ಭಾರತ-ಇಂಗ್ಲೆಂಡ್ ಟೆಸ್ಟ್: ಆಂಗ್ಲರಿಗೆ ಆರಂಭದಲ್ಲೇ ಆಘಾತ-2ನೇ ವಿಕೆಟ್ ಪತನ

By Web DeskFirst Published Aug 21, 2018, 3:54 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಈ ಮೂಲಕ  ಕಳೆದೆರಡು ಟೆಸ್ಟ್ ಪಂದ್ಯದ ಸೋಲಿಗೆ ತಿರುಗೇಟು ನೀಡಲು ಟೀಂ ಇಂಡಿಯಾ ಸಜ್ಜಾಗಿದೆ.

ನಾಟಿಂಗ್‌ಹ್ಯಾಮ್(ಆ.21): 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 521 ರನ್ ಟಾರ್ಗೆಟ್ ಪಡೆದಿರುವ ಇಂಗ್ಲೆಂಡ್ ಇದೀಗ ನಾಲ್ಕನೇ ದಿನದಾಟದ ಆರಂಭದಲ್ಲೇ ಆಘಾತ ಅನುಭವಿಸಿದೆ. ವಿಕೆಟ್ ನಷ್ಟವಿಲ್ಲದೆ 23 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡದ 2ವಿಕೆಟ್ ಪತನಗೊಂಡಿದೆ.

ಕೆಟನ್ ಜೆನ್ನಿಂಗ್ಸ್ 13 ರನ್ ಸಿಡಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ದಾರೆ.  ಇನ್ನು ಅಲಿಸ್ಟೈರ್ ಕುಕ್ 17 ರನ್ ಸಿಡಿಸಿ ಔಟಾಗಿದ್ದಾರೆ.  ಇದೀಗ ಭಾರತದ ಗೆಲುವಿಗೆ ಇನ್ನು 8  ವಿಕೆಟ್‌ಗಳ ಅವಶ್ಯಕತೆ ಇದೆ. ಸದ್ಯ  ನಾಯಕ ಜೋ ರೂಟ್ ಹಾಗೂ ಒಲ್ಲಿ ಪೋಪ್ ಹೋರಾಟ ನಡೆಸುತ್ತಿದ್ದಾರೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 161 ರನ್‌ಗಳಿಗೆ ಆಲೌಟ್ ಆಗೋ ಮೂಲಕ 168 ರನ್ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 352 ರನ್ ಸಿಡಿಸಿ ಡೆಕ್ಲೇರ್ ಮಾಡಿಕೊಂಡಿತ್ತು.
 

click me!