ಏಷ್ಯಾಕಪ್ ಬೆನ್ನಲ್ಲೇ ವಿದಾಯ ಹೇಳಿದ 21ರ ಹರೆಯದ ಯುವ ಕ್ರಿಕೆಟಿಗ!

By Web DeskFirst Published Oct 2, 2018, 5:02 PM IST
Highlights

ಏಷ್ಯಾಕಪ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ 21 ಹರೆಯದ ಯುವ ಕ್ರಿಕೆಟಿಗ ಇದೀಗ ದಿಢೀರ್ ನಿವೃತ್ತಿ ಹೊಂದಿದ್ದಾರೆ. ಅಷ್ಟಕ್ಕೂ ಯುವ ಕ್ರಿಕೆಟಿಗ ವಿದಾಯ ಹೇಳಿದ್ದೇಕೆ? ಇಲ್ಲಿದೆ.

ಹಾಂಕಾಂಗ್(ಅ.02): ಪ್ರತಿಷ್ಠಿತ  ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಟೀಂ ಇಂಡಿಯಾ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ರೆಡಿಯಾಗುತ್ತಿದೆ. ಆದರೆ ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿತ್ತು. ಭಾರತ ಸೇರಿದಂತೆ ಬಲಿಷ್ಠ ತಂಡಗಳ ವಿರುದ್ಧ ಅದ್ಬುತ ಪ್ರದರ್ಶನ ನೀಡಿದ ಹಾಂಕ್ ಕಾಂಗ್ ತಂಡದ ಯುವ ಕ್ರಿಕೆಟಿಗ ಇದೀಗ ವಿದಾಯ ಹೇಳಿದ್ದಾರೆ.

ಹಾಂಕಾಂಗ್ ತಂಡದ ಯುವ ಕ್ರಿಕೆಟಿಗ ಕ್ರಿಸ್ಟೋಪರ್ ಕಾರ್ಟರ್ ವಯಸ್ಸು ಕೇವಲ 21. ಈ ವಯಸ್ಸಲ್ಲಿ ಬಹುತೇಕ ಯುವಕರ ಕ್ರಿಕೆಟ್ ಪಯಣ ಆರಂಭಗೊಳ್ಳುತ್ತೆ. ಆದರೆ ಕ್ರಿಸ್ಟೋಪರ್ ಕಾರ್ಟರ್ ಕತೆ ಭಿನ್ನ. ಈತ ತನ್ನ 21ನೇ ವಯಸ್ಸಿಗೆ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

2015ರಲ್ಲಿ ಹಾಂಕಾಂಗ್ ತಂಡಕ್ಕೆ ಪಾದಾರ್ಪಣೆ ಮಾಡಿದ ಕ್ರಿಸ್ಟೋಪರ್ ಕಾರ್ಟರ್ 11 ಏಕದಿನ ಹಾಗೂ 10 ಟಿ20 ಪಂದ್ಯ  ಆಡಿದ್ದಾರೆ. ಇದೀಗ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿದ್ದಾರೆ. ಈ ಮೂಲಕ ಅತೀ ಕಡಿಮೆ ಅವಧಿ ಹಾಗೂ ಅತೀ ಕಡಿಮೆ ವಯಸ್ಸಿನಲ್ಲಿ ವಿದಾಯ ಹೇಳಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಪೈಲೆಟ್ ಆಗಬೇಕೆಂಬುದು ಕ್ರಿಸ್ಟೋಪರ್ ಕಾರ್ಟರ್ ಗುರಿ. ಹೀಗಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್‌ನಿಂದ ನನ್ನ ವಿಮಾನ ತರಬೇತಿ ಅರ್ಧಕ್ಕೆ ನಿಂತಿದೆ. ಇದು ಸೂಕ್ತ ಸಮಯ. ಹೀಗಾಗಿ ನಾನು ವಿದಾಯ ಹೇಳುತ್ತಿದ್ದೇನೆ ಎಂದು ಕಾರ್ಟರ್ ಹೇಳಿದ್ದಾರೆ.

click me!