ಎಬಿ ಡಿವಿಲಿಯರ್ಸ್‌ಗೆ ಸವಾಲು-ಇಲ್ಲಿದ್ದಾನೆ 360 ಡಿಗ್ರಿ ಬೌಲರ್!

By Web DeskFirst Published Nov 8, 2018, 1:59 PM IST
Highlights

ಎಬಿ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟಿಂಗ್ ನೋಡಿ ಆನಂದಿಸಿದ್ದೇವೆ. ಇವತ್ತು ನಾವು 360 ಡಿಗ್ರಿ ಬೌಲರ್ ಪರಿಚಯ ಮಾಡಿಸ್ತೀವಿ. ಈತನ ಬೌಲಿಂಗ್ ನೋಡಿದ್ರೆ ಸ್ವತಃ ಎಬಿ ಡಿವಿಲಿಯರ್ಸ್ ಕೂಡ ಬೆಚ್ಚಿ ಬೀಳೋದು ಖಚಿತ. ನೀವು ಒಂದ್ಸಲ ನೋಡ್ಬಿಡಿ.

ಬೊಟ್ಸಾವಾನ(ನ.08): ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಎಂದರೆ ಎಲ್ಲರಿಗೂ ಇಷ್ಟ. 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡೋ ಎಬಿಡಿ ಮೈದಾನದ ಮೂಲೇ ಮೂಲೆಗೂ ಸಿಕ್ಸರ್ ಸಿಡಿಸಬಲ್ಲರು.  ಹೀಗಾಗಿ ಎಬಿಡಿಗೆ ಬೌಲಿಂಗ್ ಮಾಡೋದು ದೊಡ್ಡ ತಲೆನೋವು.

ಇದೀಗ ಎಬಿ ಡಿವಿಲಿಯರ್ಸ್‌ಗೆ ಬೌಲರ್‌ ಒಬ್ಬ ಸವಾಲು ಹಾಕಿದ್ದಾನೆ. ಎಬಿಡಿ 360 ಡಿಗ್ರಿ ಬ್ಯಾಟ್ಸ್‌ಮನ್ ಆಗಿದ್ದರೆ ಈತ 360 ಡಿಗ್ರಿ ಬೌಲರ್. ಅಷ್ಟಕ್ಕೂ 360 ಡಿಗ್ರಿ  ಬೌಲಿಂಗ್ ಮಾಡೋ ಈತ ಉತ್ತರ ಪ್ರದೇಶ ಕ್ರಿಕೆಟಿಗ ಶಿವ ಸಿಂಗ್.

ಕ್ರಿಕೆಟ್ ಜಗತ್ತು ಸೌತ್ಆಫ್ರಿಕಾದ ಪೌಲ್ ಆಡಮ್ಸ್  ವಿಶಿಷ್ಠ ಶೈಲಿ ಬೌಲಿಂಗ್, ಶ್ರೀಲಂಕಾದ ಲಸಿತ ಮಲಿಂಗಾ ಬೌಲಿಂಗ್, ಜಸ್‌ಪ್ರೀತ್ ಬುಮ್ರಾ ಶೈಲಿ ಸೇರಿದಂತೆ ಹಲವು ವಿಶಿಷ್ಠ ರೀತಿಯ  ಬೌಲಿಂಗ್ ಶೈಲಿಗಳನ್ನ ನೋಡಿದೆ. ಆದರೆ ಈತನ ಶೈಲಿ ಮಾತ್ರ ಎಲ್ಲಕ್ಕಿಂತ ಭಿನ್ನ. ಈತನ ಸೂಪರ್ ಬೌಲಿಂಗ್ ಶೈಲಿಯನ್ನ ನೀವು ಒಮ್ಮೆ ನೋಡಿಬಿಡಿ.

 

 
 
 
 
 
 
 
 
 
 
 
 
 

It's Interesting 😅. Why don't you try this @kuldeep_18 @yuzi_chahal23 👌

A post shared by Ashish Nehra (@ashishnehra64) on Nov 7, 2018 at 8:42pm PST

 

ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಶಿವ ಸಿಂಗ್ ಬೌಲಿಂಗ್ ಇದೀಗ ಎಲ್ಲರ ಗಮನಸೆಳೆದಿದೆ. ಈ ಸ್ಪಿನ್ ಬೌಲರ್ ಎರಡು ಹೆಜ್ಜೆ ರನ್ ಅಪ್ ತೆಗೆದುಕೊಂಡು ಒಂದು ಸುತ್ತು ಹಾಕಿ ತಕ್ಷಣ ಬಾಲ್ ರಿಲೀಸ್ ಮಾಡಿದ್ದಾನೆ. ಈತನ  ಶೈಲಿ ನೋಡಿ ಅಂಪೈರ್ ಕಕ್ಕಾಬಿಕ್ಕಿಯಾಗಿದ್ದಾರೆ. ಇಷ್ಟೇ ಅಲ್ಲ ಡೆಡ್ ಬಾಲ್ ಎಂದು ಘೋಷಿಸಿದ್ದಾರೆ.

click me!