ರೊನಾಲ್ಡೋ ಜೆರ್ಸಿ ಬೇಕು ಅಂದ್ರೆ 2 ತಿಂಗಳು ಕಾಯಬೇಕು..!

By Web DeskFirst Published Sep 18, 2018, 5:30 PM IST
Highlights

ಪೋರ್ಚುಗಲ್ ಆಟಗಾರನ ಜನಪ್ರಿಯತೆ ಎಷ್ಟಿದೆ ಎಂದರೆ, ಒಂದೇ ತಿಂಗಳಲ್ಲಿ ಕಳೆದ ವರ್ಷ ಮಾರಾಟವಾಗಿದ್ದಷ್ಟು ಜೆರ್ಸಿಗಳು ಮಾರಾಟವಾಗಿವೆ. ಹೊಸದಾಗಿ ಜೆರ್ಸಿಗಳನ್ನು ಖರೀದಿಸುವವರು ಕನಿಷ್ಠ 2 ತಿಂಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಟ್ಯುರಿನ್[ಸೆ.18]: ವಿಶ್ವದ ನಂ.1 ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋರ ಯುವೆಂಟುಸ್ ಜೆರ್ಸಿಗೆ ಭಾರೀ ಬೇಡಿಕೆ ಶುರುವಾಗಿದೆ. ರೊನಾಲ್ಡೋ ಧರಿಸುವ ಜೆರ್ಸಿ ಮಾದರಿಯಲ್ಲೇ ಜೆರ್ಸಿಗಳನ್ನು ತಯಾರಿಸಿ ಯುವೆಂಟುಸ್ ತಂಡ ಮಾರಾಟ ಮಾಡುತ್ತದೆ.

ಪೋರ್ಚುಗಲ್ ಆಟಗಾರನ ಜನಪ್ರಿಯತೆ ಎಷ್ಟಿದೆ ಎಂದರೆ, ಒಂದೇ ತಿಂಗಳಲ್ಲಿ ಕಳೆದ ವರ್ಷ ಮಾರಾಟವಾಗಿದ್ದಷ್ಟು ಜೆರ್ಸಿಗಳು ಮಾರಾಟವಾಗಿವೆ. ಹೊಸದಾಗಿ ಜೆರ್ಸಿಗಳನ್ನು ಖರೀದಿಸುವವರು ಕನಿಷ್ಠ 2 ತಿಂಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಇದನ್ನು ಓದಿ: ಎದುರಾಳಿ ಆಟಗಾರನಿಗೆ ಕ್ಯಾಕರಿಸಿ ಉಗಿದ ಯುವೆಂಟುಸ್ ಫುಟ್ಬಾಲಿಗ

ರೊನಾಲ್ಡೋಗೆ ಪಾವತಿಸುವ ವೇತನವನ್ನು (ಸುಮಾರು ₹950 ಕೋಟಿ) ಯುವೆಂಟುಸ್ ತಂಡ ಜೆರ್ಸಿ ಮಾರಾಟದಿಂದಲೇ ಹಿಂಪಡೆದರೆ ಅಚ್ಚರಿಯಿಲ್ಲ ಎಂದು ವರದಿಯೊಂದು ತಿಳಿಸಿದೆ.

click me!