82 ಎಸೆತದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಶತಕ

First Published Jul 12, 2018, 11:28 PM IST
Highlights

ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಸೆಂಚುರಿ ದಾಖಲಿಸಿದ್ದಾರೆ. ರೋಹಿತ್ ಸೆಂಚುರಿ ಹೈಲೈಟ್ಸ್ ಇಲ್ಲಿದೆ.

ನಾಟಿಂಗ್‌ಹ್ಯಾಮ್(ಜು.12): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೆಂಚುರಿ ಸಿಡಿಸಿದ ರೋಹಿತ್ ಶರ್ಮಾ ಇದೀಗ ಮೊದಲ ಏಕದಿನ ಪಂದ್ಯದಲ್ಲೂ ಶತಕ ಸಿಡಿಸಿದ್ದಾರೆ. ಈ ಮೂಲಕ ಏಕದಿನದಲ್ಲಿ 18ನೇ ಸೆಂಚುರಿ ದಾಖಲಿಸಿದ್ದಾರೆ.

12 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ರೋಹಿತ್ ಶರ್ಮಾ ಕೇವಲ 82 ಎಸೆತದಲ್ಲಿ ಶತಕ ದಾಖಲಿಸಿದ್ದಾರೆ. ರೋಹಿತ್ ಶರ್ಮಾಗೆ ನಾಯಕ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು. ರೋಹಿತ್ ಶರ್ಮಾ ಶತಕ ಸಿಡಿಸೋ ಮೂಲಕ ಕಳೆದ 9 ಏಕದಿನ ಪಂದ್ಯದಲ್ಲಿ ಭಾರತದ ಟಾಪ್ 3 ಬ್ಯಾಟ್ಸ್‌ಮನ್‌ಗಳು 8 ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Formats change but his run-scoring spree does not. scored a match-winning 💯 in the 3rd T20I and now scores another 💯. His 18th in ODIs. pic.twitter.com/L0GLh7kpoo

— BCCI (@BCCI)

 

ಇಂಗ್ಲೆಂಡ್ ನೀಡಿದ 269 ರನ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ಟೀಂ ಇಂಡಿಯಾಗೆ ಶಿಖರ್ ಧವನ್ ಹಾಗೂ ರೋಹಿತ್ ಉತ್ತಮ ಆರಂಭ ನೀಡಿದರು. ಆದರೆ ಧವನ್ 40 ರನ್ ಸಿಡಿಸಿ ಔಟಾದರು. ಬಳಿಕ ರೋಹಿತ್ ಹಾಗೂ ಕೊಹ್ಲಿ ಅತ್ಯುತ್ತಮ ಜೊತೆಯಾಟ ನೀಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲದೀಪ್ ಸ್ಪಿನ್ ಮೋಡಿಯಿಂದ 49.5 ಓವರ್‌ಗಳಲ್ಲಿ 268 ರನ್‌ಗೆ ಆಲೌಟ್ ಆಯಿತು. ಕುಲದೀಪ್ ಯಾದವ್ ಸ್ಪಿನ್ ದಾಳಿಯಿಂದ ಜೇಸನ್ ರಾಯ್,  ಜಾನಿ ಬೈರಿಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಡೇವಿಡ್ ವಿಲೆ ವಿಕೆಟ್ ಕಬಳಿಸಿದರು. 
 

click me!