ಮಂಗಳೂರು: ಅಪ್ರಾಪ್ತ ಕಾರು ಚಲಾಯಿಸಿ ಒಂದು ಕಾರು ಹಾಗೂ ನಿಲ್ಲಿಸಿದ್ದ 6 ಬೈಕ್‌ಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಮಾಲೀಕರಾದ ಬಾಲಕನ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲು ಕಾರೊಂದಕ್ಕೆ ಡಿಕ್ಕಿ ಹೊಡೆದ ಅಪ್ರಾಪ್ತನ ಕಾರು ಬಳಿಕ ರಸ್ತೆ ಬದಿ ನಿಲ್ಲಿಸಲಾಗಿದ್ದ 6 ಬೈಕ್‌ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿಸಿತ್ತು. ಅಪ್ರಾಪ್ತ ಕಾರು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದ. ನಂತರ ಪೆರಿಗೇರಿ ಎಂಬಲ್ಲಿ ಸ್ಥಳೀಯರು ಕಾರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದರು. ತನಿಖೆ ನಡೆಸಿದ ಪೊಲೀಸರು ವಾಹನ ಮಾಲೀಕಿ ಆದ ಆತನ ತಾಯಿ ಕೆ.ಎ.ಮಮ್ತಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

11:13 PM (IST) Mar 14
₹21 ಸಾವಿರ ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚೇರಿ ಸಿಬ್ಬಂದಿ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದು, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಕೇಂದ್ರ ,ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಯಿಂದಾಗಿ ಭವಿಷ್ಯ ಅತಂತ್ರವಾಗಿದೆ.
10:48 PM (IST) Mar 14
ಟ್ರೆಂಡ್ ಆದ ಕೆಡಿ ಸಿನಿಮಾದ ಸೆರಗು ಹಾಡು, ಬಾಲಿವುಡ್‌ನ ನೋರಾ ಹಾಗೂ ಸಂಜಯ್ ದತ್ ಮೋಡಿ, ಧ್ರುವ ಸರ್ಜ ಬಹುನಿರೀಕ್ಷಿತ ಸಿನಿಮಮಾದಲ್ಲಿ ಬಾಲಿವುಡ್ ರಂಗು ಕಳೆಗಟ್ಟಿದೆ. ಸೆರಗಿನ ಹಾಡು ಇದೀಗ ಭಾರಿ ಸದ್ದು ಮಾಡುತ್ತಿದೆ.
10:32 PM (IST) Mar 14
10:00 PM (IST) Mar 14
09:47 PM (IST) Mar 14
ಅಂತಾರಾಷ್ಟ್ರೀಯ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಅವರು ರಾಜ್ಯದಲ್ಲಿ ಸುರಕ್ಷಿತವಾಗಿ ಉಳಿಯಬಹುದಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
09:32 PM (IST) Mar 14
ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
09:22 PM (IST) Mar 14
08:57 PM (IST) Mar 14
ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
08:36 PM (IST) Mar 14
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
08:24 PM (IST) Mar 14
ಬಳ್ಳಾರಿ ಜಿಲ್ಲೆಯಲ್ಲಿ ₹55 ಕೋಟಿ ಇನ್‌ಕ್ಯುಬೇಷನ್ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಬಳ್ಳಾರಿಯಲ್ಲಿ 4.74 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
08:06 PM (IST) Mar 14
ಮಹಿಳೆಯರ ಸಬಲೀಕರಣ ಸಮಾಜದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶ ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
07:26 PM (IST) Mar 14
ಟಾಲಿವುಡ್‌ನ ಡೈಲಾಗ್ ಕಿಂಗ್, ಕಲೆಕ್ಷನ್ ಕಿಂಗ್ ಮೋಹನ್ ಬಾಬು ಅಂದ್ರೆ ಅವರಿಗೊಂದು ಬೇರೆಯೇ ಇಮೇಜ್ ಇದೆ. ಅವರ ಜೊತೆ ಮಾತಾಡೋಕೆ ಹಲವರು ಹೆದರುತ್ತಾರೆ. ಆದರೆ ಮೋಹನ್ ಬಾಬು ಕಾಮೆಂಟ್‌ಗೆ ಶಾಕ್ ಆಗುವಂತಹ ಕೌಂಟರ್ ಕೊಟ್ಟ ಆ ನಟಿ ಯಾರು ಗೊತ್ತಾ?
06:38 PM (IST) Mar 14
ನಟ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.
06:08 PM (IST) Mar 14
'ಬಾಸ್' ಎಂಬ ಹೊಸ ಸಿನಿಮಾದ ಟೀಸರ್, ನಟ ದರ್ಶನ್ ಭಾಗಿಯಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಹೋಲುತ್ತಿದೆ ಎಂಬ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಲವ ಅವರು ಈ ಆರೋಪವನ್ನು ನಿರಾಕರಿಸಿದ್ದು, ಇದು ಸಮಾಜದಲ್ಲಿ ನಡೆದ ಹಲವು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.
06:04 PM (IST) Mar 14
04:27 PM (IST) Mar 14
ಹಿಮೋಗ್ಲೋಬಿನ್ ಅಧಿಕವಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಲ್ಲಿ ಅದು 18ರಿಂದ 23ರ ತನಕವೂ ಹೋಗಿ, ರಕ್ತ ದಪ್ಪವಾಗುತ್ತದೆ. ಇದರಿಂದ, ನರಗಳಲ್ಲಿ ನೀರಂತೆ ಹರಿಯುವ ನೆತ್ತರು ಗಟ್ಟಿಯಾಗಿ, ಗಂಟಾಗಿ ತೊಂದರೆಯಾಗುತ್ತದೆ.
04:13 PM (IST) Mar 14
03:58 PM (IST) Mar 14
ಬಿಗ್‌ಬಾಸ್ 12ರಲ್ಲಿ ಸ್ಪರ್ಧಿಸಿದ್ದ ಸಾಫ್ಟ್ವೇರ್ ಎಂಜಿನಿಯರ್ ಸೂರಜ್ ಸಿಂಗ್, ಮನೆಯಿಂದ ಹೊರಬಂದ ನಂತರ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾದರು. ಸೀರಿಯಲ್ ಪ್ರಮೋಷನ್‌ಗೆ ಬಿಗ್‌ಬಾಸ್ ಮನೆಗೆ ಹೋದರು. ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆಯೊಂದನ್ನು ಸೃಷ್ಟಿಸಿದ್ದು ಅದರ ಬಗ್ಗೆ ನಟ ಹೇಳಿದ್ದೇನು?
02:39 PM (IST) Mar 14
'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕುಂದಾಪುರದಲ್ಲಿ ಸುಮಾರು ₹12 ಕೋಟಿ ಮೌಲ್ಯದ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ. ಪರಂಪರೆ ಮತ್ತು ಆಧುನಿಕತೆಯ ಸಮ್ಮಿಶ್ರಣವಾಗಿರುವ ಈ ಮನೆಯು ಅರೇಬಿಯನ್ ಸಮುದ್ರದ ಸುಂದರ ನೋಟವನ್ನು ಹೊಂದಿದೆ.
02:28 PM (IST) Mar 14
ತೆರೆ ಮೇಲೆ ಕಾಣಿಸೋದು ಬೇರೆ, ರಿಯಲ್ ಆಗಿ ಕಾಣುವುದೇ ಬೇರೆ. ತೆರೆ ಮೇಲೆ ಕಾಣಿಸದಂತೆ ಸೆಲೆಬ್ರಿಟಿಗಳ ಲೈಫ್ ಕೂಡ ಇರೋದಿಲ್ಲ. ಖ್ಯಾತ ಪತ್ರಕರ್ತೆ Simi Chandoke ಅವರು ಬಾಲಿವುಡ್‌ನ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.
02:02 PM (IST) Mar 14
ವಿಮಾನದಲ್ಲಿ ಪ್ರಯಾಣಿಸುವ ಮೊದಲು ಕೆಲವೊಂದು ವಿಷ್ಯಗಳನ್ನು ನಾವು ತಿಳಿದಿರಬೇಕು. ವಿಮಾನದಲ್ಲಿ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಒಬ್ಬ ವ್ಯಕ್ತಿಗೆ ಲಗೇಜ್ ಲಿಮಿಟ್ ಇದೆ. ಅಲ್ದೆ ದ್ರವ ಪದಾರ್ಥ, ಚೂಪಾದ ವಸ್ತು ಸೇರಿದಂತೆ ಕೆಲ ವಸ್ತುಗಳ ಮೇಲೆ ಕಟ್ಟುನಿಟ್ಟಾದ ನಿಯಮ ಜಾರಿಯಲ್ಲಿದೆ.
01:30 PM (IST) Mar 14
ಸಾಮಾನ್ಯವಾಗಿ ಬಿಸಾಡುವ ಕಲ್ಲಂಗಡಿ ಸಿಪ್ಪೆಯು 'ನೈಸರ್ಗಿಕ ವಯಾಗ್ರಾ' ಎಂದೇ ಖ್ಯಾತವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ, ಕಿಡ್ನಿ ಕಲ್ಲುಗಳನ್ನು ತಡೆಯುವುದಲ್ಲದೆ, ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಈ ಸಿಪ್ಪೆಯನ್ನು ಬಳಸಿ ರುಚಿಕರವಾದ ತಂಬುಳಿಯನ್ನು ಹೇಗೆ ತಯಾರಿಸಬಹುದು?
01:20 PM (IST) Mar 14
12:56 PM (IST) Mar 14
12:48 PM (IST) Mar 14
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಇನ್ನಷ್ಟು ವ್ಯಾಪಿಸಿದೆ ಎಂಬ ಆರೋಪ.
12:36 PM (IST) Mar 14
ಬಿಜೆಪಿ ಕ್ಷೇತ್ರವಾರು ಪ್ರಮುಖ ನಾಯಕರ ತಂಡಗಳನ್ನು ರಚಿಸಿದೆ. ಈಶಾನ್ಯ ಶಿಕ್ಷಕರು, ಬೆಂಗಳೂರು ಶಿಕ್ಷಕರು, ಪಶ್ಚಿಮ ಪದವೀಧರರು, ಆಗ್ನೇಯ ಪದವೀಧರರ ಕ್ಷೇತ್ರಗಳು ಹಾಗೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
12:13 PM (IST) Mar 14
Muddu Sose Kannada Serial Episode Update: ಮುದ್ದುಸೊಸೆ ಧಾರಾವಾಹಿಯಲ್ಲಿ ಶಿವರಾಮೇಗೌಡ ಜೈಲಿಗೆ ಹೋಗಿದ್ದ ವಿಷಯದಲ್ಲಿ ವಿದ್ಯಾ ಪಾಲು ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಭದ್ರೇಗೌಡ, ವಿನಂತಿಯನ್ನು ಬಳಸಿಕೊಂಡಿಲ್ಲ ಎಂದು ಸಾಬೀತಾಗಬೇಕಿದೆ. ಈಗ ದೈವ ಲೀಲೆಯ ಪರಾಕಾಷ್ಠೆ ಆಗಬೇಕಿದೆ.
12:03 PM (IST) Mar 14
11:45 AM (IST) Mar 14
11:06 AM (IST) Mar 14
ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ತೆಲುಗು ನಟ-ನಟಿಯರ ವೈಯಕ್ತಿಕ ಜೀವನ, ಕರಿಯರ್ ಬಗ್ಗೆ ಮಾತನಾಡಿದ್ದುಂಟು, ಅವರ ಭವಿಷ್ಯಗಳಲ್ಲಿ ಬಹುತೇಕ ಸತ್ಯವಾದರೆ, ಇನ್ನೂ ಕೆಲವು ಆಗಿಲ್ಲ. ಈಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೂಡ ಮಾತನಾಡಿದ್ದು, ವೀಕ್ಷಕರು ಸಿಟ್ಟಾಗಿದ್ದಾರೆ.
11:01 AM (IST) Mar 14
10:40 AM (IST) Mar 14
ಜಾಗತಿಕ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆ ಉಂಟಾಗಿದ್ದು, ಜನರು ಇಂಡಕ್ಷನ್ ಸ್ಟವ್‌ಗಳತ್ತ ಮುಖಮಾಡಿದ್ದಾರೆ. ಇಂಡಕ್ಷನ್ ಬಳಕೆಯಿಂದ ಮಾಸಿಕ ಖರ್ಚು ಕಡಿಮೆಯಾಗಬಹುದಾದರೂ,
10:28 AM (IST) Mar 14
Brahmagantu Serial Kannada: ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ದ್ವೇಷ ಮಿತಿ ಮೀರಿದೆ. ಈಗಾಗಲೇ ಚಿರು ತಂದೆಯನ್ನು ವೀಲ್‌ಚೇರ್ ಮೇಲೆ ಕೂರೋ ಹಾಗೆ ಮಾಡಿರೋ ಸೌಂದರ್ಯ ಈಗ ದೀಪಾಳನ್ನು ಅವಳ ಪತಿಯಿಂದ ದೂರ ಮಾಡುವ ಆಲೋಚನೆ ಮಾಡಿದ್ದಾಳೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
09:58 AM (IST) Mar 14
ಮದುವೆ ವಿಚಾರವಾಗಿ ನಡೆದ ಜಗಳದಲ್ಲಿ ಅಯ್ಯಪ್ಪ ಎಂಬಾತ ತನ್ನ ಪ್ರೇಯಸಿ ರಂಜಿತಾಳನ್ನು ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಈಗಾಗಲೇ ಮದುವೆಯಾಗಿದ್ದ ಅಯ್ಯಪ್ಪ, ಪತ್ನಿಗೆ ವಿಚ್ಛೇದನ ನೀಡದೆ ರಂಜಿತಾ ಜೊತೆ ವಾಸಿಸುತ್ತಿದ್ದ. ವರ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
09:22 AM (IST) Mar 14
ಯುಜಿಸಿ ನಿಗದಿಪಡಿಸಿದ ಹೊಸ ಅರ್ಹತಾ ಮಾನದಂಡಗಳಿಂದಾಗಿ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದ ಇವರಿಗೆ, ಹೈಕೋರ್ಟ್ ಆದೇಶದ ನಂತರ ಹೊಸ ನಿಯಮ ಪಾಲಿಸದ ಕಾರಣ ನಿರುದ್ಯೋಗದ ಸಂಕಷ್ಟ
08:41 AM (IST) Mar 14
ಬೆಂಗಳೂರಿನ ರಾಜಭವನ ರಸ್ತೆಯಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಚಾಲಕನೊಬ್ಬ ಮಾಜಿ ಸಚಿವ ನಾರಾಯಣಗೌಡ ಅವರ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ, ನಿರ್ಲಕ್ಷ್ಯದ ಚಾಲನೆಯ ಬಗ್ಗೆ ನಾರಾಯಣಗೌಡ ಅವರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು.
08:35 AM (IST) Mar 14
ಪ್ರಸಿದ್ಧ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ದಾಖಲೆಯ ₹3.07 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಈ ಎಣಿಕೆಯಲ್ಲಿ ₹2.78 ಕೋಟಿ ನಗದು, 100 ಗ್ರಾಂ ಚಿನ್ನ ಹಾಗೂ ಸುಮಾರು 4.5 ಕೆಜಿ ಬೆಳ್ಳಿ ಸೇರಿದೆ.
08:27 AM (IST) Mar 14
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಬೆಲೆ ₹4000 ದಾಟಿದ್ದು, ಅನಿವಾರ್ಯವಾಗಿ ಹಲವು ಹೋಟೆಲ್‌ಗಳು ಸೌದೆ ಒಲೆಗಳ ಮೊರೆ ಹೋಗಿವೆ. ಇದರಿಂದ ಅಡುಗೆ ಸಿಬ್ಬಂದಿ ಹೊಗೆ ಹಾಗೂ ಅನುಭವದ ಕೊರತೆಯಿಂದ ಪರದಾಟ.
08:22 AM (IST) Mar 14
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರು ಬಹುತೇಕ ಅಂತಿಮವಾಗಿದ್ದು, ದಾವಣಗೆರೆಯಲ್ಲಿನ ಭಿನ್ನಾಭಿಪ್ರಾಯಗಳ ನಡುವೆ ಅಚ್ಚರಿಯ ಅಭ್ಯರ್ಥಿ ಆಯ್ಕೆಯ ಸಾಧ್ಯತೆಗಳಿವೆ.
07:48 AM (IST) Mar 14
ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್ ಬಾಬು ಅವರು 'ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ 2025' ಎಂಬ ಖಾಸಗಿ ವಿಧೇಯಕವನ್ನು ಮಂಡಿಸಿದ್ದಾರೆ. ಈ ವಿಧೇಯಕವು ಚಿನ್ನದ ಸಾಲಗಾರರ ಹಿತರಕ್ಷಣೆಗಾಗಿ, ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆಯನ್ನು ನಿಯಂತ್ರಣ ಉದ್ದೇಶಿಸಿದೆ.