ತಾರಾ ಕುಸ್ತಿಪಟುಗಳು ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಆರಂಭಿಸಿದ್ದ ಪ್ರತಿಭಟನೆ ಬಿಸಿ ವಿವಿಧ ವಯೋಮಾನದ ಚಾಂಪಿಯನ್‌ಶಿಪ್ ಮೇಲೆ ತಾಗಿತ್ತು. ಬಳಿಕ ಕೇಂದ್ರ ಕ್ರೀಡಾ ಸಚಿವಾಲಯ ಡಬ್ಲ್ಯುಎಫ್‌ಐ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಬಳಿಕ ಯಾವುದೇ ಟೂರ್ನಿ, ಶಿಬಿರ ನಡೆದಿರಲಿಲ್ಲ.
ನವದೆಹಲಿ(ಡಿ.23): ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಹಾಗೂ ದೇಶದ ಅಗ್ರ ಕುಸ್ತಿಪಟುಗಳು ನಡುವಿನ ಸಂಘರ್ಷದಿಂದಾಗಿ ಕಳೆದ 11 ತಿಂಗಳುಗಳಿಂದ ಕುಸ್ತಿ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ ಡಬ್ಲ್ಯುಎಫ್‌ಐಗೆ ನೂತನ ಸಮಿತಿ ಆಯ್ಕೆಯಾಗುವುದರೊಂದಿಗೆ ಕುಸ್ತಿ ಅಖಾಡಗಳು ಮತ್ತೆ ಕಾದಾಟಕ್ಕೆ ಸಜ್ಜಾಗುತ್ತಿದ್ದು, ಶೀಘ್ರವೇ ಶಿಬಿರ ಹಾಗೂ ಚಾಂಪಿಯನ್‌ಶಿಪ್‌ಗಳು ಆರಂಭಗೊಳ್ಳುವ ನಿರೀಕ್ಷೆಯಲ್ಲಿ ಕುಸ್ತಿಪಟುಗಳು ಇದ್ದಾರೆ.
ತಾರಾ ಕುಸ್ತಿಪಟುಗಳು ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಆರಂಭಿಸಿದ್ದ ಪ್ರತಿಭಟನೆ ಬಿಸಿ ವಿವಿಧ ವಯೋಮಾನದ ಚಾಂಪಿಯನ್‌ಶಿಪ್ ಮೇಲೆ ತಾಗಿತ್ತು. ಬಳಿಕ ಕೇಂದ್ರ ಕ್ರೀಡಾ ಸಚಿವಾಲಯ ಡಬ್ಲ್ಯುಎಫ್‌ಐ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಬಳಿಕ ಯಾವುದೇ ಟೂರ್ನಿ, ಶಿಬಿರ ನಡೆದಿರಲಿಲ್ಲ. ಡಬ್ಲ್ಯುಎಫ್‌ಐ ಅಮಾನತುಗೊಂಡ ಬಳಿಕ ನೇಮಕಗೊಂಡಿದ್ದ ಸ್ವತಂತ್ರ ಸಮಿತಿ ಕೂಡಾ ಯಾವುದೇ ಚಾಂಪಿಯನ್‌ಶಿಪ್ ಆಯೋಜಿಸಿರಲಿಲ್ಲ. ಇದರಿಂದಾಗಿ ಪ್ರತಿಭಾವಂತ ಕುಸ್ತಿಪಟುಗಳು ಸಂಕಷ್ಟ ಅನುಭವಿಸುವಂತಾಗಿತ್ತು.
undefined
ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ತಲೆನೋವು, ಇಶಾನ್ ಸೇರಿ ಇಬ್ಬರು ತಂಡದಿಂದ ಔಟ್!
ವಿವಿಧ ವಯೋಮಾನದಲ್ಲಿ ಸ್ಪರ್ಧಿಸಬೇಕಿದ್ದ ಕುಸ್ತಿಪಟುಗಳಿಗೆ ಪ್ರಾಯ ಮೀರಿದ ಬಳಿಕ ಸ್ಪರ್ಧೆಗೆ ಅವಕಾಶ ಸಿಗಲ್ಲ. ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಗೆದ್ದ ಪದಕ, ಪಾಲ್ಗೊಂಡಿದ್ದಕ್ಕೆ ಸಿಗುವ ಪ್ರಮಾಣ ಪತ್ರ ಅಗತ್ಯ. ಆದರೆ ಡಬ್ಲ್ಯುಎಫ್‌ಐ ಅಮಾನತುಗೊಂಡಿದ್ದರಿಂದ ಹಲವು ಪ್ರತಿಭಾವಂತರು ಅವಕಾಶ ವಂಚಿತರಾಗಿದ್ದರು ಎಂದು ಹಲವು ಕೋಚ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.28ರಿಂದ ರಾಷ್ಟ್ರೀಯ ಚಾಂಪಿಯನ್‌ಶಿಪ್ ಶುರು
ನೂತನ ಸಮಿತಿ ಅಧಿಕಾರಕ್ಕೆ ಬಂದ ದಿನವೇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಆಯೋಜನೆಗೆ ಹಸಿರು ನಿಶಾನೆ ತೋರಿದೆ. ಅಂಡರ್-20 ಹಾಗೂ ಅಂಡರ್-15 ವಿಭಾಗಗಳ ಕೂಟ ಉತ್ತರ ಪ್ರದೇಶದ ಗೊಂಡಾ ನಗರದಲ್ಲಿ ಡಿ.28, 29 ಹಾಗೂ 30ರಂದು ನಡೆಯಲಿದೆ.
ಜನವರಿಯಲ್ಲಿ ನೂತನ ಸಮಿತಿ ಸಾಮಾನ್ಯ ಸಭೆ
ಡಬ್ಲ್ಯುಎಫ್‌ಐಗೆ ಆಯ್ಕೆಯಾಗಿರುವ ಸಂಜಯ್ ಸಿಂಗ್ ನೇತೃತ್ವದ ನೂತನ ಸಮಿತಿಯು ತನ್ನ ಮೊದಲ ಸಾಮಾನ್ಯ ಸಭೆ ಮುಂದಿನ ತಿಂಗಳು ನಡೆಯಲಿದೆ. ಡೆಲ್ಲಿಯಲ್ಲಿ ಜ.11 ಅಥವಾ 12ಕ್ಕೆ ಸಭೆ ನಿಗದಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೌತ್ ಆಫ್ರಿಕಾ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಶಾಕ್, ತುರ್ತು ಕಾರಣದಿಂದ ತವರಿಗೆ ಮರಳಿದ ಕೊಹ್ಲಿ!
ಸ್ವತಂತ್ರ ಸಮಿತಿಯ ನಿರ್ಣಯ ವಾಪಸ್!
ಗುರುವಾರ ಅಧಿಕಾರಕ್ಕೆ ಬಂದ ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್‌ಐ ನೂತನ ಸಮಿತಿ, ಈ ಮೊದಲು ಸ್ವತಂತ್ರ ಸಮಿತಿ ಕೈಗೊಂಡಿದ್ದ ನಿರ್ಣಯಗಳನ್ನು ರದ್ದುಗೊಳಿಸಿದೆ. ಡಬ್ಲ್ಯುಎಫ್‌ಐ ಅಮಾನತುಗೊಂಡ ಬಳಿಕ ಭೂಪೇಂದ್ರ ಸಿಂಗ್ ನೇತರ್ವದ ಸ್ವತಂತ್ರ ಸಮಿತಿಯಲ್ಲಿ ಒಲಿಂಪಿಕ್ ಸಮಿತಿ ನೇಮಿಸಿತ್ತು. ಬಳಿಕ ಸ್ವತಂತ್ರ ಸಮಿತಿ ಕೆಲ ನಿರ್ಣಯ ಕೈಗೊಂಡಿತ್ತು. ಜೈಪುರದಲ್ಲಿ ಜನವರಿಯಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಕೂಟ, ಒಲಿಂಪಿಕ್ ಆಯ್ಕೆ ಟ್ರಯಲ್ಸ್ ಮಾನದಂಡಗಳನ್ನು ನೂತನ ಸಮಿತಿ ರದ್ದುಗೊಳಿಸಿದೆ.