ಕಾರಿನ ಏರ್‌ಬ್ಯಾಗ್ ಜೊತೆ ಈ 6 ತಪ್ಪು ಮಾಡಬೇಡಿ!

By Web Desk  |  First Published Nov 7, 2018, 3:18 PM IST

ಕಾರಿನ ಏರ್‌ಬ್ಯಾಗ್ ಜೊತೆ ಸಾಮಾನ್ಯವಾಗಿ ಕೆಲ ತಪ್ಪುಗಳನ್ನ ಮಾಡುತ್ತಾರೆ. ಈ ಸಣ್ಣ ತಪ್ಪುಗಳ ಪರಿಣಾಮ ಮಾತ್ರ ಊಹಿಸಲು ಅಸಾಧ್ಯ. ಹೀಗೆ ಸಾಮಾನ್ಯವಾಗಿ ಮಾಡೋ ಕೆಲ ತಪ್ಪುಗಳನ್ನ ಇಲ್ಲಿ ಪಟ್ಟಿ ಮಾಡಲಾಗಿದೆ. ನೀವು ಈ ತಪ್ಪು ಮಾಡಬೇಡಿ.
 


ಬೆಂಗಳೂರು(ನ.07): ಕಾರು, ಜೀಪು ಅಥವಾ ಯಾವುದೇ ವಾಹನದಲ್ಲಿ ಏರ್‌ಬ್ಯಾಗ್ ಮುಖ್ಯ. ಇದೀಗ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಬೇಸ್ ಮಾಡೆಲ್ ಕಾರುಗಳಲ್ಲಿ ಕನಿಷ್ಠ 2 ಏರ್‌ಬ್ಯಾಗ್ ಸೌಲಭ್ಯವಿದೆ. ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್ ಒಪನ್ ಆಗೋ ಮೂಲಕ ಪ್ರಯಾಣಿಕರನ್ನ ಸಾವಿನಿಂದ ಪಾರುಮಾಡುತ್ತದೆ. ಆದರೆ ಹಲವರು ಮಾಡೋ ಕೆಲ ತಪ್ಪುಗಳಿಂದ ಕಾರಿನ ಏರ್‌ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಸಾಧ್ಯತೆಗಳಿವೆ.

ಹೀಗೆ ಕಾರಿನ ಏರ್‌ಬ್ಯಾಗ್ ವಿರುದ್ಧ ಮಾಡೋ ಕೆಲ ತಪ್ಪುಗಳನ್ನ ಇಲ್ಲಿ ಪಟ್ಟಿ ಮಾಡಲಾಗಿದೆ. ಈ ಅಂಶಗಳ ಕುರಿತು ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಭಾರಿ ದಂಡ ತೆರಬೇಕಾಗುತ್ತೆ. 

Latest Videos

undefined

1 ಬುಲ್‌ಬಾರ್ ಅಳವಡಿಸುವುದು:
ಕಾರು, ಜೀಪ್ ಅಥವಾ SUV ಕಾರುಗಳ ಮುಂಭಾಗದ ಬಂಪರ್ ಮೇಲೆ ಬುಲ್‌ಬಾರ್‌ಗಳನ್ನ ಅಳವಡಿಸುತ್ತಾರೆ. ಇದು ಕಾರಿನಗೆ ವಿಶೇಷ ಲುಕ್ ನೀಡುವದಲ್ಲದೇ, ಕಾರಿನ ಬಂಪರ್ ಹಾಗೂ ಮುಂಭಾಗಕ್ಕೆ ರಕ್ಷಣೆ ಒದಗಿಸುತ್ತದೆ. ಆದರೆ ಈ ಬುಲ್‌ಬಾರ್ ಅಳವಡಿಕೆಯಿಂದ ಏರ್‌ಬ್ಯಾಗ್ ಮೇಲಿ ಪರಿಣಾಮ ಬೀರಲಿದೆ.  ವಾಹನದ ಮುಂಭಾಗದ ಸೆನ್ಸಾರ್ ಮೂಲಕ ಅಪಘಾತವಾದ ತಕ್ಷಣ ಏರ್‌ಬ್ಯಾಗ್ ಒಪನ್ ಆಗಲಿದೆ. ಆದರೆ ಬುಲ್‌ಬಾರ್‌ನಿಂದ ಅಪಘಾತದ ತೀವ್ರತೆ ಅರಿವುಯಲ್ಲಿ ಏರ್‌ಬ್ಯಾಗ್ ಸೆನ್ಸಾರ್ ವಿಫಲವಾಗುತ್ತೆ. ಹೀಗಾಗಿ ಅಪಘಾತವಾದ ಸಂದರ್ಭ ಏರ್‌ಬ್ಯಾಗ್ ಕಾರ್ಯನಿರ್ವಹಿಸದೇ ಇರುವ ಸಾಧ್ಯತೆ ಹೆಚ್ಚು.

2 ಸೀಟ್ ಬೆಲ್ಟ್ ಹಾಕದಿರುವುದು:
ಸೀಟ್ ಬೆಲ್ಟಾ ಹಾಕದೇ ವಾಹನದಲ್ಲಿ ಪ್ರಯಾಣಿಸುವುದು ಅಪಾಯಕಾರಿ. ಕ್ರಾಶ್ ಟೆಸ್ಟ್(ಕಾರಿನ ಸುರಕ್ಷಕಾ ಪರೀಕ್ಷೆ)ನಲ್ಲಿ ಸೀಟ್ ಬೆಲ್ಟ್ ಹಾಕಿಯೇ ಎಲ್ಲಾ ಕಾರುಗಳ ಏರ್‌ಬ್ಯಾಗ್ ಪರಿಶೀಲಿಸಲಾಗುವುದು. ಇನ್ನು ಹಲವು ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ, ಅಪಘಾತವಾದ ಸಂದರ್ಭದಲ್ಲಿ ಏರ್‌ಬ್ಯಾಗ್ ತೆರೆದುಕೊಳ್ಳುವುದಿಲ್ಲ. ಹೀಗಾಗಿ ಪ್ರಯಾಣ ಚಿಕ್ಕದಾಗಿರಲಿ, ಅಥವಾ ಹೇಗೆ ಇರಲಿ ಸೀಟ್ ಬೆಲ್ಟ್ ಧರಿಸುವುದು ಮುಖ್ಯ.

3 ಹೆಚ್ಚುವರಿ ಸೀಟ್ ಕವರ್ ಅಳವಡಿಕೆ:
ಕಾರು ಅಥವಾ ವಾಹನ ಖರೀದಿಸಿ ಅದಕ್ಕೆ ಹೆಚ್ಚುವರಿ ಫೀಚರ್ಸ್‌ಗಳನ್ನ ಸೇರಿಸುತ್ತಾರೆ. ಇದರಲ್ಲಿ ಪ್ರಮುಖವಾಗಿ ತಮಗಿಷ್ಟವಾದ, ಹೆಚ್ಚು ಕುಶನ್‌ಗಳುಳ್ಳ ಸೀಟ್ ಕವರ್‌ಗಳನ್ನ ಅಳವಡಿಸುತ್ತಾರೆ. ಇದರಿಂದ ಸೈಡ್ ಏರ್‌ಬ್ಯಾಗ್ ತೆರೆದುಕೊಳ್ಳುವದಕ್ಕೆ ಅಡಚಣೆಯಾಗುತ್ತೆ. ಹೀಗಾಗಿ ಮಾಡಿಫೈ ಸೀಟ್ ಕವರ್ ನಿಮ್ಮ ಏರ್‌ಬ್ಯಾಗ್ ಮೇಲೆ  ಪರಿಣಾಮ ಬೀರಲಿದೆ.

4 ಡ್ಯಾಶ್‌ಬೋರ್ಡ್‌ನಲ್ಲಿ ಇತರ ವಸ್ತುಗಳ ಅಳವಡಿಕೆ:
ಕಾರಿನ ಡ್ಯಾಶ್ ಬೋರ್ಡ್ ಮೇಲೆ ಗೊಂಬೆ, ದೇವರ ವಿಗ್ರಹ ಸೇರಿದಂತೆ ಹಲವು ವಸ್ತುಗಳನ್ನ ಫಿಕ್ಸ್ ಮಾಡಿರುತ್ತಾರೆ. ಈ ರೀತಿ ಫಿಕ್ಸ್ ಮಾಡುವಾಗ ಏರ್‌ಬ್ಯಾಗ್ ಜಾಗದಲ್ಲಿ ಯಾವುದೇ ವಸ್ತುಗಳನ್ನ ಫಿಕ್ಸ್ ಮಾಡಬೇಡಿ. ಇದರಿಂದ ಅಪಘಾತದ ವೇಳೆ ಏರ್‌ಬ್ಯಾಗ್ ತೆರೆದುಕೊಳ್ಳಲು ಸಮಸ್ಯೆಯಾಗಲಿದೆ.

5 ಸ್ಟೇರಿಂಗ್ ಹತ್ತಿರ ಕುಳಿತು ಡ್ರೈವಿಂಗ್:
ಹಲವರು ಡ್ರೈವರ್ ಸೀಟ್ ಮುಂಭಾಗಕ್ಕೆ ಮಾಡಿ ಸ್ಟೇರಿಂಗ್ ಪಕ್ಕ ಕುಳಿತು ಡ್ರೈವ್ ಮಾಡುತ್ತಾರೆ. ಇದರಿಂದ ಅಪಘಾತವಾದ ಸಂದರ್ಭದಲ್ಲಿ ಏರ್‌ಬ್ಯಾಗ್ ತೆರೆದುಕೊಂಡರು ಮುಖ ಹಾಗೂ ತೆಲಗೆ ಗಾಯವಾಗುವ ಸಾಧ್ಯತೆ ಇದೆ.

6 ಡ್ಯಾಶ್‌ಬೋರ್ಡ್ ಮೇಲೆ ಕಾಲಿಡುವುದು:
ಕೋ ಡ್ರೈವರ್ ಸೀಟಿನಲ್ಲಿ ಕುಳಿತಿರುವ ಹಲವರು ಈ ತಪ್ಪನ್ನ ಮಾಡುತ್ತಾರೆ. ಲಾಂಗ್ ಡ್ರೈವ್ ವೇಳೆ ಡ್ಯಾಶ್ ಬೋರ್ಡ್ ಮೇಲೆ ಕಾಲಿಟ್ಟಿರುತ್ತಾರೆ. ಅಪಘಾತದ ಸಂದರ್ಭದಲ್ಲಿ ಕೋ ಡ್ರೈವರ್ ಮುಂಭಾಗದಲ್ಲಿರುವ ಏರ್‌ಬ್ಯಾಗ್ ತೆರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲ, ಸಣ್ಣ ಅಪಘಾತವಾದರೂ ಕಾಲು ಮುರಿಯುವ ಸಂಭವ ಹೆಚ್ಚು.
 

click me!