Karnataka News LIve: ಬೆಂಗಳೂರಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ ಇರಲ್ಲ ಕರೆಂಟ್‌?

ಕೆಆರ್‌ಎಸ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಾಗೀನಾ ಅರ್ಪಿಸಿದ್ದಾರೆ. ಆಷಾಢದಲ್ಲಿ ಕಾವೇರಿ ಜಲಾನಯನದ 4 ಡ್ಯಾಂ‌ಗಳು ತುಂಬಿರುವುದು ಸಂತಸದ ವಿಷಯ. ಕಾವೇರಿ ಹಳೇ ಮೈಸೂರು ಭಾಗದ ಜೀವನದಿ.
ಪವಿತ್ರವಾದ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ‌ ಕರ್ತವ್ಯ.ಮೈಸೂರು ಮಹಾರಾಜರು ಡ್ಯಾಂ‌ ಕಟ್ಟಲು ಮಾಡಿದ ತ್ಯಾಗ ಮರೆಯಲು ಸಾಧ್ಯವಿಲ್ಲ. 2008ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್ ಗೇಟ್‌ ರಂಧ್ರಗಳಾಗಿ ನೀರು ಸೋರುತ್ತಿತ್ತು. ಆ ಪರಿಸ್ಥಿತಿಯಲ್ಲಿ 300 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಪ್ರತಿ ಹನಿಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಿದೆವು. ಆ ಸಂಧರ್ಭದಲ್ಲಿ ಗೇಟ್ ರಿಪೇರ್ ಮಾಡದಂತೆ ಒತ್ತಡಗಳು ಬಂದವು. ಅವತ್ತು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಮಾರನೇ ದಿನ ಬೆಳಿಗ್ಗೆ ಅಧಿಕಾರಿಗಳನ್ನ‌ ಕರೆದು ಗೇಟ್ ಬದಲಿಸಲು ಹೇಳಿದೆ. ಮೊದಲು 16 ಗೇಟ್‌ಗಳನ್ನ ರಿಪ್ಲೇಸ್ ಮಾಡಲಾಗಿದೆ. ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ.
ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಮುಗಿಯಬೇಕು. ಗೇಟ್ ಕಾಮಗಾರಿಗೆ 160ಕೋಟಿ ನೀಡಲಾಗಿದೆ.ಎಲ್ಲಾ ಗೇಟ್ ಬದಲಿಸಿದ ಬಳಿಕ KRSನಲ್ಲಿ ದೊಡ್ಡ ಹಬ್ಬ ಮಾಡೋಣವೆಂದು ಕರೆ ನೀಡಿದ್ದಾರೆ ಸಿಎಂ. 

5:03 PM

ಸಿಲಿಕಾನ್ ಸಿಟಿಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಎನ್ ಜಿಇಎಫ್ ಸ್ಟೇಷನ್ ಹಾಗೂ ಹೆಚ್ ಬಿಆರ್ ಲೇಔಟ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆ, ಅರ್ಧ ಬೆಂಗಳೂರಿಗೆ ನಾಳೆ ವಿದ್ಯುತ್ ಇರೋದಿಲ್ಲ. ಜೋಗುಪಾಳ್ಯ, ಹಲಸೂರು, ಹಳೇ ಮದ್ರಾಸ್ ರೋಡ್ ಸುತ್ತ ಮುತ್ತಲಿನ ಪ್ರದೇಶ, ಕಗ್ಗದಾಸಪುರ ಆಕಾಶ ಪುರ, ವರ್ತೂರು ರಸ್ತೆ, ನಾಗಾವಾರ ಪಾಳ್ಯ, ಕೊಂಡಪ್ಪರೆಡ್ಡಿ ಲೇಔಟ್, ಏರ್ಪೋರ್ಟ್ ಕ್ವಾರ್ಟಸ್  ಸುತ್ತಮುತ್ತಲಿನ ಪ್ರದೇಶ, HBR ಲೇಔಟ್, ಕೆಜಿಹಳ್ಳಿ, ಯಾಸಿನ್ ನಗರ, ನಾಗವಾರ ಸುತ್ತಮುತ್ತ, ಹೆಚ್ ಆರ್ ಬಿಆರ್ ಲೇಔಟ್ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ನೂರಾರು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

4:37 PM

ಎಸಿಬಿ ಬಲೆಗೆ ಗ್ರಾಮ ಲೆಕ್ಕಾಧಿಕಾರಿ

ಕೊಪ್ಪಳ: ಜಮೀನಿನ ಪಹಣಿ ಪತ್ರ ತಿದ್ದುಪಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕಿನ ಕವಲೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕರಿಯಪ್ಪ ಎಂ. ಹುಬ್ಬಳ್ಳಿ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕವಲೂರು ಗ್ರಾಮದ ಶಿವಪ್ಪ ಬೇವೂರು ತಮ್ಮ ತಂದೆಯ ಹೆಸರಿನಲ್ಲಿದ್ದ ಪಹಣಿ ಪತ್ರ ತಿದ್ದುಪಡಿ ಮಾಡಿಕೊಡುವಂತೆ ಕೊಪ್ಪಳ ತಹಸೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು 5,000 ರೂ.ಕೊಡಬೇಕು ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರಿಯಪ್ಪ ಮುಂಗಡವಾಗಿ 1,000 ರೂ.ಪಡೆದುಕೊಂಡಿದ್ದರು. ಬಾಕಿ ಉಳಿದ 4,000 ರೂ. ನೀಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಶಿವಪ್ಪ ಜು. 19ರಂದು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಅಧಿಕಾರಿಗಳು ಬುಧವಾರ ನಗರದ ಸಿಂಪಿ ಲಿಂಗಣ್ಣ ರಸ್ತೆಯ ಟ್ರಿನಿಟಿ ಶಾಲೆಯ ಹತ್ತಿರದ ಎದುರು ಇರುವ ಕೊಠಡಿಯೊಂದರಲ್ಲಿ ಕರಿಯಪ್ಪ ಲಂಚ ಪಡೆಯುವಾಗ ದಾಳಿ ನಡೆಸಿದ್ದಾರೆ. ಬಳ್ಳಾರಿಯ ಎಸಿಬಿ ಎಸ್ಪಿ ಹರಿಬಾಬು ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೊಪ್ಪಳ ಎಸಿಬಿ ಠಾಣೆಯ ಡಿಎಸ್‌ಪಿ ಶಿವಕುಮಾರ್‌ ಎಂ.ಸಿ., ಇನ್‌ಸ್ಟೆಕ್ಟರ್‌ ಶಿವರಾಜ ಇಂಗಳೆ, ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ, ಜಗದೀಶ, ಉಮೇಶ ಹಾಗೂ ಸವಿತಾ ಪಾಲ್ಗೊಂಡಿದ್ದರು.

2:44 PM

ಕಂಬಳದ ಉಸೇನ್‌ ಬೋಲ್ಟ್‌ ವಿರುದ್ಧ ದೂರು: ಮಾಡಿದ ದಾಖಲೆ ಸುಳ್ಳು ಎಂಬ ಆರೋಪ

ಕಂಬಳದ ಉಸೇನ್ ಬೋಲ್ಟ್ ವಿರುಧ್ಧ ಪೊಲೀಸ್ ಠಾಣೆಗೆ ದೂರು ವಿಚಾರ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ. ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬವರು ಮೂಡಬಿದ್ರೆ ಠಾಣೆಗೆ ದೂರು ನೀಡಿದ್ದಾರೆ. ಕಂಬಳ ಸಮಿತಿ ಹೆಸರಿನಲ್ಲಿ ಮೂವರು ವಂಚನೆ ಎಸಗಿದ್ದಾಗಿ ದೂರಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ‌ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಸಮಿತಿ ಹೆಸರಲ್ಲಿ ಹಣ ಪಡೆದು ಲಕ್ಷಾಂತರ ರೂ. ಹಣಕ್ಕೆ ಲೆಕ್ಕಪತ್ರ ಕೊಟ್ಟಿಲ್ಲ ಅಂತ ದೂರು. ಸದ್ಯ ಮೂವರ ವಿರುದ್ದ ಈ ದೂರನ್ನು ಕೊಡಲಾಗಿದೆ. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ‌ನಡೆಸಲು ಸೂಚಿಸಿದ್ದೇನೆ. ಮೂಡಬಿದ್ರೆ ಇನ್ಸ್ಪೆಕ್ಟರ್ ಈ ಬಗ್ಗೆ ವಿಚಾರಣೆ ನಡೆಸಿ ಸತ್ಯಾಸತ್ಯತೆ ‌ತನಿಖೆ ಮಾಡ್ತಾರೆ.

2:42 PM

ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿ ಪ್ರವಾಹ ಭೀತಿ

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನಲೆ, ಮಳೆಯಿಂದ ಮಹಾರಾಷ್ಟ್ರದ ಬಹುತೇಕ ಡ್ಯಾಮ್ ಗಳು ಬರ್ತಿಯಾಗಿವೆ. ಮಹಾರಾಷ್ಟ್ರದ ವೀರ್ ಡ್ಯಾಮ್ ನಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ವೀರಾ ಡ್ಯಾಮ್ ನಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಅಫಜಲಪೂರ ತಾಲೂಕಿನ ಸೊನ್ನ  ಬ್ಯಾರೇಜ್ ನಲ್ಲಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಸೊನ್ನ ಬ್ಯಾರೇಜ್ ಭರ್ತಿ.. ಒಂಬತ್ತು ಸಾವಿರ ಕ್ಯೂಸೆಕ್ಸ ನೀರು ಒಳಹರಿವು ಬರುತ್ತಿದ್ದು, ಬ್ಯಾರೇಜ್ ಭರ್ತಿ ಹಿನ್ನಲೆ ಒಳಹರಿವಿನ 9 ಸಾವಿರ ಕ್ಯೂಸೆಕ್ಸ ನೀರು ಹೊರಬಿಡಲಾಗಿದೆ. ಸೊನ್ನ ಬ್ಯಾರೇಜ್ ನಿಂದ 9000 ಕ್ಯೂಸೆಕ್ ನೀರು ನದಿಗೆ ಬಿಡುಗಡೆಯಾಗಿದೆ. ಸದ್ಯಕ್ಕೆ ನದಿ ತೀರದಲ್ಲಿ ಪ್ರವಾಹ ಭೀತಿಯಿಲ್ಲ. ಅದಾಗ್ಯೂ ಎಚ್ಚರದಿಂದ ಇರುವಂತೆ ಅಧಿಕಾರಿಗಳ ಸಲಹೆ ನೀಡಿದ್ದಾರೆ.

1:10 PM

ಬದುಕಿದ್ದಾಗಲೇ ಉತ್ಸವ ಮಾಡಿಕೊಳ್ಳೋರನ್ನ ಎಲ್ಲಾದ್ರೂ ನೋಡಿದ್ದೀರಾ?; ಬಿಸಿ ಪಾಟಿಲ್‌ ಕುಟುಕು

ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಪೈಪೋಟಿ ವಿಚಾರದ ಬಗ್ಗೆ ಹಿರೇಕೇರೂರು ತಾಲೂಕು ಕೋಡ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ವ್ಯಂಗ್ಯಮಾಡಿದ್ದಾರೆ. ಯಾರೇ ಆಗಲಿ ಅವರು ಬದುಕಿದ್ದಾಗ ಉತ್ಸವ ಮಾಡಿಕೊಳ್ಳಲ್ಲ. ಉತ್ಸವ ಅಂದರೆ ಏನು? ನಾವು ದೇವಸ್ಥಾನಗಳಲ್ಲಿ ದೇವರ ಉತ್ಸವ ಮಾಡ್ತೀವಿ. ಮನುಷ್ಯ ದೇವರು ಆಗೋಕೆ ಆಗೊಲ್ಲ. ಅದು ಇಂಥ ಸಂದರ್ಭದಲ್ಲಿ ಸಿದ್ದರಾಮೋತ್ಸವ ಮಾಡಿಕೊಳ್ತಿದ್ದಾರೆ. ರಾಜ್ಯಾದ್ಯಂತ ಮಳೆ ಬಂದು ನೆರೆ ಹಾನಿಯಾಗಿದೆ. ಸರ್ಕಾರವನ್ನು ಕಟು ಟೀಕೆ ಮಾಡುವ ಸಮಾಜವಾದಿ ಸಿದ್ದರಾಮಯ್ಯ ಇಂಥ ಸಂದರ್ಭದಲ್ಲಿ ಉತ್ಸ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಅಂರ ಅವರ ಆತ್ಮಕ್ಕೆ ಅವರೇ ಪ್ರಶ್ನೆ ಹಾಕಿಕೊಳ್ಳಲಿ. ಆದರೆ ಕೂಸು ಹುಟ್ಟೋ ಮೊದಲೇ ಕುಲಾವಿ ಹೊಲಿಸಿದ್ರು ಅನ್ನೋ ಹಾಗೆ  ಇನ್ನೂ ಎಲೆಕ್ಷನ್ 10 ತಿಂಗಳಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋ ತರ  ಅಧಿಕಾರಕ್ಕೆ ಕಿತ್ತಾಡ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್  ಈಗಲೇ ಅಧಿಕಾರಕ್ಕೆ ಕಿತ್ತಾಡ್ತಿದ್ದಾರೆ. ಮುಖ್ಯಮಂತ್ರಿ ಆಗ್ತೀವಿ ಅಂತ ಈಗಲೇ ಕಿತ್ತಾಡ್ತಿದ್ದಾರೆ. ಇದು ಮೂರ್ಖತನದ ಪರಮಾವಧಿ. ಯಾಕಂದ್ರೆ ಜನ ತೀರ್ಮಾನ ಮಾಡಬೇಕು. ಬಿಜೆಪಿ 150 ಸೀಟ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. 150 ಸೀಟ್ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಇವರು  ಮುಖ್ಯಮಂತ್ರಿ ಆಗ್ತೀನಿ ಅಂತ ಈಗಲೇ  ಗುದ್ದಾಡೋದು ಕಾಂಗ್ರೆಸ್ ಅವನತಿಗೆ ಮುನ್ನುಡಿ ಬರೆದ ಹಾಗೆ ಆಗುತ್ತೆ. ಕಾಂಗ್ರೆಸ್ ಪಕ್ಷಕ್ಕೆ ಅದು ಒಂದು ದೊಡ್ಡ ಕಂದಕ‌ ಆಗಲಿದೆ. ಇವರು ಸಿದ್ದರಾಮೋತ್ಸವ ಮಾಡಿಕೊಳ್ಳೋದು, ಅವರು ಶಿವಕುಮಾರೋತ್ಸವ ಮಾಡಿಕೊಳ್ಳೋದು  ಕಾಂಗ್ರೆಸ್ ಅವನತಿಗೆ ಮುನ್ನುಡಿ ಬರೆದ ಹಾಗೆ ಎಂದು ಕೃಷಿ ಸಚಿವ ಬಿಸಿ ಪಾಟಿಲ್‌ ಪ್ರತಿಕ್ರಿಯಿಸಿದ್ದಾರೆ.

1:08 PM

ಕಬಿನಿ - ಕೆಆರ್‌ಎಸ್‌ಗೆ ಸಿಎಂ ಬಾಗಿನ ಅರ್ಪಣೆ

KRS ಜಲಾಶಯಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಕಾವೇರಿ ಮಾತೆಗೆ ಬಾಗಿನ ಅರ್ಪಿಸಲು ಆಗಮಿಸಿದ ಸಿಎಂಗೆ ಮಂಗಳವಾದ್ಯಗಳೊಂದಿಗೆ ಬರಮಾಡಿಕೊಂಡ ಅಧಿಕಾರಿಗಳು. ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಬಾಗಿನ ಬಿಡಲಿರುವ ಸಿಎ‌ ಬಸವರಾಜ ಬೊಮ್ಮಾಯಿ. KRS ಡ್ಯಾಂ ಮೇಲ್ಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ನಿಂತು ಬಾಗಿನ ಬಿಡಲಿರುವ ಸಿಎಂ. ಜಲಾಶಯದ ಕಾವೇರಿ ಪ್ರತಿಮೆ ಮೇಲ್ಭಾಗದಲ್ಲಿ ವೇದಿಕೆ ನಿರ್ಮಾಣ. ಬಾಗಿನ ಅರ್ಪಿಸಿದ ಬಳಿಕ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಿರುವ ಸಿಎಂ ಬೊಮ್ಮಾಯಿ.
ಸಚಿವರಾದ ಗೋವಿಂದ ಕಾರಜೋಳ, ಎಸ್‌ಟಿ ಸೋಮಶೇಖರ್, ಗೋಪಾಲಯ್ಯ, ಕೆಸಿ ನಾರಾಯಣಗೌಡ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಭಾಗಿ.

12:30 PM

ಸಿದ್ದರಾಮೋತ್ಸವ ಸಮಾವೇಶ ಕುರಿತು ಪೂರ್ವಭಾವಿ ಸಭೆ

ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್, ಎಂ. ಎಲ್ ಸಿ ಡಾ. ಡಿ ತಿಮ್ಮಯ್ಯ ಭಾಗಿಯಾಗಿದ್ದಾರೆ. ಮಾಜಿ ಶಾಸಕ ಸೋಮಶೇಖರ್, ವಾಸು, ವೆಂಕಟೇಶ್, ಕಳಲೆ ಕೇಶವ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸಿದ್ದರಾಮೋತ್ಸವ ಆಚರಣೆ ಕುರಿತು ಅಭಿಪ್ರಾಯ ನೀಡುತ್ತಿರುವ ಕಾಂಗ್ರೆಸ್ ನಾಯಕರುಗಳು.

12:29 PM

ಬೆಂಗಳೂರು ನಗರ ನೂತನ ಡಿಸಿ ಅಧಿಕಾರ ಸ್ವೀಕಾರ

ಭ್ರಷ್ಟಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜೆ ಮಂಜುನಾಥ್ ಅವರಿಂದ ತೆರವಾಗಿದ್ದ ಜಾಗಕ್ಕೆ ಶ್ರೀನಿವಾಸ್‌ ಕೆ ಅವರನ್ನು ಸರ್ಕಾರ ನೇಮಿಸಿದೆ. ಇದುವರೆಗೂ ಪ್ರಭಾರ ಡಿಸಿಯಾಗಿದ್ದ ಸಂಗಪ್ಪ. ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ ಅಧಿಕಾರ ಸ್ವೀಕಾರ. ಅಧಿಕಾರ ಸ್ವೀಕರಿಸಿದ ದಿನವೇ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನೂತನ ಡಿಸಿ ಶ್ರೀನಿವಾಸ್ ಕೆ. 

12:21 PM

ಉಕ್ಕಿ ಹರಿಯುತ್ತಿರುವ ಭೀಮಾನದಿ

ಭೀಮಾನದಿ ತೀರದ ದೇವಾಲಯಗಳಿಗೆ ಜಲದಿಗ್ಭಂದನ ಏರ್ಪಟ್ಟಿದ್ದು, ಭೀಮಾ ಉಕ್ಕಿ ಹರಿಯುತ್ತಿದೆ. ಭೀಮಾನದಿ ತೀರದ ಕಂಗಳೇಶ್ವರ, ವೀರಾಂಜನೇಯ ಸಂಪೂರ್ಣ ಜಲಾವೃತವಾಗಿದೆ. ಮಹಾರಾಷ್ಟ್ರದ ಮಳೆಗೆ ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು ಹೆಚ್ಚಾಗಿದೆ. ಕಳೆದ ಒಂದು ಗಂಟೆಯಿಂದ ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು ಹೆಚ್ಚಿದ್ದು, ಭೀಮಾನದಿ ತೀರದ ಜನರಿಗೆ ಆತಂಕ ಸೃಷ್ಟಿಯಾಗಿದೆ. ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, 8 ಗೇಟ್ ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮತ್ತೆ ಭೀಮಾ ನದಿಗೆ ಹೆಚ್ಚು ನೀರು ಬಿಡುಗಡೆ ಸಾಧ್ಯತೆಯಿದೆ. 

12:10 PM

ಮೇಕೆದಾಟು ಅಣೆಕಟ್ಟು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕುರಿತ ಅರ್ಜಿ ವಿಚಾರಣೆಯನ್ನು ಜುಲೈ 26ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಬೆಂಗಳೂರು ಮತ್ತು ಸುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಲುವಾಗಿ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಕರ್ನಾಟಕ ಯತ್ನಿಸುತ್ತಿದೆ. ಆದರೆ ತಮಿಳುನಾಡು ಸರ್ಕಾರ ಇದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದೆ. ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದ ತಮಿಳುನಾಡು ಸರ್ಕಾರ. ಕಳೆದ ಬಜೆಟ್‌ನಲ್ಲಿ ಸ್ವಲ್ಪ ಹಣವನ್ನು ಮೀಸಲಿಟ್ಟು ಯೋಜನೆಯನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಬಜೆಟ್‌ನಲ್ಲಿ ಮಂಡನೆಯಾಗುತ್ತಿದ್ದಂತೆ ತಮಿಳುನಾಡು ತಕರಾರು ತೆಗೆದಿದೆ. ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಬೃಹತ್‌ ಯಾತ್ರೆಯನ್ನು ಕಾಂಗ್ರೆಸ್‌ ಮಾಡಿತ್ತು. ಅದರ ಬೆನ್ನಲ್ಲೇ ಸರ್ಕಾರ ಯೋಜನೆಯನ್ನು ಘೋಷಿಸಿತ್ತು. 

11:42 AM

ಪತ್ನಿ ಚನ್ನಮ್ಮ ಜೊತೆ ಚಾಮುಂಡೇಶ್ವರಿ ದರ್ಶನ ಮಾಡಿದ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಇಂದು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅರ್ಚನೆಯನ್ನು ಮಾಡಿಸಿದರು. ಸಚಿವರಾದ ಗೋವಿಂದ ಕಾರಜೋಳ್ , ಎಸ್ ಟಿ ಸೋಮಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.

11:25 AM

ಅದ್ದೂರಿ ದಸರಾ ಆಚರಣೆಗೆ ನಿರ್ಧಾರ: ಬೊಮ್ಮಾಯಿ ಮಾಹಿತಿ

ಈ ಬಾರಿ ಅದ್ದೂರಿ ದಸರಾ ನಡೆಸಲು ಸರ್ಕಾರ ನಿರ್ಧರಿಸಿದೆ. ಕೋವಿಡ್‌ ಮಾರಣಾಂತಿಕ ಕಾಯಿಲೆ ಬಂದ ನಂತರ ದಸರಾ ತನ್ನ ವಿಜ್ರಂಭಣೆಯನ್ನು ಕಳೆದುಕೊಂಡಿತ್ತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನೆನ್ನೆಯಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ದೇವೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಅದ್ದೂರಿ ದಸರಾ ನಡೆಸಲಾಗಲಿಲ್ಲ. ಸಂಪ್ರದಾಯಿಕವಾಗಿ ದಸರಾ ಮಾಡಲಾಗುತ್ತಿದೆ. ಗಜಪಯಣ ಸೇರಿ ಎಲ್ಲಾ ಕಾರ್ಯಕ್ರಮನ್ನ ಅದ್ದೂರಿಯಾಗಿ ನಡೆಸುತ್ತೇವೆ. ಈ ಬಾರಿ ಹೊಸ ಆಕರ್ಷಣೆಗಳನ್ನ ಮಾಡಲು ಪ್ರಯತ್ನ ಮಾಡುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡುತ್ತೇವೆ. ಮುಂದಿನ ಒಂದು ವಾರದಲ್ಲಿ ಮೈಸೂರು ಟೂರಿಸಮ್ ಸೆರ್ಕ್ಯುಟ್ ಘೋಷಣೆ ಮಾಡುತ್ತೇವೆ. ಈ ಬಾರಿಯ ದಸರಾಗೆ ಹೊಸ ಆಯಾಮ ಸಿಗಲಿದೆ. ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾಗಿದೆ. ಮುಂದೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ವ್ಯಕ್ತಿ ಆಯ್ಕೆ ಮಾಡುತ್ತೇವೆ. ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ

11:15 AM

ಮಂಕಿಪಾಕ್ಸ್‌ ಚಿಕಿತ್ಸೆಗೆ ಬಿಬಿಎಂಪಿ ಮುನ್ನೆಚ್ಚರಿಕೆ: ಆಯುಕ್ತ ತುಷಾರ್‌ ಗಿರಿನಾಥ್‌

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಂಕಿಪಾಕ್ಸ್‌ ರೋಗದ ಕುರಿತಂತೆ ಬಿಬಿಎಂಪಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಮಂಕಿ ಫಾಕ್ಸ್ ಬಗ್ಗೆ ನಮ್ಮ ಆರೋಗ್ಯ ಇಲಾಖೆಯಿಂದ ಸಂಪೂರ್ಣ ತಯಾರಿ ನಡೆದಿದೆ. ಪ್ರತಿವಾರ ಬುಧವಾರ ನಾವು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತೇವೆ. ನಮ್ಮಲ್ಲಿ ಸೋಂಕು ಕಾಣಿಸಿಕೊಂಡ್ರೆ ಹೇಗೆ ಅದನ್ನು ನಿಭಾಯಿಸಬೇಕು ಅಂತ ಸಿದ್ಧತೆ ನಡೆಸಿದ್ದೇವೆ. ಮಂಕಿ ಫಾಕ್ಸ್ ಸಂಬಂಧಿಸಿದಂತೆ ಲಕ್ಷಣಗಳು ಕಾಣಿಸಿಕೊಂಡ್ರೆ ಅವರನ್ನು ಐಸೋಲೇಷನ್ ಮಾಡಲಾಗುತ್ತೆ. ಜೊತೆಗೆ ಚಿಕಿತ್ಸೆಗೂ ಸಿದ್ಧತೆ ನಡೆಸಲಾಗಿದೆ. ಸಧ್ಯ ವರದಿ ಪ್ರಕಾರ ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಹೆಚ್ಚಾಗಿ ಕಂಡು ಬರ್ತಾ ಇದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಮಂಕಿ ಪಾಕ್ಸ್‌ ಪ್ರಕರಣ ದಾಖಲಾಗಿಲ್ಲ. ಆದರೆ ಪಕ್ಕದ ಕೇರಳದಲ್ಲಿ ಎರಡು ಪ್ರಕರಣಗಳು ಧೃಡಪಟ್ಟಿದ್ದು, ಮುನ್ನೆಚ್ಚರಿಕೆಯ ಅಗತ್ಯವಿದೆ.

11:13 AM

ಸ್ಥಳೀಯ ಸಂಸ್ಥೆ ಕ್ಷೇತ್ರ ಪುನರ್ವಿಂಗಡಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ: ಮುಖ್ಯಮಂತ್ರಿ ಬೊಮ್ಮಾಯಿ

ಇದೇ ಜುಲೈ 22ರಂದು ಸುಪ್ರೀಂ ಕೋರ್ಟ್ ಗೆ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಪ್ರಮಾಣ ಪತ್ರ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ  ಚುನಾವಣೆ ನಡೆಸಲು ಸೂಕ್ತ ಕ್ರಮ‌ ಕೈಗೊಳ್ಳುತ್ತೇವೆ. ಮೈಸೂರು ಮೇಯರ್ ಆಯ್ಕೆ ಚುನಾವಣೆ ಕುರಿತು ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಮರುವಿಂಗಡಣೆ ಬಗ್ಗೆ ಪರ ಮತ್ತು ವಿರೋಧ ವಾದಗಳು ವ್ಯಕ್ತವಾಗಿವೆ. ಜತೆಗೆ ಮೈಸೂರು ಪಾಲಿಕೆ ಮೇಯರ್‌ ಸ್ಥಾನಕ್ಕೂ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. 

11:07 AM

ಜಿಎಸ್‌ಟಿ ರಾಜ್ಯದ ಪಾಲು ಅವಧಿ ವಿಸ್ತರಣೆಗೆ ಕೇಂದ್ರ ನಿರಾಕರಣೆ: ಬೊಮ್ಮಾಯಿ ಸ್ಪಷ್ಟನೆ

ಜಿ.ಎಸ್.ಟಿ. ರಾಜ್ಯದ ಪಾಲು ಅವಧಿ ವಿಸ್ತರಣೆಗೆ ಕೇಂದ್ರ‌ ನಿರಾಕರಿಸಿದೆ. ಜಿ.ಎಸ್.ಟಿ. ಕಾ‌ನೂನು ರೂಪಿಸುವಾಗಲೇ ಆರಂಭದ 5 ವರ್ಷ ಮಾತ್ರ ರಾಜ್ಯಗಳಿಗೆ ಪಾಲು ಎಂದಿದೆ. ಈಗ ಕೊರೋನಾದಿಂದಾಗಿ ಎರಡು ವರ್ಷ ರಾಜ್ಯಗಳ ಅದಾಯ ಇಳಿಮುಖವಾಗಿದೆ. ಈ ಕಾರಣಕ್ಕೆ 5 ವರ್ಷದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯಗಳು ಕೋರಿಕೊಂಡಿದ್ದವು. ಜಿ.ಎಸ್.ಟಿ ಸಂವಿಧಾನಾತ್ಮಕವಾಗಿ‌ ರೂಪಿಸಿರುವ ಕಾನೂನಾಗಿದ್ದು, ಅದನ್ನು ತಕ್ಷಣಕ್ಕೆ ಬದಲಿಸಲಾಗದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರ ಬದಲು ಈ ಅವಧಿಯಲ್ಲಿ ರಾಜ್ಯಗಳಿಗೆ ಬಾಕಿ‌ ಉಳಿಸಿರುವ ಜಿ.ಎಸ್.ಟಿ ಪಾಲನ್ನು ಕೇಂದ್ರ ಪಾವತಿಸುತ್ತಿದೆ. ಈಗಾಗಲೇ ಸ್ವಲ್ಪ ನೀಡಿದೆ. ಬಾಕಿ ಮೊತ್ತ ಶೀಘ್ರ ಪಾವತಿಸಲಿದೆ. ಮೈಸೂರಿನಲ್ಲಿ ಸಿಎಂ ಬವಸರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

10:18 AM

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಶಾಕ್ ನೀಡಿದ ಬಿಬಿಎಂಪಿ

ಇನ್ಮುಂದೆ ರಾಜಧಾನಿಯ ಮುಖ್ಯ ರಸ್ತೆಗಳ ಫುಟ್ ಫಾತ್ ನಲ್ಲಿ ಬೀದಿ ವ್ಯಾಪಾರಕ್ಕೆ ಬ್ರೇಕ್. ಮುಖ್ಯ ರಸ್ತೆ ಮತ್ತು ಆರ್ಟಿರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಮುಂದಾದ ಪಾಲಿಕೆ. ಪ್ರಮುಖ ರಸ್ತೆಗಳ ಫುಟ್ ಪಾತ್ ಮೇಲೆ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡ್ತಿರೋದ್ರಿಂದ ಜನರಿಗೆ ಸಮಸ್ಯೆ. ಇದರಿಂದ ಜನರು ರಸ್ತೆ ಮೇಲೆ ವಾಕಿಂಗ್ ಮಾಡ್ತಿದ್ದು, ಅಪಘಾತಗಳು ಸಂಭವಿಸುತ್ತಿದೆ. ಅಪಘಾತಗಳನ್ನು ತಪ್ಪಿಸಲು ಮುಖ್ಯ ರಸ್ತೆಗಳ ಬದಿಗಳಲ್ಲಿ ವ್ಯಾಪಾರಕ್ಕೆ ಪಾಲಿಕೆಯಿಂದ ಕೊಕ್. ನಗರ ಪೊಲೀಸ್ ಇಲಾಖೆಯ ಜೊತೆ ನಡೆದ ಸಭೆಯಲ್ಲಿ ಬಿಬಿಎಂಪಿಯಿಂದ ಈ ನಿರ್ಧಾರ. ಟ್ರಾಫಿಕ್ ಪೊಲೀಸರ ಸಲಹೆ, ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವ ಬಿಬಿಎಂಪಿ.

9:56 AM

ಸಿಡಿಲು ಬಡಿದ ತಂಬಿಗೆ: ವಂಚಿಸಿದ ಐವರು ಬಂಧನ

ರಾಣಿಬೆನ್ನೂರು: ಸಿಡಿಲು ಬಡಿದ (ರೈಸ್ ಪುಲ್ಲಿಂಗ್) ತಂಬಿಗೆ ಇದೆ ಎಂದು ಹೇಳಿ ದೇವಸ್ಥಾನಕ್ಕೆ ಬರುವ ಜನರಿಗೆ ವಂಚನೆ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಹಲಗೇರಿ ಠಾಣೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಓಬಳಾಪುರದ ಪುಟ್ಟರಂಗ ರಂಗಪ್ಪ (75), ಚಿತ್ರದುರ್ಗ ಜಿಲ್ಲೆ ಚಳ್ಳಕೇರಿ ತಾಲೂಕಿನ ಕೋಡಿಹಳ್ಳಿಯ ನಾಗರಾಜ ಮಲ್ಲೇಶಪ್ಪ (42), ಬಳ್ಳಾರಿ ಜಿಲ್ಲೆ ಸೊಂಡೂರ ತಾಲೂಕಿನ ಬೊಮ್ಮಗಟ್ಟ ಗ್ರಾಮದ ಲಕ್ಷ್ಮಣ ಲಕ್ಷ್ಮೀಪತಿ ಹುಲೆಪ್ಪ (50), ನಾಗರಾಜ ಭೀಮಪ್ಪ ಮೈಲಗಂಬರಿ (32). ಕುಮಾರಸ್ವಾಮಿ ಭೀಮಪ್ಪ (58) ಬಂಧಿತ ಆರೋಪಿಗಳು. ಇವರು ತಾಲೂಕಿನ ಕಮದೋಡ ಬಳಿಯ ಲಕ್ಕಿಕಟ್ಟೆ ಚೌಡಮ್ಮನ ದೇವಸ್ಥಾನಕ್ಕೆ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ‘ನಮ್ಮ ಬಳಿ ಸಿಡಿಲು ಬಡಿದ ತಂಬಿಗೆ ಇದೆ. ಅದಕ್ಕೆ ಸಿಡಲು ಬಡಿದಾಗ ವಿಶೇಷವಾದ ಶಕ್ತಿ ಬಂದಿದೆ. ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ, ನಿಮ್ಮ  ವ್ಯಾಪಾರ ಹಾಗೂ ವ್ಯವಹಾರ ಚೆನ್ನಾಗಿ ನಡೆಯುತ್ತದೆ. ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಲಕ್ಷ್ಮೀ ದೇವಿ ಬಂದು ನಿಮ್ಮ ಮನೆಯಲ್ಲಿ ಕುಳಿತುಕೊಳ್ಳುತ್ತಾಳೆ. ಒಂದು ತಂಬಿಗೆಯ ಬೆಲೆ 25 ಸಾವಿರ ರೂ.ದಿಂದ 50 ಸಾವಿರ ರೂ.ವರೆಗೆ ಆಗುತ್ತದೆ’ ಎಂದು ಹೇಳಿ ಜನರಿಗೆ ಮೋಸ ಮಾಡಲು ಯತ್ನಿಸುತ್ತಿದ್ದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:52 AM

ವೆಹಿಕಲ್ ಟ್ರಾನ್ಸ್‌ಪೋರ್ಟ್: ವಂಚನೆ ಮಾಡುತ್ತಿದ್ದವರ ಬಂಧನ

ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರಿಂದ ಬಂಧನ. ಪರನ್ ಸಿಂಗ್ ಚೌಹಾಣ್,  ನರೇಂದ್ರ,  ಧರ್ಮೇಂದರ್, ಧರ್ಮವೀರ್ , ಬಂಧಿತರು. ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡ್ತಿದ್ದ ಆರೋಪಿಗಳು. ಟ್ರಾನ್ಸ್ ಪೋರ್ಟ್ ಮಾಡುವುದಾಗಿ ಜಾಹೀರಾತು ಹಾಕಿಕೊಳ್ತಿದ್ರು. ವಾಹನ ಗಳನ್ನು ತೆಗೆದುಕೊಂಡು ಡಿಲವರಿ ಕೊಡದೇ ವಂಚನೆ ಮಾಡುತ್ತಿದ್ದ ಆರೋಪಿಗಳು. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

9:38 AM

ಚಾರ್ಮಾಡಿ ಘಾಟ್ ತಿರುವಿನಲ್ಲಿ ಸಿಕ್ಕಿಹಾಕಿಕೊಂಡ ಟ್ಯಾಂಕರ್, ಫುಲ್ ಟ್ರಾಫಿಕ್ ಜಾಮ್

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ತಿರುವಿನಲ್ಲಿ ಸಿಕ್ಕಿಹಾಕಿಕೊಂಡ ಟ್ಯಾಂಕರ್. ರಾತ್ರಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತ. ಘಾಟ್ ಬ್ಲಾಕ್ ಆದ ಹಿನ್ನೆಲೆ ಕೊಟ್ಟಿಗೆಹಾರದಲ್ಲಿ ಸಾಲುಗಟ್ಟಿ ನಿಂತ ವಾಹನಗಳು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಘಟನೆ. ವಾಹನ ಸವಾರರು, ಪ್ರಯಾಣಿಕರ ಪರದಾಟ. ಬೆಳಗ್ಗೆ 7 ಗಂಟೆ ವೇಳೆಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸರು. 

9:29 AM

ಕರ್ನಾಟಕದಲ್ಲಿ ಸತತ 2ನೇ ದಿನವೂ 1000+ ಕೋವಿಡ್ ಕೇಸ್‌

ಕರ್ನಾಟಕದಲ್ಲಿ ಮಂಗಳವಾರ 1,151 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1214 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,617 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 25 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.5 ರಷ್ಟು ದಾಖಲಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:26 AM

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ: ಎಚ್ಡಿಕೆಗೆ ಡಿಕೆಶಿ ಡಿಚ್ಚಿ

ಹೆಚ್.ಡಿ.ಕುಮಾರಸ್ವಾಮಿ ಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್. ರಾಮನಗರದಲ್ಲೇ ನಿಂತು ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್. ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮವಿತ್ತು. ರಾಮನಗರ ಕಾಂಗ್ರೆಸ್ ವತಿಯಿಂದ ನಗರದ ಶ್ರೀರಾಮ ಥಿಯೇಟರ್ ಬಳಿ ಆಯೋಜಿಸಿದ ಕಾರ್ಯಕ್ರಮವಿದು. ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ, ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ. ನನಗೆ ಯಾವ ಹೂವಿನ ಹಾರ ಬೇಡ. ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ. ರಾಮನಗರದಲ್ಲಿ ದಳಪತಿಗಳಿಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್.

9:22 AM

ತುಂಗಭದ್ರಾ ಜಲಾಶಯ ದಿಂದ ತಗ್ಗಿದ ಜಲಪ್ರವಾಹ.

ಬಳ್ಳಾರಿ: ತುಂಗಭದ್ರಾ ಜಲಾಶಯ ದಿಂದ ತಗ್ಗಿದ ಜಲಪ್ರವಾಹ. ಒಂದು ಲಕ್ಷಕ್ಕಿಂತ ಕಡಿಮೆಯಾದ ಹೊರ ಹರಿವು..‌ ಕಳೆದೊಂದು ವಾರದಿಂದ ಮುಳುಗಿದ್ದ ಕಂಪ್ಲಿ ಸೇತುವೆ ತೆಲಿದೆ. ಕಸ ಗಿಡಗಂಟೆಗಳು ಸೇರಿದಂತೆ ಸೇತುವೆ ಮೇಲೆ ಬಿದ್ದಿದೆ ರಾಶಿ ರಾಶಿ ಕಸ. ಪರಸಭೆ ಅಧಿಕಾರಿಗಳು ಸೇರಿದಂತೆ ಸ್ಥಳೀಯರಿಂದ ತೆರವು ಕಾರ್ಯ. ಜೆಸಿಬಿ‌ ಮೂಲಕ ತ್ಯಾಜ್ಯ ಹೊರಹಾಕ್ತಿರೋ ಸ್ಥಳೀಯರು. 105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 100 ಟಿಎಂಸಿ‌‌ ನೀರಿದೆ. 80 ಸಾವಿರಕ್ಕೂ ಹೆಚ್ಚು ಒಳಹರಿವು ಇದ್ದ ಬಂದಷ್ಟೇ ನೀರನ್ನು ಹೊರಗೆ ಬಿಡಲಾಗ್ತಿದೆ.

9:20 AM

ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋದ ಆರು

ರಾಯಚೂರು; ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋದ ಆರು ಎಮ್ಮೆಗಳು. ರಾಯಚೂರು ಜಿಲ್ಲೆ ದೇವದುರ್ಗ ತಾ. ಹೂವಿನಹೆಡಗಿ ಸೇತುವೆ ಬಳಿ ಘಟನೆ. ಮೈದುಂಬಿ ಹರಿಯುತ್ತಿರುವ ಕೃಷ್ಣೆಯಲ್ಲಿ ತೇಲಿಬಂದ ಎಮ್ಮೆಗಳು. ನೀರಿನ ರಭಸಕ್ಕೆ ಮುಳುಗುತ್ತಿರುವ ಎಮ್ಮೆಗಳು. ಧಾರಾಕಾರ ನೀರಲ್ಲಿ ಪ್ರಾಣ ಉಳಿಸಿಕೊಳ್ಳಲು ಎಮ್ಮೆಗಳ ಹರಸಾಹಸ. ನೋಡಗರ ಎದೆ ಝಲ್ ಎನಿಸುತ್ತೆ ಎಮ್ಮೆಗಳು ಮುಳುಗುವ ದೃಶ್ಯ. ಹೂವಿನಹೆಡಗಿ ಸೇತುವೆ ಬಳಿ ಕ್ಯಾಮರಾಗಳಿಗೆ ಸೆರೆಸಿಕ್ಕ ವೀಡಿಯೋ ವೈರಲ್.

5:03 PM IST:

ಎನ್ ಜಿಇಎಫ್ ಸ್ಟೇಷನ್ ಹಾಗೂ ಹೆಚ್ ಬಿಆರ್ ಲೇಔಟ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆ, ಅರ್ಧ ಬೆಂಗಳೂರಿಗೆ ನಾಳೆ ವಿದ್ಯುತ್ ಇರೋದಿಲ್ಲ. ಜೋಗುಪಾಳ್ಯ, ಹಲಸೂರು, ಹಳೇ ಮದ್ರಾಸ್ ರೋಡ್ ಸುತ್ತ ಮುತ್ತಲಿನ ಪ್ರದೇಶ, ಕಗ್ಗದಾಸಪುರ ಆಕಾಶ ಪುರ, ವರ್ತೂರು ರಸ್ತೆ, ನಾಗಾವಾರ ಪಾಳ್ಯ, ಕೊಂಡಪ್ಪರೆಡ್ಡಿ ಲೇಔಟ್, ಏರ್ಪೋರ್ಟ್ ಕ್ವಾರ್ಟಸ್  ಸುತ್ತಮುತ್ತಲಿನ ಪ್ರದೇಶ, HBR ಲೇಔಟ್, ಕೆಜಿಹಳ್ಳಿ, ಯಾಸಿನ್ ನಗರ, ನಾಗವಾರ ಸುತ್ತಮುತ್ತ, ಹೆಚ್ ಆರ್ ಬಿಆರ್ ಲೇಔಟ್ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ನೂರಾರು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

4:37 PM IST:

ಕೊಪ್ಪಳ: ಜಮೀನಿನ ಪಹಣಿ ಪತ್ರ ತಿದ್ದುಪಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕಿನ ಕವಲೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಕರಿಯಪ್ಪ ಎಂ. ಹುಬ್ಬಳ್ಳಿ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕವಲೂರು ಗ್ರಾಮದ ಶಿವಪ್ಪ ಬೇವೂರು ತಮ್ಮ ತಂದೆಯ ಹೆಸರಿನಲ್ಲಿದ್ದ ಪಹಣಿ ಪತ್ರ ತಿದ್ದುಪಡಿ ಮಾಡಿಕೊಡುವಂತೆ ಕೊಪ್ಪಳ ತಹಸೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು 5,000 ರೂ.ಕೊಡಬೇಕು ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕರಿಯಪ್ಪ ಮುಂಗಡವಾಗಿ 1,000 ರೂ.ಪಡೆದುಕೊಂಡಿದ್ದರು. ಬಾಕಿ ಉಳಿದ 4,000 ರೂ. ನೀಡುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತ ಶಿವಪ್ಪ ಜು. 19ರಂದು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಅಧಿಕಾರಿಗಳು ಬುಧವಾರ ನಗರದ ಸಿಂಪಿ ಲಿಂಗಣ್ಣ ರಸ್ತೆಯ ಟ್ರಿನಿಟಿ ಶಾಲೆಯ ಹತ್ತಿರದ ಎದುರು ಇರುವ ಕೊಠಡಿಯೊಂದರಲ್ಲಿ ಕರಿಯಪ್ಪ ಲಂಚ ಪಡೆಯುವಾಗ ದಾಳಿ ನಡೆಸಿದ್ದಾರೆ. ಬಳ್ಳಾರಿಯ ಎಸಿಬಿ ಎಸ್ಪಿ ಹರಿಬಾಬು ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೊಪ್ಪಳ ಎಸಿಬಿ ಠಾಣೆಯ ಡಿಎಸ್‌ಪಿ ಶಿವಕುಮಾರ್‌ ಎಂ.ಸಿ., ಇನ್‌ಸ್ಟೆಕ್ಟರ್‌ ಶಿವರಾಜ ಇಂಗಳೆ, ಸಿಬ್ಬಂದಿ ಸಿದ್ದಯ್ಯ, ರಂಗನಾಥ, ಗಣೇಶ, ಜಗದೀಶ, ಉಮೇಶ ಹಾಗೂ ಸವಿತಾ ಪಾಲ್ಗೊಂಡಿದ್ದರು.

2:44 PM IST:

ಕಂಬಳದ ಉಸೇನ್ ಬೋಲ್ಟ್ ವಿರುಧ್ಧ ಪೊಲೀಸ್ ಠಾಣೆಗೆ ದೂರು ವಿಚಾರ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ. ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬವರು ಮೂಡಬಿದ್ರೆ ಠಾಣೆಗೆ ದೂರು ನೀಡಿದ್ದಾರೆ. ಕಂಬಳ ಸಮಿತಿ ಹೆಸರಿನಲ್ಲಿ ಮೂವರು ವಂಚನೆ ಎಸಗಿದ್ದಾಗಿ ದೂರಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ‌ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ. ಸಮಿತಿ ಹೆಸರಲ್ಲಿ ಹಣ ಪಡೆದು ಲಕ್ಷಾಂತರ ರೂ. ಹಣಕ್ಕೆ ಲೆಕ್ಕಪತ್ರ ಕೊಟ್ಟಿಲ್ಲ ಅಂತ ದೂರು. ಸದ್ಯ ಮೂವರ ವಿರುದ್ದ ಈ ದೂರನ್ನು ಕೊಡಲಾಗಿದೆ. ದೂರಿಗೆ ಸಂಬಂಧಿಸಿದಂತೆ ವಿಚಾರಣೆ ‌ನಡೆಸಲು ಸೂಚಿಸಿದ್ದೇನೆ. ಮೂಡಬಿದ್ರೆ ಇನ್ಸ್ಪೆಕ್ಟರ್ ಈ ಬಗ್ಗೆ ವಿಚಾರಣೆ ನಡೆಸಿ ಸತ್ಯಾಸತ್ಯತೆ ‌ತನಿಖೆ ಮಾಡ್ತಾರೆ.

2:42 PM IST:

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನಲೆ, ಮಳೆಯಿಂದ ಮಹಾರಾಷ್ಟ್ರದ ಬಹುತೇಕ ಡ್ಯಾಮ್ ಗಳು ಬರ್ತಿಯಾಗಿವೆ. ಮಹಾರಾಷ್ಟ್ರದ ವೀರ್ ಡ್ಯಾಮ್ ನಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ವೀರಾ ಡ್ಯಾಮ್ ನಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ಅಫಜಲಪೂರ ತಾಲೂಕಿನ ಸೊನ್ನ  ಬ್ಯಾರೇಜ್ ನಲ್ಲಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಸೊನ್ನ ಬ್ಯಾರೇಜ್ ಭರ್ತಿ.. ಒಂಬತ್ತು ಸಾವಿರ ಕ್ಯೂಸೆಕ್ಸ ನೀರು ಒಳಹರಿವು ಬರುತ್ತಿದ್ದು, ಬ್ಯಾರೇಜ್ ಭರ್ತಿ ಹಿನ್ನಲೆ ಒಳಹರಿವಿನ 9 ಸಾವಿರ ಕ್ಯೂಸೆಕ್ಸ ನೀರು ಹೊರಬಿಡಲಾಗಿದೆ. ಸೊನ್ನ ಬ್ಯಾರೇಜ್ ನಿಂದ 9000 ಕ್ಯೂಸೆಕ್ ನೀರು ನದಿಗೆ ಬಿಡುಗಡೆಯಾಗಿದೆ. ಸದ್ಯಕ್ಕೆ ನದಿ ತೀರದಲ್ಲಿ ಪ್ರವಾಹ ಭೀತಿಯಿಲ್ಲ. ಅದಾಗ್ಯೂ ಎಚ್ಚರದಿಂದ ಇರುವಂತೆ ಅಧಿಕಾರಿಗಳ ಸಲಹೆ ನೀಡಿದ್ದಾರೆ.

1:10 PM IST:

ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಪೈಪೋಟಿ ವಿಚಾರದ ಬಗ್ಗೆ ಹಿರೇಕೇರೂರು ತಾಲೂಕು ಕೋಡ ಗ್ರಾಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ವ್ಯಂಗ್ಯಮಾಡಿದ್ದಾರೆ. ಯಾರೇ ಆಗಲಿ ಅವರು ಬದುಕಿದ್ದಾಗ ಉತ್ಸವ ಮಾಡಿಕೊಳ್ಳಲ್ಲ. ಉತ್ಸವ ಅಂದರೆ ಏನು? ನಾವು ದೇವಸ್ಥಾನಗಳಲ್ಲಿ ದೇವರ ಉತ್ಸವ ಮಾಡ್ತೀವಿ. ಮನುಷ್ಯ ದೇವರು ಆಗೋಕೆ ಆಗೊಲ್ಲ. ಅದು ಇಂಥ ಸಂದರ್ಭದಲ್ಲಿ ಸಿದ್ದರಾಮೋತ್ಸವ ಮಾಡಿಕೊಳ್ತಿದ್ದಾರೆ. ರಾಜ್ಯಾದ್ಯಂತ ಮಳೆ ಬಂದು ನೆರೆ ಹಾನಿಯಾಗಿದೆ. ಸರ್ಕಾರವನ್ನು ಕಟು ಟೀಕೆ ಮಾಡುವ ಸಮಾಜವಾದಿ ಸಿದ್ದರಾಮಯ್ಯ ಇಂಥ ಸಂದರ್ಭದಲ್ಲಿ ಉತ್ಸ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಅಂರ ಅವರ ಆತ್ಮಕ್ಕೆ ಅವರೇ ಪ್ರಶ್ನೆ ಹಾಕಿಕೊಳ್ಳಲಿ. ಆದರೆ ಕೂಸು ಹುಟ್ಟೋ ಮೊದಲೇ ಕುಲಾವಿ ಹೊಲಿಸಿದ್ರು ಅನ್ನೋ ಹಾಗೆ  ಇನ್ನೂ ಎಲೆಕ್ಷನ್ 10 ತಿಂಗಳಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋ ತರ  ಅಧಿಕಾರಕ್ಕೆ ಕಿತ್ತಾಡ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್  ಈಗಲೇ ಅಧಿಕಾರಕ್ಕೆ ಕಿತ್ತಾಡ್ತಿದ್ದಾರೆ. ಮುಖ್ಯಮಂತ್ರಿ ಆಗ್ತೀವಿ ಅಂತ ಈಗಲೇ ಕಿತ್ತಾಡ್ತಿದ್ದಾರೆ. ಇದು ಮೂರ್ಖತನದ ಪರಮಾವಧಿ. ಯಾಕಂದ್ರೆ ಜನ ತೀರ್ಮಾನ ಮಾಡಬೇಕು. ಬಿಜೆಪಿ 150 ಸೀಟ್ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. 150 ಸೀಟ್ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಇವರು  ಮುಖ್ಯಮಂತ್ರಿ ಆಗ್ತೀನಿ ಅಂತ ಈಗಲೇ  ಗುದ್ದಾಡೋದು ಕಾಂಗ್ರೆಸ್ ಅವನತಿಗೆ ಮುನ್ನುಡಿ ಬರೆದ ಹಾಗೆ ಆಗುತ್ತೆ. ಕಾಂಗ್ರೆಸ್ ಪಕ್ಷಕ್ಕೆ ಅದು ಒಂದು ದೊಡ್ಡ ಕಂದಕ‌ ಆಗಲಿದೆ. ಇವರು ಸಿದ್ದರಾಮೋತ್ಸವ ಮಾಡಿಕೊಳ್ಳೋದು, ಅವರು ಶಿವಕುಮಾರೋತ್ಸವ ಮಾಡಿಕೊಳ್ಳೋದು  ಕಾಂಗ್ರೆಸ್ ಅವನತಿಗೆ ಮುನ್ನುಡಿ ಬರೆದ ಹಾಗೆ ಎಂದು ಕೃಷಿ ಸಚಿವ ಬಿಸಿ ಪಾಟಿಲ್‌ ಪ್ರತಿಕ್ರಿಯಿಸಿದ್ದಾರೆ.

1:08 PM IST:

KRS ಜಲಾಶಯಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಕಾವೇರಿ ಮಾತೆಗೆ ಬಾಗಿನ ಅರ್ಪಿಸಲು ಆಗಮಿಸಿದ ಸಿಎಂಗೆ ಮಂಗಳವಾದ್ಯಗಳೊಂದಿಗೆ ಬರಮಾಡಿಕೊಂಡ ಅಧಿಕಾರಿಗಳು. ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಬಾಗಿನ ಬಿಡಲಿರುವ ಸಿಎ‌ ಬಸವರಾಜ ಬೊಮ್ಮಾಯಿ. KRS ಡ್ಯಾಂ ಮೇಲ್ಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ನಿಂತು ಬಾಗಿನ ಬಿಡಲಿರುವ ಸಿಎಂ. ಜಲಾಶಯದ ಕಾವೇರಿ ಪ್ರತಿಮೆ ಮೇಲ್ಭಾಗದಲ್ಲಿ ವೇದಿಕೆ ನಿರ್ಮಾಣ. ಬಾಗಿನ ಅರ್ಪಿಸಿದ ಬಳಿಕ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಿರುವ ಸಿಎಂ ಬೊಮ್ಮಾಯಿ.
ಸಚಿವರಾದ ಗೋವಿಂದ ಕಾರಜೋಳ, ಎಸ್‌ಟಿ ಸೋಮಶೇಖರ್, ಗೋಪಾಲಯ್ಯ, ಕೆಸಿ ನಾರಾಯಣಗೌಡ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಭಾಗಿ.

12:30 PM IST:

ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ನಗರದ ಕಾಂಗ್ರೆಸ್ ಭವನದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್, ಎಂ. ಎಲ್ ಸಿ ಡಾ. ಡಿ ತಿಮ್ಮಯ್ಯ ಭಾಗಿಯಾಗಿದ್ದಾರೆ. ಮಾಜಿ ಶಾಸಕ ಸೋಮಶೇಖರ್, ವಾಸು, ವೆಂಕಟೇಶ್, ಕಳಲೆ ಕೇಶವ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸಿದ್ದರಾಮೋತ್ಸವ ಆಚರಣೆ ಕುರಿತು ಅಭಿಪ್ರಾಯ ನೀಡುತ್ತಿರುವ ಕಾಂಗ್ರೆಸ್ ನಾಯಕರುಗಳು.

12:29 PM IST:

ಭ್ರಷ್ಟಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜೆ ಮಂಜುನಾಥ್ ಅವರಿಂದ ತೆರವಾಗಿದ್ದ ಜಾಗಕ್ಕೆ ಶ್ರೀನಿವಾಸ್‌ ಕೆ ಅವರನ್ನು ಸರ್ಕಾರ ನೇಮಿಸಿದೆ. ಇದುವರೆಗೂ ಪ್ರಭಾರ ಡಿಸಿಯಾಗಿದ್ದ ಸಂಗಪ್ಪ. ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಶ್ರೀನಿವಾಸ್ ಕೆ ಅಧಿಕಾರ ಸ್ವೀಕಾರ. ಅಧಿಕಾರ ಸ್ವೀಕರಿಸಿದ ದಿನವೇ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನೂತನ ಡಿಸಿ ಶ್ರೀನಿವಾಸ್ ಕೆ. 

12:21 PM IST:

ಭೀಮಾನದಿ ತೀರದ ದೇವಾಲಯಗಳಿಗೆ ಜಲದಿಗ್ಭಂದನ ಏರ್ಪಟ್ಟಿದ್ದು, ಭೀಮಾ ಉಕ್ಕಿ ಹರಿಯುತ್ತಿದೆ. ಭೀಮಾನದಿ ತೀರದ ಕಂಗಳೇಶ್ವರ, ವೀರಾಂಜನೇಯ ಸಂಪೂರ್ಣ ಜಲಾವೃತವಾಗಿದೆ. ಮಹಾರಾಷ್ಟ್ರದ ಮಳೆಗೆ ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು ಹೆಚ್ಚಾಗಿದೆ. ಕಳೆದ ಒಂದು ಗಂಟೆಯಿಂದ ಭೀಮಾನದಿಗೆ ಹೆಚ್ಚಾದ ನೀರಿನ ಒಳಹರಿವು ಹೆಚ್ಚಿದ್ದು, ಭೀಮಾನದಿ ತೀರದ ಜನರಿಗೆ ಆತಂಕ ಸೃಷ್ಟಿಯಾಗಿದೆ. ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, 8 ಗೇಟ್ ಗಳ ಮೂಲಕ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮತ್ತೆ ಭೀಮಾ ನದಿಗೆ ಹೆಚ್ಚು ನೀರು ಬಿಡುಗಡೆ ಸಾಧ್ಯತೆಯಿದೆ. 

12:10 PM IST:

ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕುರಿತ ಅರ್ಜಿ ವಿಚಾರಣೆಯನ್ನು ಜುಲೈ 26ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಬೆಂಗಳೂರು ಮತ್ತು ಸುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಲುವಾಗಿ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಕರ್ನಾಟಕ ಯತ್ನಿಸುತ್ತಿದೆ. ಆದರೆ ತಮಿಳುನಾಡು ಸರ್ಕಾರ ಇದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದೆ. ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದ ತಮಿಳುನಾಡು ಸರ್ಕಾರ. ಕಳೆದ ಬಜೆಟ್‌ನಲ್ಲಿ ಸ್ವಲ್ಪ ಹಣವನ್ನು ಮೀಸಲಿಟ್ಟು ಯೋಜನೆಯನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಬಜೆಟ್‌ನಲ್ಲಿ ಮಂಡನೆಯಾಗುತ್ತಿದ್ದಂತೆ ತಮಿಳುನಾಡು ತಕರಾರು ತೆಗೆದಿದೆ. ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ಬೃಹತ್‌ ಯಾತ್ರೆಯನ್ನು ಕಾಂಗ್ರೆಸ್‌ ಮಾಡಿತ್ತು. ಅದರ ಬೆನ್ನಲ್ಲೇ ಸರ್ಕಾರ ಯೋಜನೆಯನ್ನು ಘೋಷಿಸಿತ್ತು. 

11:42 AM IST:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಇಂದು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅರ್ಚನೆಯನ್ನು ಮಾಡಿಸಿದರು. ಸಚಿವರಾದ ಗೋವಿಂದ ಕಾರಜೋಳ್ , ಎಸ್ ಟಿ ಸೋಮಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.

11:25 AM IST:

ಈ ಬಾರಿ ಅದ್ದೂರಿ ದಸರಾ ನಡೆಸಲು ಸರ್ಕಾರ ನಿರ್ಧರಿಸಿದೆ. ಕೋವಿಡ್‌ ಮಾರಣಾಂತಿಕ ಕಾಯಿಲೆ ಬಂದ ನಂತರ ದಸರಾ ತನ್ನ ವಿಜ್ರಂಭಣೆಯನ್ನು ಕಳೆದುಕೊಂಡಿತ್ತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನೆನ್ನೆಯಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ದೇವೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಅದ್ದೂರಿ ದಸರಾ ನಡೆಸಲಾಗಲಿಲ್ಲ. ಸಂಪ್ರದಾಯಿಕವಾಗಿ ದಸರಾ ಮಾಡಲಾಗುತ್ತಿದೆ. ಗಜಪಯಣ ಸೇರಿ ಎಲ್ಲಾ ಕಾರ್ಯಕ್ರಮನ್ನ ಅದ್ದೂರಿಯಾಗಿ ನಡೆಸುತ್ತೇವೆ. ಈ ಬಾರಿ ಹೊಸ ಆಕರ್ಷಣೆಗಳನ್ನ ಮಾಡಲು ಪ್ರಯತ್ನ ಮಾಡುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವಂತೆ ಮಾಡುತ್ತೇವೆ. ಮುಂದಿನ ಒಂದು ವಾರದಲ್ಲಿ ಮೈಸೂರು ಟೂರಿಸಮ್ ಸೆರ್ಕ್ಯುಟ್ ಘೋಷಣೆ ಮಾಡುತ್ತೇವೆ. ಈ ಬಾರಿಯ ದಸರಾಗೆ ಹೊಸ ಆಯಾಮ ಸಿಗಲಿದೆ. ದಸರಾ ಉದ್ಘಾಟಕರ ಬಗ್ಗೆ ಚರ್ಚೆಯಾಗಿದೆ. ಮುಂದೆ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ವ್ಯಕ್ತಿ ಆಯ್ಕೆ ಮಾಡುತ್ತೇವೆ. ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ

11:15 AM IST:

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಂಕಿಪಾಕ್ಸ್‌ ರೋಗದ ಕುರಿತಂತೆ ಬಿಬಿಎಂಪಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಮಂಕಿ ಫಾಕ್ಸ್ ಬಗ್ಗೆ ನಮ್ಮ ಆರೋಗ್ಯ ಇಲಾಖೆಯಿಂದ ಸಂಪೂರ್ಣ ತಯಾರಿ ನಡೆದಿದೆ. ಪ್ರತಿವಾರ ಬುಧವಾರ ನಾವು ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತೇವೆ. ನಮ್ಮಲ್ಲಿ ಸೋಂಕು ಕಾಣಿಸಿಕೊಂಡ್ರೆ ಹೇಗೆ ಅದನ್ನು ನಿಭಾಯಿಸಬೇಕು ಅಂತ ಸಿದ್ಧತೆ ನಡೆಸಿದ್ದೇವೆ. ಮಂಕಿ ಫಾಕ್ಸ್ ಸಂಬಂಧಿಸಿದಂತೆ ಲಕ್ಷಣಗಳು ಕಾಣಿಸಿಕೊಂಡ್ರೆ ಅವರನ್ನು ಐಸೋಲೇಷನ್ ಮಾಡಲಾಗುತ್ತೆ. ಜೊತೆಗೆ ಚಿಕಿತ್ಸೆಗೂ ಸಿದ್ಧತೆ ನಡೆಸಲಾಗಿದೆ. ಸಧ್ಯ ವರದಿ ಪ್ರಕಾರ ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಹೆಚ್ಚಾಗಿ ಕಂಡು ಬರ್ತಾ ಇದೆ ಎಂದು ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಮಂಕಿ ಪಾಕ್ಸ್‌ ಪ್ರಕರಣ ದಾಖಲಾಗಿಲ್ಲ. ಆದರೆ ಪಕ್ಕದ ಕೇರಳದಲ್ಲಿ ಎರಡು ಪ್ರಕರಣಗಳು ಧೃಡಪಟ್ಟಿದ್ದು, ಮುನ್ನೆಚ್ಚರಿಕೆಯ ಅಗತ್ಯವಿದೆ.

11:13 AM IST:

ಇದೇ ಜುಲೈ 22ರಂದು ಸುಪ್ರೀಂ ಕೋರ್ಟ್ ಗೆ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಪ್ರಮಾಣ ಪತ್ರ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ, ತಾಲೂಕು ಪಂಚಾಯಿತಿ ಮತ್ತು ಬಿಬಿಎಂಪಿ  ಚುನಾವಣೆ ನಡೆಸಲು ಸೂಕ್ತ ಕ್ರಮ‌ ಕೈಗೊಳ್ಳುತ್ತೇವೆ. ಮೈಸೂರು ಮೇಯರ್ ಆಯ್ಕೆ ಚುನಾವಣೆ ಕುರಿತು ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಮರುವಿಂಗಡಣೆ ಬಗ್ಗೆ ಪರ ಮತ್ತು ವಿರೋಧ ವಾದಗಳು ವ್ಯಕ್ತವಾಗಿವೆ. ಜತೆಗೆ ಮೈಸೂರು ಪಾಲಿಕೆ ಮೇಯರ್‌ ಸ್ಥಾನಕ್ಕೂ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. 

11:07 AM IST:

ಜಿ.ಎಸ್.ಟಿ. ರಾಜ್ಯದ ಪಾಲು ಅವಧಿ ವಿಸ್ತರಣೆಗೆ ಕೇಂದ್ರ‌ ನಿರಾಕರಿಸಿದೆ. ಜಿ.ಎಸ್.ಟಿ. ಕಾ‌ನೂನು ರೂಪಿಸುವಾಗಲೇ ಆರಂಭದ 5 ವರ್ಷ ಮಾತ್ರ ರಾಜ್ಯಗಳಿಗೆ ಪಾಲು ಎಂದಿದೆ. ಈಗ ಕೊರೋನಾದಿಂದಾಗಿ ಎರಡು ವರ್ಷ ರಾಜ್ಯಗಳ ಅದಾಯ ಇಳಿಮುಖವಾಗಿದೆ. ಈ ಕಾರಣಕ್ಕೆ 5 ವರ್ಷದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯಗಳು ಕೋರಿಕೊಂಡಿದ್ದವು. ಜಿ.ಎಸ್.ಟಿ ಸಂವಿಧಾನಾತ್ಮಕವಾಗಿ‌ ರೂಪಿಸಿರುವ ಕಾನೂನಾಗಿದ್ದು, ಅದನ್ನು ತಕ್ಷಣಕ್ಕೆ ಬದಲಿಸಲಾಗದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅದರ ಬದಲು ಈ ಅವಧಿಯಲ್ಲಿ ರಾಜ್ಯಗಳಿಗೆ ಬಾಕಿ‌ ಉಳಿಸಿರುವ ಜಿ.ಎಸ್.ಟಿ ಪಾಲನ್ನು ಕೇಂದ್ರ ಪಾವತಿಸುತ್ತಿದೆ. ಈಗಾಗಲೇ ಸ್ವಲ್ಪ ನೀಡಿದೆ. ಬಾಕಿ ಮೊತ್ತ ಶೀಘ್ರ ಪಾವತಿಸಲಿದೆ. ಮೈಸೂರಿನಲ್ಲಿ ಸಿಎಂ ಬವಸರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

10:18 AM IST:

ಇನ್ಮುಂದೆ ರಾಜಧಾನಿಯ ಮುಖ್ಯ ರಸ್ತೆಗಳ ಫುಟ್ ಫಾತ್ ನಲ್ಲಿ ಬೀದಿ ವ್ಯಾಪಾರಕ್ಕೆ ಬ್ರೇಕ್. ಮುಖ್ಯ ರಸ್ತೆ ಮತ್ತು ಆರ್ಟಿರಿಯಲ್ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಮುಂದಾದ ಪಾಲಿಕೆ. ಪ್ರಮುಖ ರಸ್ತೆಗಳ ಫುಟ್ ಪಾತ್ ಮೇಲೆ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡ್ತಿರೋದ್ರಿಂದ ಜನರಿಗೆ ಸಮಸ್ಯೆ. ಇದರಿಂದ ಜನರು ರಸ್ತೆ ಮೇಲೆ ವಾಕಿಂಗ್ ಮಾಡ್ತಿದ್ದು, ಅಪಘಾತಗಳು ಸಂಭವಿಸುತ್ತಿದೆ. ಅಪಘಾತಗಳನ್ನು ತಪ್ಪಿಸಲು ಮುಖ್ಯ ರಸ್ತೆಗಳ ಬದಿಗಳಲ್ಲಿ ವ್ಯಾಪಾರಕ್ಕೆ ಪಾಲಿಕೆಯಿಂದ ಕೊಕ್. ನಗರ ಪೊಲೀಸ್ ಇಲಾಖೆಯ ಜೊತೆ ನಡೆದ ಸಭೆಯಲ್ಲಿ ಬಿಬಿಎಂಪಿಯಿಂದ ಈ ನಿರ್ಧಾರ. ಟ್ರಾಫಿಕ್ ಪೊಲೀಸರ ಸಲಹೆ, ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವ ಬಿಬಿಎಂಪಿ.

9:56 AM IST:

ರಾಣಿಬೆನ್ನೂರು: ಸಿಡಿಲು ಬಡಿದ (ರೈಸ್ ಪುಲ್ಲಿಂಗ್) ತಂಬಿಗೆ ಇದೆ ಎಂದು ಹೇಳಿ ದೇವಸ್ಥಾನಕ್ಕೆ ಬರುವ ಜನರಿಗೆ ವಂಚನೆ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಹಲಗೇರಿ ಠಾಣೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಓಬಳಾಪುರದ ಪುಟ್ಟರಂಗ ರಂಗಪ್ಪ (75), ಚಿತ್ರದುರ್ಗ ಜಿಲ್ಲೆ ಚಳ್ಳಕೇರಿ ತಾಲೂಕಿನ ಕೋಡಿಹಳ್ಳಿಯ ನಾಗರಾಜ ಮಲ್ಲೇಶಪ್ಪ (42), ಬಳ್ಳಾರಿ ಜಿಲ್ಲೆ ಸೊಂಡೂರ ತಾಲೂಕಿನ ಬೊಮ್ಮಗಟ್ಟ ಗ್ರಾಮದ ಲಕ್ಷ್ಮಣ ಲಕ್ಷ್ಮೀಪತಿ ಹುಲೆಪ್ಪ (50), ನಾಗರಾಜ ಭೀಮಪ್ಪ ಮೈಲಗಂಬರಿ (32). ಕುಮಾರಸ್ವಾಮಿ ಭೀಮಪ್ಪ (58) ಬಂಧಿತ ಆರೋಪಿಗಳು. ಇವರು ತಾಲೂಕಿನ ಕಮದೋಡ ಬಳಿಯ ಲಕ್ಕಿಕಟ್ಟೆ ಚೌಡಮ್ಮನ ದೇವಸ್ಥಾನಕ್ಕೆ ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ‘ನಮ್ಮ ಬಳಿ ಸಿಡಿಲು ಬಡಿದ ತಂಬಿಗೆ ಇದೆ. ಅದಕ್ಕೆ ಸಿಡಲು ಬಡಿದಾಗ ವಿಶೇಷವಾದ ಶಕ್ತಿ ಬಂದಿದೆ. ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ, ನಿಮ್ಮ  ವ್ಯಾಪಾರ ಹಾಗೂ ವ್ಯವಹಾರ ಚೆನ್ನಾಗಿ ನಡೆಯುತ್ತದೆ. ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಲಕ್ಷ್ಮೀ ದೇವಿ ಬಂದು ನಿಮ್ಮ ಮನೆಯಲ್ಲಿ ಕುಳಿತುಕೊಳ್ಳುತ್ತಾಳೆ. ಒಂದು ತಂಬಿಗೆಯ ಬೆಲೆ 25 ಸಾವಿರ ರೂ.ದಿಂದ 50 ಸಾವಿರ ರೂ.ವರೆಗೆ ಆಗುತ್ತದೆ’ ಎಂದು ಹೇಳಿ ಜನರಿಗೆ ಮೋಸ ಮಾಡಲು ಯತ್ನಿಸುತ್ತಿದ್ದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:52 AM IST:

ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರಿಂದ ಬಂಧನ. ಪರನ್ ಸಿಂಗ್ ಚೌಹಾಣ್,  ನರೇಂದ್ರ,  ಧರ್ಮೇಂದರ್, ಧರ್ಮವೀರ್ , ಬಂಧಿತರು. ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡ್ತಿದ್ದ ಆರೋಪಿಗಳು. ಟ್ರಾನ್ಸ್ ಪೋರ್ಟ್ ಮಾಡುವುದಾಗಿ ಜಾಹೀರಾತು ಹಾಕಿಕೊಳ್ತಿದ್ರು. ವಾಹನ ಗಳನ್ನು ತೆಗೆದುಕೊಂಡು ಡಿಲವರಿ ಕೊಡದೇ ವಂಚನೆ ಮಾಡುತ್ತಿದ್ದ ಆರೋಪಿಗಳು. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

9:38 AM IST:

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ತಿರುವಿನಲ್ಲಿ ಸಿಕ್ಕಿಹಾಕಿಕೊಂಡ ಟ್ಯಾಂಕರ್. ರಾತ್ರಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತ. ಘಾಟ್ ಬ್ಲಾಕ್ ಆದ ಹಿನ್ನೆಲೆ ಕೊಟ್ಟಿಗೆಹಾರದಲ್ಲಿ ಸಾಲುಗಟ್ಟಿ ನಿಂತ ವಾಹನಗಳು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಘಟನೆ. ವಾಹನ ಸವಾರರು, ಪ್ರಯಾಣಿಕರ ಪರದಾಟ. ಬೆಳಗ್ಗೆ 7 ಗಂಟೆ ವೇಳೆಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸರು. 

9:29 AM IST:

ಕರ್ನಾಟಕದಲ್ಲಿ ಮಂಗಳವಾರ 1,151 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1214 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,617 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 25 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.5 ರಷ್ಟು ದಾಖಲಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:26 AM IST:

ಹೆಚ್.ಡಿ.ಕುಮಾರಸ್ವಾಮಿ ಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್. ರಾಮನಗರದಲ್ಲೇ ನಿಂತು ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್. ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮವಿತ್ತು. ರಾಮನಗರ ಕಾಂಗ್ರೆಸ್ ವತಿಯಿಂದ ನಗರದ ಶ್ರೀರಾಮ ಥಿಯೇಟರ್ ಬಳಿ ಆಯೋಜಿಸಿದ ಕಾರ್ಯಕ್ರಮವಿದು. ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ, ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ. ನನಗೆ ಯಾವ ಹೂವಿನ ಹಾರ ಬೇಡ. ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ. ರಾಮನಗರದಲ್ಲಿ ದಳಪತಿಗಳಿಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್.

9:22 AM IST:

ಬಳ್ಳಾರಿ: ತುಂಗಭದ್ರಾ ಜಲಾಶಯ ದಿಂದ ತಗ್ಗಿದ ಜಲಪ್ರವಾಹ. ಒಂದು ಲಕ್ಷಕ್ಕಿಂತ ಕಡಿಮೆಯಾದ ಹೊರ ಹರಿವು..‌ ಕಳೆದೊಂದು ವಾರದಿಂದ ಮುಳುಗಿದ್ದ ಕಂಪ್ಲಿ ಸೇತುವೆ ತೆಲಿದೆ. ಕಸ ಗಿಡಗಂಟೆಗಳು ಸೇರಿದಂತೆ ಸೇತುವೆ ಮೇಲೆ ಬಿದ್ದಿದೆ ರಾಶಿ ರಾಶಿ ಕಸ. ಪರಸಭೆ ಅಧಿಕಾರಿಗಳು ಸೇರಿದಂತೆ ಸ್ಥಳೀಯರಿಂದ ತೆರವು ಕಾರ್ಯ. ಜೆಸಿಬಿ‌ ಮೂಲಕ ತ್ಯಾಜ್ಯ ಹೊರಹಾಕ್ತಿರೋ ಸ್ಥಳೀಯರು. 105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 100 ಟಿಎಂಸಿ‌‌ ನೀರಿದೆ. 80 ಸಾವಿರಕ್ಕೂ ಹೆಚ್ಚು ಒಳಹರಿವು ಇದ್ದ ಬಂದಷ್ಟೇ ನೀರನ್ನು ಹೊರಗೆ ಬಿಡಲಾಗ್ತಿದೆ.

9:20 AM IST: