ಸ್ತನ ಕ್ಯಾನ್ಸರ್ ಜಾಗೃತಿ- ಸೆರೆನಾ ಟಾಪ್ ಲೆಸ್ ವೀಡಿಯೋ ವೈರಲ್!

By Web DeskFirst Published Oct 1, 2018, 4:05 PM IST
Highlights

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಟಾಪ್ ಲೆಸ್ ವೀಡಿಯೋ ಇದೀಗ ಭಾರಿ ವೈರಲ್ ಆಗಿದೆ. ಐ ಟಚ್ ಮೈಸೆಲ್ಫಿ ಹಾಡಿನ ಮೂಲಕ ಸೆರೆನಾ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಿದ್ದಾರೆ.

ನ್ಯೂಯಾರ್ಕ್(ಅ.01): ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಲು ಅಮೇರಿಕಾದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ವಿಶೇಷ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಸೆರೆನಾ ವೀಡಿಯೋ ಇದೀಗ ವೈರಲ್ ಆಗಿದೆ. ಇಷ್ಟೇ ಅಲ್ಲ ಸೆರೆನಾ ವಿಲಿಯಮ್ಸ್ ಧರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

For I’ve recorded a version of The Divinyls global hit “I Touch Myself”!

It’s a reminder for women to self-check regularly as part of supported by for pic.twitter.com/7qDQaS0SaU

— Serena Williams (@serenawilliams)

 

ಸ್ತನ ಕ್ಯಾನ್ಸರ್ ಜಾಗೃತಿ ವೀಡಿಯೋಗಾಗಿ ಸೆರೆನಾ ವಿಲಿಯಮ್ಸ್ ಸ್ವತಃ ಟಾಪ್ ಲೆಸ್ ಆಗಿದ್ದಾರೆ. ಇಷ್ಟೇ ಅಲ್ಲ  ವಿಲಿಯಮ್ಸ್ ಹಾಡಿನ ಮೂಲಕ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸಿದ್ದಾರೆ.  ಸ್ತನ ಕ್ಯಾನ್ಸರ್​ ಕುರಿತ “ಐ ಟಚ್​ ಮೈಸೆಲ್ಫ್​” ಹಾಡನ್ನು ಹಾಡೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಸ್ತನ ಕ್ಯಾನ್ಸರ್ ಜಾಗೃತಿ ಮಾಸದಲ್ಲಿ ನಾನು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಮಹಿಳೆಯರು ಎಚ್ಚರದಿಂದಿರಲು ಐ ಟಚ್ ಮೈಸೆಲ್ಫಿ ಹಾಡನ್ನ ಹಾಡಿದ್ದೇನೆ.  ಎಲ್ಲಾ ಮಹಿಳೆಯರಿಗೆ ನೆನಪಿನ ಸಂದೇಶ ನೀಡುತ್ತಿದ್ದೇನೆ. ನಿಮ್ಮ ಸ್ತನಗಳನ್ನ ಪರೀಕ್ಷಿಸಿಕೊಳ್ಳಿ. ಸ್ತನ ಕ್ಯಾನ್ಸರ್‌ನಿಂದ ದೂರವಿರಿ ಎಂದು ಸೆರೆನಾ ಟ್ವೀಟ್ ಮಾಡಿದ್ದಾರೆ.

ಸೆರೆನಾ ವಿಲಿಯಮ್ಸ್ ಸ್ತನ ಕ್ಯಾನ್ಸರ್ ಜಾಗೃತಿ ವೀಡಿಯೋಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಪ್ರಶಂಸಿದ್ದಾರೆ. 

 

Inspiring. Thank u Serena. I've lost family to Breast Cancer. This is IMPORTANT!

— Kels (@zaynlove2016)

 

Beautiful message and voice!! I promise to touch myself this October

— Zenande Matikinz (@ZenC_Mee)

 

Thanks for the reminder!! 22 years after a diagnosis of invasive, aggressive, metastatic I'm still cancer free!! 🙌🏾 🎀 pic.twitter.com/8GFGgvffqu

— Donna Green Goodman, MPH (@stillshoutin)

 

Serena is iconic! What a woman!

— Ollieeee (@CheltOllie92)

 

click me!