ಕುಸ್ತಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಜರಂಗ್ ಪೂನಿಯಾ!

By Web DeskFirst Published Nov 10, 2018, 8:55 PM IST
Highlights

ಭಾರತದ ಕುಸ್ತಿ ಪಟು, 24 ವರ್ಷದ ಬಜರಂಗ್ ಪೂನಿಯಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಸಕ್ತ ವರ್ಷ 2 ಚಿನ್ನ ಸೇರಿದಂತೆ ಒಟ್ಟು 5 ಪದಕ ಗೆದ್ದಿದ್ದಾರೆ. ಇಲ್ಲಿದೆ ಬಜರಂಗ್ ಪೂನಿಯಾ ಸಾಧನೆ ವಿವರ.

ನವದೆಹಲಿ(ನ.10): ವಿಶ್ವ ಕುಸ್ತಿಯಲ್ಲಿ ಭಾರತದ ಬಜರಂಗ್ ಪೂನಿಯಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. 65 ಕೆಜಿ ವಿಭಾಗದಲ್ಲಿ ಬಜರಂಗ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ನಂಬರ್ 1 ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,

24 ವರ್ಷದ ಬಜರಂಗ್ ಪೂನಿಯಾ ಪ್ರಸಕ್ತ ವರ್ಷದಲ್ಲಿ 5 ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ 96 ಅಂಕ ಸಂಪಾದಿಸಿ ಇದೀಗ ರ‍್ಯಾಂಕಿಂಗ್‌‌ನಲ್ಲೂ ಮೊದಲ ಸ್ಥಾನಕ್ಕೇರಿದ್ದಾರೆ. ಇಷ್ಟೇ ಅಲ್ಲ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಅನ್ನೋ ಸಾಧನೆಗೂ ಬಜರಂಗ್ ಪೂನಿಯಾ ಪಾತ್ರರಾಗಿದ್ದಾರೆ.

2018ರ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಜರಂಗ್ ಚಿನ್ನದ ಪದಕ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

click me!