ಭಾರತ-ಇಂಗ್ಲೆಂಡ್ ಟೆಸ್ಟ್: ಭಾರತಕ್ಕೆ 292ರನ್‌ಗಳ ಭರ್ಜರಿ ಮುನ್ನಡೆ!

By Web DeskFirst Published Aug 19, 2018, 11:41 PM IST
Highlights

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ  ಭರ್ಜರಿ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ, ದ್ವಿತೀಯ ದಿನದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್

ನಾಟಿಂಗ್‌ಹ್ಯಾಮ್(ಆ.19): 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನ 161 ರನ್‌ಗಳಿಗೆ ಆಲೌಟ್ ಮಾಡಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದ್ವಿತೀಯ ದಿನದಾಟದ ಅಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ಈ ಮೂಲಕ ಭಾರತ 292 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

 

Stumps on Day 2 of the 3rd Test. lead by 292 runs. pic.twitter.com/9bZAUnz23E

— BCCI (@BCCI)

 

ಮೊದಲ ಇನ್ನಿಂಗ್ಸ್‌ನಲ್ಲಿ 168 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಉತ್ತಮ ಆರಂಭ ನೀಡಿದರು. ರಾಹುಲ್ 36 ರನ್ ಸಿಡಿಸಿ ಔಟಾದರು. ಈ ಮೂಲಕ ಧವನ್ ಹಾಗೂ ರಾಹುಲ್ 60 ರನ್ ಜೊತೆಯಾಟ ನೀಡಿದರು.

ದಿಟ್ಟ ಹೋರಾಟ ನೀಡಿದ ಶಿಖರ್ ಧವನ್ 44 ರನ್ ಸಿಡಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಅದ್ಬುತ ಜೊತೆಯಾಟ ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟಿತು. ದಿನದಾಟದ ಅಂತ್ಯದಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 124 ರನ್  ಸಿಡಿಸಿತು. ಈ ಮೂಲಕ 292 ರನ್ ಮುನ್ನಡೆ ಪಡೆದಿದೆ. ಕೊಹ್ಲಿ ಅಜೇಯ 8 ಹಾಗೂ ಚೇತೇಶ್ವರ್ ಪೂಜಾರ ಅಡೇಯ 33 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಭಾರತದ 2ನೇ ಇನ್ನಿಂಗ್ಸ್‌ಗೂ ಮೊದಲು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಆರಂಭಿಸಿತ್ತು. ಆರಂಭಿಕರಾದ ಕುಕ್ ಹಾಗೂ ಜೆನ್ನಿಂಗ್ಸ್ 54 ರನ್‌ಗಳ ಜೊತೆಯಾಟ ನೀಡೋ ಮೂಲಕ ಭಾರತಕ್ಕೆ ಅಪಾಯದ ಸೂಚನೆ ನೀಡಿದ್ದರು. ಆದರೆ ಇಶಾಂತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ದಾಳಿಗೆ ಆರಂಭಿಕರ ವಿಕೆಟ್ ಪತನಗೊಂಡಿತು.

ಒಲ್ಲಿ ಪೋಪ್ ಕೇವಲ 10 ರನ್ ಸಿಡಿಸಿ ಔಟಾದರು.   ನಾಯಕ ಜೋ ರೂಟ್ 16 ರನ್ ಸಿಡಿಸಿ, ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 10, ಜಾನಿ ಬೈರ್‌ಸ್ಟೋ 15 ರನ್ ಸಿಡಿಸಿ ಔಟಾದರು. ಲಾರ್ಡ್ಸ್ ಪಂದ್ಯದಲ್ಲಿ ಶತಕ ಸಿಡಿಸಿದ ಕ್ರಿಸ್ ವೋಕ್ಸ್ 8 ರನ್ ಸಿಡಿಸಿ ಔಟಾದರು. 

ಜೋಸ್ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬಟ್ಲರ್ 39 ರನ್ ಸಿಡಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್ 161 ರನ್‌ಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ 168 ರನ್ ಮುನ್ನಡೆ ಪಡೆಯಿತು. ಹಾರ್ದಿಕ್ ಪಾಂಡ್ಯ 5 ವಿಕೆಟ್ ಪಡೆದು ಮಿಂಚಿದರು.

click me!