ಪ್ರತಿಷ್ಠಿತ ಫುಟ್ಬಾಲ್ ಪಂದ್ಯದ ನಡುವೆ ಉಭಯ ತಂಡದ ಫುಟ್ಬಾಲ್ ಪಟುಗಳು ಹೊಡೆದಾಟ ನಡೆಸಿ ಇದೀಗ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ, ಮೈದಾನದಲ್ಲಿ ಹೊಡೆದಾಟ ಆರಂಭವಾಗಿದೆ. ಈ ಮಾರಾಮಾರಿ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಇಸ್ತಾಂಬುಲ್(ನ.03): ರೋಚಕ ಫುಟ್ಬಾಲ್ ಪಂದ್ಯಕ್ಕೆ ಹೆಸರುವಾಸಿಯಾಗಿದ್ದ ಪ್ರತಿಷ್ಠಿತ ಇಸ್ತಾಂಬಲು ಡರ್ಬಿ ಫುಟ್ಬಾಲ್ ಟೂರ್ನಿಯಲ್ಲಿ ಇದೀಗ ಮಾರಾಮಾರಿ ನಡೆದಿದೆ. ಗಾಲಾಟಸರೆ ಹಾಗೂ ಫೆನೆರ್‌ಬೇಸ್ ನಡುವಿನ ಫುಟ್ಬಾಲ್ ಪಂದ್ಯದಲ್ಲಿ ಈ ಘಟನೆ ನೆಡೆದಿದೆ.
ಫೆನೆರ್‌ಬೇಸ್ ತಂಡದ ಮಿಡ್‌ಫೀಲ್ಡರ್ ಜೈಲ್ಸನ್ ಅದ್ಬುತ ಗೋಲು ಸಿಡಿಸೋ ಮೂಲಕ ತಂಡಕ್ಕೆ ಸಮಭಲ ತಂದುಕೊಟ್ಟರು. ಆದರೆ ಗೋಲು ಸಿಡಿಸಿದ ಬೆನ್ನಲ್ಲೇ ದಿಢೀರ್ ಆಗಿ ಹೊಡೆದಾಟ ಶುರುವಾಗಿದೆ. ಆಟಗಾರರು ಹಾಗೂ ಸ್ಟಾಪ್ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚಿನ ಸದಸ್ಯರು ಮೈದಾನದಲ್ಲಿ ಹೊಡೆದಾಡಿಕೊಂಡಿದ್ದಾರೆ.
undefined
Pubg bekleme alanı pic.twitter.com/L2BK7UWIAk
— Prim Can Toprak (@umitcantoprakk)
ಇದೇ ವೇಳೆ ಅಭಿಮಾನಿಯೊರ್ವ ಮೈದಾನಕ್ಕೆ ಪ್ರವೇಶಿಸಿದ್ದಾನೆ. ಆದರೆ ತಕ್ಷಣವೇ ಪೊಲೀಸರು ಮೈದಾನಕ್ಕೆ ಆಗಮಿಸಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಬಳಿಕ ಮಾರಾಮಾರಿ ನಡೆಸಿದ ಪ್ರಮುಖ ಮೂವರು ಫುಟ್ಬಾಲ್ ಪಟುಗಳಿಗೆ ರೆಡ್ ಕಾರ್ಡ್ ನೀಡಲಾಗಿದೆ.
🔥 Classic derby. There goes chaos after both Istanbul teams Galatasaray and Fenerbahce share the points. Of course not surprised seeing these fights just in the middle of the pitch. ⚔️ pic.twitter.com/BuiYZXx15y
— This is Kadiköy Podcast (@TISKPodcast)