ಡ್ಯಾನ್ಸ್ ಎಂದರೆ ಹಾಗೆಯೇ. ಎಂಥವರನ್ನು ಮೈ ಮರೆತು ಕುಣಿಯುವಂತೆ ಮಾಡಿ ಬಿಡುತ್ತದೆ. ಅದು ಮೇಲು-ಕೀಳು, ಶ್ರೀಮಂತ-ಬಡವ ಎಂಬ ವ್ಯತ್ಯಾಸವನ್ನು ನೋಡುವುದಿಲ್ಲ. ಅದು ಅಕ್ಷರಶಃ ನಿಜ ಎಂಬುದು ಇಲ್ಲೊಂದು ವೀಡಿಯೋದಿಂದ ಸಾಬೀತಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಡ್ಯಾನ್ಸ್ ಮಾಡೋದು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮ್ಯೂಸಿಕ್ ಕೇಳಿದ್ರೆ ಸಾಕು ತನ್ನಿಂದ ತಾನೇ ಕಾಲು ಕುಣಿಯುತ್ತೆ. ಮ್ಯೂಸಿಕ್, ಡ್ಯಾನ್ಸ್‌ಗೆ ಮೇಲು-ಕೀಳು, ಶ್ರೀಮಂತ-ಬಡವ ಎಂಬ ವ್ಯತ್ಯಾಸವಿಲ್ಲ. ಅದು ಅಕ್ಷರಶಃ ನಿಜ ಎಂಬುದು ಇಲ್ಲೊಂದು ವೀಡಿಯೋದಿಂದ ಸಾಬೀತಾಗಿದೆ. ಝೊಮೇಟೋ ಡೆಲಿವರಿ ಏಜೆಂಟ್ ಮದುವೆಯ ಮನೆಯ ಹೊರಗಿನಿಂದಲೇ ಸಾಂಗ್‌ಗೆ ಡ್ಯಾನ್ಸ್ ಮಾಡಿರೋ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಸಪ್ನೆ ಮೇ ಮಿಲ್ತಿ ಹೈ ಡ್ಯಾನ್ಸ್‌ಗೆ ಡೆಲಿವರಿ ಬಾಯ್ ಡ್ಯಾನ್ಸ್ ಮಾಡುತ್ತಾರೆ. ಈ ಕ್ಲಿಪ್ ಅನ್ನು ಪುಲ್ಕಿತ್ ಕೊಚಾರ್ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ಇಲ್ಲಿಯವರೆಗೆ 41 ಸಾವಿರ ವೀವ್ಸ್ ಪಡೆದುಕೊಂಡಿದೆ.
ಇದೀಗ ವೈರಲ್ ಆಗಿರುವ ವೀಡಿಯೊವನ್ನು ಪುಲ್ಕಿತ್ ಕೊಚಾರ್ ಅವರು ಡಿಸೆಂಬರ್ 24 ರಂದು Instagram ನಲ್ಲಿ ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್‌ನಲ್ಲಿ, ಜೊಮಾಟೊ ಡೆಲಿವರಿ ಏಜೆಂಟ್ ಮದುವೆಯ (Marriage) ಸ್ಥಳದ ಹೊರಗೆ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕುವುದನ್ನು ಕಾಣಬಹುದು. ಮದುವೆಯ ಅತಿಥಿಗಳು ಡ್ಯಾನ್ಸ್ ಫ್ಲೋರ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಡೆಲಿವರಿ ಏಜೆಂಟ್ ಹೊರಗಿನಿಂದಲೇ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿ ವಿಂಡೋ ಮೂಲಕ ಎರಡೂ ಕಡೆ ಡ್ಯಾನ್ಸ್ ಮಾಡುತ್ತಿರುವುದನ್ನು ಏಕಕಾಲಕ್ಕೆ ತೋರಿಸಿದ್ದಾರೆ. ಮಾತ್ರವಲ್ಲ ಈ ಪೋಸ್ಟ್‌ಗೆ ಮ್ಯೂಸಿಕ್, ಡ್ಯಾನ್ಸ್‌ಗೆ ಯಾವುದೇ ಅಡೆತಡೆಗಳಿಲ್ಲ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
undefined
ಮುಂಬೈನಲ್ಲಿದ್ದು, ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ, ಬಿಲ್ ಭರ್ತಿ 2500 ರೂ.!
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 41k ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರಿಂದ ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಪ್ರತಿಯೊಬ್ಬರೂ ಡೆಲಿವರಿ ಏಜೆಂಟ್‌ನ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.'ಅವನು ನೃತ್ಯ ಮಾಡುವುದನ್ನು ನೋಡಿದರೆ ಅವನನ್ನು ಖಂಡಿತವಾಗೊಯೂ ಊಟಕ್ಕೆ ಆಹ್ವಾನಿಸಬೇಕು' ಎಂದು ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಶೋಸ್ಟಾಪರ್ ತೋ ಭಾಯಿ ಥಾ' (ಕಾರ್ಯಕ್ರಮದ ಹೈಲೈಟ್ ಡೆಲಿವರಿ ಏಜೆಂಟ್" ಎಂದು ಕಾಮೆಂಟ್ ಮಾಡಿದ್ದಾರೆ. ಸಪ್ನೆ ಮೇ ಮಿಲ್ತಿ ಹೈ ಎಂಬುದು 1998ರ ಸತ್ಯ ಚಿತ್ರದ ಹಾಡು. ಇದನ್ನು ಲತಾ ಮಂಗೇಶ್ಕರ್ ಮತ್ತು ಸುರೇಶ್ ವಾಡ್ಕರ್ ಹಾಡಿದ್ದಾರೆ.
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಫುಡ್ ಡೆಲಿವರಿ ಮಾಡುವ ಯುವಕ
ಫುಡ್ ಡೆಲಿವರಿ ಆಪ್‌ಗಳು ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಟ್ಟಿವೆ. ಕಾಲೇಜಿಗೆ ಹೋಗುವವರು, ತಿಂಗಳ ಸಂಬಳ ಸಾಕಾಗದವರು ಇಂಥಾ ಫುಡ್ ಆಪ್‌ನಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಎಷ್ಟೋ ಜನರ ಪಾಲಿಗೆ ಇಂಥಾ ಫುಡ್ ಆಪ್‌ಗಳು ಜೀವನಕ್ಕೆ ದಾರಿಯಾಗಿವೆ. ವಿಶೇಷ ಚೇತನರು, ಮಹಿಳೆಯರು ಸಹ ಝೊಮೇಟೋ, ಸ್ವಿಗ್ಗಿಯಲ್ಲಿ ಜೀವನ ಮಾಡಿ ಜೀವನ ಕಟ್ಟಿಕೊಳ್ಳುತ್ತಾರೆ. ಇಂಥಾ ಆಸಕ್ತಿದಾಯಕ ವಿಚಾರಗಳು ಆಗಿಂದಾಗೆ ವೈರಲ್ ಆಗುತ್ತಲೇ ಇರುತ್ತವೆ. ಸದ್ಯ ವಿಶೇಷ ಸಾಮರ್ಥ್ಯವುಳ್ಳ Zomato ಡೆಲಿವರಿ ಬಾಯ್ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗ್ತಿದೆ.
ಗಂಟೆಗಟ್ಟಲೆ ಕಾದರೂ ಬರಲೇ ಇಲ್ಲ ಫುಡ್, ಝೊಮೇಟೋ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಗ್ರಾಹಕ
ಕ್ಲಿಪ್ ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಕುಳಿತಿರುವ Zomato ಡೆಲಿವರಿ ಏಜೆಂಟ್ ಅನ್ನು ತೋರಿಸುತ್ತದೆ. ವ್ಯಕ್ತಿ ಮುಗುಳ್ನಗುತ್ತಲೇ, ಏನೇ ಆದರೂ ಜೀವನದಲ್ಲಿ ಭರವಸೆ (Hope) ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ. ಹಿಮಾಂಶು ಎಂಬವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೊದ ಶೀರ್ಷಿಕೆಯು, “Hats off to this man #Zomato #zomatoindia” ಎಂದು ಬರೆಯಲಾಗಿದೆ.
ವೀಡಿಯೊ 10 ಸಾವಿರಕ್ಕೂ ಹೆಚ್ಚು ವೀವ್ಸ್ ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಯಂತ್ರಚಾಲಿತ ಗಾಲಿಕುರ್ಚಿಯು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಸಿದ್ಧಾರ್ಥ್ ದಾಗಾ, ಸ್ವೋಸ್ಟಿಕ್ ಡ್ಯಾಶ್ ಮತ್ತು ಆಶಿಶ್ ಶರ್ಮಾ ಅವರು ಪಿಚ್ ಮಾಡಿದ ಉತ್ಪನ್ನವನ್ನು ಹೋಲುತ್ತದೆ ಎಂದು ಕೆಲವರು ಗಮನಸೆಳೆದರು. ಅನುಪಮ್ ಮಿತ್ತಲ್ ಅವರು ಉತ್ಪನ್ನವನ್ನು ಹೆಚ್ಚು ಶ್ಲಾಘಿಸಿದರು ಮತ್ತು ಗಾಲಿಕುರ್ಚಿಯ ಬೆಲೆಯನ್ನು ಕಡಿತಗೊಳಿಸುವುದರಿಂದ ಭಾರತ ರತ್ನ ಕಂಪನಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಂಡಕ್ಕೆ ಭರವಸೆ ನೀಡಿದರು.