ಟೀಂ ಇಂಡಿಯಾ ವೇಗಿಗಳ ಅಬ್ಬರ- ಆಂಗ್ಲರ 3ನೇ ವಿಕೆಟ್ ಪತನ

By Suvarna NewsFirst Published Jul 26, 2018, 8:26 PM IST
Highlights

ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್‌ನಲ್ಲೂ ದಿಟ್ಟ ಪ್ರದರ್ಶನ ನೀಡಿದೆ. ಭಾರತದ ಮೊದಲ ಇನ್ನಿಂಗ್ಸ್ ಹಾಗೂ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಪ್ರದರ್ಶನ ಹೇಗಿದೆ? ಅಭ್ಯಾಸ ಪಂದ್ಯದ ಅಪ್‌ಡೇಟ್ ಇಲ್ಲಿದೆ.

ಚೆಲ್ಮ್ಸ್‌ಫೋರ್ಡ್(ಜು.26): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ದಿಟ್ಟ ಹೋರಾಟ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 395 ರನ್‌ಗೆ ಆಲೌಟ್ ಆದರೆ, ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸಿ ಯಶಸ್ಸು ಸಾಧಿಸಿದೆ.

 

That's Tea here at Essex with on 130/3 after 34 overs. 395 pic.twitter.com/wxcrCNd8Uq

— BCCI (@BCCI)

 

ಮೊದಲ ಇನ್ನಿಂಗ್ಸ್‌ನಲ್ಲಿ ಮುರಳಿ ವಿಜಯ್ 53, ವಿರಾಟ್ ಕೊಹ್ಲಿ 68, ಕೆಎಲ್ ರಾಹುಲ್ 58, ದಿನೇಶ್ ಕಾರ್ತಿಕ್ 82, ಹಾರ್ದಿಕ್ ಪಾಂಡ್ಯ 51 ಹಾಗೂ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ಭಾರತ 395 ರನ್‌ಗೆ ಆಲೌಟ್ ಆಯಿತು.ಇಂಗ್ಲೆಂಡ್ ಪರ ಪೌಲ್ ವಾಲ್ಟರ್ 4 ವಿಕೆಟ್ ಕಬಳಿಸಿ ಮಿಂಚಿದರು. ಮ್ಯಾಟ್ ಕೊಲೆಸ್ 2 ವಿಕೆಟ್ ಪಡೆದರು. 

ಮೊದಲ ಇನ್ನಿಂಗ್ಸ್ ಆರಂಭಿಸಿದ ಎಸೆಕ್ಸ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಶಾಕ್ ನೀಡಿದರು. ಆರಂಭದಲ್ಲೇ ಉಮೇಶ್ ಯಾದವ್ ವಿಕೆಟ್ ಕಬಳಿಸಿ ಮಿಂಚಿದರು. ನಿಕ್ ಬ್ರೌನ್ 11ರನ್‌ಗೆ ಔಟಾದರು. ಉಮೇಶ್ ಯಾದವ್ ಬಳಿಕ ಇಶಾಂತ್ ಶರ್ಮಾ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಕಬಳಿಸಿದರು.

 ವರುಣ್ ಚೋಪ್ರಾ 16 ರನ್ ಸಿಡಿಸಿ ಔಟಾದರೆ, ನಾಯಕ ಟಾಮ್ ವೆಸ್ಟ್ಲೆ 57 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಟಿ ವಿರಾಮದ ವೇಳೆ ಎಸೆಕ್ಸ್ 3 ವಿಕೆಟ್ ನಷ್ಟಕ್ಕೆ 130 ರನ್ ಸಿಡಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಕೈಲ್ ಪೆಪ್ಪರ್ ಹಾಗೂ ರಿಶಿ ಪಟೇಲ್ ತಂಡಕ್ಕೆ ಆಸರೆಯಾಗಿದ್ದಾರೆ. 

click me!