Wrestlers Protest: ಮತ್ತೆ ಆಖಾ​ಡ​ಕ್ಕೆ ಮರ​ಳಿದ ಕುಸ್ತಿ​ಪ​ಟು​ಗಳು!

By Kannadaprabha NewsFirst Published May 10, 2023, 8:58 AM IST
Highlights

ಏಷ್ಯನ್‌ ಗೇಮ್ಸ್‌ ಟ್ರಯ​ಲ್ಸ್‌​ಗಾಗಿ ಡೆಲ್ಲಿಯ ಪ್ರತಿ​ಭ​ಟನಾ ಸ್ಥಳ​ದಲ್ಲೇ ಅಭ್ಯಾಸ ಶುರು
ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಿರತರಾಗಿರುವ ಕುಸ್ತಿಪಟುಗಳು
ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರುದ್ಧ ಪ್ರತಿ​ಭ​ಟ​ನೆ ನಡೆ​ಸು​ತ್ತಿ​ರುವ ಕುಸ್ತಿಪಟುಗಳು

ನವ​ದೆ​ಹ​ಲಿ(ಮೇ.10): ಭಾರ​ತೀಯ ಕುಸ್ತಿ ಫೆಡ​ರೇ​ಶನ್‌(ಡ​ಬ್ಲ್ಯು​ಎ​ಫ್‌​ಐ​) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರುದ್ಧ ಪ್ರತಿ​ಭ​ಟ​ನೆ ನಡೆ​ಸು​ತ್ತಿ​ರುವ ಭಾರ​ತದ ಅಗ್ರ ಕುಸ್ತಿ​ಪ​ಟು​ಗಳು 15 ದಿನ​ಗಳ ಬಳಿಕ ಮತ್ತೆ ಕುಸ್ತಿ ಅಭ್ಯಾಸ ಆರಂಭಿ​ಸಿದ್ದು, ಮುಂಬ​ರುವ ಟೂರ್ನಿ​ಗ​ಳಲ್ಲಿ ಪಾಲ್ಗೊ​ಳ್ಳುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

ಚೀನಾ​ದಲ್ಲಿ ನಡೆ​ಯ​ಲಿ​ರುವ ಏಷ್ಯನ್‌ ಗೇಮ್ಸ್‌ಗಾಗಿ ಜೂನ್‌​ನಲ್ಲಿ ಡ​ಬ್ಲ್ಯು​ಎ​ಫ್‌​ಐ​ ಆಯ್ಕೆ ಟ್ರಯಲ್ಸ್‌ ನಡೆ​ಸ​ಲಿದ್ದು, ಇದ​ಕ್ಕಾಗಿ ಕುಸ್ತಿ​ಪ​ಟು​ಗಳು ಸೋಮ​ವಾರ ಜಂತ​ರ್‌​ಮಂತ​ರ್‌ನ ಪ್ರತಿ​ಭ​ಟನಾ ಸ್ಥಳ​ದಲ್ಲೇ ತರ​ಬೇತಿ ನಡೆ​ಸಿ​ದ​ರು. ಭಜ​ರಂಗ್‌, ವಿನೇಶ್‌ ಫೋಗಾಟ್‌ ಜನ​ವ​ರಿ​ಯಿಂದ ಯಾವುದೇ ಅಂತಾ​ರಾ​ಷ್ಟ್ರೀಯ ಕೂಟ​ಗ​ಳಲ್ಲಿ ಪಾಲ್ಗೊಂಡಿಲ್ಲ. ಬ್ರಿಜ್‌ರನ್ನು ಬಂಧಿ​ಸು​ವ​ವ​ರೆಗೆ ಯಾವುದೇ ಕೂಟ, ಅಭ್ಯಾಸ ಶಿಬಿ​ರ​ದಲ್ಲಿ ಪಾಲ್ಗೊ​ಳ್ಳು​ವು​ದಿಲ್ಲ ಎಂದು ಪಟ್ಟು​ಹಿ​ಡಿ​ದಿ​ದ್ದ​ರು. ಆದರೆ ತಮ್ಮ ಪಟ್ಟು ಸಡಿ​ಲಿ​ಸಿ​ದಂತಿ​ರುವ ಕುಸ್ತಿ​ಪ​ಟು​ಗಳು ಮುಂದಿನ ಟೂರ್ನಿ​ಗ​ಳಲ್ಲಿ ಪಾಲ್ಗೊ​ಳ್ಳು​ವು​ದಾಗಿ ತಿಳಿ​ಸಿ​ದ್ದಾ​ರೆ.

Latest Videos

ಇದೇ ವೇಳೆ ಡಬ್ಲ್ಯು​ಎ​ಫ್‌ಐ ಮೇಲ್ವಿ​ಚಾ​ರ​ಣೆಗೆ ನೇಮಿ​ಸ​ಲಾ​ಗಿ​ರುವ ಸಮಿ​ತಿಯು ಆಯ್ಕೆ ಟ್ರಯ​ಲ್ಸ್‌​ನಲ್ಲಿ ಪಾಲ್ಗೊ​ಳ್ಳಲು ಬೇಕಾ​ಗಿ​ರುವ ಮಾನ​ದಂಡ​ಗ​ಳನ್ನು ಬದ​ಲಾ​ಯಿ​ಸುವ ಸಾಧ್ಯತೆ ಇದೆ. ಈ ಮೊದಲು ರಾಷ್ಟ್ರೀಯ, ಅಂತಾ​ರಾ​ಷ್ಟ್ರೀಯ ಕೂಟ, ಫೆಡ​ರೇ​ಶನ್‌ ಕಪ್‌ ಸೇರಿ​ದಂತೆ ಪ್ರಮುಖ ಟೂರ್ನಿ​ಗ​ಳಲ್ಲಿ ಪದಕ ಗೆದ್ದ ಕುಸ್ತಿ​ಪ​ಟು​ಗ​ಳಿಗೆ ಮಾತ್ರ ಟ್ರಯ​ಲ್ಸ್‌​ನಲ್ಲಿ ಪಾಲ್ಗೊ​ಳ್ಳುವ ಅವ​ಕಾ​ಶ​ವಿತ್ತು. ಆದರೆ ಈ ಬಾರಿ ಆಯಾಯಾ ರಾಜ್ಯ​ ಸಂಸ್ಥೆ​ಗಳೇ ಕುಸ್ತಿ​ಪ​ಟು​ಗ​ಳನ್ನು ಆಯ್ಕೆ​ಮಾಡಿ ಟ್ರಯ​ಲ್ಸ್‌ಗೆ ಕಳು​ಹಿ​ಸುವ ಅವ​ಕಾಶ ನೀಡ​ಬ​ಹು​ದು ಎನ್ನ​ಲಾ​ಗು​ತ್ತಿದೆ.

ಪ್ರತಿ​ಭ​ಟನೆ ಬೆಂಬ​ಲಿ​ಸಿ​ದ ಮೂವರ ಅಮಾ​ನ​ತು!

ಕುಸ್ತಿ​ಪ​ಟು​ಗಳ ಪ್ರತಿ​ಭ​ಟನೆ ಬೆಂಬ​ಲಿ​ಸಿ​ದ್ದಾ​ರೆಂಬ ಕಾರ​ಣಕ್ಕೆ ಹರ್ಯಾಣ ಅಮೆ​ಚೂರ್‌ ಕುಸ್ತಿ ಸಂಸ್ಥೆ​(ಎ​ಚ್‌​ಎ​ಡ​ಬ್ಲ್ಯು​ಎ​)ಯು 3 ಜಿಲ್ಲೆ​ಗಳ ಕಾರ‍್ಯ​ದ​ರ್ಶಿ​ಗ​ಳನ್ನು ಅಮಾ​ನ​ತು​ಗೊ​ಳಿ​ಸಿ ಆದೇ​ಶಿ​ಸಿ​ದೆ. ಪ್ರತಿ​ಭ​ಟನೆ ಬೆಂಬ​ಲಿ​ಸಿ​ರು​ವುದು ಡಬ್ಲ್ಯು​ಎ​ಫ್‌ಐ ನಿಯ​ಮಕ್ಕೆ ವಿರುದ್ಧ ಎಂದು ಜಜ್ಜಾರ್‌, ಹಿಸಾರ್‌, ಮೇವತ್‌ ಜಿಲ್ಲೆ​ಗಳ ಮೂವ​ರನ್ನು ಎ​ಚ್‌​ಎ​ಡ​ಬ್ಲ್ಯು​ಎ​ ಅಮಾ​ನತು ಮಾಡಿದೆ.

ಬಾಕ್ಸಿಂಗ್‌: ದೀಪ​ಕ್‌, ನಿಶಾಂತ್‌ ಕ್ವಾರ್ಟ​ರ್‌​ಗೆ

ತಾಷ್ಕೆಂಟ್‌: ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರ​ತದ ಮತ್ತಿ​ಬ್ಬರು ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ಮಂಗ​ಳ​ವಾರ 51 ಕೆ.ಜಿ. ವಿಭಾ​ಗದಲ್ಲಿ ದೀಪಕ್‌ ಹಾಗೂ 71 ಕೆ.ಜಿ. ವಿಭಾ​ಗ​ದಲ್ಲಿ ನಿಶಾಂತ್‌ ದೇವ್‌ ಅಂತಿ​ಮ 8ರ ಘಟ್ಟ ಪ್ರವೇ​ಶಿ​ಸಿದ್ದಾರೆ. ಪ್ರಿ ಕ್ವಾರ್ಟ​ರ್‌​ನಲ್ಲಿ ದೀಪಕ್‌ ಚೀನಾದ ಝಾಂಗ್‌ ಜಿಯಾಮೊ ವಿರುದ್ಧ 5-0 ಅಂತ​ರದಲ್ಲಿ ಜಯ​ಭೇರಿ ಬಾರಿ​ಸಿ​ದರೆ, ನಿಶಾಂತ್‌ ಪ್ಯಾಲೆ​ಸ್ತೀ​ನಿನ ಫೆಕಾಹ ನಿದಾ​ಲ್‌​ರನ್ನು ಮಣಿ​ಸಿ​ದರು. 

Wrestlers Protest ಕುಸ್ತಿಪಟುಗಳ ಹೋರಾಟಕ್ಕೆ ಮತ್ತೊಂದು ಟ್ವಿಸ್ಟ್‌: ಈಗ ರೈತರ ಸಾಥ್‌!

ಆದರೆ 2021ರ ವಿಶ್ವ ಯುವ ಚಾಂಪಿ​ಯ​ನ್‌​ಶಿಪ್‌ ವಿಜೇತ ಸಚಿನ್‌ 54 ಕೆ.ಜಿ. ವಿಭಾ​ಗ​ದ ಪ್ರಿ ಕ್ವಾರ್ಟ​ರ್‌​ನಲ್ಲಿ ಕಜ​ಕ​ಸ್ತಾ​ನದ ಸಬೀ​ರ್‌​ಖಾನ್‌ ವಿರುದ್ಧ 0-5 ಅಂತ​ರ​ದಲ್ಲಿ ಪರಾ​ಭ​ವ​ಗೊಂಡರೆ, 67 ಕೆ.ಜಿ. ವಿಭಾ​ಗ​ದಲ್ಲಿ ಆಕಾಶ್‌ ಕಜ​ಕ​ಸ್ತಾ​ನದ ಬೆಕ​ಬೋವ್‌ ದುಲಾತ್‌ ವಿರುದ್ಧ 0-5 ಅಂತ​ರ​ದಲ್ಲಿ ಸೋತು​ಹೊ​ರ​ಬಿ​ದ್ದರು.

ಮೆಸ್ಸಿ ಸೌದಿ ಕ್ಲಬ್‌ ಸೇರ್ಪಡೆ?

ಪ್ಯಾರಿ​ಸ್‌: ಅರ್ಜೆಂಟೀ​ನಾದ ಫುಟ್ಬಾಲ್‌ ತಾರೆ ಲಿಯೋ​ನೆಲ್‌ ಮೆಸ್ಸಿ ಮುಂದಿನ ಋುತು​ವಿ​ನಲ್ಲಿ ಸೌದಿ ಅರೇ​ಬಿಯಾದ ಲೀಗ್‌​ನಲ್ಲಿ ಆಡು​ವುದು ಬಹು​ತೇಕ ಖಚಿ​ತ​ವಾ​ಗಿದೆ ಎನ್ನ​ಲಾ​ಗಿದ್ದು, ಅಲ್‌ ಹಿಲಾಲ್‌ ಕ್ಲಬ್‌ ಜೊತೆ ಮಾತು​ಕತೆ ಪೂರ್ಣ​ಗೊ​ಳಿ​ಸಿ​ದ್ದಾರೆ ಎಂದು ಮಾಧ್ಯ​ಗ​ಳಲ್ಲಿ ವರ​ದಿ​ಯಾ​ಗಿದೆ. 

ಕ್ಲಬ್‌ ಮೆಸ್ಸಿಗೆ ವಾರ್ಷಿಕ 400 ಮಿಲಿಯನ್‌ ಯುರೋ (ಅಂದಾಜು 3611 ಕೋಟಿ ರು.) ಆಫರ್‌ ನೀಡಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತು. ಸದ್ಯ ಅವರು ಫ್ರಾನ್ಸ್‌ನ ಫುಟ್ಬಾಲ್‌ ಕ್ಲಬ್‌ ಪ್ಯಾರಿಸ್‌ ಸೇಂಟ್‌ ಜರ್ಮೈನ್‌(ಪಿ​ಎ​ಸ್‌​ಜಿ) ಪರ ಆಡು​ತ್ತಿದ್ದು, ಈ ಋುತು​ವಿ​ನಲ್ಲಿ ಅವರ ಒಪ್ಪಂದ ಅಂತ್ಯ​ಗೊ​ಳ್ಳ​ಲಿದೆ. ಅವ​ರ ಒಪ್ಪಂದ ನವೀ​ಕ​ರಿ​ಸುವ ಸಾಧ್ಯತೆ ಕಡಿಮೆ ಎನ್ನ​ಲಾ​ಗುತ್ತಿದೆ.

click me!