LIVE NOW
Published : Aug 26, 2026, 05:00 AM ISTUpdated : Aug 26, 2026, 08:44 PM IST

Yash's Toxic Movie Live Updates: 9ರ ಹರೆಯದಲ್ಲೇ ಯಶ್ ಜೊತೆ ಸ್ಕ್ರೀನ್ ಶೇರ್ - ‘ಟಾಕ್ಸಿಕ್’ ಬಾಲನಟನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ!

ಸಾರಾಂಶ

ಬೆಂಗಳೂರು: ರಾಕಿಂಗ್‌ಸ್ಟಾರ್‌ ಯಶ್‌ (Rocking Star Yash) ಅವರ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್‌ (Toxic A Fairy Tale for Grown-Ups) ಇಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ಅವಧಿ 3 ಗಂಟೆ 14 ನಿಮಿಷಗಳು. 

ಭಾರತದ ಸಿನಿಮಾರಂಗದ ಇತಿಹಾಸದಲ್ಲೇ ಅತ್ಯಧಿಕ ರು.3600 ಟಿಕೆಟ್‌ ದರ ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅಷ್ಟೂ ಟಿಕೆಟ್‌ಗಳೂ ಸೋಲ್ಡೌಟ್‌ ಆಗಿವೆ. ವರದಿಗಳ ಪ್ರಕಾರ, ಸುಮಾರು 70 ಕೋಟಿಯಷ್ಟು ಹಣ ಮುಂಗಡ ಬುಕ್ಕಿಂಗ್‌ನಿಂದಲೇ ಈಗಾಗಲೇ ಟಾಕ್ಸಿಕ್ ಗಲ್ಲಾಪೆಟ್ಟಿಗೆ (Toxic Box Office Collection) ಸೇರಿದೆ. ಇಂದಿನ ಟಾಕ್ಸಿಕ್ ಸಿನಿಮಾ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

08:44 PM (IST) Aug 26

9ರ ಹರೆಯದಲ್ಲೇ ಯಶ್ ಜೊತೆ ಸ್ಕ್ರೀನ್ ಶೇರ್ - ‘ಟಾಕ್ಸಿಕ್’ ಬಾಲನಟನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ!

Toxic ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ 9 ವರ್ಷದ ಬಾಲನಟ ಕೃಷಿವ್ ಜಿಂದಾಲ್ ಯಾರು? ಒಂದು ವರ್ಷದ ವಯಸ್ಸಿನಲ್ಲೇ ಕ್ಯಾಮೆರಾ ಎದುರಿಸಿದ್ದ ಕೃಷಿವ್, ಬಾಲಿವುಡ್, ಒಟಿಟಿ ಹಾಗೂ ಜಾಹೀರಾತುಗಳಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಇದೀಗ ಯಶ್ ಜೊತೆ ನಟಿಸಿರುವ ಅವರ ಕುತೂಹಲಕಾರಿ ಸಿನಿ ಜರ್ನಿ ಇಲ್ಲಿದೆ.

Read Full Story

04:27 PM (IST) Aug 26

Toxic cast salary - ಕಿಯಾರ ಅಡ್ವಾನಿ, ರುಕ್ಮಿಣಿ ವಸಂತ್ ಅಥವಾ ನಯನತಾರಾ, ಯಾವ ನಟಿಯರಿಗೆ ಹೆಚ್ಚು ಸಂಭಾವನೆ..? ಸಿನಿಮಾ ಸಂಭಾವನೆ ವಿವರ ವೈರಲ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಇಂದು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ತೆರೆ ಕಂಡಿದೆ. ಮೊದಲ ದಿನವೇ ಈ ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆರು ಭಾಷೆಗಳಲ್ಲಿ ತೆರೆ ಕಂಡಿರುವ ಈ ಸಿನಿಮಾದಲ್ಲಿ ನಟಿಸಿರುವ ನಟ, ನಟಿಯರ ಸಂಬಳ ಎಷ್ಟು ನೋಡೋಣ ಬನ್ನಿ.

Read Full Story

04:01 PM (IST) Aug 26

ಸೂಚನೆ ಕೊಟ್ರೂ ಲೀಕ್‌ ಆಯ್ತು ಯಶ್‌ ಟಾಕ್ಸಿಕ್‌ ಸಿನಿಮಾ, ಆದ್ರೆ ಅದನ್ನು ತಕ್ಷಣ ಡಿಲೀಟ್ ಮಾಡಿದ್ದು ಏಕೆ?

ಲೀಕ್ ಆಗಿದೆ ಎನ್ನಲಾದ ಆ ಕ್ಲಿಪ್‌ನಲ್ಲಿ ಸೌತ್ ಕ್ವೀನ್ ನಯನತಾರಾ ಹಾಗೂ ಯಶ್ ಅವರ ಖಡಕ್ ಎಂಟ್ರಿ ಇದೆ ಎಂದು ಹೇಳಲಾಗುತ್ತಿದೆ. ನಯನತಾರಾ ಇಲ್ಲಿ 'ಗಂಗಾ' ಎಂಬ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಯಶ್ 'ರಾಯ'ನಾಗಿ ಬೆಂಕಿ ಹಚ್ಚುತ್ತಿದ್ದಾರೆ!

Read Full Story

02:31 PM (IST) Aug 26

ಯಶ್ ಸಿನಿಮಾ ಪ್ರದರ್ಶನದ ನಡುವೆ ಚಿತ್ರಮಂದಿರಗಳಿಗೆ ಖಡಕ್ ಸೂಚನೆ ಕೊಟ್ಟ ಟಾಕ್ಸಿಕ್ ಟೀಂ

ಟಾಕ್ಸಿಕ್ ಸಿನಿಮಾ ದೇಶಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಯಶ್ ಅಬ್ಬರ ಶುರುವಾಗಿದೆ. ಸಿನಿಮಾ ಪ್ರದರ್ಶನದ ನಡುವೆ ಚಿತ್ರಮಂದಿರಗಳಿಗೆ ಟಾಕ್ಸಿಕ್ ಸಿನಿಮಾ ತಂಡ ಸ್ಪಷ್ಟ ಸೂಚನೆ ನೀಡಿದೆ. ಟಾಕ್ಸಿಕ್ ಸಿನಿಮಾ ನೀಡಿದ ವಾರ್ನಿಂಗ್ ಏನು?

Read Full Story

12:26 PM (IST) Aug 26

Anekal: ಹಬ್ಬದ ವಾತಾವರಣ ಸೃಷ್ಟಿ

ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಲಕ್ಷ್ಮೀ ನರಸಿಂಹ ಚಿತ್ರಮಂದಿರದಲ್ಲಿ 'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ಬಂದಿರುವ ಅಭಿಮಾನಿಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ನೋಡಲು ಮುಗಿಬಿದ್ದಿದ್ದಾರೆ. ಅದರಲ್ಲೂ ತೆರೆ ಮೇಲೆ ಯಶ್ ಅವರ ಎಂಟ್ರಿಯಾಗುತ್ತಿದ್ದಂತೆ ಹಬ್ಬದ ವಾತಾವರಣ ಸೃಷ್ಟಿಸಿ ಸಂಭ್ರಮಿಸುತ್ತಿದ್ದಾರೆ.

12:00 PM (IST) Aug 26

25 ಅಡಿ ಎತ್ತರದ ಯಶ್ ಕಟೌಟ್‌ಗೆ ಹಾಲಿನ ಅಭಿಷೇಕ

ಗದಗ ನಗರದ ಮಹಾಲಕ್ಷ್ಮಿ ಸೇರಿದಂತೆ ಎರಡು ಚಿತ್ರಮಂದಿರಗಳಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, 25 ಅಡಿ ಎತ್ತರದ ಯಶ್ ಕಟೌಟ್‌ಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿತ ಹಾಗೂ ಜೈಕಾರಗಳೊಂದಿಗೆ ಅಭಿಮಾನಿಗಳು ಸಂಭ್ರಮಿಸಿದರು. ವಿಕಲಚೇತನ ಅಭಿಮಾನಿಯೊಬ್ಬರು ವ್ಹೀಲ್ ಚೇರ್‌ನಲ್ಲಿ ಆಗಮಿಸಿ ಸಿನಿಮಾ ವೀಕ್ಷಿಸಿ ಯಶ್ ಭೇಟಿಗೆ ಕಾತುರತೆ ವ್ಯಕ್ತಪಡಿಸಿದರೆ, ವಿಶೇಷ ಫ್ಯಾನ್ಸ್ ಶೋ ನೋಡಿ ಹೊರಬಂದ ಅಭಿಮಾನಿಗಳು ಕರುನಾಡಿನ ಕಂಪು ಜಾಗತಿಕ ಮಟ್ಟದಲ್ಲಿ ಪಸರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

11:44 AM (IST) Aug 26

ಶಿವಮೊಗ್ಗ: ಪಟಾಕಿ ಸಿಡಿಸಿ, ಸಿಹಿ ಹಂಚಿ ಯಶ್ ಅಭಿಮಾನಿಗಳ ಸಂಭ್ರಮ

ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ 'ಟಾಕ್ಸಿಕ್' ಸಿನಿಮಾ ರಿಲೀಸ್ ಆಗಿದ್ದು, ಚಿತ್ರ ನೋಡಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಅದ್ಧೂರಿಯಾಗಿ ಸಂಭ್ರಮಿಸಿದರು.

10:15 AM (IST) Aug 26

ಬೆಣ್ಣೆ ನಗರಿಯಲ್ಲಿ ‘ಟಾಕ್ಸಿಕ್’ ಸಿನಿಮಾದ ಅಬ್ಬರ

ದಾವಣಗೆರೆಯ ಬೆಣ್ಣೆ ನಗರಿಯಲ್ಲಿ ‘ಟಾಕ್ಸಿಕ್’ ಸಿನಿಮಾದ ಅಬ್ಬರ ಮುಗಿಲು ಮುಟ್ಟಿದ್ದು, ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ.

ಅಭಿಮಾನಿಯ ಅಭೂತಪೂರ್ವ ಪ್ರೀತಿ: ಅಪಘಾತದಿಂದ ಕಾಲಿಗೆ ಗಾಯವಾಗಿ ಪ್ಲಾಸ್ಟರ್ ಹಾಕೊಂಡಿದ್ದರೂ ಲೆಕ್ಕಿಸದೆ, ಅಭಿಮಾನಿಯೊಬ್ಬರು ಸ್ನೇಹಿತರ ಹೆಗಲ ಮೇಲೆ ಕೈಹಾಕಿ ಥಿಯೇಟರ್‌ಗೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ.

ಮಧ್ಯ ಕರ್ನಾಟಕದಲ್ಲಿ ಟಾಕ್ಸಿಕ್ ಹವಾ: ಮೊದಲ ದಿನದ ಮೊದಲ ಶೋ (FDFS) ವೀಕ್ಷಿಸಿದ ಪ್ರೇಕ್ಷಕರು ಯಶ್ ಅವರ ಮಾಸ್ ಆಕ್ಷನ್ ಹಾಗೂ ನಟನೆಗೆ ಸಂಪೂರ್ಣವಾಗಿ ಫಿದಾ ಆಗಿದ್ದಾರೆ.

ಅದ್ದೂರಿ ಸಂಭ್ರಮಾಚರಣೆ: ಥಿಯೇಟರ್ ಆವರಣದಲ್ಲಿ ಅಭಿಮಾನಿಗಳು ಡೊಳ್ಳು ಕುಣಿತ, ಯಶ್ ಫೋಟೋ ಇರುವ ವಿಶೇಷ ಟೀ ಶರ್ಟ್‌ಗಳನ್ನು ಧರಿಸಿ ಪಟಾಕಿ ಸಿಡಿಸಿ ಹಬ್ಬದ ವಾತಾವರಣ ನಿರ್ಮಿಸಿದ್ದಾರೆ.

10:08 AM (IST) Aug 26

ಕೊಪ್ಪಳ ನಗರದ ಲಕ್ಷ್ಮೀ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಂಭ್ರಮ

ಇಂದು 'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ, ಕೊಪ್ಪಳ ನಗರದ ಲಕ್ಷ್ಮೀ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.

ಸಂಭ್ರಮಾಚರಣೆ: ಥಿಯೇಟರ್ ಮುಂಭಾಗದಲ್ಲಿ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.

ವಿಶೇಷ ಆಚರಣೆ: ಅಭಿಮಾನಿಗಳು ಯಶ್ ಚಿತ್ರವಿರುವ ವಿಶೇಷ ಟೀ-ಶರ್ಟ್‌ಗಳನ್ನು ಧರಿಸಿ, ಕಟೌಟ್ ಎದುರು ಕುಂಬಳಕಾಯಿ ಒಡೆದು, ಡಿಜೆ ಹಾಡಿಗೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.

ಟಿಕೆಟ್‌ಗಾಗಿ ಪರದಾಟ: ಚಿತ್ರ ವೀಕ್ಷಿಸಲು ಪ್ರೇಕ್ಷಕರು ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದು, ಟಿಕೆಟ್ ಕೌಂಟರ್ ಬಳಿ ಟಿಕೆಟ್ ಪಡೆದುಕೊಳ್ಳಲು ಒಬ್ಬರ ಮೇಲೊಬ್ಬರು ಮುಗಿಬಿದ್ದರು.

10:07 AM (IST) Aug 26

ಬಾಗಲಕೋಟೆಯಲ್ಲಿ ಯಶ್ 'ಟಾಕ್ಸಿಕ್' ಚಿತ್ರದ ಹವಾ: ಶಕ್ತಿ ಥೇಟರ್ ಎದುರು ಅಭಿಮಾನಿಗಳ ಭವ್ಯ ಸಂಭ್ರಮಾಚರಣೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಬಾಗಲಕೋಟೆಯ ಶಕ್ತಿ ಥೇಟರ್ ಎದುರು ಅಭಿಮಾನಿಗಳು ಹರ್ಷೋದ್ಘಾರ ಮುಗಿಲು ಮುಟ್ಟುವಂತೆ ಸಂಭ್ರಮಿಸಿದರು. ಥೇಟರ್ ಮುಂದೆ ನಿಲ್ಲಿಸಲಾಗಿದ್ದ ಯಶ್ ಅವರ ಬೃಹತ್ ಕಟೌಟ್‌ಗೆ ಬಣ್ಣ ಬಣ್ಣದ ಹಾರಗಳನ್ನು ಹಾಕಿ, ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು, "ರಾಕಿಂಗ್ ಸ್ಟಾರ್ ಯಶ್ ನಮಗೆ ದೇವರಿದ್ದಂತೆ; ಅವರು ಎಂದಿಗೂ 'ಮೊದಲು ಮನೆಗೆ ಮಗನಾಗಿ, ಆಮೇಲೆ ಅಭಿಮಾನಿಯಾಗಿ' ಎಂದು ಹೇಳುವ ಗುಣವೇ ಅವರನ್ನು ಇನ್ನಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ" ಎಂದು ಭಾವಪೂರ್ಣವಾಗಿ ನುಡಿದರು. ಕೊನೆಯಲ್ಲಿ, ಈ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಹೊಸ ಮೈಲಿಗಲ್ಲನ್ನು ಸಾಧಿಸಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು.

08:53 AM (IST) Aug 26

'ಯಶ್ ಜೊತೆಗೆ ನಾನು ಹಾಗೆ ಮಾಡಲ್ಲ' — 'ಟಾಕ್ಸಿಕ್' ಆಫರ್ ತಿರಸ್ಕರಿಸಿ ತಲೆ ಚಚ್ಚಿಕೊಳ್ಳುತ್ತಿರುವ ನಟಿ ಯಾರು ಗೊತ್ತಾ?

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ಸಹೋದರಿ ಪಾತ್ರಕ್ಕೆ ಮೊದಲು ಬಾಲಿವುಡ್ ನಟಿ ಆಯ್ಕೆಯಾಗಿದ್ದರು. ಆರಂಭದಲ್ಲಿ ಖುಷಿಯಿಂದ ಒಪ್ಪಿಕೊಂಡ ನಟಿ, ಈ ಒಂದು ಕಾರಣಕ್ಕೆ ಇಷ್ಟವಿಲ್ಲದೇ ಚಿತ್ರದಿಂದ ಹೊರನಡೆದರು, ನಂತರ ನಿರ್ದೇಶಕಿ ಗೀತು ಮೋಹನ್‌ದಾಸ್ ಕಥೆಯ ಪ್ರಾಮುಖ್ಯತೆ ವಿವರಿಸಿದಾಗ ನಯನತಾರಾ ಈ ಪಾತ್ರವನ್ನು ಒಪ್ಪಿಕೊಂಡರು.

Read Full Story

07:48 AM (IST) Aug 26

ತೆರೆ ಮೇಲೆ 'ಟಾಕ್ಸಿಕ್' ಜ್ವಾಲೆ - ರಾಕಿಂಗ್ ಸ್ಟಾರ್ ಯಶ್‌ನಿಂದಲೇ ಧುರಂದರ್ ಹಿಟ್ ಆಯ್ತು!

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಕ್ಷನ್ ದೃಶ್ಯಗಳು, ಕಿಯಾರಾ ಜೊತೆಗಿನ ಯಶ್ ಕೆಮಿಸ್ಟ್ರಿ ಹಾಗೂ ದೃಶ್ಯ ವೈಭೋಗಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸಿನಿಮಾ ಬ್ಲಾಕ್‌ಬಸ್ಟರ್ ಆಗುವ ಸೂಚನೆ ನೀಡಿದೆ.
Read Full Story

07:40 AM (IST) Aug 26

ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಸುನಾಮಿ! ಮೊದಲ ದಿನವೇ ₹100 ಕೋಟಿ ಕ್ಲಬ್? ಮುರಿದುಬಿತ್ತು ‘ಕಲ್ಕಿ-ಜವಾನ್’ ದಾಖಲೆ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಅಭೂತಪೂರ್ವ ಮುಂಗಡ ಬುಕಿಂಗ್ ಮೂಲಕ ₹64 ಕೋಟಿಗೂ ಹೆಚ್ಚು ಗಳಿಸಿರುವ ಈ ಚಿತ್ರ, ಮೊದಲ ದಿನವೇ ₹100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ.

Read Full Story

06:58 AM (IST) Aug 26

ಚನ್ನಪಟ್ಟಣದ ಶಿವಾನಂದ ಥಿಯೇಟರ್‌ನಲ್ಲಿ 'ಟಾಕ್ಸಿಕ್' ಸಿನಿಮಾಗೆ ಅದ್ದೂರಿ ಸ್ವಾಗತ

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಶಿವಾನಂದ ಥಿಯೇಟರ್‌ನಲ್ಲಿ 'ಟಾಕ್ಸಿಕ್' ಸಿನಿಮಾಗೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ಬೆಳಗಿನ 6 ಗಂಟೆಯ ಮೊದಲ ಫ್ಯಾನ್ ಶೋ ನಿಂದಲೇ ದಿನದ ಎಲ್ಲಾ ಪ್ರದರ್ಶನಗಳು ಹೌಸ್ ಫುಲ್ ಆಗಿವೆ. ಥಿಯೇಟರ್ ತುಂಬೆಲ್ಲಾ ರಾರಾಜಿಸುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಕಟೌಟ್‌ಗಳು ಮತ್ತು ಬ್ಯಾನರ್‌ಗಳ ನಡುವೆ, ನೆರೆದಿದ್ದ ಕಿಕ್ಕಿರಿದ ಅಭಿಮಾನಿಗಳು ಯಶ್ ಎಂಟ್ರಿಗೆ 'ಜೈ ಟಾಕ್ಸಿಕ್' ಎಂದು ಜಯಘೋಷ ಕೂಗುವ ಮೂಲಕ ಜಿಲ್ಲಾ ಕೇಂದ್ರದಲ್ಲಿ ಭಾರೀ ಅಬ್ಬರ ಸೃಷ್ಟಿಸಿದ್ದಾರೆ.

06:57 AM (IST) Aug 26

"Toxic, Toxic ರಾಕಿಭಾಯ್ ಯಶ್ Toxic" ಎಂದು ಜೈಕಾರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಯಾಗಿ ಜನರಿಂದ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದ್ದು, ಕಲಬುರಗಿಯಲ್ಲಿ Toxic ಹವಾ ಜೋರಾಗಿದೆ. ಕಲಬುರಗಿ ನಗರದ ಶೆಟ್ಟಿ ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಬೆಳಿಗ್ಗೆ 6:30 ಕ್ಕೆ ಮೊದಲ ಶೋ ಆರಂಭವಾಗಿದ್ದು, ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಬೆಳಿಗ್ಗೆ 5 ಗಂಟೆಯಿಂದಲೇ ಥಿಯೇಟರ್‌ತ್ತ ಧಾವಿಸಿ ಅಭಿಮಾನಿಗಳ ದಂಡೇ ನೆರೆದಿತ್ತು. ಥಿಯೇಟರ್ ಮುಂದೆ ರಾಕಿಭಾಯ್ ಯಶ್ ಅವರ ಬೃಹತ್ ಪೋಸ್ಟರ್ ಅಳವಡಿಸಲಾಗಿದ್ದು, Toxic ಪೋಸ್ಟರ್ ಮುದ್ರಿತ ಟೀ ಶರ್ಟ್ ಧರಿಸಿ ಬಂದ ಅಭಿಮಾನಿಗಳು "Toxic, Toxic ರಾಕಿಭಾಯ್ ಯಶ್ Toxic" ಎಂದು ಜೈಕಾರ ಕೂಗುತ್ತಾ, ಈ ಸಿನಿಮಾ ಶತದಿನೋತ್ಸವ ಪೂರೈಸಲಿ ಎಂದು ಹಾರೈಸಿದರು.

06:56 AM (IST) Aug 26

ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರದಲ್ಲಿ 'ಟಾಕ್ಸಿಕ್' ಸಿನಿಮಾ ಪ್ರದರ್ಶನ

ಚಾಮರಾಜನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಬಹುನಿರೀಕ್ಷಿತ ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಇಂದು ಬೆಳಿಗ್ಗೆ 5:30ಕ್ಕೆ ಮೊದಲ ಪ್ರದರ್ಶನ ಕಾಣುತ್ತಿದ್ದು, ಬೆಳಿಗ್ಗೆಯಿಂದಲೇ ಚಿತ್ರಮಂದಿರದ ಬಳಿ ನೆರೆದಿರುವ ಅಭಿಮಾನಿಗಳು ಯಶ್ ಅವರ ಕಟೌಟ್ ಮುಂದೆ ಸಾಲಾಗಿ ಆಟೋಗಳನ್ನು ನಿಲ್ಲಿಸಿ ಹಾಗೂ ಸ್ಕ್ರೀನ್‌ಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

06:29 AM (IST) Aug 26

Toxic Twitter Review - ಅಲ್ಟ್ರಾ ಸ್ಟೈಲಿಶ್‌ ಲುಕ್‌ನಲ್ಲಿ ಯಶ್; ಹೇಗಿದೆ ಸಿನಿಮಾ?

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಸಾಹಸ ದೃಶ್ಯಗಳು, ಯಶ್ ಅವರ ಸ್ಟೈಲಿಶ್ ಲುಕ್ ಮತ್ತು ಕಿಯಾರಾ ಜೊತೆಗಿನ ಕೆಮಿಸ್ಟ್ರಿ ಪ್ರಮುಖ ಆಕರ್ಷಣೆಯಾಗಿದೆ.
Read Full Story

05:53 AM (IST) Aug 26

ದಾವಣಗೆರೆ - ಅಭಿಮಾನಿಗಳಿಂದಲೇ ₹4.74 ಲಕ್ಷ ಮೊತ್ತದ ಟಾಕ್ಸಿಕ್ ಸಿನಿಮಾದ ಟಿಕೆಟ್ ಖರೀದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅವರ ಅಭಿಮಾನಿಗಳ ಸಂಘವು ಸಂಭ್ರಮಾಚರಣೆ ಹಮ್ಮಿಕೊಂಡಿದೆ. ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಫ್ಯಾನ್ ಶೋ ಆಯೋಜಿಸಲಾಗಿದ್ದು, ಅಭಿಮಾನಿಗಳೇ ಲಕ್ಷಾಂತರ ರೂಪಾಯಿ ಮೌಲ್ಯದ ಟಿಕೆಟ್‌ಗಳನ್ನು ಖರೀದಿಸಿ ವಿಜಯೋತ್ಸವಕ್ಕೆ ಸಜ್ಜಾಗಿದ್ದಾರೆ.
Read Full Story

05:44 AM (IST) Aug 26

12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ರಿಲೀಸ್; ಧುರಂದರ್ ದಾಖಲೆ ಉಡೀಸ್

ರಾಕಿಂಗ್‌ಸ್ಟಾರ್‌ ಯಶ್ ಅಭಿನಯದ 'ಟಾಕ್ಸಿಕ್‌' ಸಿನಿಮಾ ಇಂದು ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ದಾಖಲೆಯ ಟಿಕೆಟ್ ದರ, ಭರ್ಜರಿ ಮುಂಗಡ ಬುಕಿಂಗ್‌ನೊಂದಿಗೆ ಚಿತ್ರವು ಮೊದಲ ದಿನವೇ 200 ಕೋಟಿ ಗಳಿಸುವ ನಿರೀಕ್ಷೆಯಲ್ಲಿದ್ದು, ನಾಲ್ಕು ವರ್ಷಗಳ ನಂತರ ಯಶ್ ಅವರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Read Full Story

More Trending News