ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಸಾತ್ವಿಕ್‌-ಚಿರಾಗ್‌ ಎಂಟ್ರಿ

By Kannadaprabha NewsFirst Published Mar 9, 2024, 9:33 AM IST
Highlights

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಜೋಡಿಗೆ ಮಲೇಷ್ಯಾದ ಸುಪಾಕ್‌ ಜೊಮ್ಕೊ-ಕಿಟ್ಟಿನುಪೊಂಗ್‌ ಕೆಡ್ರೆನ್‌ ವಿರುದ್ಧ 21-19, 21-13 ಗೇಮ್‌ಗಳ ಅಂತರದಲ್ಲಿ ಸುಲಭ ಗೆಲುವು ಲಭಿಸಿತು. 2022ರ ಚಾಂಪಿಯನ್‌ ಸಾತ್ವಿಕ್‌-ಚಿರಾಗ್‌ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ದಕ್ಷಿಣ ಕೊರಿಯಾದ ಕಾಂಗ್‌ ಮಿನ್‌ ಹ್ಯುಕ್‌-ಸೋ ಸ್ಯುಂಗ್‌ ವಿರುದ್ಧ ಸೆಣಸಾಡಲಿದೆ.

ಪ್ಯಾರಿಸ್‌: ವಿಶ್ವ ನಂ.1 ಪುರುಷ ಡಬಲ್ಸ್‌ ಜೋಡಿ, ಭಾರತದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಆದರೆ ಪದಕ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧು ಕ್ವಾರ್ಟರ್‌ ಫೈನಲ್‌ನಲ್ಲೇ ಸೋತು ಹೊರಬಿದ್ದರು.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಜೋಡಿಗೆ ಮಲೇಷ್ಯಾದ ಸುಪಾಕ್‌ ಜೊಮ್ಕೊ-ಕಿಟ್ಟಿನುಪೊಂಗ್‌ ಕೆಡ್ರೆನ್‌ ವಿರುದ್ಧ 21-19, 21-13 ಗೇಮ್‌ಗಳ ಅಂತರದಲ್ಲಿ ಸುಲಭ ಗೆಲುವು ಲಭಿಸಿತು. 2022ರ ಚಾಂಪಿಯನ್‌ ಸಾತ್ವಿಕ್‌-ಚಿರಾಗ್‌ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ದಕ್ಷಿಣ ಕೊರಿಯಾದ ಕಾಂಗ್‌ ಮಿನ್‌ ಹ್ಯುಕ್‌-ಸೋ ಸ್ಯುಂಗ್‌ ವಿರುದ್ಧ ಸೆಣಸಾಡಲಿದೆ. ಈ ಜೋಡಿ ಜನವರಿಯಲ್ಲಿ ಸಾತ್ವಿಕ್‌-ಚಿರಾಗ್‌ರನ್ನು ಇಂಡಿಯಾ ಓಪನ್‌ ಫೈನಲ್‌ನಲ್ಲಿ ಸೋಲಿಸಿತ್ತು.

ರೋಹಿತ್‌ ಶರ್ಮಾ ಸೆಂಚುರಿ ದಾಖಲೆ; ಹಿಟ್‌ಮ್ಯಾನ್ ಮುಟ್ಟಿದ್ದೆಲ್ಲಾ ಚಿನ್ನ..!

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಅವರು ಒಲಿಂಪಿಕ್‌ ಚಾಂಪಿಯನ್‌, ಚೀನಾದ ಚೆನ್‌ ಯು ಫೀ ವಿರುದ್ಧ 24-22, 17-21, 18-21ರಲ್ಲಿ ವೀರೋಚಿತ ಸೋಲು ಕಂಡರು.

ನಿಶಾಂತ್‌ ಪ್ರಿ ಕ್ವಾರ್ಟರ್‌ಗೆ ಲಗ್ಗೆ

ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಭಾರತದ ತಾರಾ ಬಾಕ್ಸರ್‌ ನಿಶಾಂತ್‌ ದೇವ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ರಾತ್ರಿ ನಡೆದ ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್‌, ಜಾರ್ಜಿಯಾದ ಮ್ಯಾಡೀವ್ ಎಸ್ಕೆರ್‌ಖಾನ್‌ ವಿರುದ್ಧ 5-0 ವಿರುದ್ಧ ಗೆಲುವು ಸಾಧಿಸಿದರು. ನಿಶಾಂತ್‌ರ ಆಕ್ರಮಣಕಾರಿ ಆಟದ ಮುಂದೆ ನಿರುತ್ತರವಾದ ಮ್ಯಾಡೀವ್‌ ಯಾವುದೇ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡರು. ಈ ಗೆಲುವಿನೊಂದಿಗೆ ನಿಶಾಂತ್‌ ಒಲಿಂಪಿಕ್ಸ್‌ಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಒಲಿಂಪಿಕ್ಸ್‌ ಟಿಕೆಟ್‌ ಸಿಗಲಿದೆ.

ಖೇಲೋ ಗೇಮ್ಸ್ ವಿಜೇತರಿಗೆ ಸರ್ಕಾರಿ ಹುದ್ದೆ: ಅಥ್ಲೀಟ್‌ ತೇಜಸ್ವಿನ್ ಶಂಕರ್ ಆಕ್ಷೇಪ

ಇದೇ ವೇಳೆ ಪುರುಷರ 92 ಕೆ.ಜಿ. ವಿಭಾಗದಲ್ಲಿ ಸಂಜೀತ್‌ ಮೊದಲ ಸುತ್ತಿನಲ್ಲೇ ಕಜಕಸ್ತಾನದ ಐಬೆಕ್‌ ವಿರುದ್ಧ 0-5 ಅಂತರದಲ್ಲಿ ಸೋತು ಹೊರಬಿದ್ದರು. ಭಾರತದಿಂದ ಈಗಾಗಲೇ ನಿಖಾತ್‌ ಜರೀನ್‌(50 ಕೆ.ಜಿ.), ಪ್ರೀತಿ(54 ಕೆ.ಜಿ.), ಪರ್ವೀನ್‌ ಹೂಡಾ(57 ಕೆ.ಜಿ.) ಹಾಗೂ ಲವ್ಲೀನಾ ಬೊರ್ಗೊಹೈನ್‌(75 ಕೆ.ಜಿ.) ಏಷ್ಯನ್‌ ಗೇಮ್ಸ್‌ ಗೆಲುವಿನ ಮೂಲಕ ಒಲಿಂಪಿಕ್ಸ್‌ ಪ್ರವೇಶಿಸಿದ್ದಾರೆ.

ಇಂಡಿಯಾನ ವೆಲ್ಸ್ ಟೆನಿಸ್‌: ಸುಮಿತ್‌ ನಗಾಲ್‌ಗೆ ಸೋಲು

ಕ್ಯಾಲಿಫೋರ್ನಿಯಾ: ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದ್ದರು. ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲೇ ನಗಾಲ್‌ ಸೋಲನುಭವಿಸಿದ್ದರೂ, ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ ಅಲಭ್ಯತೆ ಕಾರಣದಿಂದಾಗಿ ನಗಾಲ್‌ಗೆ ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.101 ನಗಾಲ್‌ ಅವರು ಕೆನಡಾದ ಮಿಲೊನ್‌ ರಾವೊನಿಕ್‌ ವಿರುದ್ಧ 3-6, 3-6 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು.
 

click me!