ಮೈಸೂರಿನ ಘಟನೆಗೆ ಆಡಳಿತ ವೈಫಲ್ಯವೇ ಕಾರಣ: ಇಂದ್ರಜಿತ್ ಲಂಕೇಶ್

By Suvarna NewsFirst Published Aug 27, 2021, 1:03 PM IST
Highlights

ಮೈಸೂರಿನಲ್ಲಿ ನಡೆದಿರುವ ಹಲ್ಲೆ, ದರೋಡೆ ಹಾಗೂ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಂಡಲ್‌ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್. ಕರ್ನಾಟಕದಲ್ಲಿ ರಾಜಕಾರಣಿಗಳ ಬೆದರಿಕೆಯಿಂದ ಪೊಲೀಸರು ಕೆಲಸ ಮಾಡುತ್ತಿದ್ದಾರೆ. 
 

ಕೆಲವೇ ಗಂಟೆಗಳ ಅಂತರದಲ್ಲಿ ನಡೆದಿರುವ ದರೋಡೆ, ಕೊಲೆ ಮತ್ತೊಂದು ಗ್ಯಾಂಗ್ ರೇಪ್‌ನಿಂದ ಇಡೀ ಸಾಂಸ್ಕೃತಿಕ ನಗರಿ ಮೈಸೂರಿನ  ಜನರು ಬೆಚ್ಚಿ ಬಿದ್ದಿದ್ದಾರೆ. ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೀಚಕರನ್ನು ಹುಡುಕುವ ಶೋಧಕ್ಕೆ ಪೊಲೀಸರು ಇಳಿದಿದ್ದಾರೆ. ಪ್ರಕರಣದ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೋಡಿದ್ದಾರೆ.

'ಮೈಸೂರಿನ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಅಂತ ನೋಡಿದರೆ, ತುಂಬಾ ನೋವಾಗುತ್ತದೆ. ಹಲವಾರು ಯಶಸ್ವಿ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಣ ಮಾಡಿದ್ದೇವೆ. ಹಲ್ಲೆ, ದರೋಡೆ ಹಾಗೂ ಗ್ಯಾಂಗ್‌‌ರೇಪ್‌‌ನಂಥ ಘಟನೆಗಳು ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಡಿಸ್ಪರ್ಬ್ ಆಗುತ್ತಿದೆ. ದಸರಾ ಸಮಯದಲ್ಲಿ ಇಡೀ ದೇಶವೇ ಮೈಸೂರಿನ ಕಡೆ ತಿರುಗಿ ನೋಡುತ್ತದೆ. ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರೆಸ್‌ಮೀಟ್ ಮಾಡಿ ಡ್ರಗ್ಸ್ ಯಾವ ರೀತಿ ಮೈಸೂರಿನಲ್ಲಿ ತಾಂಡವ ಆಡುತ್ತಿದೆ ಅಂತ ಹೇಳಿದ್ದರು. ಎಷ್ಟು ಜನ ಡ್ರಗ್ಸ್ ಪೆಡ್ಲರ್‌ಗಳನ್ನು ಇದುವರೆಗೆ ಬಂಧಿಸಿದ್ದಾರೆ, ಎಂದು ಪ್ರಶ್ನಿಸಿದ್ದಾರೆ. ಈ ರೀತಿ ಮೈಸೂರಿನಲ್ಲಿ ನಡೆಯುತ್ತಿರುವುದು ನೋವಾಗುತ್ತಿದೆ,' ಎಂದು ಇಂದ್ರಜಿತ್ ಹೇಳಿದ್ದಾರೆ.

ಮೈಸೂರು ಗ್ಯಾಂಗ್‌ ರೇಪ್‌: ಪೊಲೀಸರಿಗೇ ಸವಾಲಾಯ್ತಾ ಕಾಮುಕರ ಪತ್ತೆ ಕಾರ್ಯ?

'ಪೊಲೀಸ್ ಅಧಿಕಾರಿಗಳನ್ನು ದೂರಲು ಆಗುವುದಿಲ್ಲ ಅವರ ಹಿಂದೆ ರಾಜಕಾರಣಿಗಳಿದ್ದಾರೆ. ಅವರ ಹೆದರಿಕೆ, ಬೆದರಿಕೆಗಳಿಂದ ಪೊಲೀಸರು ಕೆಲಸ ಮಾಡಬೇಕು. ಕೆಲವು ವರ್ಷಗಳ ಹಿಂದೆ IAS ಆಫೀಸರ್‌ ಶಿಖಾ ಅವರೊಂದಿಗೆ ರಾಜಕಾರಣಿಗಳು ಹೇಗೆ ವರ್ತಿಸಿದರು ಅಂತ ಎಲ್ಲರಿಗೂ ಗೊತ್ತಿದೆ. ಒಂದು ತಿಂಗಳ ಹಿಂದೆ ನಾನೇ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ಬಗ್ಗೆ ಮಾತನಾಡಿದ್ದೆ. ಇಲ್ಲಿರುವ ಹಲವು ಹಿರಿಯ ನಾಯಕರು, ಯುವಕರು ಹಾಗೂ ಸಾಮಾನ್ಯರು ಇಂಥ ಘಟನೆಗಳಿಂದ ಆತಂಕಕ್ಕೊಳಗಾಗಿದ್ದಾರೆ. ನಾವು ಇವನ್ನೆಲ್ಲಾ ಪ್ರಶ್ನೆ ಮಾಡಬೇಕು. ಇಲ್ಲಿನ ಉಸ್ತುವಾರಿ ಮಂತ್ರಿ ಯಾರು? ಇಲ್ಲಿ ಆಡಳಿತ ಪಕ್ಷ ಯಾವುದು, ವಿರೋಧ ಪಕ್ಷ ಯಾವುದು ಅಂತಾನೇ ಗೊತ್ತಾಗುತ್ತಿಲ್ಲ. ಇಲ್ಲಿನ ಉಸ್ತುವಾರಿ ಮಂತ್ರಿ ಸೋಮಶೇಖರ್ ಅವರು ಯಾವ ತರ ವರ್ತನೆ ಮಾಡುತ್ತಿದ್ದಾರೆ ಯಾವ ತರ ನಡೆದುಕೊಳ್ಳುತ್ತಿದ್ದಾರೆ? ಅಂತ ನಾವು ನೋಡ್ತಿದ್ದೀವಿ. ಅವರಿಂದ ಅಧಿಕಾರಿಗಳು ಹೆದರಿ, ಬೆದರಿ ಕೆಲಸ ಮಾಡುವಂತಾಗಿದೆ. ಬೇರೆ ಜಿಲ್ಲೆಯವರು ಮೈಸೂರನ್ನು ತಾಲಿಬಾನ್‌ಗೆ ಹೋಲಿಸುತ್ತಿದ್ದಾರೆ. ಇನ್ನೂ ಕೆಲವು ರಾಜಕಾರಣಿಗಳು ಮಹಿಳೆಯರು ಯಾಕೆ ಆ ಸ್ಥಳಕ್ಕೆ ಹೋಗಬೇಕು, ಎಂದು ಕೇಳುವಂತಾಗಿದೆ. ಮಹಿಳೆಯರ ಮಾನ, ಮರ್ಯಾದೆಯನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಯಾವ ರಾಜಕಾರಣಿಗಳ ಮಧ್ಯೆ ಜೀವನ ನಡೆಸುತ್ತೀದ್ದೀವಿ ಎಂದು ಯೋಚನೆ ಮಾಡಬೇಕಾಗಿದೆ,' ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

"

'ದಿಲ್ಲಿಯಲ್ಲಿ ನಿರ್ಭಯಾ ಕೇಸ್ ಆದಾಗ ಯಾವ ರೀತಿ ಅವರಿಗೆ ನ್ಯಾಯ ಒದಗಿಸಿಕೊಟ್ಟರು. ಹಾಗೆಯೇ ಪರಿಹಾರವನ್ನೂ ಕೊಡ್ಸಿದ್ರು. ನಿರ್ಭಯಾ ಘಟನೆ ಆದ ನಂತರ ಒಂದು ಸ್ಕೀಮ್ ಬಂದಿದೆ. ನಿರ್ಭಯಾ ಸ್ಕೀಮ್ ಎಂದು. ಅತ್ಯಾಚಾರ ಸಂತ್ರಸ್ತೆಗೆ ಅಥವಾ ಅವರ ಕುಟುಂಬಕ್ಕೆ ಈ ಸ್ಕೀಮ್‌ನಿಂದ ಪರಿಹಾರ ಕೊಡಿಸಬೇಕು. ಈ ಸ್ಕೀಮ್‌ನಲ್ಲಿ ಪ್ರತಿ ರಾಜ್ಯಕ್ಕೂ 2000 ಕೋಟಿ ರೂ. ಇದೆ. ಆದರೆ ಕರ್ನಾಟಕದಲ್ಲಿ ಆದ ಘಟನೆಗಳಿಗೆ ಯಾವ ಹಣವನ್ನೂ ಸರ್ಕಾರ ನೀಡಿಲ್ಲ. ವೈಯಕ್ತಿಕ ಹಣ ಏನೋ 5 ಲಕ್ಷ ರೂ. ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಕೇಸ್ ದಾಖಾಲಗುತ್ತಿಲ್ಲ, ಎನ್ನಲಾಗುತ್ತಿದೆ. ಆದರೆ, ರಾಜ್ಯದಲ್ಲಿ 400ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳೂ ದಾಖಲಾಗಿವೆ. ಶೋಶಿತ ವರ್ಗಕ್ಕೆ ನೋವಾಗಿದೆ. ನಮ್ಮ ರಾಜಕಾರಣಿಗಳು ಗಾಂಧಿ ಜೀ ಅವರ ಮಾತುಗಳನ್ನು ಕೇಳಿಲ್ಲ, ಓದಿಲ್ಲ ಅನ್ಸುತ್ತೆ. ಗಾಂಧಿ ಜೀ ಹೇಳಿದಂತೆ ಯಾವತ್ತು ಒಂದು ಮಹಿಳೆ ಭಾರತದಲ್ಲಿ ಮಧ್ಯರಾತ್ರಿ 12 ಗಂಟೆಗೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗಿ ಸುರಕ್ಷಿತವಾಗಿ ಮನೆಗೆ ತಲುಪುತ್ತಾಳೋ ಆಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದರ್ಥವೆಂದಿದ್ದರು, ಎಂದಿದ್ದಾರೆ. 

ಮುಖ್ಯಮಂತ್ರಿ ಅವರಿಗೆ ಕೇಳಿ ಕೊಳ್ಳುವುದು ಏನೆಂದರೆ ಯಾರು ಈ ಅತ್ಯಾಚಾರಿಗಳಿಗೆ ಅತೀ ದೊಡ್ಡ ಶಿಕ್ಷೆ ಏನಿದೆಯೋ, ಅದನ್ನು ನೀಡಬೇಕು. ನಿರ್ಭಯಾ ಕೇಸ್ ಅಪರಾಧಿಗೆ ಯಾವ ರೀತಿ ಶಿಕ್ಷೆ ಆಗಬೇಕು ಎಂದು ಕೋರ್ಟ್ ಹೇಳಿದೆ. ಒಂದು ಬಸ್‌ ಸ್ಟ್ಯಾಂಡ್ ಕಟ್ಟಿಸಿದರೆ, ಅದರ ಮುಂದೆ ನಿಂತ ಫೋಟೋ ಹಾಕುತ್ತಾರೆ. ಆದರೆ, ಇಂಥ ಕುಕೃತ್ಯಗಳು ನಡೆದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತೆ ನಡೆದುಕೊಳ್ಳುತ್ತಾರೆ,' ಎಂದಿದ್ದಾರೆ.

'ಹೊರಗಿನಿಂದ ಬಂದವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ನಿರ್ಭಯಾ ಸ್ಕೀಮ್‌ನಿಂದ ಸಂತ್ರಸ್ತೆಗೆ ಎಷ್ಟು ಪರಿಹಾರ ಕೊಡಲು ಸಾಧ್ಯವೋ ಅಷ್ಟು ನೀಡಬೇಕೆಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಪ್ರಕರಣದ ಸಂತ್ರಸ್ತೆಗೆ  ಈ ನಿರ್ಭಯಾ ಸ್ಕೀಮ್‌ನಿಂದ ಪರಿಹಾರ ನೀಡಿ ಒಂದು ಟ್ರೆಂಡ್ ಕ್ರಿಯೇಟ್ ಮಾಡಬೇಕೆಂದು ಇಂದ್ರಜಿತ್ ಮನವಿ ಮಾಡಿಕೊಂಡಿದ್ದಾರೆ.

click me!