ಬೌನ್ಸರ್‌ಗೆ ಗಂಭೀರ ಗಾಯ-ಪಾಕ್ ಬ್ಯಾಟ್ಸ್‌ಮನ್ ವೈದ್ಯಕೀಯ ವರದಿ ಪ್ರಕಟ!

By Web DeskFirst Published Nov 10, 2018, 4:15 PM IST
Highlights

ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಬೌನ್ಸರ್ ಎಸೆತಕ್ಕೆ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಕುಸಿದ ಪಾಕಿಸ್ತಾನ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಸದ್ಯದ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಹೆಚ್ಚಿನ ವಿವರ.

ಅಬುದಾಬಿ(ನ.10): ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಲ್ಯೂಕಿ ಫರ್ಗ್ಯುಸನ್ ಬೌನ್ಸರ್ ಎಸೆತಕ್ಕೆ ಗಂಭೀರ ಗಾಯಗೊಂಡ ಪಾಕಿಸ್ತಾನ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ವೈದ್ಯಕೀಯ ವರದಿ ಪ್ರಕಟಗೊಂಡಿದೆ. 

 

Get well soon pic.twitter.com/MaR0MZPIaM

— Ramiz Ahmed Patel (@ramizrap1)

 

13ನೇ ಓವರ್‌ನ ಮೊದಲ ಎಸೆತದಲ್ಲಿ ಇಮಾಮ್ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ನೆಲಕ್ಕೆ ಕುಸಿದ ಇಮಾಮ್ ಉಲ್ ಹಕ್‌ರನ್ನ ಮೈದಾನದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಸ್ಕಾನಿಂಗ್ ನಡೆಸಿದ ವೈದ್ಯರು ಆತಂಕವನ್ನ ದೂರ ಮಾಡಿದ್ದಾರೆ.

 

Pray for 🤲♥️🔥 pic.twitter.com/vLJeK88NsG

— Vj Faraz KhAn🔥 (@G_imVjFk)

 

ಇಮಾಮ್ ಸ್ಕಾನ್ ವರದಿ ಪ್ರಕಾರ ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಇಮಾಮ್ ಉಲ್ ಹಕ್‌ಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

click me!