಟ, ನಿರ್ಮಾಪಕ ದಿಲೀಪ್‌ ರಾಜ್‌ ಅವರು ನಿಧನರಾಗಿದ್ದಾರೆ. ಇವರ ಪತ್ನಿ ಶ್ರೀವಿದ್ಯಾ ಅವರು ಪತಿ ನಿಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ದಿಲೀಪ್‌ನನ್ನು ಸೇರೋವರೆಗೆ ನನ್ನ ಆತ್ಮಕ್ಕೆ ಶಾಂತಿ ಇಲ್ಲ ಎಂದು ಹೇಳಿದ್ದಾರೆ.

Read Full Story

01:08 PM (IST) May 14

ಯಾದಗಿರಿ ಹೋಟೆಲ್ ರೂಂನಲ್ಲಿ ನಿಗೂಢ ಸಾವು - ಅಕ್ಕ-ಭಾವ ಜೊತೆ ಹೋಟೆಲ್‌ಗೆ ಬಂದವನು… ಎರಡು ದಿನದ ಬಳಿಕ ಶವವಾಗಿ ಪತ್ತೆ..!

ಯಾದಗಿರಿ ನಗರದ ಖಾಸಗಿ ಹೋಟೇಲ್ ನಲ್ಲಿ ತಂಗಿದ್ದ ವ್ಯಕ್ತಿ ಅನುಮಾನಸ್ಪಾದ ರೀತಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆ ಅದೇ ಹೋಟೆಲ್‌ನಲ್ಲಿದ್ದ ಸಂಬಂಧಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಯಾದಗಿರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

Read Full Story

12:50 PM (IST) May 14

ಹೊಟ್ಟೆ ಬೊಜ್ಜು ಹಲವರಿಗೆ ಮಹಾ ಸಮಸ್ಯೆ.. ಈ ಟೀ ಕುಡಿದು ನೋಡಿ, ಬೆಲ್ಲಿ ಫ್ಯಾಟ್ ಬರ್ನ್ ಆಗಿ ಚೆಂದ ಕಾಣಿಸ್ತೀರ!

ಬೆಳ್ಳಂಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಹಾಲಿನ ಚಹಾ ಕುಡಿಯುವ ಅಭ್ಯಾಸ ನಮಗೆಲ್ಲಾ ಇರುತ್ತದೆ. ಆದರೆ ಅದರ ಬದಲು, ಕಿಚನ್‌ನಲ್ಲಿರುವ ಮೂರು ಮುಖ್ಯ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ವಿಶೇಷ ಚಹಾ ನಿಮ್ಮ ತೂಕ ಇಳಿಸುವ ಪಯಣಕ್ಕೆ ಹೊಸ ವೇಗ ನೀಡಬಲ್ಲದು.

Read Full Story

12:45 PM (IST) May 14

ಲಾಭ ಕಾಣದ ತರಕಾರಿ ಕೃಷಿಯಿಂದ ನೊಂದು, ಸುಗಂಧರಾಜ ಹೂವು ಬೆಳೆದು ರಾಜನಾದ ತುಮಕೂರು ರೈತನ ಕಥೆ!

ತುಮಕೂರಿನ ರೈತ ರಾಮಾಂಜುನಯ್ಯ ಅವರು ಸಾಂಪ್ರದಾಯಿಕ ತರಕಾರಿ ಕೃಷಿ ತೊರೆದು, ವೈಜ್ಞಾನಿಕವಾಗಿ 'ಅರ್ಕಾ ಪ್ರಜ್ವಲ್' ತಳಿಯ ಸುಗಂಧರಾಜ ಹೂವಿನ ಕೃಷಿ ಆರಂಭಿಸಿದರು. ಈ ಬದಲಾವಣೆಯಿಂದ ಅವರು ಅಧಿಕ ಲಾಭ ಗಳಿಸಿದ್ದಲ್ಲದೆ, ತಮ್ಮ ಗ್ರಾಮದ ಆರ್ಥಿಕತೆಯನ್ನೇ ಪರಿವರ್ತಿಸಿ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.
Read Full Story

12:20 PM (IST) May 14

Tragedy In Shivamogga - ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದ ಅಜ್ಜಿ ತಲೆ ಮೇಲೆ ಮನೆಯ ಕಬ್ಬಿಣದ ಬೀಮ್ ಬಿದ್ದು ಸಾವು!

ಸೊರಬ ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಚಂದ್ರಗುತ್ತಿ ದೇವಸ್ಥಾನದ ಬಳಿ ಆಶ್ರಯ ಪಡೆಯುತ್ತಿದ್ದ ವೃದ್ಧೆಯೊಬ್ಬರು ಶೆಡ್‌ನ ಬೀಮ್ ಬಿದ್ದು ಮೃತಪಟ್ಟಿದ್ದಾರೆ. ಈ ಮಳೆಯಿಂದಾಗಿ ತಾಲೂಕಿನ ಹಲವೆಡೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅನೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

Read Full Story

11:46 AM (IST) May 14

ಸಿಕ್ಕಾಪಟ್ಟೆ ಒತ್ತಡಕ್ಕೆ ಒಳಗಾಗಿದ್ರಾ ದಿಲೀಪ್ ರಾಜ್? ಏನ್ ಹೇಳ್ತಿದೆ ಶ್ರುತಿ ನಾಯ್ಡು ಪೋಸ್ಟ್- At the cost of?

‘ಶ್ರುತಿ ನಾಯ್ಡು ಅವರ ಪೋಸ್ಟ್ ಕೇವಲ ಸಂತಾಪ ಸೂಚಕ ಸಂದೇಶವಲ್ಲ; ಅದು ಕಿರುತೆರೆಯ ಹೊಳೆಯುವ ಬೆಳಕಿನ ಹಿಂದೆ ಅಡಗಿರುವ ನೋವು ಮತ್ತು ಒತ್ತಡದ ಪ್ರತಿಫಲನ. ಇದು ಬಣ್ಣದ ಲೋಕದ ಕರಾಳ ಮುಖವನ್ನು ತೋರಿಸುತ್ತಿದೆ' ಎಂದು ಹಲವರು ಹೇಳುತ್ತಿದ್ದಾರೆ. ಏನಿದು ಶ್ರುತಿ ನಾಯ್ದು ಪೋಸ್ಟ್ ಮರ್ಮ?

Read Full Story

11:15 AM (IST) May 14

ಶಿವರಾಮ ಕಾರಂತ ಬಡಾವಣೆ ಭೂಮಾಲೀಕರಿಗೆ ಬಂಪರ್‌ ನ್ಯೂಸ್‌! 18,000 ನಿವೇಶನ ಹಂಚಿಕೆ ಶುರು, ಈ ಮಾಹಿತಿ ತಿಳಿದಿರಲಿ!

ಡಾ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ ಮಾಲೀಕರಿಗೆ 18,000 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಜೊತೆಗೆ, ಬಿಡಿಎ ಬಡಾವಣೆಗಳಲ್ಲಿನ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ರಿಯಾಯಿತಿ ದರದಲ್ಲಿ ಹೊಸ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Read Full Story

10:31 AM (IST) May 14

ಹೊಸ ಕಾರಿಗೆ ಮಾದಪ್ಪನ ಪೂಜೆ… ಹಿಂದಿರುಗುವ ದಾರಿಯಲ್ಲೇ ಕಾರು ಪಲ್ಟಿ! ಭಕ್ತರು ಶಾಕ್!

verturns while returning from Mahadeshwara temple ಹೊಸ ಕಾರು ಖರೀದಿಸಿದ ಖುಷಿ… ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ… ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ

Read Full Story

09:59 AM (IST) May 14

ಕರ್ನಾಟಕದಲ್ಲಿ ಸಂಘ ಪರಿವಾರಕ್ಕೆ ಭದ್ರ ಅಡಿಪಾಯ ಹಾಕಿದ ಆ ಮಹಾನ್ ವ್ಯಕ್ತಿ ಯಾರು ಗೊತ್ತಾ?

ಮೈ.ಚ.ಜಯದೇವ ಅವರು ಕರ್ನಾಟಕದಲ್ಲಿ ಸಂಘ ಪರಿವಾರ ಕಟ್ಟಿಬೆಳೆಸಿದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರು. ರಾಷ್ಟ್ರೋತ್ಥಾನ ಪರಿಷತ್‌ನಂಥ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ ಚಳವಳಿ ರೂಪಿಸಿದರು. ಸಂಘಟನಾ ಚಾತುರ್ಯ, ಸಮನ್ವಯ ಸಾಮರ್ಥ್ಯ, ಮೌನ ಕಾರ್ಯಶೈಲಿಯಿಂದ 'ಧ್ಯೇಯವೇ ದೊಡ್ಡದು' ಎಂಬ ತತ್ವಕ್ಕೆ ಸಾಕ್ಷಿಯಾಗಿದ್ದರು.

Read Full Story

09:47 AM (IST) May 14

ಹಿಜಾಬ್ ನಿಷೇಧ ವಿರುದ್ಧದ ಹೋರಾಟ ಕಥೆ - ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮನದಾಳದ ಮಾತು

ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ಹಿಂಪಡೆದಿರುವುದನ್ನು ಸ್ವಾಗತಿಸಿ, ಹಿಂದಿನ ಸರ್ಕಾರದ ನಿರ್ಧಾರದಿಂದ ಪರೀಕ್ಷೆ ಸಮಯದಲ್ಲಿ ಎದುರಾದ ಸಂಕಷ್ಟವನ್ನು ವಿದ್ಯಾರ್ಥಿನಿಯೊಬ್ಬರು ವಿವರಿಸಿದ್ದಾರೆ. ಪರೀಕ್ಷೆ ವಂಚಿತರಿಗೆ ಮರುಪರೀಕ್ಷೆ ನಡೆಸಲು ಮತ್ತು ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಸಕಾರಾತ್ಮಕವಾಗಿ ಮುಗಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
Read Full Story

09:41 AM (IST) May 14

ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ನ್ಯೂಸ್ - 56 ಸಾವಿರ ಸರ್ಕಾರಿ ನೇಮಕಾತಿಗೆ ಗ್ರೀನ್‌ ಸಿಗ್ನಲ್‌!

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ತೀರ್ಮಾನದ ಅನ್ವಯ, ರಾಜ್ಯ ಸರ್ಕಾರವು 400 ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ ರಾಜ್ಯದಲ್ಲಿ ಖಾಲಿ ಇರುವ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹಸಿರು ನಿಶಾನೆ ದೊರೆತಿದೆ.
Read Full Story

09:19 AM (IST) May 14

ಜೀವನಾಂಶ ಕೊಡದ ಗಂಡಂದಿರಿಗೆ ಹೈಕೋರ್ಟ್‌ ಶಾಕ್‌! ಪತ್ನಿಗೆ ಹಣ ನೀಡದಿದ್ದರೆ ಜೈಲು ಫಿಕ್ಸ್‌? ಹೈ ಮಹತ್ವದ ತೀರ್ಪು, ಏನಿದು ಪ್ರಕರಣ?

ಪತ್ನಿಗೆ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶ ಪಾವತಿಸದ ಪತಿಯ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದನ್ನ ಪರಿಗಣಿಸಿ, ಮಂಗಳೂರಿನ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ವಾರಂಟ್  ಹೈಕೋರ್ಟ್ ಎತ್ತಿಹಿಡಿದಿದೆ.

Read Full Story

08:03 AM (IST) May 14

'ಮನೆ ಮನೆಗೂ ಯೋಗ' ಅಭಿಯಾನಕ್ಕೆ ರಾಜ್ಯ ಸರ್ಕಾರ; ಯೋಗ ದಿನಕ್ಕೆ ವಿಶೇಷ ಪ್ಲ್ಯಾನ್, ಸಚಿವರು ಹೇಳಿಕೆ ಕುತೂಹಲ!

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 'ಮನೆ ಮನೆಗೂ ಯೋಗ, ಎಲ್ಲರಿಗೂ ಯೋಗ' ಪರಿಕಲ್ಪನೆಯಡಿ ರಾಜ್ಯಾದ್ಯಂತ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಮುಖ್ಯ ಕಾರ್ಯಕ್ರಮ ಜೂ.21 ರಂದು ವಿಧಾನಸೌಧದ ಆವರಣದಲ್ಲಿ ನಡೆಯಲಿದ್ದು, ಸುಮಾರು 5000 ಯೋಗಪಟುಗಳು ಭಾಗವಹಿಸಲಿದ್ದಾರೆ.

Read Full Story

07:46 AM (IST) May 14

ಮೂಲ್ಕಿ ವಿದ್ಯಾರ್ಥಿನಿ ಬ್ಯಾಗ್‌ನಲ್ಲಿತ್ತು 35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವಿಡ ಗಾಂಜಾ!

ಮೂಲ್ಕಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ, 35 ಲಕ್ಷ ರೂಪಾಯಿ ಮೌಲ್ಯದ ಹೈಡ್ರೊವಿಡ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನಾ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಯು ಈ ಮಾದಕ ವಸ್ತುವನ್ನು ಚೆನ್ನೈನಿಂದ ತರಿಸಿರುವುದಾಗಿ ತಿಳಿದುಬಂದಿದೆ.
Read Full Story

07:44 AM (IST) May 14

ಸ್ಪೀಕರ್ ಖಾದರ್‌ಗೆ ಘೇರಾವ್ ಕೇಸ್ - 11 ಮಂದಿ ವಿರುದ್ಧ ಎಫ್‌ಐಆರ್, ಏನಿದು ಪ್ರಕರಣ?

ಮಂಗಳೂರಿನ ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿದ ಆರೋಪದ ಮೇಲೆ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕರು ನೀಡಿದ ದೂರಿನ ಅನ್ವಯ ಕ್ರಮ.

Read Full Story

07:32 AM (IST) May 14

ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಸುಳ್ಳು ವಂಚನೆಯ ಕಥೆ ಕಟ್ಟಿದ ಪತಿಯ ಅಸಲಿ ಮುಖ ಬಯಲು

ಉದ್ಯಮಿಯೊಬ್ಬರು ರೀಲ್ಸ್ ಸ್ಟಾರ್ ತನ್ನಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆಂದು ದೂರು ನೀಡಿದ್ದರು. ಆದರೆ, ಇದೀಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಪತಿಯೇ ಈ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಉದ್ಯಮಿಯ ಪತ್ನಿಯೇ ಪೊಲೀಸರಿಗೆ ಪತ್ರ ಬರೆದು ಗಂಭೀರ ಆರೋಪ ಮಾಡಿದ್ದಾರೆ.

Read Full Story

07:20 AM (IST) May 14

ಸಿದ್ದಾಪುರ To ಶಿರಸಿ - ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ

ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ಸಾರಿಗೆ ಬಸ್‌ನ ಸಮಯವನ್ನು  ಬದಲಾಯಿಸಲಾಗಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದೆ.

Read Full Story

07:18 AM (IST) May 14

ರೇಣುಕಾಸ್ವಾಮಿ ಕೊಲೆ ಪ್ರಕರಣ - ನಾಳೆ ಸುಪ್ರೀಂ ನಲ್ಲಿ ದರ್ಶನ್ ವಿಚಾರಣೆ, ನಾಳೆಯೇ ಜಾಮೀನು ಸಿಗುತ್ತಾ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ವಿಚಾರಣೆ ವಿಳಂಬವನ್ನು ಕಾರಣವಾಗಿಟ್ಟುಕೊಂಡು ಸುಪ್ರೀಂಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಪೊಲೀಸರು ಅಫಿಡವಿಟ್ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ.
Read Full Story

More Trending News