ಬೆಂಗಳೂರಿನಲ್ಲಿ ಧೋನಿಗೆ ಲಾಸ್ಟ್ ಮ್ಯಾಚ್; ಮಹಿ ಆಟ ನೋಡಲು ಭರ್ತಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ!

By Suvarna News  |  First Published May 17, 2024, 1:36 PM IST

ಎಂ ಎಸ್ ಧೋನಿ ಭಾರತ ಕಂಡ ಯಶಸ್ವಿ ನಾಯಕ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ಮೂರು ಮಾದರಿಯಲ್ಲೂ ಟೀಂ  ಇಂಡಿಯಾವನ್ನ ICC ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿಸಿದ ಕ್ಯಾಪ್ಟನ್. ಒನ್ಡೇ ಕ್ರಿಕೆಟ್ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಹೊಡೆದ ಧೀರ. ವಿಕೆಟ್ ಹಿಂದೆ ಮುಂದೆ ಅದ್ಭುತ ಪ್ರದರ್ಶನ ನೀಡೋ ಮೂಲಕ ಮೂರು ಮಾದರಿಯಲ್ಲೂ ಯಶಸ್ಸು ಕಂಡ ಆಟಗಾರ.


ಬೆಂಗಳೂರು: 2024ರ ಐಪಿಎಲ್ ಫೈನಲ್ ಪಂದ್ಯಕ್ಕಿಂತ ಹೆಚ್ಚು ಕುತೂಹಲ ಕೆರಳಿಸಿರೋದು ಶನಿವಾರ(ಮೇ 18) ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಪಂದ್ಯ. ಗೆದ್ರೆ ಪ್ಲೇ ಆಫ್, ಸೋತ್ರೆ ಲೀಗ್‌ನಿಂದ ಕಿಕೌಟ್ ಅನ್ನೋ ಪರಿಸ್ಥಿತಿ ಎರಡು ತಂಡಕ್ಕೂ ನಿರ್ಮಾಣವಾಗಿದೆ. ಈ ಪಂದ್ಯದಲ್ಲಿ ಮೇನ್ ಅಟ್ರ್ಯಾಕ್ಷನ್ ಅಂದ್ರೆ ಧೋನಿ ಮತ್ತು ಕೊಹ್ಲಿ. ಅದರಲ್ಲೂ ಧೋನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಅದಕ್ಕೆ ಕಾರಣ ಏನು ಅನ್ನೋದು ಇಲ್ಲಿದೆ ನೋಡಿ. 

ಬೆಂಗಳೂರಿನಲ್ಲಿ ಧೋನಿ ಆರ್ಭಟ ಹೇಗಿದೆ ಗೊತ್ತಾ..?

Tap to resize

Latest Videos

ಎಂ ಎಸ್ ಧೋನಿ ಭಾರತ ಕಂಡ ಯಶಸ್ವಿ ನಾಯಕ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ಮೂರು ಮಾದರಿಯಲ್ಲೂ ಟೀಂ  ಇಂಡಿಯಾವನ್ನ ICC ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿಸಿದ ಕ್ಯಾಪ್ಟನ್. ಒನ್ಡೇ ಕ್ರಿಕೆಟ್ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಹೊಡೆದ ಧೀರ. ವಿಕೆಟ್ ಹಿಂದೆ ಮುಂದೆ ಅದ್ಭುತ ಪ್ರದರ್ಶನ ನೀಡೋ ಮೂಲಕ ಮೂರು ಮಾದರಿಯಲ್ಲೂ ಯಶಸ್ಸು ಕಂಡ ಆಟಗಾರ. 2019 ಒನ್ಡೇ ವರ್ಲ್ಡ್‌ಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ರು.

IPL 2024 ಗೆಲುವಿನೊಂದಿಗೆ ಗುಡ್‌ಬೈ ಹೇಳಲು ಮುಂಬೈ-ಲಖನೌ ಕಾತರ

ಟೀಂ ಇಂಡಿಯಾದಿಂದ ದೂರ ಆದ್ರೂ ಐಪಿಎಲ್‌ನಲ್ಲಿ ಧೋನಿ ಆಟ ಮುಂದುವರೆದಿತ್ತು. ಆದ್ರೀಗ ಅವರು IPLನಲ್ಲೂ ತಮ್ಮ ಆಟ ಮುಗಿಸುವ ಸನಿಹದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಐಪಿಎಲ್‌ನ ತನ್ನ ಕೊನೆ ಲೀಗ್ ಪಂದ್ಯವನ್ನ ನಾಳೆ RCB ವಿರುದ್ಧ ಆಡಲಿದೆ. ಈ ಮ್ಯಾಚ್ ಗೆದ್ರೆ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇ ಆಫ್ಗೇರಲಿದೆ. ಸೋತ್ರೆ ಲೀಗ್ನಿಂದ ಕಿಕೌಟ್ ಆಗಲಿದೆ. CSK ಸೋತ್ರೂ, ಗೆದ್ರೂ ಧೋನಿಗೆ ಬೆಂಗಳೂರಿನಲ್ಲಿ ನಾಳೆ ಕೊನೆ ಪಂದ್ಯ. 

ಹೌದು, ಐಪಿಎಲ್‌ನಿಂದಲೂ ವಿದಾಯ ಹೇಳಲು ಸಜ್ಜಾಗಿರುವ ಧೋನಿ, ಎಲ್ಲಾ ಕ್ರಿಕೆಟ್‌ಗೆ ಗುಡ್ ಬೈ ಹೇಳಲಿದ್ದಾರೆ. ಮಹಿ, ಮತ್ತೆಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವುದಿಲ್ಲ. ಅಲ್ಲಿಗೆ ನಾಳಿನ ಪಂದ್ಯವೇ ಧೋನಿ ಪಾಲಿಗೆ ಬೆಂಗಳೂರಿನಲ್ಲಿ ಲಾಸ್ಟ್ ಮ್ಯಾಚ್ ಆಗಲಿದೆ. ಹಾಗಾಗಿ ಈ ಪಂದ್ಯ ಮಹಿಗೆ ಮಾತ್ರವಲ್ಲ. ಅವರ ಅಭಿಮಾನಿಗಳಿಗೂ ಮಹತ್ವದ್ದಾಗಿದೆ. ಹಾಗಾಗಿ ಧೋನಿ ಆಟ ನೋಡಲು ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಭರ್ತಿಯಾಗಲಿದೆ.

ಮಳೆಯಿಂದ GT vs SRH ಪಂದ್ಯ ರದ್ದು: ಅಧಿಕೃತವಾಗಿ ಪ್ಲೇ-ಆಫ್‌ಗೇರಿದ ಸನ್‌ರೈಸರ್ಸ್‌

ಚೆಪಾಕ್ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಧೋನಿ ನಮನ

ಮೇ 12ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯವಾಡಿತು. ಪಂದ್ಯ ಗೆದ್ದ ಬಳಿಕ ಧೋನಿ, ಪಿಚ್ನಲ್ಲಿ ಒಂದು ಸುತ್ತು ಸುತ್ತಿ, ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ರು. ಆಗ್ಲೇ ಕನ್ಫರ್ಮ್ ಆಗಿದ್ದು, ಮಹಿಗೆ ಇದು ಲಾಸ್ಟ್ IPL ಅಂತ. ಆಕಸ್ಮಾತ್, ನಾಳೆ ಆರ್‌ಸಿಬಿ ವಿರುದ್ಧ ಗೆದ್ದರೆ, CSK ತಂಡ ಚೆನ್ನೈನಲ್ಲಿ ಪ್ಲೇ ಆಫ್ ಆಡಲಿದೆ. ಆರ್‌ಸಿಬಿ ವಿರುದ್ಧ ಸೋತ್ರೆ, ಮೊನ್ನೆ ರಾಯಲ್ಸ್ ವಿರುದ್ಧ ಆಡಿದ್ದೇ ಧೋನಿಗೆ ಚೆನ್ನೈನಲ್ಲಿ ಕೊನೆ ಪಂದ್ಯವಾಗಲಿದೆ. ಈ ಅನುಮಾನದಿಂದಲೇ ಮೊನ್ನೆಯೇ ಧೋನಿ, ತಮ್ಮ ತವರಿನ ಫ್ಯಾನ್ಸ್‌ಗೆ ಧನ್ಯವಾದ ಸಲ್ಲಿಸಿದ್ರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಧೋನಿ ರನ್ ಹೊಳೆ

ಹೌದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಧೋನಿ ರನ್ ಹೊಳೆಯನ್ನೇ ಹರಿಸಿದ್ದಾರೆ. 11 IPL ಇನ್ನಿಂಗ್ಸ್ಗಳಿಂದ 464 ರನ್ ಹೊಡೆದಿದ್ದು, 180ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, ಐದು ಹಾಫ್ ಸೆಂಚುರಿ ಬಾರಿಸಿದ್ದಾರೆ. ಇನ್ನು ಈ ಸಲದ IPLನಲ್ಲಿ 226ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 136 ರನ್ ಹೊಡೆದಿದ್ದಾರೆ. ಮಹಿ ನಾಳೆಯೂ RCBಗೆ ಮಾರಕರಾದ್ರೆ ಆಶ್ಚರ್ಯವಿಲ್ಲ. 

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!