ವಿಕಲ ಚೇತನ ವ್ಯಕ್ತಿಗಳಿಂದ ಅಂಗವಿಕಲರ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ

By Kannadaprabha News  |  First Published Jun 25, 2023, 9:43 AM IST

2023ನೇ ಸಾಲಿನಲ್ಲಿ ವಿಶೇಷ ಚೇತನರ ಸಬಲೀಕರಣ ಇಲಾಖೆಯಿಂದ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಶೇಷ ಚೇತನರ ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.


ಬೆಂಗಳೂರು(ಜೂ.25): ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ವತಿಯಿಂದ 2023ನೇ ಸಾಲಿನಲ್ಲಿ ವಿಶೇಷ ಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿಶೇಷ ಚೇತನರ ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ರಾಷ್ಟ್ರ ಪ್ರಶಸ್ತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.awards.gov.in ಅಥವಾ ಆಯಾ ಜಿಲ್ಲೆಗಳ ಜಿಲ್ಲಾ ವಿಶೇಷ ಚೇತನರ ಕಲ್ಯಾಣಾಧಿಕಾರಿಗಳನ್ನು ಮತ್ತು ನಿರ್ದೇಶಕರು ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ : 080-22866066, 080-22866046 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Latest Videos

undefined

ದಂಡ ಪ್ರಶ್ನಿಸಿ ಮಧ್ಯಸ್ಥಿಕೆ ಕೋರ್ಟ್‌ಗೆ ಬ್ಲಾಸ್ಟರ್ಸ್‌!

ನವದೆಹಲಿ: ಬೆಂಗಳೂರು ಎಫ್‌ಸಿ ವಿರುದ್ಧದ ಐಎಸ್‌ಎಲ್‌ ಪ್ಲೇ-ಆಫ್‌ ಪಂದ್ಯದಲ್ಲಿ ಮೈದಾನ ತೊರೆದಿದ್ದಕ್ಕೆ ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ವಿಧಿಸಿರುವ 4 ಕೋಟಿ ರು. ದಂಡ ಪ್ರಶ್ನಿಸಿ ಕೇರಳ ಬ್ಲಾಸ್ಟರ್ಸ್‌ ತಂಡ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದೆ. ಸ್ವಿಜರ್‌ಲೆಂಡ್‌ನ ಲುಸಾನ್‌ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ಬ್ಲಾಸ್ಟರ್ಸ್ ಎಐಎಫ್‌ಎಫ್‌ಗೆ ಮಾಹಿತಿ ನೀಡಿದೆ.

SAFF Cup 2023: ನೇಪಾಳವನ್ನು ಮಣಿಸಿ ಸೆಮೀಸ್‌ಗೇರಿದ ಭಾರತ

ಮಾರ್ಚ್‌ನಲ್ಲಿ ಬಿಎಫ್‌ಸಿ ವಿರುದ್ಧದ ವಿವಾದಿತ ಪಂದ್ಯದ ಬಳಿಕ ಬ್ಲಾಸ್ಟರ್ಸ್‌ಗೆ 4 ಕೋಟಿ ರು. ದಂಡ ವಿಧಿಸಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಬ್ಲಾಸ್ಟರ್ಸ್‌ ಎಐಎಫ್ಎಫ್‌ ಶಿಸ್ತು ಸಮಿತಿಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಬ್ಲಾಸ್ಟರ್ಸ್‌ ಮನವಿಯನ್ನು ತಿರಸ್ಕರಿಸಿದ ಶಿಸ್ತು ಸಮಿತಿ 2 ವಾರಗಳಲ್ಲಿ ದಂಡ ಪಾವತಿಸುವಂತೆ ಸೂಚಿಸಿತ್ತು.

ನಾವು ಟ್ರಯಲ್ಸ್‌ ವಿನಾಯಿತಿ ಕೇಳಿಲ್ಲ: ಸಾಕ್ಷಿ, ಭಜರಂಗ್

ನವದೆಹಲಿ: ಏಷ್ಯಾಡ್, ವಿಶ್ವ ಚಾಂಪಿಯನ್‌ಶಿಪ್ ಆಯ್ಕೆ ಟ್ರಯಲ್ಸ್‌ನಿಂದ ನಾವು ವಿನಾಯಿತಿ ಕೇಳಿಲ್ಲ. ಅಭ್ಯಾಸಕ್ಕಾಗಿ ಸಮಯ ಕೇಳಿದ್ದೇವೆ ಅಷ್ಟೇ. ನಾವು ಕೇಳಿದ್ದೇವೆ ಎಂದು ಸಾಬೀತುಪಡಿಸಿದರೆ ಕುಸ್ತಿಗೆ ವಿದಾಯ ಹೇಳುತ್ತೇವೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ. ಶನಿವಾರ ಭಜರಂಗ್‌, ವಿನೇಶ್‌ ಜೊತೆ ಸಾಮಾಜಿಕ ತಾಣದಲ್ಲಿ ಲೈವ್ ವಿಡಿಯೋ ಪ್ರಸಾರ ಮಾಡಿದ ಸಾಕ್ಷಿ, ವಿಶೇಷ ಸವಲತ್ತು ನೀಡಲಾಗುತ್ತಿದೆ ಎಂದು ಟೀಕಿಸಿದ್ದ ಮಾಜಿ ಕುಸ್ತಿಪಟು ಯೋಗೇಶ್ವರ್‌ ದತ್ ವಿರುದ್ಧ ಹರಿಹಾಯ್ದರು.

ಕಿರಿಯರ ಹಾಕಿ ವಿಶ್ವಕಪ್‌: ‘ಸಿ’ ಗುಂಪಿನಲ್ಲಿ ಭಾರತ

ಕೌಲಾಲಂಪುರ: ಡಿ.5ರಿಂದ ಆರಂಭಗೊಳ್ಳಲಿರುವ ಎಫ್‌ಐಎಚ್‌ ಕಿರಿಯರ ಹಾಕಿ ವಿಶ್ವಕಪ್‌ನಲ್ಲಿ ಭಾರತ ‘ಸಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಮೊದಲ ದಿನವೇ ದ.ಕೊರಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 2021ರ ಆವೃತ್ತಿಯಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತದ ಜೊತೆ ಈ ಬಾರಿ ಗುಂಪಿನಲ್ಲಿ ಸ್ಪೇನ್‌ ಹಾಗೂ ಕೆನಡಾ ತಂಡಗಳಿವೆ. ಡಿ.7ರಂದು ಸ್ಪೇನ್‌ ಹಾಗೂ ಡಿ.9ರಂದು ಕೆನಡಾ ವಿರುದ್ಧ ಸೆಣಸಾಡಲಿದೆ.

click me!