ಕೆಪಿಎಲ್ 2018: ಎರಡನೇ ಬಾರಿಗೆ ಬಿಜಾಪುರ ಬುಲ್ಸ್ ಚಾಂಪಿಯನ್

By Web DeskFirst Published Sep 6, 2018, 9:54 PM IST
Highlights

ಕೆಪಿಎಲ್ ಟೂರ್ನಿಯಲ್ಲಿ ಬಿಜಾಪುರ ಬುಲ್ಸ್ ಹೊಸ ದಾಖಲೆ ಬರೆದಿದೆ. 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸೋ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 7ನೇ ಆವೃತ್ತಿ ಫೈನಲ್ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಮೈಸೂರು(ಸೆ.06): 7ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನ 7 ವಿಕೆಟ್‌ಗಳಿಂದ ಮಣಿಸಿದ ಬಿಜಾಪುರ ಬುಲ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ 2ನೇ ಬಾರಿ ಕೆಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

 

KPL 2018 WINNERS: BIJAPUR BULLS!!!!

— Namma KPL (@KPLKSCA)

 

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಬಿನ್ ಉತ್ತಪ್ಪ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಬಿಜಾಪುರ ತಂಡದ ದಾಳಿಗೆ ತತ್ತರಿಸಿದ ಬ್ಲಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 101 ರನ್‌ಗಳಿಗೆ ಆಲೌಟ್ ಆಯಿತು.

102 ರನ್‌ಗಳ ಸುಲಭ ಗುರಿ ಬೆನಟ್ಟಿದ ಬಿಜಾಪುರ ಬುಲ್ಸ್ 13.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನವೀನ್ ಎನ್‌. ಜಿ 43, ನಾಯಕ ಭರತ್ ಚಿಪ್ಲಿ 19 ರನ್ ಸಿಡಿಸಿದರು. ಇನ್ನು ಕೊನೈನ ಅಬ್ಬಾಸ್ ಅಜೇಯ 15 ಹಾಗೂ ಕೆ.ನ್ ಭರತ್ ಅಜೇಯ 21 ರನ್ ಸಿಡಿಸೋ ಮೂಲಕ ಬಿಜಾಪುರ ಸುಲಭ ಗೆಲವು ಸಾಧಿಸಿತು.

2015ರ ಬಳಿಕ 2018ರಲ್ಲಿ ಬಿಜಾಪುರ ಬುಲ್ಸ್ ಕೆಪಿಎಲ್ ಪ್ರಶಸ್ತಿ ಗೆದ್ದುಕೊಂಡಿತು. ಚಾಂಪಿಯನ್ ಬಿಜಾಪುರ ತಂಡ 20 ಲಕ್ಷ ರೂಪಾಯಿ ಬಹುಮಾನ ಪಡೆದರೆ, ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್ 5 ಲಕ್ಷ ರೂಪಾಯಿ ಪಡೆದುಕೊಂಡಿತು. 

click me!