ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ
ವಿಶ್ವ ನಂ.1 ಜೋಡಿಗೆ ಸೋಲುಣಿಸಿದ ಭಾರತದ ತಾರಾ ಜೋಡಿ
ಜಕಾರ್ತ(ಜೂ.17): ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಹಾಗೂ ಪುರುಷ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವ ನಂ.9 ಪ್ರಣಯ್, ವಿಶ್ವ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನದಲ್ಲಿರುವ ಜಪಾನ್ನ ಕೊಡಾಯಿ ನರವೊಕಾ ವಿರುದ್ಧ 21-18, 21-16 ಗೇಮ್ಗಳಲ್ಲಿ ಜಯಗಳಿಸಿದರು. ವಿಶ್ವ ನಂ.4 ಭಾರತದ ಜೋಡಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.1, ಇಂಡೋನೇಷ್ಯಾದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ವಿರುದ್ಧ 21-13, 21-13 ನೇರ ಗೇಮ್ಗಳಲ್ಲಿ ಗೆಲುವು ಸಾಧಿಸಿತು.
undefined
ಅಂತಿಮ 4ರ ಘಟ್ಟದಲ್ಲಿ ಈ ಜೋಡಿ ಚೈನೀಸ್ ತೈಪೆಯ ಕಾಂಗ್ ಮಿನ್-ಸಿಯೊ ಸ್ಯುಂಗ್/ಇಂಡೋನೇಷ್ಯಾದ ಲಿಯೊ ರಾಲಿ-ಡೇನಿಲ್ ಮಾರ್ಟಿನ್‌ರನ್ನು ಎದುರಿಸಲಿದೆ. ಇದೇ ವೇಳೆ ಪುರುಷರ ಸಿಂಗಲ್ಸ್ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 22ನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್ ವಿಶ್ವ ನಂ.10, ಚೀನಾದ ಲೀ ಶಿ ಫೆಂಗ್ ವಿರುದ್ಧ 14-21, 21-14, 12-21ರಲ್ಲಿ ಪರಾಭವಗೊಂಡರು.
ಅಥ್ಲೆಟಿಕ್ಸ್: ಮಿಶ್ರ ರಿಲೇ ಕಂಚು ಗೆದ್ದ ಕರ್ನಾಟಕ
ಭುವನೇಶ್ವರ: ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕಕ್ಕೆ 2ನೇ ಪದಕ ಒಲಿದಿದೆ. ಶುಕ್ರವಾರ 4ಗಿ400 ಮೀ. ಮಿಶ್ರ ತಂಡ ವಿಭಾಗದ ಓಟದಲ್ಲಿ ನಿಹಾಲ್ ಜೊಯೆಲ್, ಕಾವೇರಮ್ಮ, ಇಂಚರಾ ಎನ್.ಎಸ್. ಹಾಗೂ ಮಿಜೊ ಕುರಿಯನ್ ಅವರನ್ನೊಳಗೊಂಡ ಕರ್ನಾಟಕ ತಂಡ 3 ನಿಮಿಷ 21.88 ಸೆಕೆಂಡ್ಗಳಲ್ಲಿ ಕ್ರಮಿಸಿ ಕಂಚಿನ ಪದಕ ಪಡೆಯಿತು.
Wrestlers Protest: ಪೋಕ್ಸೋ ರದ್ದು ಶಿಫಾರಸಿಗೆ ರೆಸ್ಲರ್ಸ್ ಸಿಟ್ಟು!
ತಮಿಳುನಾಡು 31:21.40 ನಿಮಿಷಗಳಲ್ಲಿ ಕ್ರಮಿಸಿದ ತಮಿಳುನಾಡು ತಂಡ ಚಿನ್ನ, 3:21.67 ನಿಮಿಷಗಳಲ್ಲಿ ಗುರಿ ತಲುಪಿದ ಮಹಾರಾಷ್ಟ್ರ ತಂಡ ಬೆಳ್ಳಿ ಪಡೆಯಿತು. ಇದೇ ವೇಳೆ ಮಹಿಳೆಯರ 100 ಮೀ. ಓಟದಲ್ಲಿ ಆಂಧ್ರ ಪ್ರದೇಶದ ಜ್ಯೋತಿ ಯರ್ರಾಜಿ 11.46 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.
ಫುಟ್ಬಾಲ್: 0-0 ಡ್ರಾಗೆ ಭಾರತ-ಲೆಬನಾನ್ ತೃಪ್ತಿ
ಭುವನೇಶ್ವರ: ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿದ್ದ ಭಾರತ ಗುರುವಾರ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಲೆಬನಾನ್ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಪಂದ್ಯದಲ್ಲಿ ಭಾರತಕ್ಕೆ ಗೋಲು ಗಳಿಸುವ ಕೆಲ ಅವಕಾಶಗಳು ಸಿಕ್ಕರೂ ಸದುಪಯೋಗಪಡಿಸಲು ಸಾಧ್ಯವಾಗಲಿಲ್ಲ.
ಡ್ರಾದ ಹೊರತಾಗಿಯೂ ಭಾರತ ಗುಂಪಿನಲ್ಲಿ 3 ಪಂದ್ಯಗಳಲ್ಲಿ 7 ಅಂಕದೊಂದಿಗೆ ಅಗ್ರಸ್ಥಾನಿಯಾದರೆ, ಲೆಬನಾನ್ 5 ಅಂಕದೊಂದಿಗೆ 2ನೇ ಸ್ಥಾನ ಪಡೆಯಿತು. ಇನ್ನೆರಡು ತಂಡಗಳಾದ ವಾನುವಾಟು ಹಾಗೂ ಮಂಗೋಲಿಯಾ ಕ್ರಮವಾಗಿ 3 ಮತ್ತು 4ನೇ ಸ್ಥಾನದೊಂದಿಗೆ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತು. ಭಾನುವಾರ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಹಾಗೂ ಲೆಬನಾನ್ ಮುಖಾಮುಖಿಯಾಗಲಿವೆ.
ಕಿರಿಯರ ಏಷ್ಯಾ ಫುಟ್ಬಾಲ್: ಇಂದು ಭಾರತ-ವಿಯೆಟ್ನಾಂ
ಪಥುಂ ಥಾನಿ(ಥಾಯ್ಲೆಂಡ್): ಇಲ್ಲಿ ಗುರುವಾರ ಆರಂಭಗೊಂಡಿರುವ ಎಎಫ್ಸಿ ಅಂಡರ್-17 ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತಂಡ ಶನಿವಾರ ತನ್ನ ಮೊದಲ ಪಂದ್ಯದಲ್ಲಿ ವಿಯೆಟ್ನಾಂ ವಿರುದ್ಧ ಆಡಲಿದೆ. ‘ಡಿ’ ಗುಂಪಿನಲ್ಲಿರುವ ಭಾರತ ತನ್ನ 2ನೇ ಪಂದ್ಯದಲ್ಲಿ ಜೂನ್ 20ರಂದು ಉಜ್ಬೇಕಿಸ್ತಾನ ಹಾಗೂ ಜೂನ್ 23ರಂದು ಕೊನೆ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.
ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 4 ಗುಂಪು ರಚಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. 2018ರಲ್ಲಿ ನಾಕೌಟ್ ಪ್ರವೇಶಿಸಿದ್ದ ಭಾರತ ಈ ಬಾರಿ ಸುಧಾರಿತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ.