IndVsAus : ಆಸ್ಟ್ರೇಲಿಯಾ ಭಾರಿಸಿದ್ದು 132, ಭಾರತಕ್ಕೆ 137 ರನ್ ಟಾರ್ಗೆಟ್!

By Web DeskFirst Published Nov 23, 2018, 3:54 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಟಿ20ಪಂದ್ಯಕ್ಕೂ ಡಕ್‌ವರ್ತ್ ನಿಯಮ ಅನ್ವಯಿಸಲಾಗಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಮೆಲ್ಬರ್ನ್(ನ.23):  ಆಸ್ಟ್ರೇಲಿಯಾ ವಿರುದ್ಧದ  ಮೊದಲ ಟಿ20 ಪಂದ್ಯದಲ್ಲಿ ಭಾರತ ಮಳೆಯಿಂದಾಗಿ ಸೋಲು ಸೋಲು ಅನುಭವಿಸಿತ್ತು. ಇದೀಗ 2ನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಆಸ್ಟ್ರೇಲಿಯಾಲ 19 ಓವರ್‌ಗಳಲ್ಲಿ7 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿತ್ತು. ಆದರೆ ನಿರಂತರ ಸುರಿದ ಮಳೆಯಿಂದಾಗಿ ಡಕ್‌ವರ್ತ್ ನಿಯಮ ಅನ್ವಯಿಸಲಾಗಿದೆ. ಹೀಗಾಗಿ ಭಾರತಕ್ಕೆ  19 ಓವರ್‌ಗೆ  137 ರನ್ ಟಾರ್ಗೆಟ್ ನೀಡಲಾಗಿದೆ. 

ಇದನ್ನೂ ಓದಿ: ಡಕ್‌ವರ್ತ್ ಲೂಯಿಸ್ ನಿಯಮದಿಂದ ಮೊದಲ ಪಂದ್ಯ ಸೋತ ಭಾರತ

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸಿಸ್ ತಂಡಕ್ಕೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ಔಟಾದರು. ಕ್ರಿಸ್ ಲಿನ್ 13 ರನ್‌ಗಳಿಸಿ ನಿರ್ಗಮಿಸಿದರೆ, ಡಾರ್ಕಿ ಶಾರ್ಟ್ 14 ರನ್ ಕಾಣಿಕೆ ನೀಡಿದರು.

 

It's become clear here at the G. We will have a 19-over game.
Play resumes at 21:03 PM local time.
Target 137 - DLS pic.twitter.com/AcOCBO9W2t

— BCCI (@BCCI)

 

ಮಾರ್ಕಸ್ ಸ್ಟೊಯಿನಿಸ್ 4 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಆದರೆ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿತೀಯ ಪಂದ್ಯದಲ್ಲಿ 19 ರನ್ ಸಿಡಿಸಿ ಔಟಾದರು. ಬೆನ್ ಮೆಕ್‌ಡರ್ಮೊಟ್ ಅಜೇಯ 32 ರನ್ ಸಿಡಿಸಿದರೆ, ಆ್ಯಂಡ್ರೂ ಟೈ ಅಜೇಯ 12 ರನ್ ಬಾರಿಸಿದರು. 19 ಓವರ್‌ಗಳಲ್ಲಿ ಆಸ್ಟ್ರೇಲಿಯಾ 132 ರನ್ ಸಿಡಿಸಿತು. ಆದರೆ ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯವನ್ನ ಸ್ಥಗಿತಗೊಳಿಸಲಾಯಿತು.

ನಿರಂತರ ಸುರಿದ ಮಳೆಯಿಂದಾಗಿ ಪಂದ್ಯವನ್ನ 19ಓವರ್‌ಗೆ ಸೀಮಿತಗೊಳಿಸಲಾಗಿದೆ. ಡಕ್‌ವರ್ತ್ ನಿಯಮದನ್ವಯ ಭಾರತ ಗೆಲುವಿಗೆ 19 ಓವರ್‌ಗಳಲ್ಲಿ 137 ರನ್ ಭಾರಿಸಬೇಕಿದೆ. ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 158 ರನ್ ಸಿಡಿಸಿತ್ತು. ಆದರೆ ಮಳೆಯಿಂದಾಗಿ ಡಕ್‌ವರ್ತ್ ನಿಯಮದನ್ವಯ ಬಾರತಕ್ಕೆ 174 ರನ್ ಟಾರ್ಗೆಟ್ ನೀಡಲಾಗಿತ್ತು. ಟೀಂ ಇಂಡಿಯಾ 169 ರನ್ ಸಿಡಿಸಿ 4 ರನ್ ಸೋಲು ಅನುಭವಿಸಿತ್ತು.

 

click me!