ಪಾಕ್ ಕ್ರಿಕೆಟಿಗನ ಜೊತೆ ರೋಮ್ಯಾನ್ಸ್- ಬಾಲಿವುಡ್ ನಟಿ ಜರೀನ್ ಹೇಳೋದೇನು?

By Web DeskFirst Published Oct 9, 2018, 10:25 AM IST
Highlights

ಬಾಲಿವುಡ್ ಹಾಗೂ ಕ್ರಿಕೆಟ್‌ಗೆ ಅವಿನಾಭಾವ ಸಂಬಂಧವಿದೆ. ಇದೀಗ ಈ ಸಂಬಂಧ ಗಡಿ ದಾಟಿದೆ ಅನ್ನುತ್ತಿದೆ ವರದಿಗಳು.  ಪಾಕಿಸ್ತಾನ ಕ್ರಿಕೆಟಿಗನ ಜೊತೆಗಿನ ರೋಮ್ಯಾನ್ಸ್ ಗಾಸಿಪ್‌ಗೆ ಬಾಲಿವುಡ್ ನಟಿ ಜರೀನ್ ಖಾನ್ ಮೌನ ಮುರಿದಿದ್ದಾರೆ. ಜರೀನಾ ಹೇಳೋದೇನು? ಇಲ್ಲಿದೆ.

ಮುಂಬೈ(ಅ.09): ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗ ಫಕರ್ ಜಮಾನ್ ಹಾಗೂ ಬಾಲಿವುಡ್ ನಟಿ ಜರೀನ್ ಖಾನ್ ರೋಮ್ಯಾನ್ಸ್ ಗಾಸಿಪ್‌ ಭಾರಿ ಸದ್ದು ಮಾಡಿತ್ತು. ಇವರಿಬ್ಬರು ಸದ್ದಿಲ್ಲದೇ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

ಗಾಸಿಪ್ ಸುದ್ದಿಗೆ ಸ್ವತಃ ನಟಿ ಜರೀನ್ ಖಾನ್ ಮೌನ ಮುರಿದಿದ್ದಾರೆ. ಈ ವರದಿ ಸುಳ್ಳು ಎಂದು ಜರೀನ್ ಹೇಳಿದ್ದಾರೆ. ಫಕರ್ ಜಮಾನ್ ಆಕ್ರಮಣಕಾರಿ ಬ್ಯಾಟಿಂಗ್ ಇಷ್ಟ. ಆದರೆ ಆತನ ಜೊತೆಗಿನ ಡೇಟಿಂಗ್ ಹಾಗೂ ರೋಮ್ಯಾನ್ಸ್ ಸುದ್ದಿಗಳೆಲ್ಲಾ ಸುಳ್ಳು ಎಂದಿದ್ದಾರೆ. ಇಷ್ಟೇ ಅಲ್ಲ ಟ್ವಿಟರ್ ಮೂಲಕವೂ ಸ್ಪಷ್ಟಪಡಿಸಿದ್ದಾರೆ.

 

Bullshit ! https://t.co/pIYj4Vu04L

— Zareen Khan (@zareen_khan)

 

ಬಾಲಿವುಡ್‌ನಲ್ಲಿ ಪ್ರಮುಖ ನಟಿಯಾಗಿ ಗುರಿತಿಸಿಕೊಂಡಿರುವ ಜರೀನ್, ಇತ್ತೀಚೆಗಷ್ಟೇ ಫಕರ್ ಜಮಾನ್ ಕುರಿತು ಹೇಳಿಕೆ ನೀಡಿದ್ದರು. ಬಳಿಕ ಜರೀನ್ ಹಾಗೂ ಫಕರ್ ಜಮಾನ್ ಗಾಸಿಪ್ ಸುದ್ದಿಗಳು ಹುಟ್ಟಿಕೊಂಡಿತ್ತು.
 

click me!