Karnataka Live Updates: ತಮಿಳುನಾಡಿನಲ್ಲಿ ಶಂಕಿತ ಉಗ್ರನ ಬಂಧನ, ಬೆಂಗಳೂರಲ್ಲಿ ತನಿಖೆ ಚುರುಕು

ಭಾರತ ತಾನು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿದ ದಿನವೇ ಕಾರ್ಗಿಲ್‌ ವಿಜಯ ದಿವಸ್‌. ಪಾಕಿಸ್ತಾನಿ ನುಸುಳುಕೋರರ ಹುಟ್ಟಡಗಿಸಿ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ ದಿನವಿದು. ‘ಕಾರ್ಗಿಲ್‌ ವಿಜಯ ದಿವಸ್‌’ ಭಾರತೀಯ ಯೋಧರ ತ್ಯಾಗ, ದೇಶ ಪ್ರೇಮ, ಸಾಹಸ, ಪರಾಕ್ರಮ, ಸಮರ್ಪಣೆ ಭಾವವನ್ನು ನೆನಪಿಸುತ್ತದೆ. ಇಂಥ ದಿವಸವನ್ನು ಕರ್ನಾಟಕ ಸೇರಿ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜೊತೆಗೆ ರಾಜ್ಯ ರಾಜಕೀಯ, ಅಪರಾಧ ಸುದ್ದಿಗಳೊಂದಿಗೆ ವಿವಿಧ ಸುದ್ದಿಗಳನ್ನು ಒಂದೆಡೆ ಓದಲು ಸುವರ್ಣನ್ಯೂಸ್.ಕಾಮ್ ಲೈವ್ ಬ್ಲಾಗ್‌ಗೆ ಲಾಗಿನ್ ಆಗಿರಿ. 

4:33 PM

ತಮಿಳುನಾಡಿನಲ್ಲಿ ಮತ್ತೋರ್ವ ಶಂಕಿತ ಉಗ್ರ ಸೆರೆ, ಬೆಂಗಳೂರು ಚುರುಕುಗೊಂಡ ತನಿಖೆ

ತಮಿಳುನಾಡಿನಲ್ಲಿ ಮತ್ತೋರ್ವ ಶಂಕಿತ ಉಗ್ರನ ವಶ ವಿಚಾರ. ಬೆಂಗಳೂರಿನ ಮಡಿವಾಳ ಟೆಕ್ನಿಕಲ್ ಸೆಲ್ ನಲ್ಲಿ ಶಂಕಿತನ ತೀವ್ರ ವಿಚಾರಣೆ. ತಮಿಳುನಾಡಿನಲಿ ಜುಬಾ ಎಂದು ಹೇಳಿಕೊಂಡಿದ್ದ ಶಂಕಿತ. ಅಬ್ದುಲ್ ಅಲೀಂ ಅನ್ನೋ ಹೆಸರನ್ನ ಜುಬಾ ಎಂದು ಹೇಳಿಕೊಂಡಿದ್ದ. ಸದ್ಯ ಶಂಕಿತ ಉಗ್ರ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಆದಿಲ್ ನ ತೀವ್ರ ವಿಚಾರಣೆ. ಶಂಕಿತನ ಮೊಬೈಲ್, ಆತನ ಬಳಿ ಪತ್ತೆಯಾಗಿರೋ ಡಿವೈಸ್ ಗಳನ್ನ ಪರಿಶೀಲನೆ. ಮೊಬೈಲ್ ಪರಿಶೀಲನೆ ವೇಳೆ ಶಂಕಿತನ ಬಗ್ಗೆ ಸಾಕಷ್ಟು ಮಾಹಿತಿ ಕಲೆ. ಕೆಲ ವರ್ಷಗಳ‌ ಹಿಂದೆ ಅಸ್ಸಾಂನಿಂದ ತಮಿಳುನಾಡಿಗೆ ಬಂದಿದ್ದ ಶಂಕಿತ. ಏನೂ ಓದದಿದ್ರೂ ಮೊಬೈಲ್, ನೆಟ್ ವರ್ಕ್ ಗಳ ಬಗ್ಗೆ ಚೆನ್ನಾಗಿ ತಿಳುದುಕೊಂಡಿದ್ದ. ಮೊದಲು ಸೇಲಂ ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಅಲೀಂ ಮಂಡಲ್. ಮೊಬೈಲ್, ಇಂಟರ್ನೆಟ್, ವೆಬ್ ಸೈಟ್ ಗಳ‌ ಬಗ್ಗೆ ಸಾಕಷ್ಟು ಸರ್ಚ್ ಮಾಡ್ತಿದ್ದ ಶಂಕಿತ. ಸಂಘಟನೆಗಳ ಬಗ್ಗೆ ತುಂಬಾನೇ ಸರ್ಚ್ ಮಾಡ್ತಿದ್ದ ಶಂಕಿತ. ಸಂಘಟನೆಗಳು‌ ಹೇಗೆ ವರ್ಕ್ ಮಾಡುತ್ವೆ..? ಯಾವ ರೀತಿಯ ಯುವಕರನ್ನ ಸಂಘಟನೆಗೆ ಸೆಲೆಕ್ಟ್ ಮಾಡ್ತಾರೆ. ಅದಕ್ಕೆ ಯಾವ ರೀತಿ ತಯಾರಿ ಇರ್ಬೇಕು ಎಲ್ಲವನ್ನೂ ಆನ್ಲೈನ್ ಮೂಲಕ ತಿಳಿದುಕೊಳ್ತಿದ್ದ ಶಂಕಿತ. ಅಖ್ತರ್ ಕಾಂಟ್ಯಾಕ್ಟ್ ಆದ ಮೇಲೆ ಮತ್ತಷ್ಟು ಚುರುಕಾಗಿದ್ದ. ಇಬ್ಬರೂ ತಮ್ಮದೇ ಟೀಂ ಜೊತೆ ಸಂಘಟನೆ ಸೇರೋ ಪ್ಲಾನ್ ಮಾಡ್ತಿದ್ರು. ಸತತವಾಗಿ ಸಂಘಟನೆಗೆ ಸೇರೋದ್ರ ಬಗ್ಗೆಯೇ ಮಾತನಾಡಿಕೊಳ್ತಿದ್ದ ಶಂಕಿತರು. ಸಿಸಿಬಿ ಮತ್ರು ಎನ್ ಐಎ ಅಧಿಕಾರಿಗಳಿಂದ ಮುಂದುವರೆದ ತನಿಖೆ. 

3:44 PM

ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಗೆ ಕೋಚ್‌: ಬಿಜೆಪಿ ಶಾಸಕ ರಾಜೂಗೌಡ

ವಿಜಯಪುರದ ಆಲಮಟ್ಟಿಯಲ್ಲಿ ಬಿಜೆಪಿ ಶಾಸಕ ರಾಜೂಗೌಡ ಹೇಳಿಕೆ ನೀಡಿದ್ದಾರೆ. ಬಿಎಸ್ವೈ ನಿವೃತ್ತಿ- ಮುಂಬರುವ ಎಲೆಕ್ಷನ್ ನಲ್ಲಿ ಹಿನ್ನಡೆ ಆಗುತ್ತಾ ಎನ್ನುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಬಿಎಸ್ವೈ ಓರ್ವ ಶಾಸಕರಿಂದಲೇ ಪಕ್ಷ ಸಂಘಟನೆ ಮಾಡಿದ್ದವರು. ಇವತ್ತು 110-120ವರೆಗೆ ಶಾಸಕರಾಗಿದ್ದಾರೆ. ಬಿಎಸ್ವೈ ಅವ್ರು ಕಾರಣೀಭೂತರಾಗಿದ್ದಾರೆ. ಬಿಜೆಪಿಯಲ್ಲಿ 75ವರ್ಷವಾದ್ಮೇಲೆ ಕೊಡಬಾರದು ಎಂಬ ಪಾಲಿಸಿಯಿದೆ. ಆದರೂ ಯಡಿಯೂರಪ್ಪ ಅವರನ್ನು ವಿಶೇಷವಾಗಿ ಪರಿಗಣಿಸಿ ಮುಖ್ಯಮಂತ್ರಿ ಮಾಡಲಾಯ್ತು. ವಿಜಯೇಂದ್ರ ಅಣ್ಣಾವ್ರು ಬೇರೆ ಬೇರೆ ಕಡೆ ಸ್ಪರ್ಧಿಸ್ಬೇಕು ಅಂತ ಒತ್ತಡವಿತ್ತು. ಶಿಕಾರಿಪುರದಿಂದಲೇ ಸ್ಪರ್ಧೆ ಬಗ್ಗೆ ಹೇಳಿದ್ದಾರೆ ತಪ್ಪೇನಿಲ್ಲ. ಯಡಿಯೂರಪ್ಪನವರು ರಾಜಕೀಯದಿಂದ ನಿವೃತ್ತಿ ಆಗ್ತಿಲ್ಲ. ಚುನಾವಣೆಗೆ ಬಿಎಸ್ವೈ ಸ್ಪರ್ಧಿಸ್ತಿಲ್ಲ. ಬಿಎಸ್ವೈ ಮಾರ್ಗದರ್ಶನದಲ್ಲಿ ಬಿಜೆಪಿ ಮುನ್ನಡೆಸಲಾಗುತ್ತೆ. ಕ್ರಿಕೆಟ್ ನಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವರ್ಲ್ಡ್ ಕಪ್ ಗೆದ್ದಿದ್ದೀವಿ. ಅವರು ನಿವೃತ್ತಿ ಘೋಷಣೆ ಮಾಡಿದ್ಮೇಲೆ ಬಹಳ ಬೇಜಾರು ಆಯ್ತು. ಕಪಿಲ್ ದೇವ್ ಇಂಡಿಯನ್ ಟೀಮ್ ಕೋಚ್ ಆಗಿ ಕೆಲ್ಸ ಮಾಡಿದ್ರು. ಆ ರೀತಿ ಬಿಎಸ್ವೈ ಕೋಚ್ ಆಗಿ ನಮ್ಮ ತಂಡ ಹೇಗೆ ನಡೆಸ್ಬೇಕು ಹಾಗೆಯೇ ನಡೆಸುತ್ತಾರೆ. ವಿಜಯೇಂದ್ರ ಸಕ್ರೀಯ ರಾಜಕಾರಣದಿಂದ ಬಿಜೆಪಿಗೆ ಶಕ್ತಿ ಬರುತ್ತಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಓರ್ವ ಐಕಾನ್, ಒಳ್ಳೆ ಲೀಡರ್ ಎಂದರು. ಯುವಕರು ಅವರನ್ನು ಬಹಳ ಇಷ್ಟಪಡುತ್ತಾರೆ. ಅವ್ರು ಯಾಕೆ ರಾಜಕಾರಣಕ್ಕೆ ಬರಬಾರದು. 75ವರ್ಷ ಪೂರೈಸಿರುವ ಬಿಜೆಪಿ ನಾಯಕರು ಬಿಎಸ್ವೈ ನಡೆ ಅನುಸರಿಸುವ ವಿಚಾರ. ಯಾರ್ಯಾರಿಗೆ 75ವರ್ಷ ಆಗಿದೆ ಅಂತ ಡಾಕ್ಯುಮೆಂಟ್ ತಗೆಸ್ತಿದ್ದೀವಿ. ಅವರೆಲ್ಲಗೂ ಸಾಮೂಹಿಕವಾಗಿ ಬರ್ಥ್ ಡೇ ಆಚರಣೆ ಮಾಡುವ ಯೋಚನೆಯಿದೆ ಎಂದರು

3:14 PM

ಕಾಂಗ್ರೆಸ್‌ ಬಿಟ್ಟಿದ್ದಕ್ಕೆ ಪಶ್ಚಾತ್ತಾಪವಿದೆ, ವಾಪಸ್‌ ಪಕ್ಷಕ್ಕೆ ಬಂದಿದ್ದೇನೆ: ನಟಿ ಭಾವನಾ

ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ನಟಿ ಭಾವನಾ ಪಾಲ್ಗೊಂಡಿದ್ದ ವೇಳೆ, ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗಿದ್ರಿ, ಈಗ ಮತ್ತೆ ಮುಂದಿನ ಸಾಲಲ್ಲಿ ಕುಳಿತುಕೊಳ್ಳಲು ಯಾಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂಬಂಧ ಪ್ರತಿಕ್ರಿಯಿಸಿದ ಭಾವನಾ, ದೆಹಲಿಯಲ್ಲಿ ನಾನು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ರಂದೀಪ್ ಸಿಂಗ್ ಸುರ್ಜೇವಾಲ ಅವರು ಟ್ವೀಟ್ ನಲ್ಲೂ ಹಾಕಿದ್ದರು. ಅದಾದ ಬಳಿಕ ಸೇರ್ಪಡೆ ಬಗ್ಗೆ ಎಲ್ಲೂ ಸುದ್ದಿ ಆಗಿರಲಿಲ್ಲ. ಹಾಗಾಗಿ ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ. ಹಾಗಾಗಿ ಕಾರ್ಯಕರ್ತರ ಜೊತೆ ಆದ ಘಟನೆ ಸ್ವಾಭಾವಿಕ. ಹಾಗಾಗಿ ನಾನು ಸೇರ್ಪಡೆ ಆಗಿರುವ ಕುರಿತು ಫೋಟೋ ತೋರಿಸಿ ತಿಳಿಸಿದೆ. ಕಾಂಗ್ರೆಸ್ ‌ಪಕ್ಷ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೇನೆ. ಈಗ ಯಾವುದೇ ಹುದ್ದೆ, ಜವಾಬ್ದಾರಿ ಆಸೆ ಆಕಾಂಕ್ಷೆ ಹೊತ್ತು ಬಂದಿಲ್ಲ. ಪಕ್ಷ ಯಾವುದೇ ಕೆಲಸ ವಹಿಸಿದ್ರೂ ಮಾಡುತ್ತೇನೆ ಎಂದರು.

1:50 PM

ಮುಸ್ಲಿಂ ಸಮುದಾಯದ ಪರ ನಿಂತವರು ಸಿದ್ದರಾಮಯ್ಯ: ಜಮೀರ್‌

ದಾವಣಗೆರೆ ಯಲ್ಲಿ ಮಾಜಿ‌ಸಚಿವ ಜಮೀರ್ ಅಹ್ಮದ್ ಹೇಳಿಕೆ. ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನಲೆ  ಅಲ್ಪಸಂಖ್ಯಾತರ‌ ಪೂರ್ವಭಾವಿ ಸಭೆಯಲ್ಲಿ ಹೇಳಿಕೆ. ಉರ್ದು ಭಾಷೆಯಲ್ಲಿ ಭಾಷಣ ಆರಂಭಿಸಿದ ಜಮೀರ್. ಮುಸ್ಲಿಂರು ತಲೆ ತಗ್ಗಿಸಿ ನಡೆಬಾರದು, ತಲೆ ಎತ್ತಿ ನಡೆಯಬೇಕು. 2008 ರಲ್ಲಿ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಿದ್ದೇ.. ನನಗೆ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ನೀಡಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತು. ಕಾಂಗ್ರೆಸ್ ನಲ್ಲಿ ನನಗಿಂತ ಹಿರಿಯರಾದ ತನ್ವೀರ್ ಸೇಠ್‌, ಹ್ಯಾರಿಸ್ ನಂತಹವರು ಇದ್ರು. ಕಾಂಗ್ರೆಸ್ ನವರಲ್ಲಿ ಹಿರಿಯರು ಇದ್ರು ನನ್ನನ್ನು ಮಂತ್ರಿ ಮಾಡಿದ್ರು. ಆಗ ರಣದೀಪ್ ಸುರ್ಜೆವಾಲ್ ಕರೆ ಮಾಡಿ ಮಾತನಾಡಿದ್ರು. ನನಗೆ ಸುರ್ಜೆವಾಲ್ ರವರು ಕರೆ ಮಾಡುವುದು  ನನ್ನ ಬಳಿ ಹಣ ಇದೆ ಅಂತ ಅಲ್ಲ. ನನ್ನ ಹಿಂದೆ ಮುಸ್ಲಿಂ ಸಮಾಜ ಇದೆ ಎಂದು ಕರೆ ಮಾಡಿ ಮಾತ್ನಾಡ್ತಾರೆ. ವೇಣುಗೋಪಾಲ್, ರಾಹುಲ್ ಗಾಂಧಿ ಕರೆ ಮಾಡಿ ಯಾವ ಖಾತೆ ನೀಡ್ಬೇಕೆಂದು ಕೇಳಿದ್ರು. ನಾನು ಅದಕ್ಕೆ ಮುಸ್ಲಿಂರ ಸೇವೆ ಮಾಡಲು ವಕ್ಫ್  ಖಾತೆ ಕೊಡಿ ಎಂದು ಕೇಳಿಕೊಂಡಿದ್ದೇ. ವಕ್ಫ್ ಆಸ್ತಿ ಒತ್ತುವರಿಯಾಗಿತ್ತು ಆಗ ಜಮೀನು ಗುರುತಿಸಿ ಖಾತೆ ಮಾಡಿಸಿದೆ ಉಳಿಸಿದೆ. ಅದ್ರೇ ನಮ್ಮ ಹಣೆಬರಹ ಸರಿ ಇಲ್ಲ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಇಡೀ ಕರ್ನಾಟಕದಲ್ಲಿ 105 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದೆ. ಅಂತಹ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನವರ ಪರ ನಿಲ್ಲಬೇಕು ಎಂದು ಮನವಿ ಮಾಡಿದ ಜಮೀರ್. ಅಂದಿನ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರಿಗೆ ಒತ್ತುವರಿಯಾದ ವಕ್ಫ್ ಆಸ್ತಿಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡೋಣ ಅಂತ ಹೇಳಿದೆ. ಇದರ ಉದ್ದೇಶ ವಕ್ಫ್ ಆಸ್ತಿ ಒತ್ತುವರಿ ಮಾಡುವುದು ಕಡಿಮೆ ಆಗುತ್ತೇ ಅಂತ. ಅದ್ರೇ ಹೆಚ್ಡಿ ಕುಮಾರಸ್ವಾಮಿ ಬೇಡ ರೈತರ ಸಾಲ ಮನ್ನಾ ಮಾಡ್ಬೇಕು ಹಣ ಇಲ್ಲ ಅಂದ್ರು. ಈ ವಿಚಾರವಾಗಿ ನಾನು ಸಿದ್ದರಾಮಯ್ಯ ಭೇಟಿ ಮಾಡಿದ್ದೆ. ಆಗ ಸಿದ್ದರಾಮಯ್ಯ ಅಂದ್ರು ನಾನು ಸಿಎಂ ಇದ್ದಾಗ ತಂದು ಕೊಟ್ಟಿದ್ರೇ ಐದುಸಾವಿರ ಕೋಟಿ ಕೊಡ್ತಿದೆ ಎಂದಿದ್ದರು. ಸಿದ್ದರಾಮಯ್ಯ ಕೊಟ್ಟಿರುವ ಭಾಗ್ಯಗಳು ಯಾರು ಕೊಟ್ಟಿಲ್ಲ ಎಂದು ಕೊಂಡಾಡಿದ್ರು. ಎಲ್ಲಿ ಅಲ್ಪಸಂಖ್ಯಾತರು ಇದ್ದಾರೆ ಅಭಿವೃದ್ಧಿ ಮಾಡಲು ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಾರೆ. ಗೋಹತ್ಯೆ ನಿಷೇಧ ವಿಚಾರ. ಮೀರ್ ಸಾಧಿಕ್ ಗಳು ಹೆಚ್ಚಿರುತ್ತಾರೆ ಹುಷಾರ್. ಗೋಹತ್ಯೆಯನ್ನು ಈ ಬಿಜೆಪಿ ಸರ್ಕಾರ ನಿಷೇಧ ಮಾಡಿದೆ. ಗೋ ಮಾಂಸವನ್ನು ನಾವು ಇಂದು ತಿನ್ನಲ್ಲ ನಾಳೆಯಿಂದ ತಿನ್ನುತ್ತೇವೆ ಏನ್ ಮಾಡ್ತೀರಾ. ಹೇ ಏನ್ ಮಾಡ್ತಿಯೋ ನಾಳೆಯಿಂದ ಧನದ ಮಾಂಸ ತಿನ್ನುತ್ತೇನೆ ಎಂದು ಕೇಳುವರು ಒಬ್ಬರೇ ಅದು ಸಿದ್ದರಾಮಯ್ಯ. ಟಿಪ್ಪು ಜಯಂತಿಯನ್ನು ಬ್ಯಾನ್ ಮಾಡಿ‌ ಎಂದಾಗ ವಿರುದ್ಧ ನಿಂತವರು ಸಿದ್ದರಾಮಯ್ಯ. ನೀವು ಏನ್ ಮಾಡ್ತಿರಾ ಮಾಡ್ಕೊಳ್ಳಿ ನಾನು ಟಿಪ್ಪು ಜಯಂತಿ ಮಾಡ್ತೀನಿ ಎಂದಿದ್ದು ಸಿದ್ದರಾಮಯ್ಯ. ನಮಾಜ್ ಮಾಡಿ ಬಳಿಕ ಸಿದ್ದರಾಮಯ್ಯ ನವರಿಗೆ ಅಧಿಕಾರ ಸಿಗಲಿ ಎಂದು ದುವಾ ಮಾಡಿ ಎಂದ ಮನವಿ ಮಾಡಿದ ಜಮೀರ್ ಅಹ್ಮದ್. 

1:31 PM

ಈ ದೇಶದಲ್ಲಿ ಇಡಿ ಸಿಬಿಐಯನ್ನ ದುರ್ಬಳಕೆ ನಡೆಯುತ್ತಿದೆ; ಡಿಕೆಶಿ

ಸಾವಿರಾರು ವಿರೋಧ ಪಕ್ಷದ ನಾಯಕರ ಬಾಯಿಯನ್ನ ಮುಚ್ಚಲು ಹೊರಟಿದ್ದಾರೆ. ಬಿಜೆಪಿಯವರ ಒಬ್ಬರ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ, ವಿಚಾರಣೆ ಸಹ ಮಾಡಿಲ್ಲ. ಸೋನಿಯಾ ಗಾಂಧಿಯವರು ಈಗ ವಿಚಾರಣೆ ಎದರಿಸುತ್ತಿದ್ದಾರೆ‌.ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ. ನ್ಯಾಷನಲ್ ಹೆರಾಲ್ಡ್ ನ್ನ ಸೋನಿಯಾ ಗಾಂಧಿ ಸ್ವಂತ ಆಸ್ತಿಯಂದು ಹೇಳಿಲ್ಲ. ನಮ್ಮ ನಾಯಕರಿಗೆ ಕಿರುಕುಳ ಕೊಟ್ಟು ಜೈಲಿಗೆ ಹಾಕಲಿ. ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡ್ತಿದ್ದಾರೆ‌. ಯಾವ ಆಸ್ತಿ ಮಾಡಿಕೊಂಡಿದ್ದಾರೆ? ಸರ್ಕಾರಕ್ಕೆ ದೇಶಕ್ಕೆ ಅಂಥವರಿಗೆ ಕಿರುಕುಳ ಕೊಡ್ತಿದ್ದಾರೆ. 75 ವರ್ಷದ ಸ್ವತಂತ್ರೋತ್ಸವ ತಂದು‌ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನದ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಪ್ರಜಾಪ್ರಭುತ್ವ ಕಾರಣದಿಂದ ನೀವು ಪಿಎಂ ಆಗಿದ್ದೀರಾ. ಕಟ್ಟಿದ ಸಂಸ್ಥೆಗಳನ್ನ ಒಡೆದು ಹಾಕುತ್ತೀದ್ದೀರಾ. ಸೋನಿಯಾ ಗಾಂಧಿಯವರೇ ನಮ್ಮ ತಾಯಿ ರಾಹುಲ್ ಗಾಂಧಿ ನಮ್ಮ‌ ಸಹೋದರ. ಅವರ ಜೊತೆ ನಾವು ಇದ್ದೇವೆ, ಹೆದರುಕೊಳ್ಳಬೇಡಿ. ನಿಮ್ಗೂ ಒಳ್ಳೆಯ ಕಾಲ ಬರುತ್ತೆ. ದೇಶಕ್ಕೆ ಗಾಂಧಿ ಕುಟುಂಬ ಗುಲಾಮರು ಹೌದು. ಭಾರತಾಂಭೆ ಕೆಲಸ ಮಾಡಿದ ಗಾಂಧಿ ಕುಟುಂಬ. ಅವರು ಹೇಳ್ತಿದ್ದರಲ್ಲ ನಾವು ಗುಲಾಮರು ಅಂತ ಹೌದು. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ. ಜನರ ಸೇವೆ ಮಾಡ್ತಿದ್ದೇವೆ, ಭಾರತ ತಾಯಿ ಸೇವೆ ಮಾಡ್ತಿದ್ದೇವೆ. ಭಾರತ ತಾಯಿ ಮಕ್ಕಳಾದ ನಾವು ಭಾರತದ  ಕೆಲಸ ಮಾಡಿತ್ತಿದ್ದೇವೆ.

1:09 PM

ಕರ್ನಾಟಕದ ಗಡಿಭಾಗದ ಮರಾಠಿ ಸಮೂಹ ಸೆಳೆಯಲು ಮಹಾರಾಷ್ಟ್ರ ಸರ್ಕಾರದ ಹೊಸ ಯೋಜನೆ

ಕರ್ನಾಟಕದ ಗಡಿಭಾಗದ ಮರಾಠಿ ಯುವ ಸಮೂಹ ಸೆಳೆಯಲು ಮಹಾರಾಷ್ಟ್ರ ಸರ್ಕಾರ ಸರ್ಕಸ್. ಛತ್ರಪತಿ ಶಿವಾಜಿ ವಿವಿಯಿಂದ ಕರ್ನಾಟಕದ ಗಡಿ ಭಾಗಸ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಯೋಜನೆ. ಗಡಿ ಭಾಗದ ವಿದ್ಯಾರ್ಥಿಗಳಿಗೆ ಕೊಲ್ಲಾಪುರದ ಶಿವಾಜಿ ವಿದ್ಯಾಪೀಠ ಉಚಿತ ಶಿಕ್ಷಣ ಯೋಜನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯ. ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಲು ಛತ್ರಪತಿ ಶಿವಾಜಿ ವಿವಿ ನಿರ್ಧಾರ. ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್‌ಗಳ ಆಫರ್ ನೀಡಿದ ವಿವಿ. ಕರ್ನಾಟಕ ಗಡಿಭಾಗದ 865 ಗ್ರಾಮಗಳ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ ಸರ್ಕಾರ ರತ್ನಗಂಬಳಿ. ಹೊಸ ಉಪಕ್ರಮದ ಬಗ್ಗೆ ಮಾಹಿತಿ ನೀಡಲು ಬೆಳಗಾವಿಯಲ್ಲಿ ಶಿಬಿರ ಆಯೋಜನೆ. ಛತ್ರಪತಿ ಶಿವಾಜಿ ವಿವಿ ಅಧ್ಯಾಪಕರು, ಮುಖ್ಯಸ್ಥರಿಂದ ಮಾರ್ಗದರ್ಶನ. ಶಿಬಿರದಲ್ಲಿ ಎಂಇಎಸ್‌ನ ಘಟಾನುಘಟಿ ನಾಯಕರು ಭಾಗಿ. ಮನೋಹರ ಕಿಣೇಕರ, ಶಿವಾಜಿ ಸುಂಟಕರ, ದೀಪಕ ದಳವಿ, ಶುಭಂ ಶಳಕೆ ಸೇರಿ ಹಲವರು ಭಾಗಿ.

1:07 PM

ಮಂಗಳೂರಿನ ಪಬ್ ಪಾರ್ಟಿಗೆ ತಡೆಯೊಡ್ಡಿದ್ದನ್ನ ಸಮರ್ಥಿಸಿದ ಭಜರಂಗದಳ

ಮಂಗಳೂರಿನ ಪಬ್ ಪಾರ್ಟಿಗೆ ತಡೆಯೊಡ್ಡಿದ್ದನ್ನ ಸಮರ್ಥಿಸಿದ ಭಜರಂಗದಳ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಹೇಳಿಕೆ. ಅನ್ಯಾಯ ನಡೆದಾಗ ಸುಮ್ಮನೆ ಕೂರಲು ಭಜರಂಗದಳದಿಂದ ಸಾಧ್ಯವಿಲ್ಲ. ಇವತ್ತು ಇಂಥಹ ಘಟನೆ ಕಾರಣದಿಂದ ಮಂಗಳೂರಿಗೆ ಕೆಟ್ಟ ಹೆಸರು ತರಲು ನಾವು ಬಿಡಲ್ಲ. ಭಜರಂಗದಳ ಯಾವತ್ತೂ ಇಂಥ ಚಟುವಟಿಕೆಗಳನ್ನು ಸಹಿಸಲ್ಲ. ಇಂಥಹ ಘಟನೆ ‌ನಡೆದಾಗ ನಾವು ರಿಯಾಕ್ಷನ್ ‌ಮಾಡದೇ ಸುಮ್ಮನಿರಲ್ಲ. ಅಲ್ಲಿ ಫೇರ್ ವೆಲ್ ಪಾರ್ಟಿ ನಡೀತಾ ಇತ್ತು, ನಾವು ಪಬ್ ಒಳಗೆ ಹೋಗಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಇದ್ದರು, ಇದನ್ನ ‌ತನಿಖೆ ಮಾಡಬೇಕು. ಪೊಲೀಸ್ ಇಲಾಖೆಯ ಡ್ರಗ್ಸ್ ಮುಕ್ತ ಹೋರಾಟಕ್ಕೆ ‌ನಮ್ಮ ಬೆಂಬಲ ಇದೆ. ಪಬ್ ಗಳನ್ನ ಬಂದ್ ಮಾಡಲು ಮತ್ತು ಸಮಯಕ್ಕೆ ನಿಯಮ ಇದೆ. ಈ ನಿಯಮ ಮೀರಿ ‌ಪಾರ್ಟಿ ಮಾಡಿದ್ರೆ ಅದನ್ನ ‌ನಿಲ್ಲಿಸಲು ಭಜರಂಗದಳ ತಯಾರಿದೆ. ನಾವು ಪಬ್ ಮೇಲೆ ಯಾವುದೇ ರೀತಿಯ ದಾಳಿ ನಡೆಸಿಲ್ಲ. ದಾಳಿ ನಡೆದಿದ್ರೆ ಹಲ್ಲೆ, ದಾಂಧಲೆ ಹಾಗೂ ಅನಾಹುತ ಆಗ್ತಾ ಇತ್ತು. ನಮಗೆ ಬಂದ ಮಾಹಿತಿ ಪ್ರಕಾರ, ಮೊನ್ನೆಯ ಕಾಲೇಜು ವಿಡಿಯೋ ವೈರಲ್ ಆದ ವಿದ್ಯಾರ್ಥಿಗಳೇ ಇದ್ದರು ಅಂತ ಇತ್ತು. ಅಪ್ರಾಪ್ತರು ಇದ್ದ ಕಾರಣ ನಮ್ಮ ಸಂಘಟನೆ ‌ಕಾರ್ಯಕರ್ತರು ಪಬ್‌ನವರ ಜೊತೆ ಮಾತನಾಡಿ ನಿಲ್ಲಿಸಿದ್ದಾರೆ. ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟೇ ಮಕ್ಕಳನ್ನ ಮನೆಗೆ ಕಳುಹಿಸಲಾಗಿದೆ. ನಾವು ಹೋಗುವ ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಿದ್ದೇವೆ. ನಾವು ಪೊಲೀಸರು ಬರುವ ಮೊದಲು ನಾವು ಆಕ್ಷನ್ ಮಾಡಿಲ್ಲ. 

1:01 PM

ಈಶ್ವರಪ್ಪ ಅವರ ಪರ ಸಿಟಿ ರವಿ ಬ್ಯಾಟಿಂಗ್‌, ಮತ್ತೆ ಮಂತ್ರಿ ಮಾಡಬೇಕು ಎಂದು ಒತ್ತಾಯ

ಮಾಜಿ ಸಚಿವ ಈಶ್ವರಪ್ಪ ಪರ ಸಿ.ಟಿ‌ ರವಿ ಬ್ಯಾಟಿಂಗ್. ಈಶ್ವರಪ್ಪ ನವರಿಗೆ ಸಚಿವ ಸ್ಥಾನ ನೀಡಲು ಸಿ.ಟಿ ರವಿ ಒತ್ತಾಯ. ತನ್ನ ಮೇಲೆ ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಬೇಕು. ಪಕ್ಷ ಕಟ್ಟಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಕೂಡ ಒಬ್ಬರು. ಪಕ್ಷವನ್ನ ಈ ಹಂತಕ್ಕೆ ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಒಬ್ಬರು. ಸಿಎಂ ಎಂದು ಬೋರ್ಡ್, ಫ್ಲೆಕ್ಸ್ ಹಾಕಿಕೊಂಡ ತಕ್ಷಣ ಸಿಎಂ ಆಗ್ತೀನಾ. ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರ ಕೈನಲ್ಲಿ ಕೂಗಿಸುತ್ತಿದ್ದಂತೆ ಸಿಎಂ ಆಗ್ತೀನಾ. ಕೊಟ್ಟಿದ್ದನ್ನೇ ಉಳಿಸಿಕೊಳ್ಳಲಾಗಿಲ್ಲ, ಇನ್ನು ಗಳಿಸೋದು ಉಂಟಾ. ಸಿದ್ದರಾಮಯ್ಯನ ಸ್ಟೈಲಲ್ಲೇ ಹೇಳೋದಾದ್ರೆ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು. ಜನ ಪಕ್ಷಕ್ಕೆ ಮತ ಹಾಕಿದ ಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು. 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ನೂರಕ್ಕೆ ನೂರು ಪಾಲು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದಕೊಳ್ಳುತ್ತೆ. ಛತೀಸ್‍ಗಡದಲ್ಲಿ ನೂರಕ್ಕೆ ನೂರರಷ್ಟು ಅಧಿಕಾರ ಕಳೆದುಕೊಳ್ಳುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ.ಟಿ ರವಿ ಹೇಳಿಕೆ.

12:08 PM

2A ಮೀಸಲಾತಿಗೆ ಪಂಚಮಸಾಲಿ ಸಮುದಾಯ ಪ್ರತಿಭಟನೆ

ಧಾರವಾಡದಲ್ಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸುದ್ದಿಗೋಷ್ಠಿ. 2ಎ ಮೀಸಲಾತಿಗೆ 30 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಪಂಚಮಸಾಲಿ ರ್ಯಾಲಿ. ಆದಷ್ಟು ಬೇಗ ನಮಗೆ ಮೀಸಲಾತಿ ನೀಡಬೇಕು. ಚೆನ್ನಮ್ಮನ ವೃತ್ತದಲ್ಲಿ ಸತ್ಯಾಗ್ರಹ ಮಾಡೋದಾಗಿ ಚಿಂತಿಸಲಾಗಿದೆ. ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ. ಹಲವು ಸಮಾಜದವರು ಈಗಾಗಲೇ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಅವರ ಜೊತೆಗೆ ನಮಗೂ ಸಹ ಸರ್ಕಾರ ಮೀಸಲಾತಿ ನೀಡಬೇಕು. ಧಾರವಾಡದ ಜನಪ್ರತಿನಿಧಿಗಳು ಸಹ ಬೆಂಬಲ ಸೂಚಿಸಲಿ. ಅಥವಾ ಬೆಂಬಲ ಇದಿಯೋ ಇಲ್ಲವೋ ಹೇಳಲಿ. ಚುನಾವಣೆ ಇರುವ ಹಿನ್ನೆಲೆ ಮೀಸಲಾತಿ ನಿರ್ಲಕ್ಷ್ಯ ಮಾಡಿದ್ರೆ, ಮುಂದಿನ ಚುನಾವಣೆಯಲ್ಲಿ ನಾವು ಸಹ ಬೆಂಬಲ ಸೂಚಿಸದೆ ಇರಬಹುದು ಎನ್ನುವ ಎಚ್ಚರಿಕೆ. ಬಸನಗೌಡ ಪಾಟೀಲ್ ಯತ್ನಾಳ್ ಸತ್ಯಾಗ್ರಹಕ್ಕೆ ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ನೆಹರು ಮೈದಾನದಿಂದ ಚೆನ್ನಮ್ಮ ವೃತ್ತದ ವರೆಗೂ ಬೃಹತ್‌ ರ್ಯಾಲಿ ಮಾಡಲಾಗುತ್ತೆ. ಹೋರಾಟಕ್ಕೆ ಪಂಚಮಸಾಲಿ ಸಮುದಾಯದ ಶಾಸಕರು ಭಾಗವಹಿಸಿ. ಭಾಗವಹಿಸದಿದ್ದರೆ ಸಮಾಜ ಅಸಮಾಧಾನ ಗೊಂಡು ನಿಮ್ಮಿಂದ ದೂರವಾಗುತ್ತೆ.  ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಗೆ ಮನವಿ ಸಲ್ಲಿಸಲಾಗುವುದು ಎಂದ ಸ್ವಾಮಿಜಿ.

11:44 AM

ಕಾಂಗ್ರೆಸ್‌ ಶಿಸ್ತು ಸಮಿತಿ ವಿರುದ್ಧ ಕಾಂಗ್ರೆಸ್‌ ಸದಸ್ಯರಿಂದಲೇ ಬೇಸರ

ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಾಮುಖ್ಯತೆ ಕಳೆದುಕೊಳ್ತಾ ಶಿಸ್ತು ಸಮಿತಿ..?
ಹಿರಿಯ ಮುಖಂಡ ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿ ಬಗ್ಗೆ ಬೇಸರ..
ಶಿಸ್ತು ಸಮಿತಿಯ ಕಾರ್ಯವೈಖರಿ ಬಗ್ಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ..
ಪಕ್ಷದ ಶಿಸ್ತು ಉಲ್ಲಂಘನೆ ಮಾಡುವ ನಾಯಕರ ಮೇಲೆ ಕ್ರಮ ಕೈಗೊಳ್ಳಲು ಮೀನಾಮೇಷ...!
ಶಿಸ್ತು ಸಮಿತಿಯ ವಿಳಂಬ ಧೋರಣೆ ಮತ್ತು ಕಾರ್ಯವೈಖರಿ ಬಗ್ಗೆ ಕೈಪಾಳಯದಲ್ಲಿ ಚರ್ಚೆ...

ಶಿಸ್ತು ಸಮಿತಿಯ ನಡವಳಿಕೆ ಕುರಿತು ಬೇಸರ ಹೊರ ಹಾಕಿರುವ ತಟಸ್ಥ ನಾಯಕರು..
ಸಿಎಂ ಹುದ್ದೆ ಕುರಿತು ಹೇಳಿಕೆ ನೀಡ್ತಿರುವ ನಾಯಕರ ಮೇಲೆ ಯಾಕೆ ಕ್ರಮ ಇಲ್ಲ..
ಸಿದ್ಧು ಮತ್ತು ಡಿಕೆಶಿ ಬೆಂಬಲಿಗರ ಮೇಲೆ ಯಾಕೆ ಕ್ರಮ ಕೈಗೊಳ್ಳಲು ಮುಂದಾಗ್ತಿಲ್ಲ.
ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಶಿಸ್ತು ಸಮಿತಿ ಹಿಂದೇಟು ಹಾಕ್ತಿರುವುದು ಸರಿಯಲ್ಲ..
ಯಾವುದೇ ಮುಲಾಜಿಲ್ಲದೇ ಆಕ್ಷೇಪಾರ್ಹ ಹೇಳಿಕೆ ನೀಡೋರ ಮೇಲೆ ಕ್ರಮ ಕೈಗೊಳ್ಳಲಿ..
ಶಿಸ್ತು ಸಮಿತಿಗೆ ಒತ್ತಡ ಹಾಕಿರುವ  ಕಾಂಗ್ರೆಸ್ ನಲ್ಲಿರುವ ತಟಸ್ಥ ಬಣದ ನಾಯಕರು..

ಶಿಸ್ತು ಸಮಿತಿಯ ಈ ಹಿಂದಿನ ಲೋಪಗಳನ್ನು ಪಟ್ಟಿ ಮಾಡಿರುವ ತಟಸ್ಥ ನಾಯಕರು..

ಒಂದು ವರ್ಷದ ಹಿಂದೆಯೂ ಸಿದ್ಧರಾಮಯ್ಯ ಸಿಎಂ ಆಗಲಿ ಎಂದಿದ್ದ  ಶಾಸಕ ಜಮೀರ್ ಅಹಮದ್..
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದಿದ್ದ ಶಾಸಕಿ ಸೌಮ್ಯ ರೆಡ್ಡಿ..
ಇಬ್ಬರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡದ ಶಿಸ್ತು ಸಮಿತಿ..
ಕೇವಲ ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದ ಶಿಸ್ತು ಸಮಿತಿ ಬಗ್ಗೆ ಬೇಸರ..

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸಲೀಂ ಮತ್ತು ಉಗ್ರಪ್ಪ..
ಪತ್ರಿಕಾಗೋಷ್ಠಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ್ದ ಉಗ್ರಪ್ಪ ಮತ್ತು ಸಲೀಂ..
ಆದರೆ ಸಲೀಂ ಅವರಿಗೆ ಮಾತ್ರ ನೊಟೀಸ್ ಕೊಟ್ಟು ಸುಮ್ಮನಾಗಿದ್ದ ಶಿಸ್ತು ಸಮಿತಿ..
ಉಗ್ರಪ್ಪಗೆ ನೋಟೀಸ್ ಕೊಡದೇ ಪ್ರಕರಣ ಮುಕ್ತಾಯ ಮಾಡಿದ್ದ ಶಿಸ್ತು ಸಮಿತಿ ಕ್ರಮಕ್ಕೆ ಆಕ್ಷೇಪ..

ಬೆಂಬಲಿಗರ ಸಭೆ ನಡೆಸಿ ಕಾಂಗ್ರೆಸ್ ನಾಯಕತ್ವ ಪ್ರಶ್ನಿಸಿದ್ದ ಮಾಜಿ ಸಚಿವ ಎಂ.ಆರ್ ಸೀತಾರಾಮ್..
ಸೀತಾರಾಮ್ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಎಂ.ಎಲ್ ಸಿ ಎಂ.ಡಿ.ಲಕ್ಷ್ಮೀನಾರಾಯಣ್..
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್  ಸಹ ಬೆಂಬಲಿಗರ ಸಭೆಯಲ್ಲಿ ಭಾಗಿ..
ಆದರೆ ಎಂ.ಡಿ.ಲಕ್ಷ್ಮೀನಾರಾಯಣ ಅವರಿಗೆ ಮಾತ್ರ ನೊಟೀಸ್ ಕೊಟ್ಟಿರುವ ಶಿಸ್ತು ಸಮಿತಿ..
ಎಂ.ಆರ್ ಸೀತಾರಾಮ್., ಬಿ.ಕೆ.ಸಂಗಮೇಶ್ ಗೆ ನೊಟೀಸ್ ಕೊಡದಿರುವ ಶಿಸ್ತು ಸಮಿತಿಯ ಬಗ್ಗೆ ಅನುಮಾನ..

ಈಗ ಮತ್ತೇ ಸಿದ್ಧರಾಮಯ್ಯ ಪರವಾಗಿ ಶಾಸಕ ಜಮೀರ್ ಅಹಮದ್ ಅವರಿಂದ ಬಹಿರಂಗ ಹೇಳಿಕೆ..
ಜಮೀರ್ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕ್ತಿರುವ ಕಾಂಗ್ರೆಸ್ ಶಿಸ್ತು ಸಮಿತಿ...
ಶಿಸ್ತು ಸಮಿತಿಯ ಮೌನದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲೇ ತೀವೃ ಬೇಸರ..

11:43 AM

ಕಾರ್ಗಿಲ್‌ ವಿಜಯ್‌ ದಿವಸ್‌: ಬಾಗಲಕೋಟೆಯಲ್ಲಿ ಬೈಕ್‌ ರ್ಯಾಲಿ

ಕಾಗಿ೯ಲ್ ವಿಜಯ್ ದಿವಸ ಆಚರಣೆ ಹಿನ್ನೆಲೆ. ಬಾಗಲಕೋಟೆಯಲ್ಲಿ ದೇಶಭಕ್ತರಿಂದ ಬೈಕ್ ರ್ಯಾಲಿ. ಸಾಮಾಜಿಕ ಕಾರ್ಯಕರ್ತ ಘಣಶ್ಯಾಂ ಭಾಂಡಗೆ ನೇತೃತ್ವದಲ್ಲಿ ನಡೆದ ಬೈಕ್ ರ್ಯಾಲಿ. ನಗರದ ಬೀಳೂರಜ್ಜನ ದೇವಸ್ಥಾನದಿಂದ ಆರಂಭಗೊಂಡು ನವನಗರ, ವಿದ್ಯಾಗಿರಿಯಲ್ಲಿ ಬೈಕ್ ರ್ಯಾಲಿ ಸಂಚಾರ. ರಾಷ್ಟ್ರಧ್ವಜ ಹಿಡಿದು ದೇಶಭಕ್ತಿ ಘೋಷಣೆ ಕೂಗುತ್ತಾ ನಡೆದ ಬೈಕ್ ರ್ಯಾಲಿ. ಭಾರತ ಮಾತಾ ಕಿ ಜೈ, ಒಂದೇ ಮಾತರಂ ಘೋಷಣೆಗಳೊಂದಿಗೆ ನಡೆದ ಬೈಕ್ ರ್ಯಾಲಿ.

11:26 AM

ಯಕ್ಷಗಾನಕ್ಕೆ ಅವಮಾನ ಆರೋಪ, ಕರಾವಳಿಯಲ್ಲಿ ಅಭಿಯಾನ

ಖಾಸಗಿ ವಾಹಿನಿಯಿಂದ ಯಕ್ಷಗಾನಕ್ಕೆ ಅವಮಾನ ಆರೋಪ. ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ. ಪ್ರಖ್ಯಾತ ಡ್ಯಾನ್ಸ್ ಶೋನಲ್ಲಿ ಯಕ್ಷಗಾನಕ್ಕೆ ಅವಮಾನ? ಯಕ್ಷಗಾನವನ್ನು ಅಶ್ಲೀಲವಾಗಿ ಬಿಂಬಿಸಿದ ಆರೋಪ. ಸಾಂಪ್ರದಾಯಿಕ ಆರಾಧನಾ ಕಲೆಯ ಬಗ್ಗೆ ಖಾಸಗಿ ವಾಹಿನಿಯಿಂದ ಅವಗಣನೆ ಆರೋಪ. ಕರಾವಳಿ ಭಾಗದಲ್ಲಿ ದೇವರ ಆರಾಧನೆಯ ಭಾಗವಾಗಿ ನಡೆಯುವ ಯಕ್ಷಗಾನ. ಯಕ್ಷಗಾನದ ವೇಷ ಧರಿಸಿ ಅಶ್ಲೀಲ ನೃತ್ಯ ಮಾಡಿದ ಆರೋಪ. ಖಾಸಗಿ ವಾಹಿನಿಯಿಂದ ಸತತ ಮೂರನೇ ಬಾರಿ ಯಕ್ಷಗಾನಕ್ಕೆ ಅವಮಾನ!? ಕರಾವಳಿಯ ಯಕ್ಷಗಾನ ಅಭಿಮಾನಿಗಳಿಂದ ಅಭಿಯಾನ. ಯಾವುದೇ ಖಾಸಗಿ ವಾಹಿನಿಯಲ್ಲೂ ಯಕ್ಷಗಾನಕ್ಕೆ ಅವಮಾನವಾಗಬಾರದು. ಈ ಬಗ್ಗೆ ಪರೀಕ್ಷಿಸಲು ಸಮಿತಿ ರಚನೆ ಮಾಡಬೇಕು. ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಗೆ ಯಕ್ಷಗಾನ ಅಭಿಮಾನಿಗಳಿಂದ ದೂರು. ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿರುವ ಸಚಿವರು. ಕರಾವಳಿ ಭಾಗದಲ್ಲಿ ಹರಕೆ ಹೊತ್ತು ಯಕ್ಷಗಾನ ನಡೆಸುತ್ತಾರೆ. ದೇವಾಲಯಗಳು ಯಕ್ಷಗಾನ ಮೇಳ ನಡೆಸುತ್ತವೆ. ಈ ಪ್ರದರ್ಶನದಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಯಕ್ಷಗಾನ ವೇಷಧಾರಿಗಳಿಗೆ ಸಿನಿಮಾ ನಟರಂತೆ ಅಭಿಮಾನಿಗಳಿದ್ದಾರೆ. ಯಕ್ಷಗಾನ ಕರಾವಳಿಯ ಸಾಂಪ್ರದಾಯಿಕ ಕಲೆ. ಇನ್ನು ಮುಂದೆ ಯಕ್ಷಗಾನಕ್ಕೆ ಅವಮಾನವಾದರೆ ಸಹಿಸಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೋಪ ಹೊರ ಹಾಕುತ್ತಿರುವ ಅಭಿಮಾನಿಗಳು. ಯಕ್ಷಗಾನ ಪ್ರೇಮಿಗಳಿಂದ ಕೋಟ ಪೊಲೀಸ್ ಠಾಣೆಗೆ ದೂರು ಅರ್ಜಿ. ನೋವುಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ. ವಾಹಿನಿಯ ಮುಖ್ಯಸ್ಥರು ಮತ್ತು ನೃತ್ಯ ಸಂಯೋಜಕರು ಕ್ಷಮೆಯಾಚಿಸಬೇಕು. ಅದೇ ಕಾರ್ಯಕ್ರಮದಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಅಭಿಯಾನ ನಡೆಸುತ್ತಿರುವ ಯಕ್ಷಗಾನ ಅಭಿಮಾನಿಗಳು.

11:23 AM

ದೇಶದಲ್ಲಿ ಕಾಂಗ್ರೆಸ್‌ ಮುಳುಗಿದೆ, ಸಂಸದ ಸಂಗಣ್ಣ

ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳದಲ್ಲಿ ಸ್ಪರ್ಧೆ ವಿಚಾರ. ಸಿದ್ದರಾಮಯ್ಯ ಒಬ್ಬ ರಾಜ್ಯದ ನಾಯಕ. ಅಂತಹ ನಾಯಕನಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನ ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಸಂಸದ ಕರಡಿ ಸಂಗಣ್ಣ ಹೇಳಿಕೆ. ಸಿದ್ದರಾಮಯ್ಯನವರಿಗೆ ಇಂತಹ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಹೀಗಾಗಿ ಅವರು ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಕಾನ್ಫಿಡೆನ್ಸ್ ಇದ್ದರೆ ಇಂತಹ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಲಿ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಪೈಪೋಟಿ ವಿಚಾರ. ಇದು ಮತ್ತಷ್ಟು ತೀವ್ರವಾಗಲಿ. ಇದರಿಂದ ಬಿಜೆಪಿಗೆ ಲಾಭ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ವಿಚಾರ. ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಇಲ್ಲ. ನಾನು ಹಾಲಿ ಸಂಸದನಾಗಿದ್ದೇನೆ. ನನ್ನ ಅವಧಿ ಇನ್ನೂ 1 ವರ್ಷ 9 ತಿಂಗಳು ಇದೆ. ಹೀಗಾಗಿ ನಾನು ಸ್ಪರ್ಧೆ ಮಾಡುವುದಿಲ್ಲ. ಸ್ವಇಚ್ಛೆಯಿಂದ ನಾನು ಸ್ಪರ್ಧೆಗೆ ಬಯಸುವುದಿಲ್ಲ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಲಿದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಡಿಕೆಶಿ ಸಿಂ ಸ್ಥಾನಕ್ಕಾಗಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ ವಿಚಾರ. ಒಂದು ಜನಾಂಗದಿಂದ ಸಿಎಂ ಆಗಲು ಸಾಧ್ಯವಿಲ್ಲ. ಎಲ್ಲ ಜನಾಂಗದವರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಡಿಕೆಶಿ,ಸಿದ್ದರಾಮಯ್ಯ, ಎಂ ಬಿ ಪಾಟೀಲ್,ರಾಮಲಿಂಗಾರೆಡ್ಡಿ ನಡುವೆ ಪೈಪೋಟಿ ನಡೆದಿದೆ. ಜಮೀರ್ ಸಹ ನಾವು ಸಿಎಂ ಆಗಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಆಂತರಿಕ ಸಂಘರ್ಷ ನಡೆಯುತ್ತಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ. ಸಿದ್ದರಾಮಯ್ಯ ಸ್ಪರ್ಧೆಯನ್ನು ನಾವು ವಿರೋಧ ಮಾಡಲು ಬರುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡಿ ಸೋತಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅದು ಅವರ ಪಕ್ಷದ ತೀರ್ಮಾನ. ಕಾಂಗ್ರೆಸ್ ನವರು ಕೂಸು ಹುಟ್ಟುಮುನ್ನ ಕುಲಾಯಿ ಒಲೆಸುತ್ತಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರವುದರಲ್ಲಿ ಸಂದೇಹ ಇಲ್ಲ. ಇಡಿಯಿಂದ ಇಂದು ಸೋನಿಯಾಗಾಂಧಿ ವಿಚಾರಣೆ ಹಿನ್ನಲೆ. ದೇಶದಲ್ಲಿ ಕಾಂಗ್ರೆಸ್ ಮುಳುಗಿದೆ. ಇಡಿ ಮೂಲಕ ಕಾಂಗ್ರೆಸ್ ಉಳಿದಿದೆ ಎಂದು ತೋರಿಸುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಕಾಂಗ್ರೆಸ್ ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್ ನವರು ಪ್ರಜಾಪ್ರಭುತ್ವ ವನ್ನು ವಿರೋಧಿಸುತ್ತಾರೆ. ಇಡಿ ಖರ್ಗೆ, ಮೋದಿ, ಅಮಿತ್ ಶಾ ಅವರನ್ನೂ ಸಹ ವಿಚಾರಣೆ ಮಾಡಿದೆ. ಅವ್ಯವಹಾರ ನಡೆದಿದ್ದರೆ ಇವತ್ತಿಲ್ಲ ನಾಳೆ ಕಾನೂನು ಕ್ರಮತೆಗೆದುಕೊಳ್ಳುತ್ತೆ ಎಂದ ಸಂಸದ ಸಂಗಣ್ಣ.

10:20 AM

Belagavi: RTO ಅಧಿಕಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆ

ಬೆಳಗಾವಿ: RTO ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಆಟೋ, ಟೆಂಪೋ ಚಾಲಕರಿಂದ RTO ಅಧಿಕಾರಿಗಳಿಂದ ದಂಡ ವಸೂಲಿಗೆ ಗರಂ. ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್‌ ಅವರನ್ನು ತರಾಟೆಗೆ ತೆಗೆದುಕೊಂಡ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ತರಾಟೆ ತೆಗೆದುಕೊಂಡರು. ಹೊಟ್ಟೆ ಪಾಡಿಗಾಗಿ ‌ಮಳೆಯಲ್ಲಿ, ಚಳಿಯಲ್ಲಿ, ಬಿಸಿಲಲ್ಲಿ ದುಡಿಯುತ್ತಿದ್ದಾರೆ. ಕಳ್ಳತನ, ಮೋಸ, ಸುಳ್ಳು ಹೇಳದೆ ಬೆವರು ಸುರಿಸಿ ದುಡಿಯವವರ ಮೇಲೇಕೆ ಕೇಸ್ ಹಾಕ್ತಿದ್ದಿರಿ. ಮೇಲಿನವರು ಟಾರ್ಗೆಟ್ ‌ಕೊಟ್ಟಿದ್ದಾರೆ ಅಂತ ಕೇಸ್ ಹಾಕಿದ್ರೆ ಹೇಂಗೆ?ಅವರು ಎಲ್ಲಿ ಸಾಯಬೇಕು? ಅವರೇನು ಸಿರಿವಂತರಲ್ಲ, ಸಾಲ ಕಟ್ಟಿ, ಉಳಿದ ದುಡ್ಡಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನಿಮಗೆ ಟಾರ್ಗೆಟ್ ‌ಕೊಟ್ಟಿರುವುದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಿರಾ?ನೀವು ಸರ್ಕಾರಿ ನೌಕರರು, ನಾನು ಸರ್ಕಾರದಲ್ಲಿ ಕೆಲಸ ಮಾಡ್ತಿನಿ. ಪ್ರತಿಯೊಂದು ಕಾನೂನು ‌ಚೌಕಟ್ಟು ಬಿಟ್ಟು ಏನು ಆಗಲ್ಲ. ಬಡವರ ತೊಂದರೆ ಆಗಬಾರದು ಎಂದು ನಿಮ್ಮ ಬಳಿ ಬಂದಿದ್ದೇನೆಇವತ್ತು ನಿಮ್ಮ ಮುಂದೆ ಕುಂತಿದಿನಿ ನಾಳೆ, ನಿಮ್ಮ ಕಚೇರಿ ಮುಂದೆ ಬಂದು ಧರಣಿ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ ಲಕ್ಷ್ಮೀ.  ಎಲ್ಲವನ್ನೂ ನೀವು ಕಾ‌ನೂನು ಪ್ರಕಾರ ಮಾಡ್ತಿರಾ? ನಿಮಗೆ ಒತ್ತಡ ಇದ್ರೆ ಅದನ್ನು ಬೇರೆ ರೀತಿ ಮನವೊಲಿಸಿ. ದುಡಿದು ತಿನ್ನುವ ವರ್ಗಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಮೊದಲೇ‌ ದೇಶದಲ್ಲಿ ಉದ್ಯೋಗ ಇಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. 

10:16 AM

ಬೆಂಗಳೂರು: ಸಿಎಂಗೆ ಲಂಚ ಕೊಡಬೇಕೆಂದು ಹೇಳಿ ವಂಚಿಸುತ್ತಿದ್ದವ ಪೊಲೀಸರ ಬಲೆಗೆ

ಮಣಿಪುರ ಮೂಲದ ವಾಹೆಂಗಬಮ್ ಲಲಿತ್ ಸಿಂಗ್ ಬಂಧನ. ಕನ್ನಡ ಬಾರದಿದ್ದರೂ ಕನ್ನಡಿಗರಿಗೆ ಹಾಕಿದ್ದಾನೆ ಪಂಗನಾಮ. ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಅವರ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹೆಸರು ಹೇಳಿ ಮೋಸ. ಬರಿಗೈಲಿ ಬೆಂಗಳೂರಿಗೆ ಬಂದವನು ಈಗ ಕೋಟಿ ಕೋಟಿ ಒಡೆಯ. ವಂಚನೆಯನ್ನೇ ವೃತ್ತಿಯಾಗಿಸಿಕೊಂಡವನು ಕೋಟ್ಯಾಧೀಶ. ಫ್ಲ್ಯಾಟ್ ಮಾರಾಟದಲ್ಲಿ ಕನ್ನಡಿಗರಿಗೆ ಮೋಸ ಮಾಡುತ್ತಿದ್ದ ಲಲಿತ್, ಅಪಾರ್ಟಮೆಂಟ್‌ನ ಪ್ಲ್ಯಾಟ್ ಖರೀದಿಯಲ್ಲಿ ಮಹಾ ಮೋಸ ಮಾಡಿತ್ತಿರುವ ಲಲಿತ್. ಒಂದೇ ಪ್ಲ್ಯಾಟ್ ಹಲವರಿಗೆ ಮಾರಾಟ ಮಾಡಿ ವಂಚನೆ. ಮಾರಾಟ ಮಾಡುವದಾಗಿ ಹೇಳಿ ಕೋಟಿ ಕೋಟಿ ಪಡೆದು ಅಗ್ರಿಮೆಂಟ್. ವ್ಯವಹಾರದ ವೇಳೆ ಚೆಕ್ ಬೇಡ ಹಣ ಕೊಡಿ ಎನ್ನುವ ಲಲಿತ್. ಲಂಚ ಕೊಡಲು ಚೆಕ್ ನಡಿಯಲ್ಲ, ಹಣವೇ ಬೇಕು ಎನ್ನುವ ವಂಚಕ. ಬ್ಲ್ಯಾಕ್ ಮನಿ ಮೂಲಕ ವ್ಯವಹಾರ ನಡೆಸುತ್ತಿದ್ದ ಚಾಲಾಕಿ. ಸಿಎಂ ಬೊಮ್ಮಾಯಿ ಹಾಗೂ ಮಂಜುನಾಥ್ ಪ್ರಸಾದ್‌ಗೆ ಲಂಚ ನೀಡಬೇಕು ಅಂತ ಹೇಳುವ ಲಲಿತ್. ಜಯನಗರ ಪೊಲೀಸರಿಂದ ವಂಚಕ ಲಲಿತ್ ಸಿಂಗ್ ಬಂಧನ.ಮೂವರು ಪಾಲುದಾರರನ್ನು ಹೊಂದಿರುವ ಕಂಪನಿ. ಪಾಲುದಾರರಿಗೂ ಮೋಸ ಮಾಡಿರುವ ಲಲಿತ್. ಮೂವರು ಪಾಲುದಾರರಲ್ಲಿ ಹಿರೇನ್ ವಾಹೇನ್ ಬಿಲ್ಡ್ ಟೆಕ್ ಕಂಪನಿಯಲ್ಲಿ ಒಬ್ಬ ಪಾಲುದಾರ. ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬ ಪಾಲುದಾರನಾಗಿದ್ದ. ಭೂಮಿ ಮಾಲೀಕ, ಹೂಡಿಕೆದಾರನನ್ನ ಓಡಿಸಿದ ಲಲಿತ್ ಸಿಂಗ್. ರೌಡಿಗಳನ್ನ ಬಿಟ್ಟು ಹೆದರಿಸಿ ಇಬ್ಬರು ಪಾಲುದಾರರನ್ನು ಹೆದರಿಸುತ್ತಿದ್ದ. ಭಯದಿಂದ ಇಬ್ಬರೂ ಪಾಲುದಾರರು ದೂರ ಉಳಿದರು. ಇಬ್ಬರನ್ನ ದೂರವಿಟ್ಟು ಲಲಿತ್ ಸಿಂಗ್ ಆಟಾಟೋಪ. ಒಂದೇ ಫ್ಲ್ಯಾಟ್‌ನ್ನ ನಾಲ್ಕಾರು ಜನಕ್ಕೆ ಮಾರಾಟ. C-4 204ನ 1574 ಚದರಡಿ ಇರುವ ಒಂದೇ ಫ್ಲ್ಯಾಟ್‌ನ್ನ ಚಿತ್ರಾ ಮತ್ತು ಅವಿನಾಶ್ ಇಬ್ಬರಿಗೂ ಮಾರಾಟ..‍! ಕಂಪನಿಯ ಇನ್ನೊಬ್ಬ ಪಾಲುದಾರನಿಂದ ಪೊಲೀಸರಿಗೆ ದೂರು. ಬೊಮ್ಮಾಯಿ, ಮಂಜುನಾಥ್ ಪ್ರಸಾದ್‌ಗೆ ಲಂಚ ನೀಡುತ್ತೇನೆಂಬ ಲಲಿತ್ ಸಿಂಗ್ ವಿಡಿಯೋ ಬಿಡುಗಡೆ. ವಕೀಲ ಎಂ.ಸಿ.ನಾಣಯ್ಯ ಮೂಲಕ ಸಿಎಂ ಹಾಗೂ ಸಿಎಂ ಪ್ರ.ಕಾರ್ಯದರ್ಶಿಗೆ ಲಂಚ ಕೊಡುತ್ತಾನಂತೆ ಈ ವಂಚಕ. ದೊಡ್ಡವರ ಹೆಸರು ಹೇಳಿ ಅಮಾಯಕರಿಗೆ ಮಹಾಮೋಸ. ನೂರಾರು ಜನರಿಗೆ ವಂಚಿಸಿದ್ದ ಲಲಿತ್ ಸಿಂಗ್ ಕೊನೆಗೂ ಅಂದರ್..! ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

9:55 AM

ಕರ್ನಾಟಕದಲ್ಲಿ ಇವತ್ತು ಲೀ. ಪೆಟ್ರೋಲ್ ಎಷ್ಟು ದುಡ್ಡು ಕೊಡಬೇಕು?

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಹೇಗಿದೆ? 
ಇಲ್ಲಿದೆ ಲಿಸ್ಟ್

9:52 AM

ಸಿದ್ದರಾಮೋತ್ಸವ: ರಾಹಲ್ ಗಾಂಧಿಗೆ ಅಧಿಕೃತ ಆಹ್ವಾನ

ಆಗಸ್ಟ್ ಮೂರರಂದು ಸಿದ್ದರಾಮೋತ್ಸವ ಆಚರಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಆಹ್ವಾನ ನೀಡಲು ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಸದಸ್ಯರು. ಬುಧವಾರ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಲಿರುವ ಸಮಿತಿ ಸದಸ್ಯರು. ಸಿದ್ದರಾಮಯ್ಯ 75 ವರ್ಷ ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಕೆ.ಎನ್ ರಾಜಣ್ಣ. ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಅವರು ದೆಹಲಿಗೆ ಪಯಣಿಸಲಿದ್ದಾರೆ. ಮಾಜಿ ಸಚಿವರಾದ ಹೆಚ್.ಸಿ ಮಹಾದೇವಪ್ಪ, ಆರ್.ವಿ ದೇಶಪಾಂಡೆ ಕೂಡ ತೆರಳುವ ಸಾಧ್ಯತೆ ಇದೆ. ಬುಧವಾರ ಬೆಳಿಗ್ಗೆ ಕೆಸಿ ವೇಣುಗೋಪಾಲ್ ಹಾಗೂ ರಾಜ್ಯ  ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಮೊದಲಿಗೆ ಭೇಟಿ ಮಾಡಿ ಮಾತುಕತೆ ನಡೆಸುವ ಸದಸ್ಯರು. ಬಳಿಕ ಹನ್ನೊಂದು ಗಂಟೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಆಹ್ವಾನ ನೀಡಲಿರುವ ಸಮಿತಿ ಸದಸ್ಯರು.

9:49 AM

ತುಮಕೂರು: ಕರಡಿ ದಾಳಿಯಿಂದ ರೈತನಿಗೆ ಗಂಭೀರ ಗಾಯ

ತುಮಕೂರು; ಬೆಳ್ಳಂಬೆಳಗ್ಗೆ ರೈತನ ಮೇಲೆ‌ ಕರಡಿ ದಾಳಿ ನಡೆದಿದ್ದು, ಕರಡಿ ದಾಳಿಯಿಂದ ರೈತನ ತಲೆಗೆ ಗಂಭೀರ ಗಾಯವಾಗಿದೆ. ಹೊಸಹಟ್ಟಿ ಗ್ರಾಮದ ಕರಿಯಣ್ಣ (50) ಕರಡಿ ದಾಳಿಗೆ ಒಳಗಾದ ರೈತ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಚೌಡೇನಹಳ್ಳಿಯಲ್ಲಿ ಘಟನೆ. ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ಕರಿಯಣ್ಣ. ಈ ವೇಳೆ ಹಲಸಿನ ಮರದಲ್ಲಿದ್ದ ಕರಡಿ ರೈತನ ಮೇಲೆ ಏಕಾಏಕಿ ದಾಳಿ. ತಲೆಗೆ ಗಂಭೀರವಾಗಿ ಪರಚಿರುವ ಕರಡಿ. ಕರಡಿಯಿಂದ ತಪ್ಪಿಸಿಕೊಂಡು ಬಂದ ರೈತ. ರೈತನಿಗೆ ಗಂಭೀರ ಗಾಯ. ರಕ್ತದ ಮಡುವಿನಲ್ಲೇ ರಸ್ತೆ ಬದಿ ಕುಳಿತ ಕರಿಯಣ್ಣ. ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೇನ್ಸ್ ಸಿಗದೇ ಪರದಾಟ. ಸತತ ಒಂದು ಗಂಟೆಯಿಂದ ಅಂಬ್ಯುಲೇನ್ಸ್ ಗೆ ಕರೆ ಮಾಡಿದ್ರು ಸ್ಫಂದಿಸದ ಆರೋಗ್ಯ ಇಲಾಖೆ. ಆರೋಗ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ.

9:48 AM

ಬೈಕ್ ಹಿಂಬದಿಗೆ ಲಾರಿ ಡಿಕ್ಕಿ, ಮಹಿಳೆ ಸಾವು, ಮೂವರಿಗೆ ಗಾಯ

ವಿಜಯನಗರ: ಬೈಕ್ ಹಿಂಬದಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವು ಮೂವರಿಗೆ ಗಂಭೀರ ಗಾಯವಾಗಿದೆ. ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದ ಬಳಿರಾ. ಹೆದ್ದಾರಿ 50 ರಲ್ಲಿ ಘಟನೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮ. ಹುಚ್ಚವನಹಳ್ಳಿ ಗ್ರಾಮದ ನೇತ್ರಾವತಿ (31) ಸ್ಥಳದಲ್ಲೇ ಸಾವು. ತಿಪ್ಪೇಸ್ವಾಮಿ ಹಾಗೂ ತಿಪ್ಪಮ್ಮ‌  ಮತ್ತೋರ್ವನಿಗೆ ಎನ್ನುವವರಿಗೆ ಗಂಭೀರ ಗಾಯ . ನಾಲ್ವರು ಒಂದೇ ಬೈಕ್‌ನಲ್ಲಿ ಸಂಡೂರಿನ ಹುಚ್ಚವಹಳ್ಳಿ ಗ್ರಾಮಕ್ಕೆ ತೆರಳುವ ವೇಳೆ ಅಪಘಾತ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ಪರಿಶೀಲನೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

9:46 AM

ಮಂಗಳೂರಿನಲ್ಲಿ ಯಾವುದೇ ಪಬ್ ದಾಳಿ ನಡೆದಿಲ್ಲ: ಕಮಿಷನರ್

'ಮಂಗಳೂರಿನಲ್ಲಿ ಯಾವುದೇ ಪಬ್ ದಾಳಿ ನಡೆದಿಲ್ಲ, ಅದು ಸತ್ಯಕ್ಕೆ ದೂರವಾದ ವಿಷಯ'. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ‌ಕಮಿಷನರ್ ಹೇಳಿಕೆ. ಪಬ್ ಮೇಲೆ ದಾಳಿ ಅಂತ ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಈ ವರದಿ ಸತ್ಯಕ್ಕೆ ದೂರ, ಯಾವುದೇ ಗ್ರಾಹಕರು ಅಥವಾ ಯಾರ ಮೇಲೂ ದಾಳಿ ನಡೆದಿಲ್ಲ. ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ ಆರೋಪಿಸಿ, ಸಂಘಟನೆಯವರು ಬಂದಿದ್ದಾರೆ. ಆದರೆ ಬೌನ್ಸರ್ ಬಳಿ ಹೇಳಿದಾಗ ಮ್ಯಾನೇಜರ್ ವಿದ್ಯಾರ್ಥಿಗಳ ಐಡಿ ಕೇಳಿದ್ದಾರೆ. ಐಡಿ ಕೇಳಿದಾಗ ಕೆಲ ವಿದ್ಯಾರ್ಥಿಗಳು ಅಲ್ಲಿಂದ ಹೊರಗೆ ಹೋಗಿದ್ದಾರೆ. ಆದರೆ ಯಾವುದೇ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆ ಆದರೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೊಡಬೇಕು. ಅದು ಬಿಟ್ಟು ಸಂಘಟನೆ ಹೆಸರಲ್ಲಿ ಈ ರೀತಿ ಪರಿಶೀಲನೆಗೆ ಅವಕಾಶ ಇಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಕೆಲ ದಿನಗಳ ಹಿಂದಿನ ಕಾಲೇಜು ವಿದ್ಯಾರ್ಥಿಗಳ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧ ಇಲ್ಲ. ಸಾಮಾಜಿಕ ತಾಣಗಳಲ್ಲಿ ಪ್ರಕರಣದ ಆರೋಪಿಗಳು ಮತ್ತು ಇಲ್ಲಿ ಪಾರ್ಟಿ ನಡೆಸ್ತಿದ್ದವರ ಬಗ್ಗೆ ಲಿಂಕ್ ಕಲ್ಪಿಸಲಾಗಿದೆ. ಆದರೆ ಅವರು ಮತ್ತು ಇವರಿಗೆ ಯಾವುದೇ ಸಂಪರ್ಕ ‌ಇಲ್ಲ. ರಾತ್ರಿಯೇ ಯಾವುದೇ ಅನೈತಿಕ ಘಟನೆ ಆಗಬಾರದು ಅಂತ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಲ್ಲರೂ ವಿದ್ಯಾರ್ಥಿಗಳಾದ ಕಾರಣ ಅವರನ್ನ ಸಂಪರ್ಕಿಸಲಾಗುತ್ತೆ. ಡ್ರಗ್ ಮಾಫಿಯಾ ತಡೆಗೆ ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಗಾಂಜಾ, ಎಂಡಿಎಂ ಸೇರಿ ಹಲವು ಡ್ರಗ್ ವಶಕ್ಕೆ ಪಡೆದಿದ್ದೇವೆ. ಈ ಭಾಗ ಕೇರಳಕ್ಕೆ ಸಂಪರ್ಕ ಇರೋ ಕಾರಣ ಡ್ರಗ್ ಮೂಮೆಂಟ್ ಇಲ್ಲಿದೆ. ಹೀಗಾಗಿ ಇದನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಎಲ್ಲೂ ಡ್ರಗ್ಸ್ ಪ್ರಕರಣ ನಡೆದಿಲ್ಲ. ಪಬ್, ರೆಸ್ಟೋರೆಂಟ್, ಬಾರ್ ಎಲ್ಲೂ ಅಂಥದ್ದು ವರದಿಯಾಗಿಲ್ಲ.

9:43 AM

ವಿದ್ಯುತ್ ತಂತಿ ತಗುಲಿ ಶಾಲಾ ಆವರಣದಲ್ಲಿ ಆಟವಾಡ್ತಿದ್ದ ವಿದ್ಯಾರ್ಥಿ ಸಾವು

ರಾಯಚೂರು: ವಿದ್ಯುತ್ ತಂತಿ ತಗುಲಿ ಶಾಲಾ ಆವರಣದಲ್ಲಿ ಆಟವಾಡ್ತಿದ್ದ ವಿದ್ಯಾರ್ಥಿ ಸಾವು. ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಕಿಲ್ಲಾರಹಟ್ಟಿ ಗ್ರಾಮದಲ್ಲಿ ಘಟನೆ. ಕಿಲ್ಲಾರಹಟ್ಟಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ (13) ಮೃತ ಬಾಲಕ. ಶಾಲಾ ಆವರಣದಲ್ಲಿ ಕ್ರಿಕೆಟ್ ಆಡುವಾಗ ಚೆಂಡು ತರಲು ಹೋಗಿದ್ದ ವೇಳೆ ದುರ್ಘಟನೆ. ನಿರ್ಮಾಣ ಹಂತದಲ್ಲಿರುವ ಬಿಸಿಯೂಟದ ಕೋಣೆಯ ಮೇಲಿನ ವಿದ್ಯುತ್ ತಂತಿ ತಗುಲಿ ಸಾವು. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

9:40 AM

ಕೋಲಾರದಲ್ಲಿ ಕಾರ್ಗಿಲ್ ವಿಜಯೋತ್ಸವ್ ಜಾತಾ

ಕೋಲಾರ: ಕೋಲಾರದಲ್ಲಿ ಕಾರ್ಗಿಲ್ ವಿಜಯೋತ್ಸವ್ ಜಾತಾ. ಕೋಲಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿಜಯೋತ್ಸವ್ ಜಾತಾ. 23ನೇ ಕಾರ್ಗಿಲ್ ವಿಜಯೋತ್ಸವ ಮತ್ತು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ವಿಜಯದ‌ ಯಾತ್ರೆ. ಭಾರತ‌ ತ್ರಿವರ್ಣ ಧ್ವಜ‌ ಹಿಡಿದು ಪ್ರಮುಖ‌ ರಸ್ತೆಗಳಲ್ಲಿ ನೂರಾರು ಅಗ್ನಿವೀರರು ಬಾಗಿ. ಕೋಲಾರ ನಗರದ ಬಂಗಾರಪೇಟೆ ವೃತ್ತದಿಂದ ಆರಂಭವಾದ ಜಾತಾ. ಬಂಗಾರಪೇಟೆ ಸರ್ಕಲ್, ಮೆಕ್ಕೆ ಸರ್ಕಲ್, ಹೊಸ ಬಸ್ ನಿಲ್ದಾಣ ವೃತ್ತದಿಂದ, ಕ್ಲಾಕ್ ಟವರ್ ಮೂಲಕ ಹೊರಟ ವಿಜಯದ ಯಾತ್ರಾ. ವಿಜಯ ಯಾತ್ರೆಯಲ್ಲಿ ನೂರಾರು ಅಗ್ನಿವೀರರು ಹಾಗೂ ಮಾಜಿ ಕಾರ್ಗಿಲ್ ಯೋಧರು ಬಾಗಿ.

4:33 PM IST:

ತಮಿಳುನಾಡಿನಲ್ಲಿ ಮತ್ತೋರ್ವ ಶಂಕಿತ ಉಗ್ರನ ವಶ ವಿಚಾರ. ಬೆಂಗಳೂರಿನ ಮಡಿವಾಳ ಟೆಕ್ನಿಕಲ್ ಸೆಲ್ ನಲ್ಲಿ ಶಂಕಿತನ ತೀವ್ರ ವಿಚಾರಣೆ. ತಮಿಳುನಾಡಿನಲಿ ಜುಬಾ ಎಂದು ಹೇಳಿಕೊಂಡಿದ್ದ ಶಂಕಿತ. ಅಬ್ದುಲ್ ಅಲೀಂ ಅನ್ನೋ ಹೆಸರನ್ನ ಜುಬಾ ಎಂದು ಹೇಳಿಕೊಂಡಿದ್ದ. ಸದ್ಯ ಶಂಕಿತ ಉಗ್ರ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಆದಿಲ್ ನ ತೀವ್ರ ವಿಚಾರಣೆ. ಶಂಕಿತನ ಮೊಬೈಲ್, ಆತನ ಬಳಿ ಪತ್ತೆಯಾಗಿರೋ ಡಿವೈಸ್ ಗಳನ್ನ ಪರಿಶೀಲನೆ. ಮೊಬೈಲ್ ಪರಿಶೀಲನೆ ವೇಳೆ ಶಂಕಿತನ ಬಗ್ಗೆ ಸಾಕಷ್ಟು ಮಾಹಿತಿ ಕಲೆ. ಕೆಲ ವರ್ಷಗಳ‌ ಹಿಂದೆ ಅಸ್ಸಾಂನಿಂದ ತಮಿಳುನಾಡಿಗೆ ಬಂದಿದ್ದ ಶಂಕಿತ. ಏನೂ ಓದದಿದ್ರೂ ಮೊಬೈಲ್, ನೆಟ್ ವರ್ಕ್ ಗಳ ಬಗ್ಗೆ ಚೆನ್ನಾಗಿ ತಿಳುದುಕೊಂಡಿದ್ದ. ಮೊದಲು ಸೇಲಂ ನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಅಲೀಂ ಮಂಡಲ್. ಮೊಬೈಲ್, ಇಂಟರ್ನೆಟ್, ವೆಬ್ ಸೈಟ್ ಗಳ‌ ಬಗ್ಗೆ ಸಾಕಷ್ಟು ಸರ್ಚ್ ಮಾಡ್ತಿದ್ದ ಶಂಕಿತ. ಸಂಘಟನೆಗಳ ಬಗ್ಗೆ ತುಂಬಾನೇ ಸರ್ಚ್ ಮಾಡ್ತಿದ್ದ ಶಂಕಿತ. ಸಂಘಟನೆಗಳು‌ ಹೇಗೆ ವರ್ಕ್ ಮಾಡುತ್ವೆ..? ಯಾವ ರೀತಿಯ ಯುವಕರನ್ನ ಸಂಘಟನೆಗೆ ಸೆಲೆಕ್ಟ್ ಮಾಡ್ತಾರೆ. ಅದಕ್ಕೆ ಯಾವ ರೀತಿ ತಯಾರಿ ಇರ್ಬೇಕು ಎಲ್ಲವನ್ನೂ ಆನ್ಲೈನ್ ಮೂಲಕ ತಿಳಿದುಕೊಳ್ತಿದ್ದ ಶಂಕಿತ. ಅಖ್ತರ್ ಕಾಂಟ್ಯಾಕ್ಟ್ ಆದ ಮೇಲೆ ಮತ್ತಷ್ಟು ಚುರುಕಾಗಿದ್ದ. ಇಬ್ಬರೂ ತಮ್ಮದೇ ಟೀಂ ಜೊತೆ ಸಂಘಟನೆ ಸೇರೋ ಪ್ಲಾನ್ ಮಾಡ್ತಿದ್ರು. ಸತತವಾಗಿ ಸಂಘಟನೆಗೆ ಸೇರೋದ್ರ ಬಗ್ಗೆಯೇ ಮಾತನಾಡಿಕೊಳ್ತಿದ್ದ ಶಂಕಿತರು. ಸಿಸಿಬಿ ಮತ್ರು ಎನ್ ಐಎ ಅಧಿಕಾರಿಗಳಿಂದ ಮುಂದುವರೆದ ತನಿಖೆ. 

3:44 PM IST:

ವಿಜಯಪುರದ ಆಲಮಟ್ಟಿಯಲ್ಲಿ ಬಿಜೆಪಿ ಶಾಸಕ ರಾಜೂಗೌಡ ಹೇಳಿಕೆ ನೀಡಿದ್ದಾರೆ. ಬಿಎಸ್ವೈ ನಿವೃತ್ತಿ- ಮುಂಬರುವ ಎಲೆಕ್ಷನ್ ನಲ್ಲಿ ಹಿನ್ನಡೆ ಆಗುತ್ತಾ ಎನ್ನುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಬಿಎಸ್ವೈ ಓರ್ವ ಶಾಸಕರಿಂದಲೇ ಪಕ್ಷ ಸಂಘಟನೆ ಮಾಡಿದ್ದವರು. ಇವತ್ತು 110-120ವರೆಗೆ ಶಾಸಕರಾಗಿದ್ದಾರೆ. ಬಿಎಸ್ವೈ ಅವ್ರು ಕಾರಣೀಭೂತರಾಗಿದ್ದಾರೆ. ಬಿಜೆಪಿಯಲ್ಲಿ 75ವರ್ಷವಾದ್ಮೇಲೆ ಕೊಡಬಾರದು ಎಂಬ ಪಾಲಿಸಿಯಿದೆ. ಆದರೂ ಯಡಿಯೂರಪ್ಪ ಅವರನ್ನು ವಿಶೇಷವಾಗಿ ಪರಿಗಣಿಸಿ ಮುಖ್ಯಮಂತ್ರಿ ಮಾಡಲಾಯ್ತು. ವಿಜಯೇಂದ್ರ ಅಣ್ಣಾವ್ರು ಬೇರೆ ಬೇರೆ ಕಡೆ ಸ್ಪರ್ಧಿಸ್ಬೇಕು ಅಂತ ಒತ್ತಡವಿತ್ತು. ಶಿಕಾರಿಪುರದಿಂದಲೇ ಸ್ಪರ್ಧೆ ಬಗ್ಗೆ ಹೇಳಿದ್ದಾರೆ ತಪ್ಪೇನಿಲ್ಲ. ಯಡಿಯೂರಪ್ಪನವರು ರಾಜಕೀಯದಿಂದ ನಿವೃತ್ತಿ ಆಗ್ತಿಲ್ಲ. ಚುನಾವಣೆಗೆ ಬಿಎಸ್ವೈ ಸ್ಪರ್ಧಿಸ್ತಿಲ್ಲ. ಬಿಎಸ್ವೈ ಮಾರ್ಗದರ್ಶನದಲ್ಲಿ ಬಿಜೆಪಿ ಮುನ್ನಡೆಸಲಾಗುತ್ತೆ. ಕ್ರಿಕೆಟ್ ನಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವರ್ಲ್ಡ್ ಕಪ್ ಗೆದ್ದಿದ್ದೀವಿ. ಅವರು ನಿವೃತ್ತಿ ಘೋಷಣೆ ಮಾಡಿದ್ಮೇಲೆ ಬಹಳ ಬೇಜಾರು ಆಯ್ತು. ಕಪಿಲ್ ದೇವ್ ಇಂಡಿಯನ್ ಟೀಮ್ ಕೋಚ್ ಆಗಿ ಕೆಲ್ಸ ಮಾಡಿದ್ರು. ಆ ರೀತಿ ಬಿಎಸ್ವೈ ಕೋಚ್ ಆಗಿ ನಮ್ಮ ತಂಡ ಹೇಗೆ ನಡೆಸ್ಬೇಕು ಹಾಗೆಯೇ ನಡೆಸುತ್ತಾರೆ. ವಿಜಯೇಂದ್ರ ಸಕ್ರೀಯ ರಾಜಕಾರಣದಿಂದ ಬಿಜೆಪಿಗೆ ಶಕ್ತಿ ಬರುತ್ತಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಓರ್ವ ಐಕಾನ್, ಒಳ್ಳೆ ಲೀಡರ್ ಎಂದರು. ಯುವಕರು ಅವರನ್ನು ಬಹಳ ಇಷ್ಟಪಡುತ್ತಾರೆ. ಅವ್ರು ಯಾಕೆ ರಾಜಕಾರಣಕ್ಕೆ ಬರಬಾರದು. 75ವರ್ಷ ಪೂರೈಸಿರುವ ಬಿಜೆಪಿ ನಾಯಕರು ಬಿಎಸ್ವೈ ನಡೆ ಅನುಸರಿಸುವ ವಿಚಾರ. ಯಾರ್ಯಾರಿಗೆ 75ವರ್ಷ ಆಗಿದೆ ಅಂತ ಡಾಕ್ಯುಮೆಂಟ್ ತಗೆಸ್ತಿದ್ದೀವಿ. ಅವರೆಲ್ಲಗೂ ಸಾಮೂಹಿಕವಾಗಿ ಬರ್ಥ್ ಡೇ ಆಚರಣೆ ಮಾಡುವ ಯೋಚನೆಯಿದೆ ಎಂದರು

3:14 PM IST:

ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ನಟಿ ಭಾವನಾ ಪಾಲ್ಗೊಂಡಿದ್ದ ವೇಳೆ, ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗಿದ್ರಿ, ಈಗ ಮತ್ತೆ ಮುಂದಿನ ಸಾಲಲ್ಲಿ ಕುಳಿತುಕೊಳ್ಳಲು ಯಾಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂಬಂಧ ಪ್ರತಿಕ್ರಿಯಿಸಿದ ಭಾವನಾ, ದೆಹಲಿಯಲ್ಲಿ ನಾನು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ. ರಂದೀಪ್ ಸಿಂಗ್ ಸುರ್ಜೇವಾಲ ಅವರು ಟ್ವೀಟ್ ನಲ್ಲೂ ಹಾಕಿದ್ದರು. ಅದಾದ ಬಳಿಕ ಸೇರ್ಪಡೆ ಬಗ್ಗೆ ಎಲ್ಲೂ ಸುದ್ದಿ ಆಗಿರಲಿಲ್ಲ. ಹಾಗಾಗಿ ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ. ಹಾಗಾಗಿ ಕಾರ್ಯಕರ್ತರ ಜೊತೆ ಆದ ಘಟನೆ ಸ್ವಾಭಾವಿಕ. ಹಾಗಾಗಿ ನಾನು ಸೇರ್ಪಡೆ ಆಗಿರುವ ಕುರಿತು ಫೋಟೋ ತೋರಿಸಿ ತಿಳಿಸಿದೆ. ಕಾಂಗ್ರೆಸ್ ‌ಪಕ್ಷ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೇನೆ. ಈಗ ಯಾವುದೇ ಹುದ್ದೆ, ಜವಾಬ್ದಾರಿ ಆಸೆ ಆಕಾಂಕ್ಷೆ ಹೊತ್ತು ಬಂದಿಲ್ಲ. ಪಕ್ಷ ಯಾವುದೇ ಕೆಲಸ ವಹಿಸಿದ್ರೂ ಮಾಡುತ್ತೇನೆ ಎಂದರು.

1:50 PM IST:

ದಾವಣಗೆರೆ ಯಲ್ಲಿ ಮಾಜಿ‌ಸಚಿವ ಜಮೀರ್ ಅಹ್ಮದ್ ಹೇಳಿಕೆ. ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನಲೆ  ಅಲ್ಪಸಂಖ್ಯಾತರ‌ ಪೂರ್ವಭಾವಿ ಸಭೆಯಲ್ಲಿ ಹೇಳಿಕೆ. ಉರ್ದು ಭಾಷೆಯಲ್ಲಿ ಭಾಷಣ ಆರಂಭಿಸಿದ ಜಮೀರ್. ಮುಸ್ಲಿಂರು ತಲೆ ತಗ್ಗಿಸಿ ನಡೆಬಾರದು, ತಲೆ ಎತ್ತಿ ನಡೆಯಬೇಕು. 2008 ರಲ್ಲಿ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಿದ್ದೇ.. ನನಗೆ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ನೀಡಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತು. ಕಾಂಗ್ರೆಸ್ ನಲ್ಲಿ ನನಗಿಂತ ಹಿರಿಯರಾದ ತನ್ವೀರ್ ಸೇಠ್‌, ಹ್ಯಾರಿಸ್ ನಂತಹವರು ಇದ್ರು. ಕಾಂಗ್ರೆಸ್ ನವರಲ್ಲಿ ಹಿರಿಯರು ಇದ್ರು ನನ್ನನ್ನು ಮಂತ್ರಿ ಮಾಡಿದ್ರು. ಆಗ ರಣದೀಪ್ ಸುರ್ಜೆವಾಲ್ ಕರೆ ಮಾಡಿ ಮಾತನಾಡಿದ್ರು. ನನಗೆ ಸುರ್ಜೆವಾಲ್ ರವರು ಕರೆ ಮಾಡುವುದು  ನನ್ನ ಬಳಿ ಹಣ ಇದೆ ಅಂತ ಅಲ್ಲ. ನನ್ನ ಹಿಂದೆ ಮುಸ್ಲಿಂ ಸಮಾಜ ಇದೆ ಎಂದು ಕರೆ ಮಾಡಿ ಮಾತ್ನಾಡ್ತಾರೆ. ವೇಣುಗೋಪಾಲ್, ರಾಹುಲ್ ಗಾಂಧಿ ಕರೆ ಮಾಡಿ ಯಾವ ಖಾತೆ ನೀಡ್ಬೇಕೆಂದು ಕೇಳಿದ್ರು. ನಾನು ಅದಕ್ಕೆ ಮುಸ್ಲಿಂರ ಸೇವೆ ಮಾಡಲು ವಕ್ಫ್  ಖಾತೆ ಕೊಡಿ ಎಂದು ಕೇಳಿಕೊಂಡಿದ್ದೇ. ವಕ್ಫ್ ಆಸ್ತಿ ಒತ್ತುವರಿಯಾಗಿತ್ತು ಆಗ ಜಮೀನು ಗುರುತಿಸಿ ಖಾತೆ ಮಾಡಿಸಿದೆ ಉಳಿಸಿದೆ. ಅದ್ರೇ ನಮ್ಮ ಹಣೆಬರಹ ಸರಿ ಇಲ್ಲ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಇಡೀ ಕರ್ನಾಟಕದಲ್ಲಿ 105 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದೆ. ಅಂತಹ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ನವರ ಪರ ನಿಲ್ಲಬೇಕು ಎಂದು ಮನವಿ ಮಾಡಿದ ಜಮೀರ್. ಅಂದಿನ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿಯವರಿಗೆ ಒತ್ತುವರಿಯಾದ ವಕ್ಫ್ ಆಸ್ತಿಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡೋಣ ಅಂತ ಹೇಳಿದೆ. ಇದರ ಉದ್ದೇಶ ವಕ್ಫ್ ಆಸ್ತಿ ಒತ್ತುವರಿ ಮಾಡುವುದು ಕಡಿಮೆ ಆಗುತ್ತೇ ಅಂತ. ಅದ್ರೇ ಹೆಚ್ಡಿ ಕುಮಾರಸ್ವಾಮಿ ಬೇಡ ರೈತರ ಸಾಲ ಮನ್ನಾ ಮಾಡ್ಬೇಕು ಹಣ ಇಲ್ಲ ಅಂದ್ರು. ಈ ವಿಚಾರವಾಗಿ ನಾನು ಸಿದ್ದರಾಮಯ್ಯ ಭೇಟಿ ಮಾಡಿದ್ದೆ. ಆಗ ಸಿದ್ದರಾಮಯ್ಯ ಅಂದ್ರು ನಾನು ಸಿಎಂ ಇದ್ದಾಗ ತಂದು ಕೊಟ್ಟಿದ್ರೇ ಐದುಸಾವಿರ ಕೋಟಿ ಕೊಡ್ತಿದೆ ಎಂದಿದ್ದರು. ಸಿದ್ದರಾಮಯ್ಯ ಕೊಟ್ಟಿರುವ ಭಾಗ್ಯಗಳು ಯಾರು ಕೊಟ್ಟಿಲ್ಲ ಎಂದು ಕೊಂಡಾಡಿದ್ರು. ಎಲ್ಲಿ ಅಲ್ಪಸಂಖ್ಯಾತರು ಇದ್ದಾರೆ ಅಭಿವೃದ್ಧಿ ಮಾಡಲು ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಾರೆ. ಗೋಹತ್ಯೆ ನಿಷೇಧ ವಿಚಾರ. ಮೀರ್ ಸಾಧಿಕ್ ಗಳು ಹೆಚ್ಚಿರುತ್ತಾರೆ ಹುಷಾರ್. ಗೋಹತ್ಯೆಯನ್ನು ಈ ಬಿಜೆಪಿ ಸರ್ಕಾರ ನಿಷೇಧ ಮಾಡಿದೆ. ಗೋ ಮಾಂಸವನ್ನು ನಾವು ಇಂದು ತಿನ್ನಲ್ಲ ನಾಳೆಯಿಂದ ತಿನ್ನುತ್ತೇವೆ ಏನ್ ಮಾಡ್ತೀರಾ. ಹೇ ಏನ್ ಮಾಡ್ತಿಯೋ ನಾಳೆಯಿಂದ ಧನದ ಮಾಂಸ ತಿನ್ನುತ್ತೇನೆ ಎಂದು ಕೇಳುವರು ಒಬ್ಬರೇ ಅದು ಸಿದ್ದರಾಮಯ್ಯ. ಟಿಪ್ಪು ಜಯಂತಿಯನ್ನು ಬ್ಯಾನ್ ಮಾಡಿ‌ ಎಂದಾಗ ವಿರುದ್ಧ ನಿಂತವರು ಸಿದ್ದರಾಮಯ್ಯ. ನೀವು ಏನ್ ಮಾಡ್ತಿರಾ ಮಾಡ್ಕೊಳ್ಳಿ ನಾನು ಟಿಪ್ಪು ಜಯಂತಿ ಮಾಡ್ತೀನಿ ಎಂದಿದ್ದು ಸಿದ್ದರಾಮಯ್ಯ. ನಮಾಜ್ ಮಾಡಿ ಬಳಿಕ ಸಿದ್ದರಾಮಯ್ಯ ನವರಿಗೆ ಅಧಿಕಾರ ಸಿಗಲಿ ಎಂದು ದುವಾ ಮಾಡಿ ಎಂದ ಮನವಿ ಮಾಡಿದ ಜಮೀರ್ ಅಹ್ಮದ್. 

1:31 PM IST:

ಸಾವಿರಾರು ವಿರೋಧ ಪಕ್ಷದ ನಾಯಕರ ಬಾಯಿಯನ್ನ ಮುಚ್ಚಲು ಹೊರಟಿದ್ದಾರೆ. ಬಿಜೆಪಿಯವರ ಒಬ್ಬರ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ, ವಿಚಾರಣೆ ಸಹ ಮಾಡಿಲ್ಲ. ಸೋನಿಯಾ ಗಾಂಧಿಯವರು ಈಗ ವಿಚಾರಣೆ ಎದರಿಸುತ್ತಿದ್ದಾರೆ‌.ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ. ನ್ಯಾಷನಲ್ ಹೆರಾಲ್ಡ್ ನ್ನ ಸೋನಿಯಾ ಗಾಂಧಿ ಸ್ವಂತ ಆಸ್ತಿಯಂದು ಹೇಳಿಲ್ಲ. ನಮ್ಮ ನಾಯಕರಿಗೆ ಕಿರುಕುಳ ಕೊಟ್ಟು ಜೈಲಿಗೆ ಹಾಕಲಿ. ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡ್ತಿದ್ದಾರೆ‌. ಯಾವ ಆಸ್ತಿ ಮಾಡಿಕೊಂಡಿದ್ದಾರೆ? ಸರ್ಕಾರಕ್ಕೆ ದೇಶಕ್ಕೆ ಅಂಥವರಿಗೆ ಕಿರುಕುಳ ಕೊಡ್ತಿದ್ದಾರೆ. 75 ವರ್ಷದ ಸ್ವತಂತ್ರೋತ್ಸವ ತಂದು‌ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನದ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಪ್ರಜಾಪ್ರಭುತ್ವ ಕಾರಣದಿಂದ ನೀವು ಪಿಎಂ ಆಗಿದ್ದೀರಾ. ಕಟ್ಟಿದ ಸಂಸ್ಥೆಗಳನ್ನ ಒಡೆದು ಹಾಕುತ್ತೀದ್ದೀರಾ. ಸೋನಿಯಾ ಗಾಂಧಿಯವರೇ ನಮ್ಮ ತಾಯಿ ರಾಹುಲ್ ಗಾಂಧಿ ನಮ್ಮ‌ ಸಹೋದರ. ಅವರ ಜೊತೆ ನಾವು ಇದ್ದೇವೆ, ಹೆದರುಕೊಳ್ಳಬೇಡಿ. ನಿಮ್ಗೂ ಒಳ್ಳೆಯ ಕಾಲ ಬರುತ್ತೆ. ದೇಶಕ್ಕೆ ಗಾಂಧಿ ಕುಟುಂಬ ಗುಲಾಮರು ಹೌದು. ಭಾರತಾಂಭೆ ಕೆಲಸ ಮಾಡಿದ ಗಾಂಧಿ ಕುಟುಂಬ. ಅವರು ಹೇಳ್ತಿದ್ದರಲ್ಲ ನಾವು ಗುಲಾಮರು ಅಂತ ಹೌದು. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ. ಜನರ ಸೇವೆ ಮಾಡ್ತಿದ್ದೇವೆ, ಭಾರತ ತಾಯಿ ಸೇವೆ ಮಾಡ್ತಿದ್ದೇವೆ. ಭಾರತ ತಾಯಿ ಮಕ್ಕಳಾದ ನಾವು ಭಾರತದ  ಕೆಲಸ ಮಾಡಿತ್ತಿದ್ದೇವೆ.

1:09 PM IST:

ಕರ್ನಾಟಕದ ಗಡಿಭಾಗದ ಮರಾಠಿ ಯುವ ಸಮೂಹ ಸೆಳೆಯಲು ಮಹಾರಾಷ್ಟ್ರ ಸರ್ಕಾರ ಸರ್ಕಸ್. ಛತ್ರಪತಿ ಶಿವಾಜಿ ವಿವಿಯಿಂದ ಕರ್ನಾಟಕದ ಗಡಿ ಭಾಗಸ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಯೋಜನೆ. ಗಡಿ ಭಾಗದ ವಿದ್ಯಾರ್ಥಿಗಳಿಗೆ ಕೊಲ್ಲಾಪುರದ ಶಿವಾಜಿ ವಿದ್ಯಾಪೀಠ ಉಚಿತ ಶಿಕ್ಷಣ ಯೋಜನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಛತ್ರಪತಿ ಶಿವಾಜಿ ವಿಶ್ವವಿದ್ಯಾಲಯ. ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಲು ಛತ್ರಪತಿ ಶಿವಾಜಿ ವಿವಿ ನಿರ್ಧಾರ. ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್‌ಗಳ ಆಫರ್ ನೀಡಿದ ವಿವಿ. ಕರ್ನಾಟಕ ಗಡಿಭಾಗದ 865 ಗ್ರಾಮಗಳ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ ಸರ್ಕಾರ ರತ್ನಗಂಬಳಿ. ಹೊಸ ಉಪಕ್ರಮದ ಬಗ್ಗೆ ಮಾಹಿತಿ ನೀಡಲು ಬೆಳಗಾವಿಯಲ್ಲಿ ಶಿಬಿರ ಆಯೋಜನೆ. ಛತ್ರಪತಿ ಶಿವಾಜಿ ವಿವಿ ಅಧ್ಯಾಪಕರು, ಮುಖ್ಯಸ್ಥರಿಂದ ಮಾರ್ಗದರ್ಶನ. ಶಿಬಿರದಲ್ಲಿ ಎಂಇಎಸ್‌ನ ಘಟಾನುಘಟಿ ನಾಯಕರು ಭಾಗಿ. ಮನೋಹರ ಕಿಣೇಕರ, ಶಿವಾಜಿ ಸುಂಟಕರ, ದೀಪಕ ದಳವಿ, ಶುಭಂ ಶಳಕೆ ಸೇರಿ ಹಲವರು ಭಾಗಿ.

1:07 PM IST:

ಮಂಗಳೂರಿನ ಪಬ್ ಪಾರ್ಟಿಗೆ ತಡೆಯೊಡ್ಡಿದ್ದನ್ನ ಸಮರ್ಥಿಸಿದ ಭಜರಂಗದಳ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಹೇಳಿಕೆ. ಅನ್ಯಾಯ ನಡೆದಾಗ ಸುಮ್ಮನೆ ಕೂರಲು ಭಜರಂಗದಳದಿಂದ ಸಾಧ್ಯವಿಲ್ಲ. ಇವತ್ತು ಇಂಥಹ ಘಟನೆ ಕಾರಣದಿಂದ ಮಂಗಳೂರಿಗೆ ಕೆಟ್ಟ ಹೆಸರು ತರಲು ನಾವು ಬಿಡಲ್ಲ. ಭಜರಂಗದಳ ಯಾವತ್ತೂ ಇಂಥ ಚಟುವಟಿಕೆಗಳನ್ನು ಸಹಿಸಲ್ಲ. ಇಂಥಹ ಘಟನೆ ‌ನಡೆದಾಗ ನಾವು ರಿಯಾಕ್ಷನ್ ‌ಮಾಡದೇ ಸುಮ್ಮನಿರಲ್ಲ. ಅಲ್ಲಿ ಫೇರ್ ವೆಲ್ ಪಾರ್ಟಿ ನಡೀತಾ ಇತ್ತು, ನಾವು ಪಬ್ ಒಳಗೆ ಹೋಗಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಇದ್ದರು, ಇದನ್ನ ‌ತನಿಖೆ ಮಾಡಬೇಕು. ಪೊಲೀಸ್ ಇಲಾಖೆಯ ಡ್ರಗ್ಸ್ ಮುಕ್ತ ಹೋರಾಟಕ್ಕೆ ‌ನಮ್ಮ ಬೆಂಬಲ ಇದೆ. ಪಬ್ ಗಳನ್ನ ಬಂದ್ ಮಾಡಲು ಮತ್ತು ಸಮಯಕ್ಕೆ ನಿಯಮ ಇದೆ. ಈ ನಿಯಮ ಮೀರಿ ‌ಪಾರ್ಟಿ ಮಾಡಿದ್ರೆ ಅದನ್ನ ‌ನಿಲ್ಲಿಸಲು ಭಜರಂಗದಳ ತಯಾರಿದೆ. ನಾವು ಪಬ್ ಮೇಲೆ ಯಾವುದೇ ರೀತಿಯ ದಾಳಿ ನಡೆಸಿಲ್ಲ. ದಾಳಿ ನಡೆದಿದ್ರೆ ಹಲ್ಲೆ, ದಾಂಧಲೆ ಹಾಗೂ ಅನಾಹುತ ಆಗ್ತಾ ಇತ್ತು. ನಮಗೆ ಬಂದ ಮಾಹಿತಿ ಪ್ರಕಾರ, ಮೊನ್ನೆಯ ಕಾಲೇಜು ವಿಡಿಯೋ ವೈರಲ್ ಆದ ವಿದ್ಯಾರ್ಥಿಗಳೇ ಇದ್ದರು ಅಂತ ಇತ್ತು. ಅಪ್ರಾಪ್ತರು ಇದ್ದ ಕಾರಣ ನಮ್ಮ ಸಂಘಟನೆ ‌ಕಾರ್ಯಕರ್ತರು ಪಬ್‌ನವರ ಜೊತೆ ಮಾತನಾಡಿ ನಿಲ್ಲಿಸಿದ್ದಾರೆ. ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟೇ ಮಕ್ಕಳನ್ನ ಮನೆಗೆ ಕಳುಹಿಸಲಾಗಿದೆ. ನಾವು ಹೋಗುವ ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಿದ್ದೇವೆ. ನಾವು ಪೊಲೀಸರು ಬರುವ ಮೊದಲು ನಾವು ಆಕ್ಷನ್ ಮಾಡಿಲ್ಲ. 

1:02 PM IST:

ಮಾಜಿ ಸಚಿವ ಈಶ್ವರಪ್ಪ ಪರ ಸಿ.ಟಿ‌ ರವಿ ಬ್ಯಾಟಿಂಗ್. ಈಶ್ವರಪ್ಪ ನವರಿಗೆ ಸಚಿವ ಸ್ಥಾನ ನೀಡಲು ಸಿ.ಟಿ ರವಿ ಒತ್ತಾಯ. ತನ್ನ ಮೇಲೆ ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಬೇಕು. ಪಕ್ಷ ಕಟ್ಟಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಕೂಡ ಒಬ್ಬರು. ಪಕ್ಷವನ್ನ ಈ ಹಂತಕ್ಕೆ ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಒಬ್ಬರು. ಸಿಎಂ ಎಂದು ಬೋರ್ಡ್, ಫ್ಲೆಕ್ಸ್ ಹಾಕಿಕೊಂಡ ತಕ್ಷಣ ಸಿಎಂ ಆಗ್ತೀನಾ. ಸೋಶಿಯಲ್ ಮೀಡಿಯಾದಲ್ಲಿ ಹೇಳಿ, ಜನರ ಕೈನಲ್ಲಿ ಕೂಗಿಸುತ್ತಿದ್ದಂತೆ ಸಿಎಂ ಆಗ್ತೀನಾ. ಕೊಟ್ಟಿದ್ದನ್ನೇ ಉಳಿಸಿಕೊಳ್ಳಲಾಗಿಲ್ಲ, ಇನ್ನು ಗಳಿಸೋದು ಉಂಟಾ. ಸಿದ್ದರಾಮಯ್ಯನ ಸ್ಟೈಲಲ್ಲೇ ಹೇಳೋದಾದ್ರೆ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು. ಜನ ಪಕ್ಷಕ್ಕೆ ಮತ ಹಾಕಿದ ಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು. 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ನೂರಕ್ಕೆ ನೂರು ಪಾಲು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದಕೊಳ್ಳುತ್ತೆ. ಛತೀಸ್‍ಗಡದಲ್ಲಿ ನೂರಕ್ಕೆ ನೂರರಷ್ಟು ಅಧಿಕಾರ ಕಳೆದುಕೊಳ್ಳುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ.ಟಿ ರವಿ ಹೇಳಿಕೆ.

12:08 PM IST:

ಧಾರವಾಡದಲ್ಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸುದ್ದಿಗೋಷ್ಠಿ. 2ಎ ಮೀಸಲಾತಿಗೆ 30 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಪಂಚಮಸಾಲಿ ರ್ಯಾಲಿ. ಆದಷ್ಟು ಬೇಗ ನಮಗೆ ಮೀಸಲಾತಿ ನೀಡಬೇಕು. ಚೆನ್ನಮ್ಮನ ವೃತ್ತದಲ್ಲಿ ಸತ್ಯಾಗ್ರಹ ಮಾಡೋದಾಗಿ ಚಿಂತಿಸಲಾಗಿದೆ. ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ. ಹಲವು ಸಮಾಜದವರು ಈಗಾಗಲೇ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಅವರ ಜೊತೆಗೆ ನಮಗೂ ಸಹ ಸರ್ಕಾರ ಮೀಸಲಾತಿ ನೀಡಬೇಕು. ಧಾರವಾಡದ ಜನಪ್ರತಿನಿಧಿಗಳು ಸಹ ಬೆಂಬಲ ಸೂಚಿಸಲಿ. ಅಥವಾ ಬೆಂಬಲ ಇದಿಯೋ ಇಲ್ಲವೋ ಹೇಳಲಿ. ಚುನಾವಣೆ ಇರುವ ಹಿನ್ನೆಲೆ ಮೀಸಲಾತಿ ನಿರ್ಲಕ್ಷ್ಯ ಮಾಡಿದ್ರೆ, ಮುಂದಿನ ಚುನಾವಣೆಯಲ್ಲಿ ನಾವು ಸಹ ಬೆಂಬಲ ಸೂಚಿಸದೆ ಇರಬಹುದು ಎನ್ನುವ ಎಚ್ಚರಿಕೆ. ಬಸನಗೌಡ ಪಾಟೀಲ್ ಯತ್ನಾಳ್ ಸತ್ಯಾಗ್ರಹಕ್ಕೆ ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ನೆಹರು ಮೈದಾನದಿಂದ ಚೆನ್ನಮ್ಮ ವೃತ್ತದ ವರೆಗೂ ಬೃಹತ್‌ ರ್ಯಾಲಿ ಮಾಡಲಾಗುತ್ತೆ. ಹೋರಾಟಕ್ಕೆ ಪಂಚಮಸಾಲಿ ಸಮುದಾಯದ ಶಾಸಕರು ಭಾಗವಹಿಸಿ. ಭಾಗವಹಿಸದಿದ್ದರೆ ಸಮಾಜ ಅಸಮಾಧಾನ ಗೊಂಡು ನಿಮ್ಮಿಂದ ದೂರವಾಗುತ್ತೆ.  ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಗೆ ಮನವಿ ಸಲ್ಲಿಸಲಾಗುವುದು ಎಂದ ಸ್ವಾಮಿಜಿ.

11:44 AM IST:

ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಾಮುಖ್ಯತೆ ಕಳೆದುಕೊಳ್ತಾ ಶಿಸ್ತು ಸಮಿತಿ..?
ಹಿರಿಯ ಮುಖಂಡ ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿ ಬಗ್ಗೆ ಬೇಸರ..
ಶಿಸ್ತು ಸಮಿತಿಯ ಕಾರ್ಯವೈಖರಿ ಬಗ್ಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ..
ಪಕ್ಷದ ಶಿಸ್ತು ಉಲ್ಲಂಘನೆ ಮಾಡುವ ನಾಯಕರ ಮೇಲೆ ಕ್ರಮ ಕೈಗೊಳ್ಳಲು ಮೀನಾಮೇಷ...!
ಶಿಸ್ತು ಸಮಿತಿಯ ವಿಳಂಬ ಧೋರಣೆ ಮತ್ತು ಕಾರ್ಯವೈಖರಿ ಬಗ್ಗೆ ಕೈಪಾಳಯದಲ್ಲಿ ಚರ್ಚೆ...

ಶಿಸ್ತು ಸಮಿತಿಯ ನಡವಳಿಕೆ ಕುರಿತು ಬೇಸರ ಹೊರ ಹಾಕಿರುವ ತಟಸ್ಥ ನಾಯಕರು..
ಸಿಎಂ ಹುದ್ದೆ ಕುರಿತು ಹೇಳಿಕೆ ನೀಡ್ತಿರುವ ನಾಯಕರ ಮೇಲೆ ಯಾಕೆ ಕ್ರಮ ಇಲ್ಲ..
ಸಿದ್ಧು ಮತ್ತು ಡಿಕೆಶಿ ಬೆಂಬಲಿಗರ ಮೇಲೆ ಯಾಕೆ ಕ್ರಮ ಕೈಗೊಳ್ಳಲು ಮುಂದಾಗ್ತಿಲ್ಲ.
ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಶಿಸ್ತು ಸಮಿತಿ ಹಿಂದೇಟು ಹಾಕ್ತಿರುವುದು ಸರಿಯಲ್ಲ..
ಯಾವುದೇ ಮುಲಾಜಿಲ್ಲದೇ ಆಕ್ಷೇಪಾರ್ಹ ಹೇಳಿಕೆ ನೀಡೋರ ಮೇಲೆ ಕ್ರಮ ಕೈಗೊಳ್ಳಲಿ..
ಶಿಸ್ತು ಸಮಿತಿಗೆ ಒತ್ತಡ ಹಾಕಿರುವ  ಕಾಂಗ್ರೆಸ್ ನಲ್ಲಿರುವ ತಟಸ್ಥ ಬಣದ ನಾಯಕರು..

ಶಿಸ್ತು ಸಮಿತಿಯ ಈ ಹಿಂದಿನ ಲೋಪಗಳನ್ನು ಪಟ್ಟಿ ಮಾಡಿರುವ ತಟಸ್ಥ ನಾಯಕರು..

ಒಂದು ವರ್ಷದ ಹಿಂದೆಯೂ ಸಿದ್ಧರಾಮಯ್ಯ ಸಿಎಂ ಆಗಲಿ ಎಂದಿದ್ದ  ಶಾಸಕ ಜಮೀರ್ ಅಹಮದ್..
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದಿದ್ದ ಶಾಸಕಿ ಸೌಮ್ಯ ರೆಡ್ಡಿ..
ಇಬ್ಬರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡದ ಶಿಸ್ತು ಸಮಿತಿ..
ಕೇವಲ ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದ ಶಿಸ್ತು ಸಮಿತಿ ಬಗ್ಗೆ ಬೇಸರ..

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸಲೀಂ ಮತ್ತು ಉಗ್ರಪ್ಪ..
ಪತ್ರಿಕಾಗೋಷ್ಠಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ್ದ ಉಗ್ರಪ್ಪ ಮತ್ತು ಸಲೀಂ..
ಆದರೆ ಸಲೀಂ ಅವರಿಗೆ ಮಾತ್ರ ನೊಟೀಸ್ ಕೊಟ್ಟು ಸುಮ್ಮನಾಗಿದ್ದ ಶಿಸ್ತು ಸಮಿತಿ..
ಉಗ್ರಪ್ಪಗೆ ನೋಟೀಸ್ ಕೊಡದೇ ಪ್ರಕರಣ ಮುಕ್ತಾಯ ಮಾಡಿದ್ದ ಶಿಸ್ತು ಸಮಿತಿ ಕ್ರಮಕ್ಕೆ ಆಕ್ಷೇಪ..

ಬೆಂಬಲಿಗರ ಸಭೆ ನಡೆಸಿ ಕಾಂಗ್ರೆಸ್ ನಾಯಕತ್ವ ಪ್ರಶ್ನಿಸಿದ್ದ ಮಾಜಿ ಸಚಿವ ಎಂ.ಆರ್ ಸೀತಾರಾಮ್..
ಸೀತಾರಾಮ್ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಎಂ.ಎಲ್ ಸಿ ಎಂ.ಡಿ.ಲಕ್ಷ್ಮೀನಾರಾಯಣ್..
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್  ಸಹ ಬೆಂಬಲಿಗರ ಸಭೆಯಲ್ಲಿ ಭಾಗಿ..
ಆದರೆ ಎಂ.ಡಿ.ಲಕ್ಷ್ಮೀನಾರಾಯಣ ಅವರಿಗೆ ಮಾತ್ರ ನೊಟೀಸ್ ಕೊಟ್ಟಿರುವ ಶಿಸ್ತು ಸಮಿತಿ..
ಎಂ.ಆರ್ ಸೀತಾರಾಮ್., ಬಿ.ಕೆ.ಸಂಗಮೇಶ್ ಗೆ ನೊಟೀಸ್ ಕೊಡದಿರುವ ಶಿಸ್ತು ಸಮಿತಿಯ ಬಗ್ಗೆ ಅನುಮಾನ..

ಈಗ ಮತ್ತೇ ಸಿದ್ಧರಾಮಯ್ಯ ಪರವಾಗಿ ಶಾಸಕ ಜಮೀರ್ ಅಹಮದ್ ಅವರಿಂದ ಬಹಿರಂಗ ಹೇಳಿಕೆ..
ಜಮೀರ್ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕ್ತಿರುವ ಕಾಂಗ್ರೆಸ್ ಶಿಸ್ತು ಸಮಿತಿ...
ಶಿಸ್ತು ಸಮಿತಿಯ ಮೌನದ ಬಗ್ಗೆ ಕಾಂಗ್ರೆಸ್ ಪಾಳಯದಲ್ಲೇ ತೀವೃ ಬೇಸರ..

11:43 AM IST:

ಕಾಗಿ೯ಲ್ ವಿಜಯ್ ದಿವಸ ಆಚರಣೆ ಹಿನ್ನೆಲೆ. ಬಾಗಲಕೋಟೆಯಲ್ಲಿ ದೇಶಭಕ್ತರಿಂದ ಬೈಕ್ ರ್ಯಾಲಿ. ಸಾಮಾಜಿಕ ಕಾರ್ಯಕರ್ತ ಘಣಶ್ಯಾಂ ಭಾಂಡಗೆ ನೇತೃತ್ವದಲ್ಲಿ ನಡೆದ ಬೈಕ್ ರ್ಯಾಲಿ. ನಗರದ ಬೀಳೂರಜ್ಜನ ದೇವಸ್ಥಾನದಿಂದ ಆರಂಭಗೊಂಡು ನವನಗರ, ವಿದ್ಯಾಗಿರಿಯಲ್ಲಿ ಬೈಕ್ ರ್ಯಾಲಿ ಸಂಚಾರ. ರಾಷ್ಟ್ರಧ್ವಜ ಹಿಡಿದು ದೇಶಭಕ್ತಿ ಘೋಷಣೆ ಕೂಗುತ್ತಾ ನಡೆದ ಬೈಕ್ ರ್ಯಾಲಿ. ಭಾರತ ಮಾತಾ ಕಿ ಜೈ, ಒಂದೇ ಮಾತರಂ ಘೋಷಣೆಗಳೊಂದಿಗೆ ನಡೆದ ಬೈಕ್ ರ್ಯಾಲಿ.

11:26 AM IST:

ಖಾಸಗಿ ವಾಹಿನಿಯಿಂದ ಯಕ್ಷಗಾನಕ್ಕೆ ಅವಮಾನ ಆರೋಪ. ಕರಾವಳಿಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ. ಪ್ರಖ್ಯಾತ ಡ್ಯಾನ್ಸ್ ಶೋನಲ್ಲಿ ಯಕ್ಷಗಾನಕ್ಕೆ ಅವಮಾನ? ಯಕ್ಷಗಾನವನ್ನು ಅಶ್ಲೀಲವಾಗಿ ಬಿಂಬಿಸಿದ ಆರೋಪ. ಸಾಂಪ್ರದಾಯಿಕ ಆರಾಧನಾ ಕಲೆಯ ಬಗ್ಗೆ ಖಾಸಗಿ ವಾಹಿನಿಯಿಂದ ಅವಗಣನೆ ಆರೋಪ. ಕರಾವಳಿ ಭಾಗದಲ್ಲಿ ದೇವರ ಆರಾಧನೆಯ ಭಾಗವಾಗಿ ನಡೆಯುವ ಯಕ್ಷಗಾನ. ಯಕ್ಷಗಾನದ ವೇಷ ಧರಿಸಿ ಅಶ್ಲೀಲ ನೃತ್ಯ ಮಾಡಿದ ಆರೋಪ. ಖಾಸಗಿ ವಾಹಿನಿಯಿಂದ ಸತತ ಮೂರನೇ ಬಾರಿ ಯಕ್ಷಗಾನಕ್ಕೆ ಅವಮಾನ!? ಕರಾವಳಿಯ ಯಕ್ಷಗಾನ ಅಭಿಮಾನಿಗಳಿಂದ ಅಭಿಯಾನ. ಯಾವುದೇ ಖಾಸಗಿ ವಾಹಿನಿಯಲ್ಲೂ ಯಕ್ಷಗಾನಕ್ಕೆ ಅವಮಾನವಾಗಬಾರದು. ಈ ಬಗ್ಗೆ ಪರೀಕ್ಷಿಸಲು ಸಮಿತಿ ರಚನೆ ಮಾಡಬೇಕು. ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಗೆ ಯಕ್ಷಗಾನ ಅಭಿಮಾನಿಗಳಿಂದ ದೂರು. ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿರುವ ಸಚಿವರು. ಕರಾವಳಿ ಭಾಗದಲ್ಲಿ ಹರಕೆ ಹೊತ್ತು ಯಕ್ಷಗಾನ ನಡೆಸುತ್ತಾರೆ. ದೇವಾಲಯಗಳು ಯಕ್ಷಗಾನ ಮೇಳ ನಡೆಸುತ್ತವೆ. ಈ ಪ್ರದರ್ಶನದಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಯಕ್ಷಗಾನ ವೇಷಧಾರಿಗಳಿಗೆ ಸಿನಿಮಾ ನಟರಂತೆ ಅಭಿಮಾನಿಗಳಿದ್ದಾರೆ. ಯಕ್ಷಗಾನ ಕರಾವಳಿಯ ಸಾಂಪ್ರದಾಯಿಕ ಕಲೆ. ಇನ್ನು ಮುಂದೆ ಯಕ್ಷಗಾನಕ್ಕೆ ಅವಮಾನವಾದರೆ ಸಹಿಸಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೋಪ ಹೊರ ಹಾಕುತ್ತಿರುವ ಅಭಿಮಾನಿಗಳು. ಯಕ್ಷಗಾನ ಪ್ರೇಮಿಗಳಿಂದ ಕೋಟ ಪೊಲೀಸ್ ಠಾಣೆಗೆ ದೂರು ಅರ್ಜಿ. ನೋವುಂಟು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ. ವಾಹಿನಿಯ ಮುಖ್ಯಸ್ಥರು ಮತ್ತು ನೃತ್ಯ ಸಂಯೋಜಕರು ಕ್ಷಮೆಯಾಚಿಸಬೇಕು. ಅದೇ ಕಾರ್ಯಕ್ರಮದಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಅಭಿಯಾನ ನಡೆಸುತ್ತಿರುವ ಯಕ್ಷಗಾನ ಅಭಿಮಾನಿಗಳು.

11:23 AM IST:

ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳದಲ್ಲಿ ಸ್ಪರ್ಧೆ ವಿಚಾರ. ಸಿದ್ದರಾಮಯ್ಯ ಒಬ್ಬ ರಾಜ್ಯದ ನಾಯಕ. ಅಂತಹ ನಾಯಕನಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನ ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಸಂಸದ ಕರಡಿ ಸಂಗಣ್ಣ ಹೇಳಿಕೆ. ಸಿದ್ದರಾಮಯ್ಯನವರಿಗೆ ಇಂತಹ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಹೀಗಾಗಿ ಅವರು ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಕಾನ್ಫಿಡೆನ್ಸ್ ಇದ್ದರೆ ಇಂತಹ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಲಿ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಪೈಪೋಟಿ ವಿಚಾರ. ಇದು ಮತ್ತಷ್ಟು ತೀವ್ರವಾಗಲಿ. ಇದರಿಂದ ಬಿಜೆಪಿಗೆ ಲಾಭ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ವಿಚಾರ. ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಇಲ್ಲ. ನಾನು ಹಾಲಿ ಸಂಸದನಾಗಿದ್ದೇನೆ. ನನ್ನ ಅವಧಿ ಇನ್ನೂ 1 ವರ್ಷ 9 ತಿಂಗಳು ಇದೆ. ಹೀಗಾಗಿ ನಾನು ಸ್ಪರ್ಧೆ ಮಾಡುವುದಿಲ್ಲ. ಸ್ವಇಚ್ಛೆಯಿಂದ ನಾನು ಸ್ಪರ್ಧೆಗೆ ಬಯಸುವುದಿಲ್ಲ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಲಿದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಡಿಕೆಶಿ ಸಿಂ ಸ್ಥಾನಕ್ಕಾಗಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ ವಿಚಾರ. ಒಂದು ಜನಾಂಗದಿಂದ ಸಿಎಂ ಆಗಲು ಸಾಧ್ಯವಿಲ್ಲ. ಎಲ್ಲ ಜನಾಂಗದವರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ. ಡಿಕೆಶಿ,ಸಿದ್ದರಾಮಯ್ಯ, ಎಂ ಬಿ ಪಾಟೀಲ್,ರಾಮಲಿಂಗಾರೆಡ್ಡಿ ನಡುವೆ ಪೈಪೋಟಿ ನಡೆದಿದೆ. ಜಮೀರ್ ಸಹ ನಾವು ಸಿಎಂ ಆಗಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಆಂತರಿಕ ಸಂಘರ್ಷ ನಡೆಯುತ್ತಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ. ಸಿದ್ದರಾಮಯ್ಯ ಸ್ಪರ್ಧೆಯನ್ನು ನಾವು ವಿರೋಧ ಮಾಡಲು ಬರುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡಿ ಸೋತಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅದು ಅವರ ಪಕ್ಷದ ತೀರ್ಮಾನ. ಕಾಂಗ್ರೆಸ್ ನವರು ಕೂಸು ಹುಟ್ಟುಮುನ್ನ ಕುಲಾಯಿ ಒಲೆಸುತ್ತಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರವುದರಲ್ಲಿ ಸಂದೇಹ ಇಲ್ಲ. ಇಡಿಯಿಂದ ಇಂದು ಸೋನಿಯಾಗಾಂಧಿ ವಿಚಾರಣೆ ಹಿನ್ನಲೆ. ದೇಶದಲ್ಲಿ ಕಾಂಗ್ರೆಸ್ ಮುಳುಗಿದೆ. ಇಡಿ ಮೂಲಕ ಕಾಂಗ್ರೆಸ್ ಉಳಿದಿದೆ ಎಂದು ತೋರಿಸುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಕಾಂಗ್ರೆಸ್ ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ. ಕಾಂಗ್ರೆಸ್ ನವರು ಪ್ರಜಾಪ್ರಭುತ್ವ ವನ್ನು ವಿರೋಧಿಸುತ್ತಾರೆ. ಇಡಿ ಖರ್ಗೆ, ಮೋದಿ, ಅಮಿತ್ ಶಾ ಅವರನ್ನೂ ಸಹ ವಿಚಾರಣೆ ಮಾಡಿದೆ. ಅವ್ಯವಹಾರ ನಡೆದಿದ್ದರೆ ಇವತ್ತಿಲ್ಲ ನಾಳೆ ಕಾನೂನು ಕ್ರಮತೆಗೆದುಕೊಳ್ಳುತ್ತೆ ಎಂದ ಸಂಸದ ಸಂಗಣ್ಣ.

10:20 AM IST:

ಬೆಳಗಾವಿ: RTO ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಆಟೋ, ಟೆಂಪೋ ಚಾಲಕರಿಂದ RTO ಅಧಿಕಾರಿಗಳಿಂದ ದಂಡ ವಸೂಲಿಗೆ ಗರಂ. ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್‌ ಅವರನ್ನು ತರಾಟೆಗೆ ತೆಗೆದುಕೊಂಡ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ತರಾಟೆ ತೆಗೆದುಕೊಂಡರು. ಹೊಟ್ಟೆ ಪಾಡಿಗಾಗಿ ‌ಮಳೆಯಲ್ಲಿ, ಚಳಿಯಲ್ಲಿ, ಬಿಸಿಲಲ್ಲಿ ದುಡಿಯುತ್ತಿದ್ದಾರೆ. ಕಳ್ಳತನ, ಮೋಸ, ಸುಳ್ಳು ಹೇಳದೆ ಬೆವರು ಸುರಿಸಿ ದುಡಿಯವವರ ಮೇಲೇಕೆ ಕೇಸ್ ಹಾಕ್ತಿದ್ದಿರಿ. ಮೇಲಿನವರು ಟಾರ್ಗೆಟ್ ‌ಕೊಟ್ಟಿದ್ದಾರೆ ಅಂತ ಕೇಸ್ ಹಾಕಿದ್ರೆ ಹೇಂಗೆ?ಅವರು ಎಲ್ಲಿ ಸಾಯಬೇಕು? ಅವರೇನು ಸಿರಿವಂತರಲ್ಲ, ಸಾಲ ಕಟ್ಟಿ, ಉಳಿದ ದುಡ್ಡಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನಿಮಗೆ ಟಾರ್ಗೆಟ್ ‌ಕೊಟ್ಟಿರುವುದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಿರಾ?ನೀವು ಸರ್ಕಾರಿ ನೌಕರರು, ನಾನು ಸರ್ಕಾರದಲ್ಲಿ ಕೆಲಸ ಮಾಡ್ತಿನಿ. ಪ್ರತಿಯೊಂದು ಕಾನೂನು ‌ಚೌಕಟ್ಟು ಬಿಟ್ಟು ಏನು ಆಗಲ್ಲ. ಬಡವರ ತೊಂದರೆ ಆಗಬಾರದು ಎಂದು ನಿಮ್ಮ ಬಳಿ ಬಂದಿದ್ದೇನೆಇವತ್ತು ನಿಮ್ಮ ಮುಂದೆ ಕುಂತಿದಿನಿ ನಾಳೆ, ನಿಮ್ಮ ಕಚೇರಿ ಮುಂದೆ ಬಂದು ಧರಣಿ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ ಲಕ್ಷ್ಮೀ.  ಎಲ್ಲವನ್ನೂ ನೀವು ಕಾ‌ನೂನು ಪ್ರಕಾರ ಮಾಡ್ತಿರಾ? ನಿಮಗೆ ಒತ್ತಡ ಇದ್ರೆ ಅದನ್ನು ಬೇರೆ ರೀತಿ ಮನವೊಲಿಸಿ. ದುಡಿದು ತಿನ್ನುವ ವರ್ಗಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಮೊದಲೇ‌ ದೇಶದಲ್ಲಿ ಉದ್ಯೋಗ ಇಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. 

10:16 AM IST:

ಮಣಿಪುರ ಮೂಲದ ವಾಹೆಂಗಬಮ್ ಲಲಿತ್ ಸಿಂಗ್ ಬಂಧನ. ಕನ್ನಡ ಬಾರದಿದ್ದರೂ ಕನ್ನಡಿಗರಿಗೆ ಹಾಕಿದ್ದಾನೆ ಪಂಗನಾಮ. ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಅವರ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹೆಸರು ಹೇಳಿ ಮೋಸ. ಬರಿಗೈಲಿ ಬೆಂಗಳೂರಿಗೆ ಬಂದವನು ಈಗ ಕೋಟಿ ಕೋಟಿ ಒಡೆಯ. ವಂಚನೆಯನ್ನೇ ವೃತ್ತಿಯಾಗಿಸಿಕೊಂಡವನು ಕೋಟ್ಯಾಧೀಶ. ಫ್ಲ್ಯಾಟ್ ಮಾರಾಟದಲ್ಲಿ ಕನ್ನಡಿಗರಿಗೆ ಮೋಸ ಮಾಡುತ್ತಿದ್ದ ಲಲಿತ್, ಅಪಾರ್ಟಮೆಂಟ್‌ನ ಪ್ಲ್ಯಾಟ್ ಖರೀದಿಯಲ್ಲಿ ಮಹಾ ಮೋಸ ಮಾಡಿತ್ತಿರುವ ಲಲಿತ್. ಒಂದೇ ಪ್ಲ್ಯಾಟ್ ಹಲವರಿಗೆ ಮಾರಾಟ ಮಾಡಿ ವಂಚನೆ. ಮಾರಾಟ ಮಾಡುವದಾಗಿ ಹೇಳಿ ಕೋಟಿ ಕೋಟಿ ಪಡೆದು ಅಗ್ರಿಮೆಂಟ್. ವ್ಯವಹಾರದ ವೇಳೆ ಚೆಕ್ ಬೇಡ ಹಣ ಕೊಡಿ ಎನ್ನುವ ಲಲಿತ್. ಲಂಚ ಕೊಡಲು ಚೆಕ್ ನಡಿಯಲ್ಲ, ಹಣವೇ ಬೇಕು ಎನ್ನುವ ವಂಚಕ. ಬ್ಲ್ಯಾಕ್ ಮನಿ ಮೂಲಕ ವ್ಯವಹಾರ ನಡೆಸುತ್ತಿದ್ದ ಚಾಲಾಕಿ. ಸಿಎಂ ಬೊಮ್ಮಾಯಿ ಹಾಗೂ ಮಂಜುನಾಥ್ ಪ್ರಸಾದ್‌ಗೆ ಲಂಚ ನೀಡಬೇಕು ಅಂತ ಹೇಳುವ ಲಲಿತ್. ಜಯನಗರ ಪೊಲೀಸರಿಂದ ವಂಚಕ ಲಲಿತ್ ಸಿಂಗ್ ಬಂಧನ.ಮೂವರು ಪಾಲುದಾರರನ್ನು ಹೊಂದಿರುವ ಕಂಪನಿ. ಪಾಲುದಾರರಿಗೂ ಮೋಸ ಮಾಡಿರುವ ಲಲಿತ್. ಮೂವರು ಪಾಲುದಾರರಲ್ಲಿ ಹಿರೇನ್ ವಾಹೇನ್ ಬಿಲ್ಡ್ ಟೆಕ್ ಕಂಪನಿಯಲ್ಲಿ ಒಬ್ಬ ಪಾಲುದಾರ. ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬ ಪಾಲುದಾರನಾಗಿದ್ದ. ಭೂಮಿ ಮಾಲೀಕ, ಹೂಡಿಕೆದಾರನನ್ನ ಓಡಿಸಿದ ಲಲಿತ್ ಸಿಂಗ್. ರೌಡಿಗಳನ್ನ ಬಿಟ್ಟು ಹೆದರಿಸಿ ಇಬ್ಬರು ಪಾಲುದಾರರನ್ನು ಹೆದರಿಸುತ್ತಿದ್ದ. ಭಯದಿಂದ ಇಬ್ಬರೂ ಪಾಲುದಾರರು ದೂರ ಉಳಿದರು. ಇಬ್ಬರನ್ನ ದೂರವಿಟ್ಟು ಲಲಿತ್ ಸಿಂಗ್ ಆಟಾಟೋಪ. ಒಂದೇ ಫ್ಲ್ಯಾಟ್‌ನ್ನ ನಾಲ್ಕಾರು ಜನಕ್ಕೆ ಮಾರಾಟ. C-4 204ನ 1574 ಚದರಡಿ ಇರುವ ಒಂದೇ ಫ್ಲ್ಯಾಟ್‌ನ್ನ ಚಿತ್ರಾ ಮತ್ತು ಅವಿನಾಶ್ ಇಬ್ಬರಿಗೂ ಮಾರಾಟ..‍! ಕಂಪನಿಯ ಇನ್ನೊಬ್ಬ ಪಾಲುದಾರನಿಂದ ಪೊಲೀಸರಿಗೆ ದೂರು. ಬೊಮ್ಮಾಯಿ, ಮಂಜುನಾಥ್ ಪ್ರಸಾದ್‌ಗೆ ಲಂಚ ನೀಡುತ್ತೇನೆಂಬ ಲಲಿತ್ ಸಿಂಗ್ ವಿಡಿಯೋ ಬಿಡುಗಡೆ. ವಕೀಲ ಎಂ.ಸಿ.ನಾಣಯ್ಯ ಮೂಲಕ ಸಿಎಂ ಹಾಗೂ ಸಿಎಂ ಪ್ರ.ಕಾರ್ಯದರ್ಶಿಗೆ ಲಂಚ ಕೊಡುತ್ತಾನಂತೆ ಈ ವಂಚಕ. ದೊಡ್ಡವರ ಹೆಸರು ಹೇಳಿ ಅಮಾಯಕರಿಗೆ ಮಹಾಮೋಸ. ನೂರಾರು ಜನರಿಗೆ ವಂಚಿಸಿದ್ದ ಲಲಿತ್ ಸಿಂಗ್ ಕೊನೆಗೂ ಅಂದರ್..! ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

10:04 AM IST:

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಹೇಗಿದೆ? 
ಇಲ್ಲಿದೆ ಲಿಸ್ಟ್

9:52 AM IST:

ಆಗಸ್ಟ್ ಮೂರರಂದು ಸಿದ್ದರಾಮೋತ್ಸವ ಆಚರಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಆಹ್ವಾನ ನೀಡಲು ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಸದಸ್ಯರು. ಬುಧವಾರ ದೆಹಲಿಗೆ ತೆರಳಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಲಿರುವ ಸಮಿತಿ ಸದಸ್ಯರು. ಸಿದ್ದರಾಮಯ್ಯ 75 ವರ್ಷ ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಕೆ.ಎನ್ ರಾಜಣ್ಣ. ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ ಅವರು ದೆಹಲಿಗೆ ಪಯಣಿಸಲಿದ್ದಾರೆ. ಮಾಜಿ ಸಚಿವರಾದ ಹೆಚ್.ಸಿ ಮಹಾದೇವಪ್ಪ, ಆರ್.ವಿ ದೇಶಪಾಂಡೆ ಕೂಡ ತೆರಳುವ ಸಾಧ್ಯತೆ ಇದೆ. ಬುಧವಾರ ಬೆಳಿಗ್ಗೆ ಕೆಸಿ ವೇಣುಗೋಪಾಲ್ ಹಾಗೂ ರಾಜ್ಯ  ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಮೊದಲಿಗೆ ಭೇಟಿ ಮಾಡಿ ಮಾತುಕತೆ ನಡೆಸುವ ಸದಸ್ಯರು. ಬಳಿಕ ಹನ್ನೊಂದು ಗಂಟೆಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಆಹ್ವಾನ ನೀಡಲಿರುವ ಸಮಿತಿ ಸದಸ್ಯರು.

9:49 AM IST:

ತುಮಕೂರು; ಬೆಳ್ಳಂಬೆಳಗ್ಗೆ ರೈತನ ಮೇಲೆ‌ ಕರಡಿ ದಾಳಿ ನಡೆದಿದ್ದು, ಕರಡಿ ದಾಳಿಯಿಂದ ರೈತನ ತಲೆಗೆ ಗಂಭೀರ ಗಾಯವಾಗಿದೆ. ಹೊಸಹಟ್ಟಿ ಗ್ರಾಮದ ಕರಿಯಣ್ಣ (50) ಕರಡಿ ದಾಳಿಗೆ ಒಳಗಾದ ರೈತ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಚೌಡೇನಹಳ್ಳಿಯಲ್ಲಿ ಘಟನೆ. ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ಕರಿಯಣ್ಣ. ಈ ವೇಳೆ ಹಲಸಿನ ಮರದಲ್ಲಿದ್ದ ಕರಡಿ ರೈತನ ಮೇಲೆ ಏಕಾಏಕಿ ದಾಳಿ. ತಲೆಗೆ ಗಂಭೀರವಾಗಿ ಪರಚಿರುವ ಕರಡಿ. ಕರಡಿಯಿಂದ ತಪ್ಪಿಸಿಕೊಂಡು ಬಂದ ರೈತ. ರೈತನಿಗೆ ಗಂಭೀರ ಗಾಯ. ರಕ್ತದ ಮಡುವಿನಲ್ಲೇ ರಸ್ತೆ ಬದಿ ಕುಳಿತ ಕರಿಯಣ್ಣ. ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೇನ್ಸ್ ಸಿಗದೇ ಪರದಾಟ. ಸತತ ಒಂದು ಗಂಟೆಯಿಂದ ಅಂಬ್ಯುಲೇನ್ಸ್ ಗೆ ಕರೆ ಮಾಡಿದ್ರು ಸ್ಫಂದಿಸದ ಆರೋಗ್ಯ ಇಲಾಖೆ. ಆರೋಗ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ.

9:48 AM IST:

ವಿಜಯನಗರ: ಬೈಕ್ ಹಿಂಬದಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವು ಮೂವರಿಗೆ ಗಂಭೀರ ಗಾಯವಾಗಿದೆ. ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದ ಬಳಿರಾ. ಹೆದ್ದಾರಿ 50 ರಲ್ಲಿ ಘಟನೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮ. ಹುಚ್ಚವನಹಳ್ಳಿ ಗ್ರಾಮದ ನೇತ್ರಾವತಿ (31) ಸ್ಥಳದಲ್ಲೇ ಸಾವು. ತಿಪ್ಪೇಸ್ವಾಮಿ ಹಾಗೂ ತಿಪ್ಪಮ್ಮ‌  ಮತ್ತೋರ್ವನಿಗೆ ಎನ್ನುವವರಿಗೆ ಗಂಭೀರ ಗಾಯ . ನಾಲ್ವರು ಒಂದೇ ಬೈಕ್‌ನಲ್ಲಿ ಸಂಡೂರಿನ ಹುಚ್ಚವಹಳ್ಳಿ ಗ್ರಾಮಕ್ಕೆ ತೆರಳುವ ವೇಳೆ ಅಪಘಾತ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ಪರಿಶೀಲನೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

9:46 AM IST:

'ಮಂಗಳೂರಿನಲ್ಲಿ ಯಾವುದೇ ಪಬ್ ದಾಳಿ ನಡೆದಿಲ್ಲ, ಅದು ಸತ್ಯಕ್ಕೆ ದೂರವಾದ ವಿಷಯ'. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ‌ಕಮಿಷನರ್ ಹೇಳಿಕೆ. ಪಬ್ ಮೇಲೆ ದಾಳಿ ಅಂತ ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದರೆ ಈ ವರದಿ ಸತ್ಯಕ್ಕೆ ದೂರ, ಯಾವುದೇ ಗ್ರಾಹಕರು ಅಥವಾ ಯಾರ ಮೇಲೂ ದಾಳಿ ನಡೆದಿಲ್ಲ. ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ ಆರೋಪಿಸಿ, ಸಂಘಟನೆಯವರು ಬಂದಿದ್ದಾರೆ. ಆದರೆ ಬೌನ್ಸರ್ ಬಳಿ ಹೇಳಿದಾಗ ಮ್ಯಾನೇಜರ್ ವಿದ್ಯಾರ್ಥಿಗಳ ಐಡಿ ಕೇಳಿದ್ದಾರೆ. ಐಡಿ ಕೇಳಿದಾಗ ಕೆಲ ವಿದ್ಯಾರ್ಥಿಗಳು ಅಲ್ಲಿಂದ ಹೊರಗೆ ಹೋಗಿದ್ದಾರೆ. ಆದರೆ ಯಾವುದೇ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆ ಆದರೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೊಡಬೇಕು. ಅದು ಬಿಟ್ಟು ಸಂಘಟನೆ ಹೆಸರಲ್ಲಿ ಈ ರೀತಿ ಪರಿಶೀಲನೆಗೆ ಅವಕಾಶ ಇಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಕೆಲ ದಿನಗಳ ಹಿಂದಿನ ಕಾಲೇಜು ವಿದ್ಯಾರ್ಥಿಗಳ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧ ಇಲ್ಲ. ಸಾಮಾಜಿಕ ತಾಣಗಳಲ್ಲಿ ಪ್ರಕರಣದ ಆರೋಪಿಗಳು ಮತ್ತು ಇಲ್ಲಿ ಪಾರ್ಟಿ ನಡೆಸ್ತಿದ್ದವರ ಬಗ್ಗೆ ಲಿಂಕ್ ಕಲ್ಪಿಸಲಾಗಿದೆ. ಆದರೆ ಅವರು ಮತ್ತು ಇವರಿಗೆ ಯಾವುದೇ ಸಂಪರ್ಕ ‌ಇಲ್ಲ. ರಾತ್ರಿಯೇ ಯಾವುದೇ ಅನೈತಿಕ ಘಟನೆ ಆಗಬಾರದು ಅಂತ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಎಲ್ಲರೂ ವಿದ್ಯಾರ್ಥಿಗಳಾದ ಕಾರಣ ಅವರನ್ನ ಸಂಪರ್ಕಿಸಲಾಗುತ್ತೆ. ಡ್ರಗ್ ಮಾಫಿಯಾ ತಡೆಗೆ ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಗಾಂಜಾ, ಎಂಡಿಎಂ ಸೇರಿ ಹಲವು ಡ್ರಗ್ ವಶಕ್ಕೆ ಪಡೆದಿದ್ದೇವೆ. ಈ ಭಾಗ ಕೇರಳಕ್ಕೆ ಸಂಪರ್ಕ ಇರೋ ಕಾರಣ ಡ್ರಗ್ ಮೂಮೆಂಟ್ ಇಲ್ಲಿದೆ. ಹೀಗಾಗಿ ಇದನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಎಲ್ಲೂ ಡ್ರಗ್ಸ್ ಪ್ರಕರಣ ನಡೆದಿಲ್ಲ. ಪಬ್, ರೆಸ್ಟೋರೆಂಟ್, ಬಾರ್ ಎಲ್ಲೂ ಅಂಥದ್ದು ವರದಿಯಾಗಿಲ್ಲ.

9:43 AM IST:

ರಾಯಚೂರು: ವಿದ್ಯುತ್ ತಂತಿ ತಗುಲಿ ಶಾಲಾ ಆವರಣದಲ್ಲಿ ಆಟವಾಡ್ತಿದ್ದ ವಿದ್ಯಾರ್ಥಿ ಸಾವು. ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಕಿಲ್ಲಾರಹಟ್ಟಿ ಗ್ರಾಮದಲ್ಲಿ ಘಟನೆ. ಕಿಲ್ಲಾರಹಟ್ಟಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ (13) ಮೃತ ಬಾಲಕ. ಶಾಲಾ ಆವರಣದಲ್ಲಿ ಕ್ರಿಕೆಟ್ ಆಡುವಾಗ ಚೆಂಡು ತರಲು ಹೋಗಿದ್ದ ವೇಳೆ ದುರ್ಘಟನೆ. ನಿರ್ಮಾಣ ಹಂತದಲ್ಲಿರುವ ಬಿಸಿಯೂಟದ ಕೋಣೆಯ ಮೇಲಿನ ವಿದ್ಯುತ್ ತಂತಿ ತಗುಲಿ ಸಾವು. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

9:40 AM IST: