ಭಾರತ-ಇಂಗ್ಲೆಂಡ್ ಏಕದಿನ: ಟ್ರೆಂಟ್‌ಬ್ರಿಡ್ಜ್‌ನಲ್ಲಿ ಟೀಂ ಇಂಡಿಯಾ ಸ್ಪಿನ್ ಮೋಡಿ

First Published Jul 12, 2018, 6:50 PM IST
Highlights

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ ಮೋಡಿ ಮಾಡಿದೆ. ಕುಲದೀಪ್ ಯಾದವ್ ಹಾಗೂ ಯಜುವೆಂದ್ರೆ ಚೆಹಾಲ್ ಸ್ಪಿನ್ ದಾಳಿಗೆ ಆಂಗ್ಲರು ತತ್ತರಿಸಿದ್ದಾರೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ನಾಟಿಂಗ್‌ಹ್ಯಾಮ್(ಜು.12): ಇಂಗ್ಲೆಂಡ್ ವಿರುದ್ಧದ ಟಿ20 ಟೂರ್ನಿ ಬಳಿಕ ಇದೀಗ ಏಕದಿನ ಸರಣಿಯಲ್ಲೂ ಭಾರತ ತಂಡದ ಸ್ಪಿನ್ ಮೋಡಿ ಮುುಂದುವರಿದಿದೆ. ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ನಾಲ್ಕು ವಿಕೆಟ್‌ಗಳು ಭಾರತದ ಸ್ಪಿನ್ನರ್‌ಗಳ ಪಾಲಾಗಿದೆ. 

ಇಂಗ್ಲೆಂಡ್ ಆರಂಭಿಕರಾದ ಜೇಸನ್ ರಾಯ್ ಹಾಗೂ ಜಾನಿ ಬೈರಿಸ್ಟೋ ಅತ್ಯುತ್ತಮ ಆರಂಭ ನೀಡಿದರು. ಆದರೆ ಈ ಜೋಡಿಯನ್ನ ಬೇರ್ಪಡಿಸುವಲ್ಲಿ ಕುಲದೀಪ್ ಯಶಸ್ವಿಯಾದರು. ಜೇಸನ್ ರಾಯ್ 38 ರನ್ ಸಿಡಿಸಿ ಔಟಾದರು.

ಜೋ ರೂಟ್ ಕೇವಲ 3 ರನ್ ಗಳಿಸಿ ಕುಲದೀಪ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಜಾನಿ ಬೈರಿಸ್ಟೋ 38 ರನ್ ಗಳಿಸಿ ಔಟಾದರು. ಈ ಮೂಲಕ ಕುಲದೀಪ್ ಯಾದವ್ ಪ್ರಮುಖ 3 ವಿಕೆಟ್ ಕಬಳಿಸಿದರು. ನಾಯಕ ಇಯಾನ್ ಮಾರ್ಗನ್ 19 ರನ್ ಸಿಡಿಸಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. 

4 ವಿಕೆಟ್ ಕಳೆದುಕೊಂಡ ಇಂಗ್ಲೆಡ್ ತಂಡಕ್ಕೆ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಆಸರೆಯಾಗಿದ್ದಾರೆ. 

 

click me!