ದುಬಾರಿ ಸ್ಕೂಲ್ ನಲ್ಲಿ ಓದ್ತಿದ್ದಾಳೆ ಕ್ಯಾಪ್ಟನ್ ಕೂಲ್ ಧೋನಿ ಮಗಳು ಝೀವಾ, ಅಂಥದ್ದೇನಿದೆ ಶಾಲೆಯಲ್ಲಿ?

By Roopa Hegde  |  First Published Sep 21, 2024, 4:13 PM IST

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಮಗಳನ್ನು ದುಬಾರಿ ಶಾಲೆಗೆ ಸೇರಿಸಿದ್ದಾರೆ. ಝೀವಾ ಕಲಿಯುತ್ತಿರುವ ಶಾಲೆ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಆ ಶಾಲೆ ಎಲ್ಲಿದೆ, ಅದ್ರಲ್ಲಿ ಏನೆಲ್ಲ ಕಲಿಸಲಾಗುತ್ತೆ ಎಂಬ ಮಾಹಿತಿ ಇಲ್ಲಿದೆ. 
 


ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (Captain Cool Mahendra Singh Dhoni) ಫ್ಯಾಮಿಲಿ ಮೆನ್. ಅವರು ವೃತ್ತಿ ಜೊತೆ ತಮ್ಮ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ. ಪತ್ನಿ ಸಾಕ್ಷಿ ಮತ್ತು ಮಗಳು ಝೀವಾ ಜೊತೆ ಆಗಾಗ ಕಾಣಿಸಿಕೊಳ್ಳುವ ಧೋನಿ ಆದರ್ಶ ಅನೇಕರಿಗೆ ಸ್ಪೂರ್ತಿ. 

ಸೋಶಿಯಲ್ ಮೀಡಿಯಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಾಜಿ ಕ್ಯಾಪ್ಟನ್, ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ಧೋನಿ, ತಮ್ಮ ಮಗಳು ಝೀವಾ (Ziva) ಜೊತೆಗಿರುವ ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಧೋನಿ ಮಗಳು ಝೀವಾಗೆ ಈಗ 9 ವರ್ಷ. ಮುಂದಿನ ಫೆಬ್ರವರಿಯಲ್ಲಿ 10ನೇ ವರ್ಷಕ್ಕೆ ಕಾಲಿಡಲಿರುವ ಝೀವಾ, 2015ರಲ್ಲಿ ಜನಿಸಿದ್ದಾಳೆ. 

Tap to resize

Latest Videos

undefined

ಒನ್‌ಡೇ ಕ್ರಿಕೆಟ್‌ನಲ್ಲಿ 300+ ಮೇಡನ್ ಓವರ್ ಮಾಡಿದ ಜಗತ್ತಿನ ಏಕೈಕ ಬೌಲರ್ ಇವರು!

ಧೋನಿ ಮಗಳು ಝೀವಾ ಓದುತ್ತಿರುವ ಸ್ಕೂಲ್ ಯಾವುದು? : ಧೋನಿ ತಮ್ಮ ಮಗಳನ್ನು ರಾಂಚಿಯಲ್ಲಿರುವ ಪ್ರಸಿದ್ಧ ಸ್ಕೂಲ್ ಗೆ ಸೇರಿಸಿದ್ದಾರೆ. ಝೀವಾ, ರಾಂಚಿಯ ಪ್ರತಿಷ್ಠಿತ ಸಂಸ್ಥೆಯಾದ ಟೌರಿಯನ್ ವರ್ಲ್ಡ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. 2008 ರಲ್ಲಿ ಅಮಿತ್ ಬಜ್ಲಾ ಈ ಟೌರಿಯನ್ ವರ್ಲ್ಡ್ ಸ್ಕೂಲ್ ಶುರು ಮಾಡಿದ್ದರು.

ಟೌರಿಯನ್ ವರ್ಲ್ಡ್ ಸ್ಕೂಲ್ (Taurian World School),  65 ಎಕರೆ ಪ್ರದೇಶದಲ್ಲಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿಯಾಗಿರುವ ಅಮಿತ್ ಬಜ್ಲಾ, ಈ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಮುಂಬೈನಲ್ಲಿ ವಾಸಿಸುತ್ತಿರುವ ಬಜ್ಲಾ, ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿ ಎರಡಕ್ಕೂ ಒತ್ತು ನೀಡುವ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಶಾಲೆಯು ಸಾವಯವ ಕೃಷಿ, ಕುದುರೆ ಸವಾರಿ ಮತ್ತು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವಂತಹ ಸಾಂಪ್ರದಾಯಿಕ ಶಿಕ್ಷಣ ನೀಡುತ್ತದೆ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು ಪಠ್ಯಕ್ರಮದ ಪ್ರಮುಖ ಭಾಗವಾಗಿದೆ.  ಟೌರಿಯನ್ ವರ್ಲ್ಡ್ ಸ್ಕೂಲ್ ಅಂತರರಾಷ್ಟ್ರೀಯ ಶಿಕ್ಷಕರನ್ನು ನೇಮಿಸಿಕೊಂಡಿದೆ. 

ಝೀವಾ ಶಾಲಾ ಶುಲ್ಕ :  ಟೌರಿಯನ್ ವರ್ಲ್ಡ್ ಸ್ಕೂಲ್ ನಲ್ಲಿ ಓದುತ್ತಿರುವ ಝೀವಾ ಶಿಕ್ಷಣದ ಶುಲ್ಕ 4 ಲಕ್ಷಕ್ಕಿಂತ ಹೆಚ್ಚಿದೆ.  ಎಲ್ ಕೆಜಿ ಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ಅಂದಾಜು 4.40 ಲಕ್ಷ ರೂಪಾಯಿ. 9  ರಿಂದ 12 ನೇ ತರಗತಿಗೆ ಸುಮಾರು 4.80 ಲಕ್ಷ ರೂಪಾಯಿ ಶುಲ್ಕ ಪಾವತಿಅಸಬೇಕು. ಸಮವಸ್ತ್ರ, ಪಠ್ಯಪುಸ್ತಕ ಮತ್ತು ಇತರ ಅಗತ್ಯ ಸಾಮಗ್ರಿಗಳಂತಹ ಅಗತ್ಯಗಳನ್ನು ಶುಲ್ಕ ಒಳಗೊಂಡಿರುತ್ತವೆ.  

ಸೋಶಿಯಲ್ ಮೀಡಿಯಾದಲ್ಲಿ ಝೀವಾ : 2015ರಲ್ಲಿ ಧೋನಿ ಆಸ್ಟ್ರೇಲಿಯಾ ಟೂರ್ ನಲ್ಲಿರುವ ಸಂದರ್ಭದಲ್ಲಿ ಝೀವಾ ಜನಿಸಿದ್ದಳು. ಫಂದ್ಯದಲ್ಲಿ ಬ್ಯುಸಿ ಇದ್ದ ಧೋನಿಗೆ, ಮಗಳು ಹುಟ್ಟಿದ ಖುಷಿ ಸುದ್ದಿ ತಿಳಿಸಿದ್ದು ಸುರೇಶ್ ರೈನಾ. ಝೀವಾ ಜನಿಸುತ್ತಲೇ ಸ್ಟಾರ್ ಕಿಡ್ಸ್ ಪಟ್ಟಿ ಸೇರಿದ್ದಾಳೆ. ಆಕೆ  ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದಾಳೆ. ಝೀವಾ ಇನ್ಸ್ಟಾ ಖಾತೆಯಲ್ಲಿ 2.3 ಮಿಲಿಯನ್ ಫಾಲೋವರ್ಸ್ ಇದ್ದು, ಅವಳ ಖಾತೆಯನ್ನು ಅವಳ ತಾಯಿ ಸಾಕ್ಷಿ ಮತ್ತು ತಂದೆ ಮಹೇಂದ್ರ ಸಿಂಗ್ ಧೋನಿ ನಿರ್ವಹಿಸುತ್ತಿದ್ದಾರೆ.

ಪ್ರೈವೇಟ್ ಜೆಟ್ ಖರೀದಿಸಿದ ಮೊದಲ ಭಾರತೀಯ ಕ್ರಿಕೆಟಿಗನೀತ! ಆದರೆ ಅದು ಕಪಿಲ್ ದೇವ್, ತೆಂಡುಲ್ಕರ್, ಧೋನಿ, ಕೊಹ್ಲಿ ಅಲ್ಲವೇ ಅಲ್ಲ

ಅಂತರಾಷ್ಟ್ರೀಯ ಕ್ರಿಕೆಟ್ (International Cricket) ಗೆ ವಿದಾಯ ಹೇಳಿದ ನಂತ್ರ ಧೋನಿ, ಐಪಿಎಲ್ ನಲ್ಲಿ ಆಟ ಮುಂದುವರೆಸಿದ್ದಾರೆ. 43 ವರ್ಷದ ಧೋನಿ ಈ ಬಾರಿ ಐಪಿಎಲ್ ಗೆ ವಿದಾಯ ಹೇಳಲಿದ್ದಾರೆ ಎನ್ನುವ ನಿರೀಕ್ಷೆ ಇದೆ. 2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಧೋನಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾರೆ. ಸ್ನೇಹಿತರ ಜೊತೆ ಫುಟ್ಬಾಲ್ ಗ್ರೌಂಡ್ ನಲ್ಲಿ ಕಾಣಿಸಿಕೊಂಡ ಧೋನಿಯ ಫೋಟೋಗಳು ವೈರಲ್ ಆಗ್ತಿವೆ. 

click me!