ಬೆಳಗಾವಿ: ಮದುವೆಗೆ ವಧು ಸಿಗದಕ್ಕೆ ನೊಂದು ಇಲ್ಲಿನ ಹಿಂಡಲಗಾ ಜೈಲಿನ ವಾರ್ಡರ್ ವಿನೋದ್ ತಿಗಡಿ (31) ನದಿಗೆ ಹಾಕಿ ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ವಿನೋದ್ ಇತ್ತೀಚೆಗೆ ಹೊಸ ಮನೆ ಕಟ್ಟಿಸಿದ್ದರು. ಮದುವೆ ಆಗಲು ವಧು ಕೂಡ ಹುಡುಕುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ವಧು ಸಿಗದಿದ್ದರಿಂದ ಜಿಗುಪ್ಸೆಗೊಂಡು ನದಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಚನ್ನಮ್ಮ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
09:37 PM (IST) Mar 12
2026 ಮಾ.16 ರೊಳಗೆ 2025 ಮಾ. 17 ರ ಕಾರ್ಯಾದೇಶದಂತೆ ಲೋಕಾರ್ಪಣೆ ಮಾಡಬೇಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ವಿಳಂಬವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
09:23 PM (IST) Mar 12
ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ರಾಜ್ಯದಲ್ಲಿ ‘ಸುಸ್ಥಿರ ಡೇಟಾ ಸೆಂಟರ್ ಪಾಲಿಸಿ’ ರೂಪಿಸುವುದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
08:13 PM (IST) Mar 12
ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಲಾರಿ ಹರಿದು ಅಜ್ಜ ಮೊಮ್ಮಗಳು ಮೃತಪಟ್ಟಿದ್ದಾರೆ. ಪರೀಕ್ಷೆ ಮುಗಿಸಿ ಮೊಮ್ಮಗಳನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿದ್ದ ರಾಗಿಯ ಮೇಲೆ ಬೈಕ್ ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
07:53 PM (IST) Mar 12
07:52 PM (IST) Mar 12
'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ, ಹಿಂದೆ ಮಲ್ಲಿ ಪಾತ್ರ ನಿರ್ವಹಿಸಿದ್ದ ರಾಧಾ ಭಗವತಿ ಜೊತೆ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಮಗೆ ತನ್ನ ಅಮ್ಮನಂತೆ ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ರಾಣವ್ ಹೇಳಿಕೊಂಡಿದ್ದರು.
07:33 PM (IST) Mar 12
ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಗರ ಪಾಲಿಕೆಯಿಂದ ₹ 25 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
07:29 PM (IST) Mar 12
07:11 PM (IST) Mar 12
ಬಂಡವಾಳ ಹೂಡಿಕೆಗೆ ನಾವೆಲ್ಲರೂ ಸೇರಿ ಉತ್ತಮ ವಾತಾವರಣ ಕೊಟ್ಟಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಶೇ.2ರಷ್ಟು ಜಿಡಿಪಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
07:03 PM (IST) Mar 12
ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಸಂಬಂಧ ತಜ್ಞರ ಸಮಿತಿ ವರದಿ ಪಡೆದು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
06:25 PM (IST) Mar 12
Tractor catches fire after touching electric wire: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಒಣಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
06:15 PM (IST) Mar 12
05:49 PM (IST) Mar 12
ಬೆಳಗಾವಿಯ ಬೈಲಹೊಂಗಲದ ವೈದ್ಯರೊಬ್ಬರು ತಮ್ಮ ಪೋಷಕರ ಕೊನೆಯಾಸೆಯಂತೆ ಅವರ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿದ್ದಾರೆ. ತಂದೆಯ ಬಳಿಕ ಇತ್ತೀಚೆಗೆ ನಿಧನರಾದ ತಾಯಿಯ ದೇಹವನ್ನೂ ಮಗ ಡಾ.ಮಹಾಂತೇಶ ರಾಮಣ್ಣನವರ್ ಅವರು ವಿದ್ಯಾರ್ಥಿಗಳ ಪಾಠಕ್ಕಾಗಿ ಬಳಸಿಕೊಂಡಿದ್ದಾರೆ.
05:44 PM (IST) Mar 12
05:33 PM (IST) Mar 12
ರಾಜ್ಯದ ಒಟ್ಟು ಜಿಡಿಪಿ ದಕ್ಷಿಣ ಕನ್ನಡ ಜಿಲ್ಲೆಯು ಶೇ.5.4ರಷ್ಟು ಪಾಲು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉತ್ತಮ ಹೂಡಿಕೆ ವಾತಾವರಣ ಕಲ್ಪಿಸಿದರೆ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಜಿಡಿಪಿಯನ್ನು ಇನ್ನೂ ಶೇ.2ರಷ್ಟು ಹೆಚ್ಚಿಸಬಹುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
05:21 PM (IST) Mar 12
05:18 PM (IST) Mar 12
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ತಾಯಿಯೊಬ್ಬರು, ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
05:14 PM (IST) Mar 12
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಅವರ 'ಆಕಾಶ್' ಸಿನಿಮಾ ಮರು-ಬಿಡುಗಡೆಯಾಗುತ್ತಿದೆ. ಅದೇ ದಿನ, ನಟ ದರ್ಶನ್ ಅವರ 'ಡೆವಿಲ್' ಚಿತ್ರವೂ ಸಹ ರೀ-ರಿಲೀಸ್ ಆಗುತ್ತಿದ್ದು, ಇದು ಇಬ್ಬರು ನಟರ ಅಭಿಮಾನಿಗಳ ನಡುವಿನ ಬಾಕ್ಸಾಫೀಸ್ ಸಮರಕ್ಕೆ ಮತ್ತೊಮ್ಮೆ ಕಾರಣವಾಗಿದೆ.
05:02 PM (IST) Mar 12
04:45 PM (IST) Mar 12
Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಆಗಿದೆ. ಈಗ ರಶ್ಮಿಕಾ ಮಂದಣ್ಣ ತಾಯಿಯದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು. ಈಗ ಅದನೆಲ್ಲ ಡಿಲಿಟ್ ಮಾಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
04:25 PM (IST) Mar 12
ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ (BAMUL) ಕಳೆದ ವರ್ಷದ 14.5 ಕೋಟಿ ರೂ. ನಷ್ಟದಿಂದ ಈ ವರ್ಷ 60 ಕೋಟಿ ರೂ.ಗಳ ಅಂದಾಜು ಲಾಭ ಗಳಿಸಿದೆ. ಆಡಳಿತಾತ್ಮಕ ಸುಧಾರಣೆಗಳು ಮತ್ತು ಹೆಚ್ಚಿದ ಹಾಲು ಸಂಗ್ರಹಣೆಯೇ ಈ ಯಶಸ್ಸಿಗೆ ಕಾರಣವಾಗಿದೆ.
04:19 PM (IST) Mar 12
Kannada Tv Serial: ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಸೀರಿಯಲ್‌ಗಳು ಪ್ರಸಾರ ಆಗುತ್ತಿವೆ. ಆದರೆ ಆ ಧಾರಾವಾಹಿಗಳಲ್ಲಿ ಮಾತ್ರ ಒಂದು ವಿಷಯ ಕಾಮನ್ ಆಗಿದೆ. ಇದನ್ನು ನೋಡಿ ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಸಂಪೂರ್ಣ ಲೇಖನ ಓದಿ.
04:15 PM (IST) Mar 12
04:14 PM (IST) Mar 12
ಯಶ್ ಯಾವತ್ತೂ ಧುರಂಧರ್ 2 ಸಿನಿಮಾ ಟೀಮ್ ಅನ್ನು ವೈರಿಯಂತೆ ಕಂಡಿಲ್ಲ. ಬದಲಿಗೆ ಅವರು ಸಿನಿಮಾ ನೋಡಲು ಕುತೂಹಲದಿಂದಿದ್ದರು. ಆ ಸಿನಿಮಾದ ತೀವ್ರ ಸ್ಪರ್ಧೆಗೆ ಹೆದರಿ ಟಾಕ್ಸಿಕ್ ಸಿನಿಮಾ ಮುಂದಕ್ಕೆ ಹೋಗಿದೆ ಅನ್ನುವುದು ಸತ್ಯಕ್ಕೆ ದೂರದ ಮಾತು.
03:44 PM (IST) Mar 12
Ninna Jothe Nanna Kathe Serial: ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಭೂಮಿ, ಅಜಿತ್ ರಾಮ್‌ನಾರಾಯಣ್ ಯಾವಾಗ ಒಂದಾಗ್ತಾರೆ ಎನ್ನೋದೇ ದೊಡ್ಡ ಚಿಂತೆಯಾಗಿದೆ. ಇವರಿಬ್ಬರು ಪರಸ್ಪರ ಲವ್ ಹೇಳಿಕೊಂಡರೂ ಕೂಡ, ಪರಸ್ಪರ ನಂಬುತ್ತಿಲ್ಲ. ಈಗ ಅಜಿತ್ ಅಂತೂ ಭೂಮಿಯಿಂದ ದೂರ ಆಗುವ ಯೋಚನೆಯಲ್ಲಿದ್ದಾನೆ.
03:40 PM (IST) Mar 12
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಪೀಠೋಪಕರಣಗಳ ಅಂಗಡಿಯೊಂದಕ್ಕೆ ಬೆಂಕಿ ತಗುಲಿದೆ. ಈ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.
03:25 PM (IST) Mar 12
02:57 PM (IST) Mar 12
ರಿಷಬ್ ಶೆಟ್ಟಿಯವರು ಕೇವಲ ನಟ-ನಿರ್ದೇಶಕರಲ್ಲ. ಅವರಿಗೊಂದು ಘನವಾದ ತೂಕವಿದೆ, ಅವರ ವ್ಯಕ್ತಿತ್ವದಲ್ಲಿ ಅಗಾಧವಾದ, ಅಪರಿಮಿತವಾದ ಜ್ಞಾನವಿದೆ. ಮಾತುಕತೆಯಲ್ಲಿ ಸಾಮಾನ್ಯ ಜ್ಞಾನವನ್ನೂ ಮೀರಿದ ಪ್ರೌಢತ್ವ ಹಾಗೂ ಆಧ್ಯಾತ್ಮಿಕತೆ ಇದೆ. ಅವರ ಸುತ್ತ ಒಂದು ಅದ್ಭುತ ಪ್ರಭಾವಳಿ ಇದೆ. ಇದೆಲ್ಲಾ ಹೇಗೆ? ಈ ಸ್ಟೋರಿ ನೋಡಿ..
02:53 PM (IST) Mar 12
02:16 PM (IST) Mar 12
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿದ್ದ ಚಿನ್ನದ ನಿಧಿಯ ಮೌಲ್ಯ 8 ಕೋಟಿ ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ರಿತ್ತಿ ಕುಟುಂಬ, ಇದೀಗ ಕಾನೂನಿನ ಪ್ರಕಾರ ಹೊಸ ಬೇಡಿಕೆ ಇಟ್ಟಿದ್ದಾರೆ. ಏನದು?
02:05 PM (IST) Mar 12
Surapur bike cruiser collision: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಕ್ರೂಸರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ.
01:56 PM (IST) Mar 12
ಕೊಪ್ಪಳದ ವೆಂಕೊಬಾ ಕಾಕಾ, ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಆಂಧ್ರಪ್ರದೇಶದ ನಂದವಾರಂನಲ್ಲಿ, ನೂರಾರು ಕಿ.ಮೀ. ನಡೆದು ದಣಿದು ಬರುವ ಭಕ್ತರ ಕಾಲುಗಳಿಗೆ ತೈಲ ಮಸಾಜ್ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ.
01:36 PM (IST) Mar 12
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರ ಬಿಸಿ ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿರುವ ಪಿಜಿಗಳಿಗೆ ತಟ್ಟಿದೆ. ಹಲವು ಪಿಜಿ ನಿವಾಸಿಗಳಿಗೆ ಸರಿಯಾಗಿ ಊಟ ಕೊಡಲು ಆಗ್ತಿಲ್ಲ. 'ಇನ್ಮುಂದೆ ರೊಟ್ಟಿ ಇಲ್ಲ' ಅಂತ ಪಿಜಿಯೊಂದು ಬೋರ್ಡ್ ಹಾಕಿರೋದು ವೈರಲ್.
01:28 PM (IST) Mar 12
01:13 PM (IST) Mar 12
ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್‌ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಲಾಗ್ತಿದೆಯಂತೆ. ನಟ ಕಿರಣ್ ರಾಜ್ ಈ ಬಗ್ಗೆ ದನಿ ಎತ್ತಿದ್ದಾರೆ.
12:59 PM (IST) Mar 12
12:37 PM (IST) Mar 12
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಉದ್ಯೋಗಿನಿ' ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 42,041 ಅರ್ಜಿಗಳು ಬಂದರೂ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಬ್ಯಾಂಕ್‌ಗಳ ಅಸಹಕಾರ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿನ ವಿಳಂಬವೇ ಇದಕ್ಕೆ ಕಾರಣವೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದು, ನಿಯಮ ಸರಳೀಕರಣಕ್ಕೆ ಚಿಂತನೆ ನಡೆಸಲಾಗಿದೆ.
12:24 PM (IST) Mar 12
ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಾವು ಚಾಟ್ ಜಿಪಿಟಿ ಬಳಸುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ ಎಂದು ಕೇಳಿದಾಗ, ಚಾಟ್ ಜಿಪಿಟಿ 'ಕರ್ನಾಟಕ ಮಾಡೆಲ್' ಅನುಸರಿಸಲು ಸಲಹೆ ನೀಡಿತು ಎಂದು ತಿಳಿಸಿದರು.
12:20 PM (IST) Mar 12
Khushbu Sundar Weight Loss: ನಟಿ ಖುಷ್ಬು ಸುಂದರ್ ಅವರು ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದಿದ್ದಾರೆ. ಮದುವೆಯಾಗಿ ಮಗು ಆದಬಳಿಕ ಅವರು ದಪ್ಪಗಾಗಿದ್ದರು, ಸಾಕಷ್ಟು ವರ್ಷ ಅವರು ಇದೇ ತೂಕ ಹೊಂದಿದ್ದರು. ಕೊರೊನಾ ಟೈಮ್‌ನಲ್ಲಿ ಅವರು ಸಣ್ಣಗಾದರು. ಹೇಗೆ ಸಣ್ಣಗಾದೆ ಎಂದು ಅವರು ಹೇಳಿಕೊಂಡಿದ್ದಾರೆ.
12:17 PM (IST) Mar 12
ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು 19 ವರ್ಷದ ಗರ್ಭಿಣಿ ನಯನಾ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.
12:15 PM (IST) Mar 12
ಕರ್ನಾಟಕ ಸರ್ಕಾರ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೆಳದರ್ಜೆಗಿಳಿಸಲು ಮುಂದಾಗಿದೆ. ಹೆರಿಗೆ ಸಂಖ್ಯೆ ಆಧರಿಸಿ ತಜ್ಞ ವೈದ್ಯರನ್ನು ವರ್ಗಾಯಿಸುವ ಈ ನಿರ್ಧಾರದಿಂದ ಗ್ರಾಮೀಣ ಆರೋಗ್ಯ ಸೇವೆಗೆ ಕುತ್ತು ಬಂದಿದೆಯೇ?