ಫ್ರೆಂಚ್ ಕೂಟ: ಚಿನ್ನ ಗೆದ್ದ ನೀರಜ್ ಚೋಪ್ರಾ

First Published Jul 19, 2018, 12:53 PM IST
Highlights

2012ರ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಟ್ರಿನಿಡಾಡ್‌ನ ಕೆಶಾರ್ನ್ ವಾಲ್ಕಟ್ ಸಹ ಸ್ಪರ್ಧೆಯಲ್ಲಿದ್ದರೂ, ಅವರನ್ನೂ ಹಿಂದಿಕ್ಕಿ ನೀರಜ್ ಮೊದಲ ಸ್ಥಾನ ಪಡೆದರು.

ನವದೆಹಲಿ[ಜು.19]: ಫ್ರಾನ್ಸ್‌ನಲ್ಲಿ ನಡೆದ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಟ್ರಿನಿಡಾಡ್‌ನ ಕೆಶಾರ್ನ್ ವಾಲ್ಕಟ್ ಸಹ ಸ್ಪರ್ಧೆಯಲ್ಲಿದ್ದರೂ, ಅವರನ್ನೂ ಹಿಂದಿಕ್ಕಿ ನೀರಜ್ ಮೊದಲ ಸ್ಥಾನ ಪಡೆದರು. 85.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ 20 ವರ್ಷದ ಭಾರತೀಯ ಅಥ್ಲೀಟ್, ದೊಡ್ಡ ಅಂತರ ಸಾಧಿಸಿದರು. ಮಾಲ್ಡೋವಾದ ಆ್ಯಂಡ್ರಿಯನ್(81.48 ಮೀ.) ಹಾಗೂ ಲಿಥುವೇನಿಯಾದ ಎಡಿಸ್ (79.31 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. 

ಪಾಣಿಪತ್ ಮೂಲದ 20 ವರ್ಷದ ನೀರಜ್ 2016ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್’ಶಿಪ್’ನಲ್ಲಿ 86.48 ಮೀಟರ್ ದೂರ ಎಸೆಯುವ ಮೂಲಕ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು. 

click me!