ಮುಂಬೈ ಹಾಗೂ ಲಖನೌ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಅಂಕಪಟ್ಟಿಯಲ್ಲಿ ಪಾತಾಳದಲ್ಲಿರುವ ಮುಂಬೈ, ಕೊನೆಯ ಪಂದ್ಯ ಗೆದ್ದು ಟೂರ್ನಿಗೆ ಗುಡ್ ಬೈ ಹೇಳಲು ಎದುರು ನೋಡುತ್ತಿದೆ.
ಮುಂಬೈ(ಮೇ.17): 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 67ನೇ ಪಂದ್ಯದಲ್ಲಿಂದು ಆತಿಥೇಯ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಮುಂಬೈ ಹಾಗೂ ಲಖನೌ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಅಂಕಪಟ್ಟಿಯಲ್ಲಿ ಪಾತಾಳದಲ್ಲಿರುವ ಮುಂಬೈ, ಕೊನೆಯ ಪಂದ್ಯ ಗೆದ್ದು ಟೂರ್ನಿಗೆ ಗುಡ್ ಬೈ ಹೇಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ಲಖನೌ ತಂಡದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದ್ದು, ಕ್ವಿಂಟನ್ ಡಿ ಕಾಕ್ ಹೊರಬಿದ್ದಿದ್ದಾರೆ. ಡಿ ಕಾಕ್ ಬದಲಿಗೆ ಮ್ಯಾಟ್ ಹೆನ್ರಿ ತಂಡ ಕೂಡಿಕೊಂಡಿದ್ದಾರೆ. ಇನ್ನು ಕನ್ನಡಿಗ ದೇವದತ್ ಪಡಿಕ್ಕಲ್‌ಗೂ ಲಖನೌ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಲಾಗಿದೆ.
🚨 Toss Update 🚨 elect to bowl against
Follow the Match https://t.co/VuUaiv5dPT | pic.twitter.com/iSYDcNmMtT
ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ರು ಆರ್‌ಸಿಬಿ ಪ್ಲೇ ಆಫ್‌ಗೇರೋದು ಡೌಟ್..! ಇಲ್ಲಿದೆ ಹೊಸ ಅಪ್ಡೇಟ್
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ. ಮುಂಬೈ ತಂಡವು ಸದ್ಯ 13 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 9 ಪಂದ್ಯಗಳನ್ನು ಸೋತು ಕೇವಲ 8 ಅಂಕ ಸಂಪಾದಿಸಿದೆ. ತಂಡ ಈ ಪಂದ್ಯ ದಲ್ಲಿ ಗೆದ್ದರೆ ಕೊನೆ ಸ್ಥಾನದಿಂದ ಮೇಲೇರುವ ಸಾಧ್ಯತೆಗಳಿವೆ.
ಅತ್ತ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ 13ರಲ್ಲಿ 6 ಪಂದ್ಯ ಗೆದ್ದಿದ್ದು, 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ತಂಡ ಪ್ಲೇ-ಆಫ್‌ನಿಂದ ಅಧಿಕೃತವಾಗಿ ಹೊರಬೀಳಲಿದ್ದರೂ, ಕಳಪೆ ನೆಟ್ ರನ್‌ರೇಟ್ (-0.787) ಹೊ೦ದಿರುವ ಕಾರಣ ನಾಕೌಟ್‌ಗೇರುವ ಸಾಧ್ಯತೆಯಿಲ್ಲ.
ಉಭಯ ತಂಡಗಳ ಆಟಗಾರರ ಪಟ್ಟಿ;
ಮುಂಬೈ ಇಂಡಿಯನ್ಸ್:
ಇಶಾನ್ ಕಿಶನ್(ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೇವಿಸ್, ಹಾರ್ದಿಕ್ ಪಾಂಡ್ಯ(ನಾಯಕ), ನೆಹಾಲ್ ವದೇರಾ, ರೊಮ್ಯಾರಿಯೋ ಶೆಫರ್ಡ್, ಅನ್ಸೂಲ್ ಕಂಬೊಜ್, ಪೀಯೂಸ್ ಚಾವ್ಲಾ, ಅರ್ಜುನ್ ತೆಂಡುಲ್ಕರ್, ನುವಾನ್ ತುಷಾರ.
ಲಖನೌ ಸೂಪರ್ ಜೈಂಟ್ಸ್:
ಕೆ ಎಲ್ ರಾಹುಲ್(ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ಆರ್ಶದ್ ಖಾನ್, ರವಿ ಬಿಷ್ಣೋಯಿ, ಮ್ಯಾಟ್ ಹೆನ್ರಿ, ಮೊಯ್ಸಿನ್ ಖಾನ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ