ವಿರಾಟ್ ಕೊಹ್ಲಿ ಸೈನ್ಯಕ್ಕೆ ರಾಹುಲ್ ದ್ರಾವಿಡ್ ನೀಡಿದ ಸಲಹೆ ಏನು?

By Web DeskFirst Published Oct 10, 2018, 9:53 AM IST
Highlights

ಇಂಗ್ಲೆಂಡ್ ಪ್ರವಾಸದಲ್ಲಿನ ಹಿನ್ನಡೆಯನ್ನ ಯಾರು ಮರೆತಿಲ್ಲ. ಇದೀಗ ತವರಿನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಅಬ್ಬರಿಸುತ್ತಿರುವ ಟೀಂ ಇಂಡಿಯಾಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ. ಆಸಿಸ್ ಪ್ರವಾಸಕ್ಕೂ ಮುನ್ನ ದ್ರಾವಿಡ್ ನೀಡಿದ ಸೂಚನೆ ಏನು? ಇಲ್ಲಿದೆ.

ನವದೆಹಲಿ(ಅ.10): ‘ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಕೆಂಪು ಚೆಂಡಿನಲ್ಲಿ ಹೆಚ್ಚಿನ ಪಂದ್ಯಗಳನ್ನಾಡಬೇಕು. ಇದು
ಖಂಡಿತವಾಗಿಯೂ ವಿದೇಶಿ ಟೆಸ್ಟ್ ಸರ ಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ತಂಡಕ್ಕೆ ನೆರವಾಗುತ್ತದೆ’ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ಹೆಚ್ಚು ಪಂದ್ಯಗಳನ್ನಾಡುತ್ತಿದೆ. ಏಕದಿನ ಮತ್ತು ಟಿ20 ಯಲ್ಲಿ ಭಾರತ ಶ್ರೇಷ್ಠ ತಂಡ ಎನ್ನುವುದರಲ್ಲಿ ಸಂದೇಹವಿಲ್ಲ.
ಆದರೆ ವಿದೇಶ ಪ್ರವಾಸದ ವೇಳೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡ ಕನಿಷ್ಠ ವೆಂದರೂ ಒಂದು ಅಥವಾ ಎರಡು ಅಭ್ಯಾಸ ಪಂದ್ಯಗಳನ್ನಾಡಬೇಕು. ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅಭ್ಯಾಸದ ಅಗತ್ಯವಿದೆ’ ಎಂದು ದ್ರಾವಿಡ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಏಕೈಕ ಅಭ್ಯಾಸ ಪಂದ್ಯವನ್ನೂ ಸಂಪೂರ್ಣವಾಗಿ ಆಡಿಲ್ಲ. ಹೀಗಾಗಿ ಅಲ್ಲಿನ ಕಂಡೀಷನ್‌ಗೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ವೆಸ್ಟ್ಇಂಡೀಸ್ ಸರಣಿ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಅಭ್ಯಾಸ ಪಂದ್ಯ ಅಗತ್ಯ ಎಂದು ದ್ರಾವಿಡ್ ಸೂಚಿಸಿದ್ದಾರೆ.
 

click me!