ದೇಶದ ಅಗ್ರ ಕುಸ್ತಿಪಟುಗಳು ಮತ್ತೆ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ
ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ನ ಸಿದ್ಧತೆಗಾಗಿ ಸಾಯ್‌ನಲ್ಲಿ ಅಭ್ಯಾಸ ಆರಂಭ
ಸೋನಿಪತ್ನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾಕ್ಟೀಸ್ ಶುರು
ನವದೆಹಲಿ(ಜೂ.20): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಹಲವು ತಿಂಗಳುಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿದ್ದ ದೇಶದ ಅಗ್ರ ಕುಸ್ತಿಪಟುಗಳು ಮತ್ತೆ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ನ ಸಿದ್ಧತೆಗಾಗಿ ಸೋನಿಪತ್ನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಭಜರಂಗ್ ಪೂನಿಯಾ ಈಗಾಗಲೇ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್, ಗೀತಾ ಫೋಗಟ್ ಹಾಗೂ ಭಜರಂಗ್ರ ಪತ್ನಿ ಸಂಗೀತಾ ಫೋಗಟ್ ಕೇಂದ್ರದಲ್ಲಿ ತರಬೇತಿಯಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಸಾಯ್ ಕೇಂದ್ರದ ಅಧಿಕಾರಿಗಳು ಹೇಳಿಕೆ ನೀಡಿದ್ದು, ಕುಸ್ತಿಪಟುಗಳು ದೀರ್ಘ ಸಮಯದ ಬಳಿಕ ಎಂದಿನಂತೆ ಅಭ್ಯಾಸ ನಡೆಸುತ್ತಿದ್ದಾರೆ ಎಂದಿದ್ದಾರೆ.
undefined
ಇಂದಿನಿಂದ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿ; ಎಚ್.ಎಸ್.ಪ್ರಣಯ್ ಮೇಲೆ ಕಣ್ಣು
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಹೋರಾಟ ನಡೆಸುತ್ತಲೇ ಕೇಂದ್ರ ಸರ್ಕಾರದ ವಿರುದ್ಧವೂ ತೊಡೆ ತಟ್ಟಿದ್ದ ಕುಸ್ತಿಪಟುಗಳು ಸದ್ಯ ಸರ್ಕಾರದ ವಿರುದ್ಧದ ತಮ್ಮ ಧೋರಣೆಯನ್ನು ಸಡಿಲಗೊಳಿಸಿದಂತಿದೆ. ಹಲವು ಗೊಂದಲ, ಟೀಕೆ ಹಾಗೂ ರಾಜಕೀಯ ಪ್ರೇರಿತವೆಂಬ ಆರೋಪಗಳಿಗೆ ಕಾರಣವಾಗಿದ್ದ ತಮ್ಮ ಹೋರಾಟದ ಬಗ್ಗೆ ಸ್ಪಷ್ಟೀಕರಣ ನೀಡುವುದರ ಜೊತೆಗೆ, ತಮ್ಮ ಪ್ರತಿಭಟನೆ ಕೇಂದ್ರ ಸರ್ಕಾರದ ವಿರುದ್ಧ ಅಲ್ಲ, ಬ್ರಿಜ್ ವಿರುದ್ಧ ಮಾತ್ರ ಎಂದೂ ಹೇಳಿದ್ದಾರೆ. ಅಲ್ಲದೇ, ಈ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ ತಿಂಗಳಾಂತ್ಯದಲ್ಲಿ ಕುಸ್ತಿಪಟುಗಳು ಜಂತರ್ಮಂತರ್ನಲ್ಲಿ ಪ್ರತಿಭಟನೆ ಆರಂಭಿಸಿದಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ಇತರ ಕೆಲ ಕಾಂಗ್ರೆಸ್ ನಾಯಕರು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದರು. ಇದು ಪ್ರತಿಭಟನೆ ರಾಜಕೀಯ ಬಣ್ಣ ಪಡೆಯಲು ಪ್ರಮುಖ ಕಾರಣವಾಗಿತ್ತು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಉದ್ಘಾಟಿಸುವ ದಿನವೇ ಅಲ್ಲಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಕೂಡಾ ಪ್ರತಿಭಟನೆ ರಾಜಕೀಯ ಪ್ರೇರಿತವೆಂಬ ಚರ್ಚೆ ಹುಟ್ಟುಹಾಕಿತ್ತು.
ನಾನು ಯುಎಸ್ ಓಪನ್ ಗೆಲ್ಲಬಾರದಿತ್ತು: ಎಮ್ಮಾ!
ಲಂಡನ್: ಟೆನಿಸ್ನ ಯುವ ತಾರೆ, ತಮ್ಮ 18ನೇ ವಯಸ್ಸಲ್ಲೇ 2021ರ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದ ಬ್ರಿಟನ್ನ ಎಮ್ಮಾ ರಾಡುಕಾನು, ತಾವು ಯುಎಸ್ ಓಪನ್ನಲ್ಲಿ ಗೆಲ್ಲಬಾರದಿತ್ತು ಎಂದು ಹಲವು ಬಾರಿ ಯೋಚಿಸುವಂತಾಗಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ‘ನಾನು ದೈಹಿಕವಾಗಿ ಹಲವು ಬಾರಿ ಗಾಯಗೊಂಡಿದ್ದೇನೆ. ಆದರೆ ಮಾನಸಿಕವಾಗಿ ಉಂಟಾಗುವ ನೋವು ಸಹಿಸಲಾಗುತ್ತಿಲ್ಲ. ನನ್ನ ಸಾಧನೆಯನ್ನೇ ಹೆಚ್ಚಾಗಿ ಹಚ್ಚಿಕೊಂಡಿದ್ದೇನೆ. ಪ್ರೇಕ್ಷಕರಲ್ಲೂ ನನ್ನ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಹೀಗಾಗಿ ಕೆಲವೊಮ್ಮೆ ಸೋತಾಗ ನಾನು ಸಂಪೂರ್ಣ ಕುಗ್ಗಿ ಹೋಗುತ್ತೇನೆ. ಯುಎಸ್ ಓಪನ್ ಗೆದ್ದ ಬಳಿಕ ನಾನು ತುಂಬಾ ಕಷ್ಟಅನುಭವಿಸಿದ್ದೇನೆ’ ಎಂದಿದ್ದಾರೆ.