ಏಷ್ಯನ್ ಗೇಮ್ಸ್: ಮನಸೆಳೆಯಿತು ವರ್ಣರಂಜಿತ ಉದ್ಘಾಟನಾ ಸಮಾರಂಭ !

By Web DeskFirst Published Aug 18, 2018, 9:18 PM IST
Highlights

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ . ವರ್ಣರಂಜಿತ ಸಮಾರಂಭ ಸಮಾರಂಭದ ಕಳೆ ಹೆಚ್ಚಿಸಿದೆ. ಇಲ್ಲಿಗೆ 2018ರ ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದ ಹೈಲೈಟ್ಸ್.
 

ಜಕರ್ತಾ(ಆ.18) 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇಲ್ಲಿನ ಪಾಲೆಂಬಾಗ್‌ನಲ್ಲಿ ನಡೆದ ಅದ್ಧೂರಿ ಉದ್ಘಾಟನೆ ಸಮಾರಂಭದ ಮೂಲಕ ಪ್ರತಿಷ್ಠಿತ ಕ್ರೀಡಾಕೂಟ ಆರಂಭಗೊಂಡಿದೆ.  ಕ್ರೀಡಾಕೂಟದ ಆರಂಭದಲ್ಲಿ ಕ್ರೀಡಾಪಟುಗಳು ಪಥಸಂಚಲನ ಗಮನೆಸೆಳೆಯಿತು. 

ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಚೋಪ್ರ ಧ್ವಜಾಧಾರಿಯಾಗಿ ಪಥಸಂಚಲನದಲ್ಲಿ ಭಾರತ ಕ್ರೀಡಾಪಟುಗಳ ತಂಡವನ್ನ ಮುನ್ನಡೆಸಿದರು.

ವರ್ಣರಂಜಿತ ಸಮಾರಂಭ ಎಲ್ಲರ ಕಣ್ಮನಸೆಳೆಯಿತು. ಕೃತಕ ಬೆಟ್ಟ ಗುಡ್ಡ, ಉಲ್ಕಾ ಪರ್ವತಗಳು , ಇಂಡೋನೇಷಿಯಾ ಸಂಸ್ಕೃತಿ ಸಾರುವ ದೃಶ್ಯ ವೈಭವ ಉದ್ಘಾಟನಾ ಸಮಾರಂಭದ ಕಳೆ ಹೆಚ್ಚಿಸಿತು.  ಸಾಂಸ್ಕೃತಿಕ ನೃತ್ಯ ಹಾಗೂ ಜಕರ್ತಾದಲ್ಲಿ ಹುಟ್ಟಿ ಫ್ರಾನ್ಸ್‌ನಲ್ಲಿ ನೆಲೆಸಿರುವ ಜನಪ್ರಿಯ ಗಾಯಕಿ ಅಂಗ್ಗುನ್ ಸಂಗೀತ ರಸ ಸಂಜೆ ಎಲ್ಲರಿಗೂ ಮುದ ನೀಡಿತು. 

 

Anggun gracefully takes the stage with her powerful voice! pic.twitter.com/BK1O48PDsU

— Asian Games 2018 (@asiangames2018)

 

ಕ್ರೀಡಾ ಜ್ಯೋತಿ ಬೆಳುಗುವುದರೊಂದಿಗೆ 18ನೇ ಏಷ್ಯನ್ ಗೇಮ್ಸ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿತು. ಸಾಂಸ್ಕೃತಿಕ ಸಂಜೆ ನೆರದಿದ್ದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಗೆ ಹೊಸ ಚೈತನ್ಯ ನೀಡಿತು.

 

Susi Susanti lights the cauldron, and with this the torch completes its journey! The torch that has been brought from India and across Indonesia, has finally been placed in the cauldron! What a spectacular welcome! pic.twitter.com/aPcXNEd7fj

— Asian Games 2018 (@asiangames2018)

 

ಈ ಭಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ 572 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 36 ವಿವಿಧ ಕ್ರೀಡೆಗಳು ಭಾರತೀಯರ ಪದಕ್ಕಾಗಿ ಹೋರಾಟ ನಡೆಸಲಿದ್ದಾರೆ. 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಹಲವು ಕ್ರೀಡಾಪಟುಗಳ ಮೇಲೆ ಪದಕದ ಭರವಸೆ ಇಡಲಾಗಿದೆ.  45 ದೇಶಗಳ ಪಾಲ್ಗೊಂಡಿರುವ ಪ್ರತಿಷ್ಠಿತ ಕ್ರೀಡಾಕೂಟ ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ವರೆಗೆ ನಡೆಯಲಿದೆ. 

 

The aerial view is a magnificent sea of red! pic.twitter.com/mM86bx2omb

— Asian Games 2018 (@asiangames2018)

 

click me!