ಹುಡುಗರ ಯಾವ ಬಾಡಿ ಪಾರ್ಟ್ ಇಷ್ಟವೆಂದು ಕೇಳಿದ ಪ್ರಶ್ನೆಗೆ ಚೈತ್ರಾ ಆಚಾರ್ ಹೀಗ್ ಉತ್ತರಿಸಿಸೋದಾ?

By Roopa HegdeFirst Published Jul 16, 2024, 5:08 PM IST
Highlights

ಸ್ಯಾಂಡಲ್ವುಡ್ ಬೋಲ್ಡ್ ನಟಿ ಚೈತ್ರಾ ಆಚಾರ್ ಮುಂದೆ ದೊಡ್ಡ ಪ್ರಶ್ನೆಯೊಂದು ಎದುರಾಗಿತ್ತು. ಅಭಿಮಾನಿ ಕೇಳಿದ ಪ್ರಶ್ನೆಗೆ ಸ್ವಲ್ಪಹೊತ್ತು ಯೋಚನೆ ಮಾಡಿದ ನಟಿ, ನಂತ್ರ ಉತ್ತರ ನೀಡಿದ್ದಾರೆ. ಹುಡುಗರ ಬಾಡಿ ಪಾರ್ಟ್ ನಲ್ಲಿ ಯಾವುದು ಇಷ್ಟ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. 
 

ಕನ್ನಡದ ಆಲಿಯಾ ಭಟ್ (Alia Bhatt of Kannada) ಎಂದೇ ಪ್ರಸಿದ್ಧಿ ಪಡೆದಿರುವ ನಟಿ ಚೈತ್ರಾ ಆಚಾರ್ ತಮಿಳು ಸಿನಿಮಾಗೆ ಸಹಿ ಹಾಕಿ ಸುದ್ದಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಅಭಿಮಾನಿಗಳ ಜೊತೆ ಮಾತನಾಡಲು ಅವರು ಸಾಮಾಜಿಕ ಜಾಲತಾಣಕ್ಕೆ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಚೈತ್ರಾ ಆಚಾರ್, ಬುದ್ಧಿವಂತಿಕೆಯ ಉತ್ತರ ನೀಡಿದ್ದಾರೆ.

ಲೆಟ್ಸ್ ಟಾಕ್ (Lets talk) ಎನ್ನುತ್ತಲೇ ಮಾತು ಶುರು ಮಾಡಿದ ಚೈತ್ರಾ ಆಚಾರ್ (Chaitra Achar) ಮುಂದೆ ಬಂದ ಪ್ರಶ್ನೆ, ಹುಡುಗರ ಯಾವ ಬಾಡಿ ಪಾರ್ಟ್ (Body Part) ಇಷ್ಟ ಅಂತ. ಅದಕ್ಕೆ ಸ್ವಲ್ಪ ಹೊತ್ತು ಆಲೋಚನೆ ಮಾಡಿದ ನಟಿ, ಏನ್ ಹೇಳೋದು ಅಂತಾ ಗೊತ್ತಾಗದೆ ನುಣುಚಿಕೊಂಡಿದ್ದಾರೆ. ಗಾಡ್ ಬ್ಲೆಸ್ ಯು ಎನ್ನುತ್ತಲೇ ಮುಂದಿನ ಪ್ರಶ್ನೆಗೆ ಜಿಗಿದಿದ್ದಾರೆ.

Latest Videos

ಕತ್ರಿನಾಗೆ ಹುಟ್ಟುಹಬ್ಬ ಸಂಭ್ರಮ: ಅಪ್ಪ ಮುಸ್ಲಿಂ, ಅಮ್ಮ ಕ್ರೈಸ್ತ... ನಟಿ ಭಾರತದ ಪ್ರಜೆಯೇ ಅಲ್ಲ! ರೋಚಕ ಸ್ಟೋರಿಯಿದು..

ಚೈತ್ರಾ ಆಚಾರ್, ಸೂಪರ್ ಸ್ಟಾರ್ ಸಿದ್ಧಾರ್ಥ್ ಜೊತೆ ತಮಿಳು ಚಿತ್ರದಲ್ಲಿ (Tamil Movie) ನಟಿಸಲಿದ್ದಾರೆ. ನಿನ್ನೆ ಅದ್ರ ಮುಹೂರ್ತ ನಡೆದಿದೆ. ಅದ್ರ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡ ನಂತ್ರ ಚೈತ್ರಾ ಆಚಾರ್ ಪ್ರಶ್ನೆಗೆ ಉತ್ತರಿಸುವ ಯತ್ನ ಮಾಡಿದ್ರು. ಏನು ಸ್ಪೇಷಲ್ ಎನ್ನುವ ಅಭಿಮಾನಿ ಪ್ರಶ್ನೆಗೆ, ತಮಿಳಿನ ನನ್ನ ಮೊದಲ ಚಿತ್ರವೊಂದರ ಮುಹೂರ್ತದಲ್ಲಿ ಪಾಲ್ಗೊಂಡಿದ್ದೆ. ಹಾಗಾಗಿ ನಾನು ಸ್ವಲ್ಪ ರೆಡಿಯಾಗಿದ್ದೆ. ನೋಡಿ ಕಣ್ಣಿಗೆ ಕಾಜಲ್ ಹಚ್ಚಿದ್ದೇನೆ ಎಂದಿದ್ದಾರೆ ಚೈತ್ರಾ ಆಚಾರ್.

ಅಭಿಮಾನಿಗಳ ಆಸೆಯಂತೆ ತಮ್ಮ ಮೊಬೈಲ್ ವಾಲ್ ಪೇಪರ್ ಫೋಟೋ ಹಂಚಿಕೊಂಡ ಚೈತ್ರಾ ಆಚಾರ್, ತಮಿಳು ಚಿತ್ರದ ಆರಂಭ ಚೆನ್ನಾಗಿದೆ. ಒಳ್ಳೆ ಸ್ವಾಗತ ಸಿಕ್ಕಿದೆ. ಒಳ್ಳೆ ಟೀಂ ಇದೆ ಎನ್ನುವ ಮೂಲಕ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಎಂಬುದನ್ನು ತೋರ್ಪಡಿಸಿದ್ದಾರೆ. 

ಇನ್ನು ಸಿದ್ಧಾರ್ಥ್ 40 ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ ಚೈತ್ರಾ ಆಚಾರ್, ಒಳ್ಳೆ ಸ್ಕ್ರಿಪ್ಟ್. ಸಿದ್ಧಾರ್ಥ್ ಒಳ್ಳೆ ನಟ. ಹಾಗಾಗಿ ಇದು ಡಬಲ್ ಧಮಾಕಾ ಎಂದಿದ್ದಾರೆ. ಯಾವ ಸಿನಿಮಾ ನೋಡಿದ್ದೀರಿ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಚೈತ್ರಾ,  ಸದ್ಯ ಯಾವುದೇ ಸಿನಿಮಾ ನೋಡಿಲ್ಲವಂತೆ. ಕನ್ನಡದ ವೆಬ್ ಸಿರೀಸ್ ವೀಕ್ಷಣೆ ಮಾಡಿದ್ದಾಗಿ ಹೇಳಿದ್ದಾರೆ. ಏಕಂ ವೆಬ್ ಸರಣಿ ವೀಕ್ಷಿಸಿದ್ಣೆದು, ತುಂಬಾ ಚೆನ್ನಾಗಿದೆ. ನೀವೆಲ್ಲರೂ ಈ ಸಿರೀಸ್ ನೋಡಿ ಎಂದಿದ್ದಾರೆ. 

ಇನ್ನು ಕನ್ನಡ ತಪ್ಪಾಗಿ ಬರೆದ ಅಭಿಮಾನಿಗಳನ್ನು ಚೈತ್ರಾ ಕಾಲೆಳೆದಿದ್ದಾರೆ. 'ಕನ್ನಡ ಸಾಂಗ್ ಆಕಿ ಅಕ್ಕ' ಅಂತ ಅಭಿಮಾನಿ ಹಾಕಿದ್ದ ಕಮೆಂಟ್‌ಗೆ, ಚೈತ್ರಾ, ಅದು ಆಕಿ ಅಲ್ಲ ಕಂಡ್ರೋ ಹಾಕಿ ಅಂದಿದ್ದಾರೆ. ಅಕಾರಾ, ಹಾಕಾರ ಮಿಸ್ ಮಾಡೋದಲ್ಲದೆ ಕನ್ನಡ ಮಾತಾಡಿ ಅಂತೀರಾ ಅಂತ ಹುಸಿಮುನಿಸು ತೋರಿದ್ದಾರೆ.

ತಮಿಳಿನಲ್ಲಿ ಪ್ರಶ್ನೆಗೆ ಉತ್ತರ ನೀಡಿದ ಚೈತ್ರಾಗೆ, ಕನ್ನಡ ಮರೆಯಬೇಡಿ ಎಂಬ ಕಮೆಂಟ್ ಬಂದಿತ್ತು. ತಕ್ಷಣ ಅದಕ್ಕೆ ಉತ್ತರಿಸಿದ ಚೈತ್ರಾ, ಯಾಕೆ ನನಗೆ ಮರು ಬಂದಿದ್ಯಾ ಅಂದ್ರು.  ಚೈತ್ರಾ ಆಚಾರ್‌ಗೆ ಫೋಟೋ ಕ್ಲಿಕ್ ಮಾಡೋದು ತುಂಬಾ ಇಷ್ಟವಂತೆ. ಫ್ರೀ ಟೈಂನಲ್ಲಿ ಫೋಟೋ ಕ್ಲಿಕ್ ಮಾಡೋದು ನನ್ನ ಹವ್ಯಾಸ. ನನ್ನ ಪೇಜ್‌ಗೆ ಹೋದ್ರೆ ನಿಮಗೆ ಒಂದಿಷ್ಟು ಫೋಟೋಸ್ ಸಿಗುತ್ತೆ ಎಂದಿದ್ದಾರೆ ಚೈತ್ರಾ. 

ಪ್ಯಾನ್ ಇಂಡಿಯಾದಿಂದ ದೇಹ, ದಾಡಿ ಬೆಳೆಸ್ತಿದ್ದಾರೆ ನಟರು, ಇದೊಂದು ಹುಚ್ಚು: ಕಲಾವಿದರಿಗೆ ಹಂಸಲೇಖ ಮಾತಿನೇಟು

ಆರೋಗ್ಯವಾಗಿರಿ (Be Health), ನೀರು ಕುಡಿತಾ (Drink Water) ಇರಿ ಅಂತ ಅಭಿಮಾನಿಗಳಿಗೆ ಸಲಹೆ ನೀಡಿದ ಚೈತ್ರಾ, ಅಭಿಮಾನಿಗಳ ಜೊತೆ ಮಾತನಾಡೋಕೆ ನನಗೆ ಇಷ್ಟ ಎಂದಿದ್ದಾರೆ. ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಚೈತ್ರಾ, ಹಾಡುಗಾರ್ತಿಯೂ ಹೌದು. ಉತ್ತಮವಾಗಿ ಡಾನ್ಸ್ ಮಾಡುವ ಚೈತ್ರಾ, ಬೋಲ್ಡ್ ಫೋಟೋಗಳಿಗೆ ಫೋಸ್ (Chaitra Achar Bold Photos) ನೀಡ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಸಕ್ರಿಯವಾಗಿದ್ದಾರೆ. 

click me!