ನಿಮಗಿದು ಗೊತ್ತಿತ್ತಾ? ನಾವು ನೀವು ಮಾತ್ರ ಅಲ್ಲ ಕಪ್ಪೆಗಳು ಹಚ್ಕೋತವೆ ಮಾಯಿಸ್ಚರೈಸರ್‌

By Anusha Kb  |  First Published Aug 19, 2023, 3:08 PM IST

ನಾವು ಮನುಷ್ಯರು ಚರ್ಮದ ರಕ್ಷಣೆಗಾಗಿ ಮಾಯಿಸ್ಚರೈಸರ್‌ ಹಾಕ್ತೇವೆ, ಕ್ರೀಮ್ ಬಳಸ್ತೇವೆ. ಆದರೆ ಕಪ್ಪೆಗಳು ಕೂಡ ತಮ್ಮ ಚರ್ಮದ ರಕ್ಷಣೆಗೆ ಕ್ರಮ ಕೈಗೊಳ್ಳುತ್ತವೆ ಎಂಬುದು ನಿಮಗೆ ಗೊತ್ತಾ?


ಬೆಂಗಳೂರು: ಸಾಮಾನ್ಯವಾಗಿ ಬೇಸಿಗೆ ಚಳಿಗಾಲದಲ್ಲಿ ದೇಹ ಒಣಗಿ ಡ್ರೈನೆಸ್‌ ಕಾಡುತ್ತದೆ. ಚರ್ಮದಲ್ಲಿ ಒಡಕು ಮೂಡಿ ತುರಿಕೆ ಶುರುವಾಗುತ್ತದೆ. ಕೆಲವೊಮ್ಮೆ ಚರ್ಮ ಎದ್ದೇಳಲು ಶುರುವಾಗುತ್ತದೆ. ಕಾಲುಗಳು ಒಡಕು ಮೂಡುತ್ತದೆ. ಹೀಗೆಲ್ಲಾ ತೊಂದರೆ ಆದಾಗ ಮನುಷ್ಯರಾದ ನಾವು ಮಾಯಿಸ್ಚರೈಸರ್ ಕೊಬ್ಬರಿ ಎಣ್ಣೆ ಹೀಗೆ ಆ ಕ್ರೀಮ್ ಈ ಕ್ರೀಮ್ ಅಂತ ಮಾರುಕಟ್ಟೆಯಲ್ಲಿರುವ ಬಹುತೇಕ ಸೌಂದರ್ಯ ವರ್ಧಕಗಳು ಹಾಗೂ ತ್ವಚೆ ರಕ್ಷಣೆ ಮಾಡುವ ವಿವಿಧ ಉತ್ಪನ್ನಗಳ ಮೊರೆ ಹೋಗುತ್ತೇವೆ. ಆದರೆ ಈ ರೀತಿ ಮಾಯಿಸ್ಚರೈಸರ್ ಮೂಲಕ ತ್ವಚೆ ರಕ್ಷಣೆ ಮಾಡಿಕೊಳ್ಳುವುದು ಮನುಷ್ಯರು ಮಾತ್ರನಾ ಹೌದು ಎಂದಾದರೆ ನಿಮ್ಮ ಊಹೆ ತಪ್ಪು..  ಏಕೆಂದರೆ ಕಪ್ಪೆಯೂ ಕೂಡ ಮಾಯಿಸ್ಚರೈಸರ್ ಬಳಸುತ್ತವೆ. ನಿಮಗಿದು ಅಚ್ಚರಿ ಎನಿಸಿದರು ಇದು ಸತ್ಯ. ಇದು ನಮ್ಮ ಪ್ರಕೃತಿ ಇಲ್ಲಿನ ಜೀವ ವೈವಿಧ್ಯ, ಈ ಪ್ರಕೃತಿಯ ಕಣ ಕಣದಲ್ಲೂ ಕೌತುಕವೊಂದು ಅಡಗಿದೆ ಎಂಬುದನ್ನು ಸೂಚಿಸುತ್ತದೆ. 

ಬಿಬಿಸಿಯ ಡಾಕ್ಯುಮೆಂಟರಿಯಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಸ್ಥಳೀಯವಾಗಿ ಮರ ಕಪ್ಪೆ ಎಂದು ಕರೆಯಲಾಗುವ ಹಸಿರು ಬಣ್ಣದ, ಕಪ್ಪೆಗಳು ನೈಸರ್ಗಿಕವಾದ ಮಾಯಿಸ್ಚರೈಸರ್‌ನ್ನು ದೇಹವಿಡಿ ಉಜ್ಜಿಕೊಂಡು ತಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳುತ್ತವೆ. ಈ ಕಪ್ಪೆಗಳನ್ನು ಮಂಕಿ ಫ್ರಾಗ್, ಲೀಫ್ ಫ್ರಾಗ್, ವ್ಯಾಕ್ಸ್‌ ಮಂಕಿ ಟ್ರೀ ಫ್ರಾಗ್ ವ್ಯಾಕ್ಸ್ ಮಂಕಿ ಲೀಫ್ ಫ್ರಾಗ್ ಎಂಬೆಲ್ಲಾ ಹೆಸರಿನಿಂದ ಕರೆಯಲಾಗುತ್ತದೆ. 

Latest Videos

undefined

ಸಹಬಾಳ್ವೆ: ಪ್ರವಾಹದ ವೇಳೆ ಇಲಿ, ಕಪ್ಪೆಗಳಿಗೆ ತನ್ನ ದೇಹದ ಮೇಲೆಯೇ ಆಶ್ರಯ ನೀಡಿದ ಹಾವು

ದಕ್ಷಿಣ ಅಮೆರಿಕಾದ ಚಾಕೊ ಪ್ರದೇಶದ ಒಣ ಕುರುಚಲು ಕಾಡುಗಳಲ್ಲಿ ಕಂಡುಬರುವ ಈ ಕಪ್ಪೆಗಳು ತಮ್ಮ ಜೀವಿತಾವಧಿಯ ಬಹುಪಾಲನ್ನು ಮರದ ತುದಿಗಳಲ್ಲಿಯೇ ಕಳೆಯುತ್ತವೆ. ಮರದ ತುತ್ತತುದಿಗಳಲ್ಲಿ ಗಂಟೆಗಳ ಕಾಲ ನಿದ್ದೆಗೆ ಜಾರುವ ಇವುಗಳ ಚರ್ಮ ಬೇಗನೇ ಸುಕ್ಕುಗಟ್ಟುತ್ತವೆ. ಇದೇ ಕಾರಣಕ್ಕೆ ಇವುಗಳು ತಮ್ಮ ದೇಹ ತಂಪಾಗಿಡಲು ಮಾಯಿಸ್ಚರೈಸರನ್ನು ಉತ್ಪಾದಿಸುತ್ತವೆ. ಜೊತೆಗೆ ಇಡೀ ದೇಹಕ್ಕೆ ಅದನ್ನು ಹಚ್ಚುತ್ತವೆಯಂತೆ. ಅರ್ಜೆಂಟೈನಾ ಹಾಗೂ ಬ್ರೆಜಿಲ್‌ನ ಕೆಲ ಪ್ರದೇಶಗಳಲ್ಲಿಯೂ ಇವು ಕಾಣಸಿಗುತ್ತವೆ. ಇವುಗಳು ನೀರಿನ ಮೂಲಗಳ ಬಳಿ ಇರುವ ಮರ ಕುರುಚಲು ಪೊದೆಗಳ ಮೇಲೆಯೇ ತಮ್ಮ ಜೀವಿತಾವಧಿಯನ್ನು ಕಳೆಯುತ್ತವೆ.  ಈ ಕಪ್ಪೆಗಳಿಗೆ ಸಂಬಂಧಿಸಿದಂತೆ ಬಿಬಿಸಿ ಡಾಕ್ಯುಮೆಂಟರಿಯನ್ನು ಕೂಡ ಮಾಡಿದೆ.

ಅಪ್ಪ ಮಾಡಿದ ಕಪ್ಪೆ ಸಾರು ತಿಂದು ಮಗಳು ಸಾವು: ಒಡಿಶಾದಲ್ಲೊಂದು ವಿಚಿತ್ರ ಘಟನೆ

ಇವುಗಳ ಹಿಂಭಾಗದ ಕಾಲುಗಳು ತುಂಬಾ ಫ್ಲೆಕ್ಸಿಬಲ್ ಆಗಿದ್ದು, ಈ ಕಾಲುಗಳಿಂದಲೇ ಅವುಗಳು ದೇಹದ ಮೇಲಿನಿಂದ ಕೆಳಗಿನವರೆಗೆ ಎಲ್ಲಾ ಭಾಗಗಳಿಗೆ ಮಾಯಿಸ್ಚರೈಸರನ್ನು ಹಚ್ಚಿಕೊಳ್ಳುತ್ತವೆ ಅಚ್ಚರಿ ಅನಿಸುತ್ತೆ ಅಲ್ವಾ? 

ಸಂತಾನೋತ್ಪತಿ ಹೇಗೆ? 

ಈ ಕಪ್ಪೆಗಳು ಕರೆ ಅಥವಾ ನೀರಿನ ಸಮೀಪ ಇರುವ ಅಥವಾ ನೀರಿನಲ್ಲಿ ಬಿದ್ದಿರುವ ಮಡಚಿದ ಎಲೆಗಳ ಮೇಲೆ ಮೊಟ್ಟೆಯನ್ನು ಇಡುತ್ತವೆ ಅವುಗಳು ಮೊಟ್ಟೆಯೊಡೆದು ನೀರಿಗೆ ಬೀಳುತ್ತವೆ. ಅಲ್ಲಿ ಬೆಳೆಯಲು ಆರಂಭಿಸುತ್ತವೆ. ಈ ಕಪ್ಪೆಗಳು ಸ್ರವಿಸುವ ಮೇಣದಂತಹ ದ್ರವವೂ  ಡರ್ಮಾರ್ಫಿನ್ (dermorphin) (ಡೈಮಾರ್ಫಿನ್ ತೀವ್ರವಾದ ನೋವಿನ ಚಿಕಿತ್ಸೆಯಲ್ಲಿ ಬಳಸಲಾಗುವ ಮಾದಕ ನೋವು ನಿವಾರಕವಾಗಿದೆ) ಅನ್ನು ಹೊಂದಿರುತ್ತದೆ ಇದು ಮಾರ್ಪಿನ್‌ಗಿಂತ 40 ಪಟ್ಟು ಪ್ರಬಲವಾದ ನೈಸರ್ಗಿಕ  ಒಪಿಯಾಡ್ ಅಂದರೆ ನೋವು ನಿವಾರಕ ಅಂಶವನ್ನು ಹೊಂದಿದೆ.  ಇತ್ತೀಚಿನ ವರ್ಷಗಳಲ್ಲಿ ಇದೇ ರೀತಿಯ ರಾಸಾಯನಿಕ ಸಂಶ್ಲೇಷಿತ ಆವೃತಿಯನ್ನು ರೇಸ್‌ ಕುದುರೆಗಳ ಶಕ್ತಿ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಅವುಗಳಿಗೆ ಅಕ್ರಮವಾಗಿ ನೀಡಲಾಗುತ್ತದೆ. 

ಮನುಷ್ಯರು ತಾವು ಮಾತ್ರ ಬುದ್ಧಿವಂತರೂ ಎಂದು ಭಾವಿಸುತ್ತಾರೆ. ಆದರೆ ಪ್ರಕೃತಿ ಒಂದು ಸುಂದರ ಸೊಬಗು ಇಲ್ಲಿ ಅಣು ಅಣುವು ಕಣ ಕಣವೂ ಅದ್ಬುತವೇ ಜೀವ ವೈವಿಧ್ಯದ ಈ ಪ್ರತಿ ಸೃಷ್ಟಿಯಲ್ಲೂ ಒಂದೊಂದು ಅದ್ಭುತವಿದೆ. 

 

click me!