ಲಾರ್ಡ್ಸ್ ಟೆಸ್ಟ್: 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತದ 2ನೇ ವಿಕೆಟ್ ಪತನ

By Web DeskFirst Published Aug 12, 2018, 4:54 PM IST
Highlights

ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಆಂಗ್ಲರು, ಇದೀಗ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಹೀಗಾಗಿ ದಿಢೀರ್ ಡಿಕ್ಲೇರ್ ಘೋಷಿಸಿ, ಟೀಂ ಇಂಡಿಯಾವನ್ನ ಆಲೌಟ್ ಮಾಡಲು ಹೋರಾಟ ಆರಂಭಿಸಿದ್ದಾರೆ.

ಲಾರ್ಡ್ಸ್(ಆ.12): ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಟೀಂ ಇಂಡಿಯಾ ಮತ್ತೆ ಪೆವಿಲಿಯನ್ ಪರೇಡ್ ಆರಂಭಿಸಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 7 ವಿಕೆಟ್ ನಷ್ಟಕ್ಕೆ 396ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 289 ರನ್ ಮುನ್ನಡೆ ಸಾಧಿಸಿತ್ತು. ಭಾರಿ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮೊದಲ ಇನ್ನಿಂಗ್ಸ್ ರೀತಿಯಲ್ಲೇ ಇದೀಗ 2ನೇ ಇನ್ನಿಂಗ್ಸ್‌ನಲ್ಲೂ ವಿಕೆಟ್ ಪತನ ಆರಂಭಗೊಂಡಿದೆ.  

ರನ್ ಖಾತೆ ಆರಂಭಿಸೋ ಮೂದಲೇ ಮುರಳಿ ವಿಜಯ್ ಪೆವಿಲಿಯನ್ ಸೇರಿಕೊಂಡಿದ್ದರು. ಇದೀಗ ಕನ್ನಡಿಗ ಕೆಎಲ್ ರಾಹುಲ್ 10 ರನ್ ಸಿಡಿಸಿ ಔಟಾಗಿದ್ದಾರೆ. ಈ ಮೂಲಕ ಭಾರತ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲೂ ಸೋಲಿನತ್ತ ಮುಖಮಾಡಿದೆ.


 

💯 Test wickets for at - what an achievement! pic.twitter.com/X5gkNt3mBc

— ICC (@ICC)
click me!