ಭಾರತ ತಂಡಗಳಿಗೆ ಇಂಡೋನೇಷ್ಯಾ ಮೊದಲ ಎದುರಾಳಿ

By Web DeskFirst Published Aug 1, 2018, 2:20 PM IST
Highlights

ಆಗಸ್ಟ್ 20 ರಂದು ಮೊದಲ ಪಂದ್ಯದಲ್ಲಿ ಭಾರತ, ಇಂಡೋನೇಷ್ಯಾದ ಸವಾಲನ್ನುಎದುರಿಸಲಿದೆ. ಇನ್ನು ಭಾರತ ಮಹಿಳಾ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಕೊರಿಯಾ, ಥಾಯ್ಲೆಂಡ್, ಕಜಕಸ್ತಾನ ಮತ್ತು ಇಂಡೋನೇಷ್ಯಾ ತಂಡಗಳು ಇವೆ. ಆಗಸ್ಟ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಡೋನೇಷ್ಯಾ ವಿರುದ್ಧ ಸೆಣಸಲಿದೆ.

ನವದೆಹಲಿ[ಆ.01]: ಜಕಾರ್ತದಲ್ಲಿ ನಡೆಯಲಿರುವ 18ನೇ ಏಷ್ಯನ್ ಗೇಮ್ಸ್‌ನ ಹಾಕಿ ವೇಳಾಪಟ್ಟಿ ಮಂಗಳವಾರ ಪ್ರಕಟಗೊಂಡಿದೆ. ಭಾರತ ಪುರುಷರ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜತೆಯಲ್ಲಿ ಕೊರಿಯಾ, ಜಪಾನ್, ಶ್ರೀಲಂಕಾ, ಹಾಂಕಾಂಗ್ ಮತ್ತು ಇಂಡೋನೇಷ್ಯಾ ತಂಡಗಳಿವೆ. ಆಗಸ್ಟ್ 20 ರಂದು ಮೊದಲ ಪಂದ್ಯದಲ್ಲಿ ಭಾರತ, ಇಂಡೋನೇಷ್ಯಾದ ಸವಾಲನ್ನುಎದುರಿಸಲಿದೆ.

ಇನ್ನು ಭಾರತ ಮಹಿಳಾ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಕೊರಿಯಾ, ಥಾಯ್ಲೆಂಡ್, ಕಜಕಸ್ತಾನ ಮತ್ತು ಇಂಡೋನೇಷ್ಯಾ ತಂಡಗಳು ಇವೆ. ಆಗಸ್ಟ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಡೋನೇಷ್ಯಾ ವಿರುದ್ಧ ಸೆಣಸಲಿದೆ. ಆ. 29, 30ಕ್ಕೆ ನಾಕೌಟ್ ಪಂದ್ಯಗಳು ನಡೆಯಲಿದ್ದು, ಆಗಸ್ಟ್ 31ಕ್ಕೆ ಮಹಿಳಾ ಫೈನಲ್ ಪಂದ್ಯ ಮತ್ತು ಸೆಪ್ಟೆಂಬರ್ 01 ಕ್ಕೆ ಪುರುಷರ ಫೈನಲ್ ಪಂದ್ಯ ನಡೆಯಲಿದೆ.

ಪುರುಷರ ವೇಳಾಪಟ್ಟಿ:
ಆಗಸ್ಟ್. 20 - ಇಂಡೋನೇಷ್ಯಾ
ಆಗಸ್ಟ್. 22 - ಹಾಂಕಾಂಗ್
ಆಗಸ್ಟ್. 24 - ಜಪಾನ್
ಆಗಸ್ಟ್. 26 - ಕೊರಿಯಾ
ಆಗಸ್ಟ್. 28 - ಶ್ರೀಲಂಕಾ

ಮಹಿಳೆಯರ ವೇಳಾಪಟ್ಟಿ:
ಆಗಸ್ಟ್. 19 - ಇಂಡೋನೇಷ್ಯಾ
ಆಗಸ್ಟ್. 21 - ಕಜಕಿಸ್ತಾನ
ಆಗಸ್ಟ್. 25 - ಕೊರಿಯಾ
ಆಗಸ್ಟ್. 27 - ಥಾಯ್ಲೆಂಡ್ 
 

click me!