Karnataka News Live Updates: ರಾಮನಗರದಲ್ಲಿ ದನದ ಕೊಟ್ಟಿಗೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು..!

ಕರ್ನಾಟಕ ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಇದೀಗ ರಾಜ್ಯದ ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.  ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ಹಾಸನ, ಯಾದಗಿರಿ, ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

8:06 PM

ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ  ಭಾರತದ ಚಿನ್ನದ ಬೇಟೆ ಮುಂದುವರೆದಿದೆ. ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್  ತನ್ನ ಚೊಚ್ಚಲ CWG ಚಿನ್ನದ ಪದಕವನ್ನು ಗೆಲ್ಲುವ  ಮೂಲಕ ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಮೂರನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತು ಘಂಘಾಸ್ ಮತ್ತು ಪುರುಷರ 51 ಕೆಜಿ ಬಾಕ್ಸಿಂಗ್ ನಲ್ಲಿ ಅಮಿತ್ ಗೆ ಚಿನ್ನದ ಪದಕ ಬಂದಿತ್ತು.

5:15 PM

ನಡಿಗೆಯಲ್ಲಿ ಕಂಚು ಗೆದ್ದ ಸಂದೀಪ್

ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ ಪುರುಷರ 10 ಕಿ.ಮೀ ಓಟದ ನಡಿಗೆಯಲ್ಲಿ ಸಂದೀಪ್ ಕುಮಾರ್ ಗೆ ಕಂಚಿನ ಪದಕ.

5:13 PM

ಟ್ರಿಪಲ್ ಜಂಪ್ ನಲ್ಲಿ ಐತಿಹಾಸಿಕ ಸಾಧನೆಗೈದ ಭಾರತ!

ಕಾಮನ್‌ವೆಲ್ತ್‌ ಗೇಮ್ಸ್‌ನ  ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ.  ಎಲ್ದೋಸ್ ಪಾಲ್​ 17.03 ಮೀಟರ್​ ಜಿಗಿತದೊಂದಿಗೆ ಬಂಗಾರದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ 17.02 ಮೀಟರ್​ ಜಿಗಿದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

4:26 PM

ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಒಲಿದ 2 ಚಿನ್ನ

ಬರ್ಮಿಂಗ್ ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ ಗಳು ಚಿನ್ನದ ಪದಕದ ಬೇಟೆ ಮುಂದುವರೆಸಿದ್ದು, ನೀತು ಗಂಗಾ ಹಾಗೂ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

2:28 PM

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಂದು ಚಿನ್ನಕ್ಕಾಗಿ ಭಾರತ ಮಹಿಳಾ ಕ್ರಿಕೆಟ್ ತಂಡ ಕಾದಾಟ

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಂದು ಮಹಿಳಾ ಕ್ರಿಕೆಟ್‌ ತಂಡಗಳ ನಡುವೆ ಫೈನಲ್ ಪಂದ್ಯ ಜರುಗಲಿದ್ದು, ಚಿನ್ನದ ಪದಕಕ್ಕಾಗಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಇಂದು ರಾತ್ರಿ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಜ್‌ಬಾಸ್ಟನ್‌ ಮೈದಾನ ಸಾಕ್ಷಿಯಾಗಲಿದೆ.

1:39 PM

ಕೊಡಗಿನಲ್ಲಿ ಮುಂದುವರೆದ ಧಾರಾಕಾರ ಮಳೆ

ಕೊಡಗು ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಭಾರೀ ಮಳೆಯ ಪ್ರವಾಹದಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.  ಕಾವೇರಿ ಪ್ರವಾಹದ ನೀರಿಗೆ ರಸ್ತೆಗಳು ಅಸ್ತವ್ಯಸ್ತವಾಗಿವೆ. ಮಡಿಕೇರಿಯ ಹಲವೆಡೆ ರಸ್ತೆಗಳು ಕುಸಿದಿದ್ದು, ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ತಹಶೀಲ್ದಾರ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

9:45 AM

ಡೋಣಿ ನದಿಯಲ್ಲಿ ದೇವಸ್ಥಾನ ಜಲಾವೃತ

ವಿಜಯಪುರದ ತಾಳಿಕೋಟೆ ಪಟ್ಟಣದ ಹೊರಭಾಗದ ಡೋಣಿ ನದಿ ತಟದಲ್ಲಿರೋ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಅರ್ಧಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದೆ. ನೀರಿನಲ್ಲಿ ಆಂಜನೇಯ ದೇವರ ಮೂರ್ತಿ ಮುಳುಗಡೆಯಾಗಿರುವುದರಿಂದಾಗಿ ಪೂಜೆ-ಪುನಸ್ಕಾರಗಳಿಗೆ ಬ್ರೇಕ್‌ ಬಿದ್ದಿದೆ

8:50 AM

ರಸ್ತೆ ಅಪಘಾತದಲ್ಲಿ ಮುಖ್ಯ ಶಿಕ್ಷಕ ಸಾವು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪದ ನಾಗರವಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಟ್ಟೆಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್(51) ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಬೈಕ್‌ನಲ್ಲಿ ಬರುತ್ತಿದ್ದಾಗ, ರಸ್ತೆ ತಿರುವಿನಲ್ಲಿ ಓಮಿನಿ ಕಾರು ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಗೊಂಡ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಈ ವರ್ಷವಷ್ಟೇ ವೆಂಕಟೇಶ್ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದಿದ್ದರು. ಇದೀಗ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

8:44 AM

ರಾಮನಗರದಲ್ಲಿ ದನದ ಕೊಟ್ಟಿಗೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ದನದ ಕೊಟ್ಟಿಗೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.  ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನಲ್ಲಿ ಈ ಘಟನೆ ಸಂಭವಿಸಿದ್ದು, ದನದ ಕೊಟ್ಟಿಗೆ ಪಕ್ಕದಲ್ಲೇ ಇದ್ದ ಶೆಡ್‌ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಪರ್ಭಿನ್(4)‌, ಇಷಿಕಾ(3) ಕೊನೆಯುಸಿರೆಳೆದಿದ್ದಾರೆ.

8:06 PM IST:

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ  ಭಾರತದ ಚಿನ್ನದ ಬೇಟೆ ಮುಂದುವರೆದಿದೆ. ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್  ತನ್ನ ಚೊಚ್ಚಲ CWG ಚಿನ್ನದ ಪದಕವನ್ನು ಗೆಲ್ಲುವ  ಮೂಲಕ ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಮೂರನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ನೀತು ಘಂಘಾಸ್ ಮತ್ತು ಪುರುಷರ 51 ಕೆಜಿ ಬಾಕ್ಸಿಂಗ್ ನಲ್ಲಿ ಅಮಿತ್ ಗೆ ಚಿನ್ನದ ಪದಕ ಬಂದಿತ್ತು.

5:15 PM IST:

ಬರ್ಮಿಂಗ್‌ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ ಪುರುಷರ 10 ಕಿ.ಮೀ ಓಟದ ನಡಿಗೆಯಲ್ಲಿ ಸಂದೀಪ್ ಕುಮಾರ್ ಗೆ ಕಂಚಿನ ಪದಕ.

5:13 PM IST:

ಕಾಮನ್‌ವೆಲ್ತ್‌ ಗೇಮ್ಸ್‌ನ  ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ.  ಎಲ್ದೋಸ್ ಪಾಲ್​ 17.03 ಮೀಟರ್​ ಜಿಗಿತದೊಂದಿಗೆ ಬಂಗಾರದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ 17.02 ಮೀಟರ್​ ಜಿಗಿದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

4:26 PM IST:

ಬರ್ಮಿಂಗ್ ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ ಗಳು ಚಿನ್ನದ ಪದಕದ ಬೇಟೆ ಮುಂದುವರೆಸಿದ್ದು, ನೀತು ಗಂಗಾ ಹಾಗೂ ಅಮಿತ್ ಪಂಗಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

2:28 PM IST:

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಂದು ಮಹಿಳಾ ಕ್ರಿಕೆಟ್‌ ತಂಡಗಳ ನಡುವೆ ಫೈನಲ್ ಪಂದ್ಯ ಜರುಗಲಿದ್ದು, ಚಿನ್ನದ ಪದಕಕ್ಕಾಗಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಇಂದು ರಾತ್ರಿ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಜ್‌ಬಾಸ್ಟನ್‌ ಮೈದಾನ ಸಾಕ್ಷಿಯಾಗಲಿದೆ.

1:39 PM IST:

ಕೊಡಗು ಜಿಲ್ಲೆಯಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಭಾರೀ ಮಳೆಯ ಪ್ರವಾಹದಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.  ಕಾವೇರಿ ಪ್ರವಾಹದ ನೀರಿಗೆ ರಸ್ತೆಗಳು ಅಸ್ತವ್ಯಸ್ತವಾಗಿವೆ. ಮಡಿಕೇರಿಯ ಹಲವೆಡೆ ರಸ್ತೆಗಳು ಕುಸಿದಿದ್ದು, ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ತಹಶೀಲ್ದಾರ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

9:45 AM IST:

ವಿಜಯಪುರದ ತಾಳಿಕೋಟೆ ಪಟ್ಟಣದ ಹೊರಭಾಗದ ಡೋಣಿ ನದಿ ತಟದಲ್ಲಿರೋ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಅರ್ಧಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದೆ. ನೀರಿನಲ್ಲಿ ಆಂಜನೇಯ ದೇವರ ಮೂರ್ತಿ ಮುಳುಗಡೆಯಾಗಿರುವುದರಿಂದಾಗಿ ಪೂಜೆ-ಪುನಸ್ಕಾರಗಳಿಗೆ ಬ್ರೇಕ್‌ ಬಿದ್ದಿದೆ

9:45 AM IST:

ವಿಜಯಪುರದ ತಾಳಿಕೋಟೆ ಪಟ್ಟಣದ ಹೊರಭಾಗದ ಡೋಣಿ ನದಿ ತಟದಲ್ಲಿರೋ ಆಂಜನೇಯ ಸ್ವಾಮಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನದ ಅರ್ಧಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದೆ. ನೀರಿನಲ್ಲಿ ಆಂಜನೇಯ ದೇವರ ಮೂರ್ತಿ ಮುಳುಗಡೆಯಾಗಿರುವುದರಿಂದಾಗಿ ಪೂಜೆ-ಪುನಸ್ಕಾರಗಳಿಗೆ ಬ್ರೇಕ್‌ ಬಿದ್ದಿದೆ

8:52 AM IST:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪದ ನಾಗರವಳ್ಳಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಟ್ಟೆಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್(51) ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಬೈಕ್‌ನಲ್ಲಿ ಬರುತ್ತಿದ್ದಾಗ, ರಸ್ತೆ ತಿರುವಿನಲ್ಲಿ ಓಮಿನಿ ಕಾರು ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಗೊಂಡ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಈ ವರ್ಷವಷ್ಟೇ ವೆಂಕಟೇಶ್ ಮುಖ್ಯಶಿಕ್ಷಕರಾಗಿ ಬಡ್ತಿ ಪಡೆದಿದ್ದರು. ಇದೀಗ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

8:44 AM IST: