
ಜೈಪುರ(ಮಾ.26): ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಲೀಗ್ ಪಂದ್ಯ ವಿಶ್ವಮಟ್ಟದಲ್ಲೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಂಜಾಬ್ ನಾಯಕ ಆರ್ ಅಶ್ವಿನ್, ಮಂಕಡಿಂಗ್ ಮೂಲಕ ಜೋಸ್ ಬಟ್ಲರ್ ರನೌಟ್ ಮಾಡಿದರು. ಇದಕ್ಕೆ ಕ್ರಿಕೆಟ್ ದಿಗ್ಗಜರಿಂದ ಹಿಡಿದು ಅಭಿಮಾನಿಗಳ ವರೆಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2019: ರಾಜಸ್ಥಾನಕ್ಕೆ ಸೋಲಿನ ಶಾಕ್ ನೀಡಿದ ಪಂಜಾಬ್
ಅಶ್ವಿನ್ ಚೆಂಡು ಎಸೆಯುವ ಮೊದಲೇ ಬಟ್ಲರ್ ಕ್ರೀಸ್ ಬಿಟ್ಟಿದ್ದರು. ಐಸಿಸಿ ನಿಯಮದ ಪ್ರಕಾರ, ಈ ರೀತಿ ಮಾಡಲು ಅನುಮತಿ ಇದೆ. ಮಂಕಡಿಂಗ್ ಮೂಲಕ ಅಶ್ವಿನ್ ರನೌಟ್ ಮಾಡಿ ಮನವಿ ಮಾಡಿದರು. ಇತ್ತ ಅಂಪೈರ್ ಯಾವುದೇ ಎಚ್ಚರಿಕೆ ನೀಡಿದ ನೇರವಾಗಿ ಔಟ್ ತೀರ್ಪು ನೀಡಿದರು. ರನೌಟ್ ಬಳಿಕ ಅಶ್ವಿನ್ ಹಾಗೂ ಬಟ್ಲರ್ ನಡುವೆ ಮಾತಿನ ಚಕಮಕಿ ನಡೆಯಿತು. ಸಾಮಾಜಿಕ ತಾಣಗಳಲ್ಲೂ ಈ ರನೌಟ್ ಭಾರೀ ಚರ್ಚೆಗೆ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.